ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್‌ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್‌ ಶಾಕ್‌

ಸೆಲೆಬ್ರಿಟಿಗಳು ಜಾಹೀರಾತಿನಲ್ಲಿ ಕಾಣಿಸಿಕೊಂಡ ತಕ್ಷಣ, ನೀವೂ ಅದೇ ಬ್ರಾಂಡ್‌ ಹುಡುಕಿ ಹೋಗ್ತೀರಾ? ಅದಕ್ಕೂ ಮೊದಲು ನಟಿ ಆಲಿಯಾ ಭಟ್‌ ಈ ವಿಡಿಯೋ ನೋಡಿ! 
 

Celebrities in Advertisement and reality Alia Bhatts real hair video viral suc

ಜಾಹೀರಾತುಗಳು ಇಂದು ಅದೆಷ್ಟರ ಮಟ್ಟಿಗೆ ಮೋಡಿಮಾಡುತ್ತವೆ ಎಂದರೆ, ತಮ್ಮ ನೆಚ್ಚಿನ ತಾರೆಯರು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ, ಅದನ್ನೇ ಹೋಗಿ ಖರೀದಿ ಮಾಡುವ ದೊಡ್ಡ ವರ್ಗವೇ ಇದೆ. ಸೆಲೆಬ್ರಿಟಿಗಳು ತಿಂದದ್ದನ್ನೇ ತಿನ್ನುವುದು, ಕುಡಿದಿದ್ದನ್ನೇ ಕುಡಿಯವುದು, ಅವರನ್ನೇ ಅನುಸರಿಸುವುದು, ಸೋಪು, ಶ್ಯಾಂಪು, ಬಟ್ಟೆ... ಅಬ್ಬಬ್ಬಾ... ಇವರನ್ನೇ ಸರ್ವಸ್ವ ಎಂದುಕೊಂಡವರಿಗೆ ಲೆಕ್ಕವಿಲ್ಲ. ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದು ವಿಷಕಾರಕ ಪಾನೀಯವನ್ನು ಸೇವನೆ ಮಾಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಚಿತ್ರನಟರು, ಕ್ರಿಕೆಟಿಗರನ್ನು ಅನುಸರಿಸಿ ಅದನ್ನೇ ಸೇವಿಸುವುದು, ಪಾನ್‌ ಮಸಾಲಾ ತಿನ್ನುವುದು, ಸಿನಿಮಾಗಳಲ್ಲಿ ಚಿತ್ರ ನಟರು ಮಾಡಿದಂತೆ ಧಮ್‌ ಎಳೆಯುವುದು, ಮದ್ಯ ಸೇವನೆ ಮಾಡುವುದು, ಲಾಂಗು-ಮಚ್ಚು ಹಿಡಿದು ರಕ್ತಪಾತ ಹರಿಸುವುದು... ಅಬ್ಬಬ್ಬಾ ಅಭಿಮಾನಿಗಳು ಮಾಡುವ ಕೆಲಸ ಒಂದಾ, ಎರಡಾ? ಆದರೆ ಅಸಲಿಯತ್ತಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಈ ಸೆಲೆಬ್ರಿಟಿಗಳು ಅವುಗಳನ್ನು ಸೇವನೆ ಮಾಡೇ ಇರುವುದಿಲ್ಲ ಎನ್ನುವುದು ಪಾಪ ಅವರನ್ನು ಅನುಸರಿಸುವ ಅವರ ಅಭಿಮಾನಿಗಳಿಗೆ ಗೊತ್ತೇ ಇರುವುದಿಲ್ಲ. ದುಡ್ಡು ಪಡೆದು ಅವರು ಜನರನ್ನು ಮರಳು ಮಾಡುತ್ತಾರೆ ಎನ್ನುವ ಅರಿವೂ ಇರುವುದಿಲ್ಲ.

ಈಗ ಅದಕ್ಕೆ ಸಾಕ್ಷಿಯಾಗಿ ನಿಂತಿದೆ ನಟಿ ಆಲಿಯಾ ಭಟ್‌ ಅವರ ಕೂದಲು! ಪ್ರಸಿದ್ಧ ಶ್ಯಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಆಲಿಯಾ ಭಟ್‌ ತಲೆಗೂದಲನ್ನು ನೋಡಿಮೋಡಿ ಹೋದವರೆಷ್ಟೋ. ಅದನ್ನೇ ಖರೀದಿ ಮಾಡಿದವರು ಇನ್ನೆಷ್ಟೋ. ಇದು ಆಲಿಯಾ ಭಟ್‌ ಮಾತ್ರವಲ್ಲ, ಇಂಥದ್ದೇ ನಟ-ನಟಿಯರು ಬಳಸು ಸೋಪು, ಶ್ಯಾಂಪೂ, ಪರ್‍‌ಫ್ಯೂಮ್‌... ಇನ್ನು ಏನೇನೋ... ಇವುಗಳಿಗೆ ಮರಳಾಗಿ ಅದನ್ನೇ ಫಾಲೋ ಮಾಡ್ತಾ ಇದ್ದವರಿಗೆ ಸಾಕ್ಷಿ ಸಮೇತ ಈ ವಿಡಿಯೋದಲ್ಲಿ ಸೆರೆಯಾಗಿದೆ. ನಟಿ ಆಲಿಯಾ ಭಟ್‌ ಅವರ ಅಸಲಿ ಕೂದಲು ಹೇಗಿದೆ ಎನ್ನುವುದು ಇದರಲ್ಲಿ ಕಾಣಿಸುತ್ತಿದೆ! ಸಾಮಾನ್ಯವಾಗಿ ಟೆನ್ಷನ್‌ ಇಲ್ಲವೇ ಕೆಲವೊಂದು ಅನಾರೋಗ್ಯ ಸಮಸ್ಯೆ ಇದ್ದಾಗ ತಲೆಗೂದಲು ಉದುರುವುದು ಸಾಮಾನ್ಯ. ಇದಕ್ಕೆ ಹೆಣ್ಣು, ಗಂಡಿನ ಬೇಧವಿಲ್ಲ. ಅದೇ ರೀತಿ ಆಲಿಯಾ ಭಟ್‌ ಅವರ ನೆತ್ತಿಯ ಆಸುಪಾಸು ಕೂದಲೇ ಇಲ್ಲ! ಆದರೂ ಇವರು ಶ್ಯಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ!

Celebrities in Advertisement and reality Alia Bhatts real hair video viral suc

ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!
 
ಇದರ ವಿಡಿಯೋ ವೈರಲ್‌ ಆಗುತ್ತಲೇ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಮೆಂಟ್ಸ್‌ ಹಾಕುತ್ತಿದ್ದಾರೆ. ಇವರನ್ನು ನೋಡಿ ತಾವೂ ಅದೇ ಬ್ರಾಂಡ್ ಶ್ಯಾಂಪೂ ಪಡೆದುಕೊಂಡಿರುವುದಾಗಿ ಕೆಲವರು ಹೇಳುತ್ತಿದ್ದರೆ, ಯಾವುದೇ ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರು ಮೂರ್ಖರು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ವೈರಲ್  ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಹಲ್‌ಚಲ್‌ ಸೃಷ್ಟಿಸುತ್ತಿದೆ. ಕ್ರಿಕೆಟ್​ ತಾರೆಯರು, ಸಿನಿಮಾ ಸ್ಟಾರ್​ ನಟರು ಬಳಸುವ ವಿದೇಶಿ ಪಾನೀಯಗಳಲ್ಲಿ ಇರುವ ಕ್ರಿಮಿ ನಾಶಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಫಾಸ್ಟ್​ ಫುಡ್​ಗಳಲ್ಲಿ ಬಳಸುವ ಅಪಾಯಕಾರಿ, ಕ್ಯಾನ್ಸರ್​ಗೆ ತುತ್ತಾಗುವ ವಿಷದ ಬಗ್ಗೆಯೂ ಸದ್ದು ಮಾಡಿತ್ತು. ಪ್ರಯೋಗಾಲಯಗಳಲ್ಲಿಯೇ ಇದನ್ನು ಸಾಬೀತು ಮಾಡಲಾಗಿತ್ತು. ಪಾನ್​ ಮಸಾಲಾ ತಿಂದರೆ ಬಾಯಿಯ ಕ್ಯಾನ್ಸರ್​ ಹೇಗೆ ಬರುತ್ತದೆ ಎನ್ನುವ ಸರ್ಕಾರಿ ಜಾಹೀರಾತುಗಳೂ ಬರುತ್ತವೆ, ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕ್ಯಾನ್ಸರ್​ ರೋಗಕ್ಕೆ ಇಂಥ ಜಾಹೀರಾತುಗಳು ಹಾಗೂ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳ ಕೊಡುಗೆ ಬಹುದೊಡ್ಡದು ಇದೆ ಎನ್ನುವ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿಯೂ ಭಾರಿ ಚರ್ಚೆಯೇ ನಡೆದಿತ್ತು.

ಇದರ ಹೊರತಾಗಿಯೂ ಜನರು ಜಾಹೀರಾತಿಗೆ ಮರಳಾಗುವುದು ನಡೆದೇ ಇದೆ. ಕೆಲ ದಿನಗಳ ಹಿಂದೆ ಪಾನ್​ ಮಸಾಲಾ ಜಾಹೀರಾತಿನಿಂದ ನಟ ಅಕ್ಷಯ್​ ಕುಮಾರ್​ ಹಿಂದಕ್ಕೆ ಸರಿದಿದ್ದರು. ಯುವಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ ಎಂದು ಅವರು ಹೇಳಿದ್ದರು. ಅದರ ಬೆನ್ನಲ್ಲೇ ಸ್ಯಾಂಡಲ್​ವುಡ್​ ನಟ ಯಶ್​ ಕೂಡ ಪಾನ್​ ಮಸಾಲಾ ಜಾಹೀರಾತನ್ನು ಒಪ್ಪಿಕೊಂಡಿರಲಿಲ್ಲ. ಮೊನ್ನೆಯಷ್ಟೇ ಅನಿಲ್​ ಕಪೂರ್​ 10 ಕೋಟಿ ರೂಪಾಯಿ ಆಫರ್​ ರಿಜೆಕ್ಟ್​ ಮಾಡಿದ್ದು ಸದ್ದು ಮಾಡಿತ್ತು. ಆದರೆ ಎಲ್ಲಾ ಸೆಲೆಬ್ರಿಟಿಗಳೂ ಹೀಗೆಯೇ ಇರಬೇಕೆಂದೇನೂ ಇಲ್ಲ. ಈ ಜಾಹೀರಾತುಗಳನ್ನು ಮಾಡುವಾಗ ಅವರು ನಕಲಿ ವಸ್ತುಗಳನ್ನು ಹೇಗೆ ಉಪಯೋಗಿಸಿ ಜನರಿಗೆ ವಿಷ ಸೇವನೆ ಮಾಡುವಂತೆ ಹೇಗೆ ತೋರಿಸುತ್ತಾರೆ ಎನ್ನುವ ವಿಡಿಯೋ ಕೂಡ ಇದಾಗಲೇ ವೈರಲ್‌ ಆಗಿತ್ತು. 

ಅನಿಲ್​ ಕಪೂರ್​ 10 ಕೋಟಿ ಆಫರ್​ ರಿಜೆಕ್ಟ್! ಶಾರುಖ್​- ಅಜಯ್​ ದೇವಗನ್​ ವಿರುದ್ಧ ನೆಟ್ಟಿಗರಿಂದ ಭಾರಿ ಆಕ್ರೋಶ

Latest Videos
Follow Us:
Download App:
  • android
  • ios