ಚಿಪ್ಸ್ ಖರೀದಿಸ್ತಿದ್ದಾಕೆ ರೈಲು ಬಂತೆಂದು ಓಡಿದಳು! ಮುಂದಾದದ್ದು ದುರಂತ- ಶಾಕಿಂಗ್ ವಿಡಿಯೋ ವೈರಲ್
ರೈಲು ಬಂತೆಂದು ಅವಸರದಲ್ಲಿ ಯುವತಿಯೊಬ್ಬಳು ಓಡಿ ಹೋಗಿ ಅದನ್ನು ಹತ್ತುವ ಧಾವಂತದಲ್ಲಿ ಆಯ ತಪ್ಪಿ ಬಿದ್ದಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ರೈಲು ಹತ್ತುವ, ಇಳಿಯುವ ರಭಸದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ. ಇನ್ನು ಹಲವರನ್ನು ರೈಲು ಸಿಬ್ಬಂದಿ ಕಾಪಾಡಿರುವ ವಿಡಿಯೋಗಳು ಇದಾಗಲೇ ಸಾಕಷ್ಟು ವೈರಲ್ ಆಗುತ್ತಿವೆ. ಆದರೂ ಜನರಿಗೆ ಬುದ್ಧಿ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ತಪ್ಪು ರೈಲು ಹತ್ತುವುದು ಇದೆ. ಅದು ಬೇರೆ ರೈಲು ಎಂದು ಗೊತ್ತಾದ ತಕ್ಷಣ ಗಾಬರಿಯಿಂದ ಇಳಿಯುವುದು ಇದೆ. ಆ ಕ್ಷಣದಲ್ಲಿ ಗಾಬರಿಯಾಗುವುದು ಎಂಥವರಿಗೂ ಸಹಜವೇ. ಆದರೆ ಸ್ವಲ್ಪ ಯಾಮಾರಿ ಜೀವ ಕಳೆದುಕೊಂಡವರು ತುಂಬಾ ಮಂದಿ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಒಬ್ಬರು ಮೇಲೆ ಹತ್ತಿರುತ್ತಾರೆ, ಅವರ ಜೊತೆಯಲ್ಲಿ ಬಂದವರು ಕೆಳಗಡೆಯೇ ಇರುತ್ತಾರೆ, ಆಗಲೂ ಗಾಬರಿಯಿಂದ ರೈಲು ಇಳಿದೋ, ಹತ್ತಿಯೋ ಎಡವಟ್ಟು ಮಾಡಿಕೊಳ್ಳುವುದು ಇದೆ.
ಆದರೆ ಕೆಲವೊಮ್ಮೆ ವಿನಾಕಾರಣ, ಅವಸರದಲ್ಲಿ ಪ್ರಾಣವನ್ನು ಕಳೆದುಕೊಳ್ಳುವ ಮತ್ತೊಂದಿಷ್ಟು ಮಂದಿಯೂ ಇದ್ದಾರೆ. ರೈಲು ನಿಲ್ಲುವವರೆಗೂ ತಾಳ್ಮೆ ತೋರದೇ ಗಾಬರಿಯಿಂದ ಅದನ್ನು ಹತ್ತಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವವರು ಇಲ್ಲವೇ ಕೈಕಾಲು ಮುರಿದುಕೊಳ್ಳುವವರು ಇದ್ದಾರೆ. ಆದರೆ ಕೆಲವೊಮ್ಮೆ ಮಾತ್ರ ಅದೃಷ್ಟ ಅವರನ್ನು ಕಾಪಾಡುವುದೂ ಇದೆ. ಅಂಥದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್ ಶಾಕ್
ಇದರಲ್ಲಿ ಯುವತಿಯೊಬ್ಬಳು ರೈಲು ಇನ್ನೂ ಬಂದಿಲ್ಲ ಎನ್ನುವ ಕಾರಣಕ್ಕೆ ಅಂಗಡಿಯಲ್ಲಿ ಚಿಪ್ಸ್ ಪ್ಯಾಕೆಟ್ ಖರೀದಿಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವಳು ಆ ಪ್ಯಾಕೆಟ್ ಈ ಪ್ಯಾಕೆಟ್ ಎಂದೆಲ್ಲಾ ಖರೀದಿ ಮಾಡುವಷ್ಟರಲ್ಲಿಯೇ ರೈಲು ಬಂದಿದೆ. ಅದನ್ನು ನೋಡಿ ಯುವತಿ ಗಾಬರಿಯಾಗಿಬಿಟ್ಟಿದ್ದಾಳೆ. ರೈಲು ನಿಲ್ಲುವುದನ್ನೂ ಕಾಯದೇ ಕೈಯಲ್ಲಿದ್ದ ಪ್ಯಾಕೆಟ್‌ಗಳನ್ನು ಅಂಗಡಿಯಲ್ಲಿಯೇ ವಾಪಸ್ ಇಟ್ಟು ಓಡಿ ಹೋಗಿದ್ದಾಳೆ. ರೈಲು ಇನ್ನೂ ನಿಂತಿರಲಿಲ್ಲ. ಚಲಿಸುತ್ತಲೇ ಇತ್ತು. ಯುವತಿಗೆ ಅದೇನಾಯ್ತೋ ಗೊತ್ತಿಲ್ಲ. ಚಲಿಸುತ್ತಿರುವ ರೈಲನ್ನು ಹತ್ತುವ ಸಾಹಸ ಮಾಡಿದ್ದಾಳೆ.
ಈ ಅವಸರದಲ್ಲಿ ಆಯ ತಪ್ಪಿ ಬಿದ್ದಿದ್ದಾಳೆ. ಜನ ಓಡೋಡಿ ಬಂದಿದ್ದಾರೆ. ಏನೇ ಆದರೂ ಚಲಿಸುತ್ತಿರುವ ರೈಲು ಇತರ ಗಾಡಿಗಳಂತೆ ಸಡನ್ ಆಗಿ ಬ್ರೇಕ್ ಹಾಕಲು ಆಗುವುದಿಲ್ಲವಲ್ಲ, ರೈಲು ಹೋಗುತ್ತಲೇಇತ್ತು. ಜನ ಜಮಾಯಿಸಿರುವುದನ್ನು ನೋಡಬಹುದು. ಇಷ್ಟೇ ವಿಡಿಯೋದಲ್ಲಿ ಕಾಣಬಹುದು. ಇದನ್ನು ನೋಡಿದರೆ ಯುವತಿ ಸಾವನ್ನಪ್ಪಿರಬಹುದು ಎಂದೇ ಊಹಿಸಲಾಗುತ್ತಿದೆ. ಆದರೆ ಕೊನೆಯಲ್ಲಿ, ಯುವತಿಗೆ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ನಮ್ಮ ಕರ್ನಾಟಕ ಎನ್ನುವ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ಶುದ್ಧ ಕನ್ನಡದಲ್ಲಿ ಮಾತನಾಡಿ ಅಚ್ಚರಿಗೊಳಿಸಿದ ಬಾಲಿವುಡ್ ಬ್ಯೂಟಿ ಟಬು: ವಿಡಿಯೋ ವೈರಲ್