Free Toilet Scheme : ಭಾರತ ಸರ್ಕಾರ ,ಮಹಿಳೆಯರ ರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಸ್ವಚ್ಛ ಭಾರತ ಉಚಿತ ಶೌಚಾಲಯ ಯೋಜನೆ ಕೂಡ ಸೇರಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಅದ್ರ ಸಂಪೂರ್ಣ ಮಾಹಿತಿ ಇಲ್ಲಿದೆ. 

ನಮ್ಮ ದೇಶದ ಕೆಲ ಭಾಗದಲ್ಲಿ ಈಗ್ಲೂ ಹೀನಾಯ ಸ್ಥಿತಿ ಇದೆ. ಹಳ್ಳಿ ಮಾತ್ರವಲ್ಲ ಕೆಲ ಸಣ್ಣ ನಗರ ಪ್ರದೇಶಗಳ ಅನೇಕರ ಮನೆಯಲ್ಲಿ ಶೌಚಾಲಯ (Toilet)ವಿಲ್ಲ. ಈಗ್ಲೂ ಜನ ಬಯಲು ಶೌಚಾಲಯ ಆಶ್ರಯಿಸಿದ್ದಾರೆ. ಇದ್ರಿಂದ ಮಹಿಳೆ ಮತ್ತು ಮಕ್ಕಳು ಸುರಕ್ಷತೆ ಸವಾಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಮಾಡುವ ಮೂಲಕ ಮಹಿಳೆ ಮತ್ತು ಮಕ್ಕಳ ರಕ್ಷಣೆ ಜೊತೆ ಪರಿಸರ ರಕ್ಷಣೆಗೆ ಕೇಂದ್ರ ಸರ್ಕಾರ ಈಗಾಗಲೇ ಉಚಿತ ಶೌಚಾಲಯ ಯೋಜನೆ ಜಾರಿಗೆ ತಂದಿದೆ. ಸ್ವಚ್ಛ ಭಾರತ್ ಮಿಷನ್ (Swachh Bharat Mission) ಗೆ ಮತ್ತಷ್ಟು ಬಲ ನೀಡಲು ಕೇಂದ್ರ ಸರ್ಕಾರ ಉಚಿತ ಶೌಚಾಲಯ ಯೋಜನೆ (Free Toilet Scheme) 3.0 ಅನ್ನು ಈಗ ಪ್ರಾರಂಭಿಸಿದೆ. ಈ ಯೋಜನೆಯಡಿ, ಬಡ ಮತ್ತು ನಿರ್ಗತಿಕ ಕುಟುಂಬಗಳು, ಶೌಚಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಇವರಿಗೆ ಕೇಂದ್ರ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳಿಗೆ 12,000 ರೂಪಾಯಿ ಆರ್ಥಿಕ ಸಹಾಯ ಸಿಗಲಿದೆ.

ಯಾರಿಗೆ ಸಿಗಲಿದೆ ಉಚಿತ ಶೌಚಾಲಯ ಯೋಜನೆ ಲಾಭ : ಈ ಯೋಜನೆ ಲಾಭ, ದೇಶದ ಮಹಿಳೆಯರಿಗೆ ಸಿಗಲಿದೆ. ಈ ಯೋಜನೆ ಲಾಭ ಪಡೆಯಲು ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರು ಹಿಂದೆ ಯಾವುದೇ ಶೌಚಾಲಯವನ್ನು ಹೊಂದಿರಬಾರದು. ಈ ಯೋಜನೆ ಪ್ರಯೋಜನ ಪಡೆಯಲು ಮಹಿಳೆ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಕಡಿಮೆಯಿರಬೇಕು. ಮಹಿಳೆ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆ : ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ, ಸಹಿ, ರೇಷನ್ ಕಾರ್ಡ್, ವಾಸ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಇಮೇಲ್ ಐಡಿ, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಪ್ರತಿ, ಮನೆಯ ಯಾವ ಜಾಗದಲ್ಲಿ ಶೌಚಾಲಯ ನಿರ್ಮಾಣ ಮಾಡ್ಬೇಕು ಅಂದ್ಕೊಂಡಿದ್ದೀರೋ ಆ ಜಾಗದ ಫೋಟೋ ಅಗತ್ಯವಿರುತ್ತದೆ.

ಉಚಿತ ಶೌಚಾಲಯಕ್ಕೆ ಅರ್ಜಿ ಸಲ್ಲಿಸುವ ವಿಧಾನ : ಉಚಿತ ಶೌಚಾಲಯ ಯೋಜನೆಗೆ ನೀವು ಆನ್ಲೈನ್ ಹಾಗೂ ಆಫ್ ಲೈನ್ ಎರಡೂ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಮೊದಲು ನೀವು https://swachhbharatmission.ddws.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡ್ಬೇಕು. ಅಲ್ಲಿ ಕೆಳಗೆ Application Form For IHHL Dashboard ಕಾಣಿಸುತ್ತದೆ. ಅಲ್ಲಿಗೆ ಹೋಗಿ ನೀವು ರಿಜಿಸ್ಟ್ರೇಷನ್ ಮಾಡ್ಬೇಕು. ರಿಜಿಸ್ಟ್ರೇಷನ್ ಆದ್ಮೇಲೆ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದ್ರ ನಂತ್ರ ನೀವು ಸೈನ್ ಇನ್ ಮಾಡಿ, ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲು ಒಂದು ಪಾಪ್ ಅಪ್ ಕಾಣಿಸುತ್ತದೆ. ಅದ್ರಲ್ಲಿ ಯೋಜನೆ ಬಗ್ಗೆ ಎಲ್ಲ ಮಾಹಿತಿ ನೀಡಲಾಗುತ್ತದೆ. ಪಾಪ್ ಅಪ್ ಕ್ಲೋಸ್ ಮಾಡಿದ ನಂತ್ರ ಅರ್ಜಿ ಕಾಣಿಸುತ್ತದೆ. ಅಲ್ಲಿ ನಿಮಗೆ ಸಂಬಂದಿಸಿದ ಎಲ್ಲ ಮಾಹಿತಿ ನೀಡಿ, ದಾಖಲೆ ಸಲ್ಲಿಸಿ ಅಪ್ಲಿಕೇಷನ್ ಸಲ್ಲಿಸಬೇಕು. ನಿಮ್ಮ ಅಪ್ಲಿಕೇಷನ್ ಮಾನ್ಯವಾದ್ರೆ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಪರಿಶೀಲನೆ ನಡೆಸ್ತಾರೆ. ನಿಮ್ಮ ಮನೆಯಲ್ಲಿ ಮೊದಲೇ ಶೌಚಾಲಯ ಇಲ್ಲ ಎನ್ನುವುದು ಖಾತ್ರಿಯಾದ್ಮೇಲೆ ಮಹಿಳೆಯರ ಬ್ಯಾಂಕ್ ಖಾತೆಗೆ 12 ಸಾವಿರ ರೂಪಾಯಿ ಬರುತ್ತದೆ. ಆ ನಂತ್ರ ನೀವು ಶೌಚಾಲಯ ನಿರ್ಮಾಣದ ಫೋಟೋಗಳನ್ನು ಅವರಿಗೆ ಕಳುಹಿಸುತ್ತಿರಬೇಕು. ನೀವು ಆಫ್ಲೈನ್ ಕೂಡ ಅಪ್ಲಿಕೇಷನ್ ಸಲ್ಲಿಸಬಹುದು. ಗ್ರಾಮ ಪಂಚಾಯತ್ ಅಥವಾ ಬ್ಲಾಕ್ ಅಭಿವೃದ್ಧಿ ಕಚೇರಿ ಹೋಗಿ, ಅಗತ್ಯ ದಾಖಲೆ ನೀಡಿ ಅಪ್ಲಿಕೇಷನ್ ಸಲ್ಲಿಸಬೇಕು.