Asianet Suvarna News Asianet Suvarna News

Acne Problem: ಮಧ್ಯವಯಸ್ಸಲ್ಲಿ ಮೊಡವೆಯೇ? ಕಾರಣ ಅರಿಯಿರಿ

ಮುಖದಲ್ಲಿ ಮೊಡವೆಯಾದರೆ ಏನೋ ಕಿರಿಕಿರಿ. ಕೈ ಅಲ್ಲೇ ಇರುತ್ತದೆ. ಪದೇ ಪದೆ ಚಿವುಟುತ್ತ, ಅದರಲ್ಲಿ ಬರುವ ಜಿಡ್ಡನ್ನು ಕಿತ್ತು ಹಾಕುವುದನ್ನು ಕಾಣಬಹುದು. ಆದರೆ, ಉತ್ತಮ ಆಹಾರ, ಸೂಕ್ತ ನಿದ್ರೆ ಹಾಗೂ ವ್ಯಾಯಾಮಗಳಿಂದ ಮೊಡವೆಗೆ ಬೈ ಬೈ ಹೇಳಬಹುದು.

Know the causes and treatment of adult acne
Author
Bangalore, First Published Jan 19, 2022, 5:22 PM IST

ಮಹಿಳೆಯರು (Women) ಮತ್ತು ಪುರುಷ(Men)ರು ಇಬ್ಬರನ್ನೂ ಸಮಾನವಾಗಿ ಕಾಡುವ ಸಮಸ್ಯೆ ಎಂದರೆ ಮೊಡವೆ(Acne)ಯದ್ದು. ಕಿಶೋರಾವಸ್ಥೆ(Teenage)ಯಲ್ಲಿ ಮಾತ್ರವೇ ಮೊಡವೆಗಳು ಉಂಟಾಗುತ್ತವೆ ಎನ್ನುವುದಕ್ಕೆ ಆಧಾರಗಳಿಲ್ಲ. ಆ ಸಮಯದಲ್ಲಿ ಅವರಲ್ಲಿ ದೇಹದ ಬೆಳವಣಿಗೆ(Development)ಯಾಗುತ್ತಿರುತ್ತದೆ, ಹಾಗಾಗಿ ಸ್ವಲ್ಪ ಹೆಚ್ಚು ಕಂಡುಬರಬಹುದಷ್ಟೆ. 

ಸಾಮಾನ್ಯವಾಗಿ 30-40ರ ವಯೋಮಾನದವರಲ್ಲೂ ಮೊಡವೆಗಳು ಕಂಡುಬರಬಲ್ಲವು. ಈ ವಯೋಮಾನದಲ್ಲಿ ಬಹಳಷ್ಟು ಮಹಿಳೆಯರಲ್ಲಿ ಅದೇ ಮೊದಲ ಬಾರಿಗೆ ಮೊಡವೆಗಳೇಳುವುದೂ ಇದೆ. ಇದಕ್ಕೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಾರಣಗಳಿರುತ್ತವೆ. ಆಗ ಗಾಬರಿಯಾಗದೆ ಅದಕ್ಕೆ ಕಾರಣಗಳನ್ನು ಗುರುತಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ. 

ಕರಿದ ತಿಂಡಿಗಳು(Fried Food), ಸಕ್ಕರೆಯುಕ್ತ (Sugar) ಸಿಹಿತಿಂಡಿಗಳು, ಡೈರಿ (Dairy) ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದಲೂ, ಅಧಿಕ ಒತ್ತಡ(Stress)ದಿಂದಲೂ ಮೊಡವೆಗಳು ಏಳಬಹುದು. ಹೀಗಾಗಿ, ಜೀವನಶೈಲಿ(Lifestyle)ಯ ಬಗ್ಗೆ ಹೆಚ್ಚು ಗಮನವಿಡಬೇಕಾಗುತ್ತದೆ. 
ಚರ್ಮ (Skin) ರೋಗ ತಜ್ಞರ ಪ್ರಕಾರ, ಮೊಡವೆಗಳುಂಟಾಗಲು ಸಾಮಾನ್ಯ ಕಾರಣಗಳು ಹೀಗಿರುತ್ತವೆ. 

•    ಮಧ್ಯವಯಸ್ಸಿನ (Middle Age) ಮಹಿಳೆಯರಲ್ಲಿ ಮೊಡವೆಗಳು ಉಂಟಾದರೆ ಹಾರ್ಮೋನುಗಳ ಏರಿಳಿತ ಕಾರಣವಾಗಿರಬಹುದು. ಆಗ ಋತುಚಕ್ರದ ಇತಿಹಾಸವನ್ನು ವಿಮರ್ಶಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. 
•    ಒತ್ತಡದಿಂದ ಚರ್ಮದ ಮೇಲೆ ಅತೀವ ಪರಿಣಾಮಗಳು ಉಂಟಾಗುತ್ತವೆ. ಮೊಡವೆಗಳ ರೂಪದಲ್ಲಿಯೂ ಕಾಣಬಹುದು.
•    ಸೂರ್ಯನ ಬಿಸಿಲಿ(Sunlight) ಗೆ ದೀರ್ಘ ಸಮಯ ಮುಖವೊಡ್ಡಿದಾಗ ಮುಖದ ಬೆವರುಗುಳ್ಳೆಗಳಲ್ಲಿ ಬ್ಯಾಕ್ಟೀರಿಯಾ (Bacteria) ವೃದ್ಧಿಯಾಗಿ ನಿರಂತರವಾಗಿ ಮೊಡವೆ ಏಳಬಹುದು.
•    ಸಕ್ಕರೆ ಮತ್ತು ಹಾಲಿನ ಉತ್ಪನ್ನಗಳ ಅಧಿಕ ಸೇವನೆ
ಮೊಡವೆ ಸಮಸ್ಯೆ ಇರುವವರು ಸಕ್ಕರೆ ಹಾಗೂ ಹಾಲಿನ ಉತ್ಪನ್ನಗಳ ಸೇವನೆಯನ್ನು ಕೈಬಿಡಬೇಕು. ಇವು ದೇಹದಲ್ಲಿ ಜಿಡ್ಡಿನಂಶ (Oil) ಹೆಚ್ಚಿಸುತ್ತವೆ. ತೈಲ ಉತ್ಪಾದಿಸುವ ಗ್ರಂಥಿಗಳಿಗೆ ಉತ್ತೇಜನ ನೀಡುತ್ತವೆ. ಬದಲಿಗೆ. ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕು.
•     ಕೆಲವು ಬಗೆಯ ಔಷಧ(Medicine)ಗಳ ಸೇವನೆಯಿಂದ ಮೊಡವೆ ಹೆಚ್ಚಾಗುತ್ತದೆ. ಹಾರ್ಮೋನ್‌ (Harmone) ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾದಾಗ ಹೀಗಾಗುತ್ತದೆ.  ಯಾವುದಾದರೂ ಔಷಧದಿಂದ ಮೊಡವೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
•    ಬಿಗಿಯಾದ ಡ್ರೆಸ್‌ (Dress) ಧರಿಸಿ ವ್ಯಾಯಾಮ ಮಾಡುವುದು ಸರಿಯಲ್ಲ. ಆಗ ದೇಹದ ಉಷ್ಣತೆ (Heat) ಹಾಗೂ ಬೆವರು (Sweat) ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಆಗ ಅಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ. ಹೀಗಾಗಿ, ಮೈ ಚೆನ್ನಾಗಿ ಬೆವರಿದ ಬಳಿಕ ಸ್ನಾನ ಮಾಡದೆ ಇದ್ದರೆ ಮೊಡವೆ ಸಾಮಾನ್ಯ. 
•    ದಿನಕ್ಕೆ ಎಂಟು ಗಂಟೆ ನಿದ್ರೆ (Sleep) ಹಾಗೂ ದೇಹಕ್ಕೆ ಸೂಕ್ತ ವ್ಯಾಯಾಮ ಇಲ್ಲವಾದರೆ ಮೊಡವೆಗಳು ಉಂಟಾಗಬಹುದು. ಚಟುವಟಿಕೆರಹಿತ ದಿನಚರಿ ಹಾಗೂ ಸರಿಯಾದ ನಿದ್ರೆ ಇಲ್ಲದಿದ್ದ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್‌ ವ್ಯತ್ಯಾಸವಾಗುತ್ತದೆ. ಆಗ ಮೊಡವೆ ಸಮಸ್ಯೆ ಸಾಮಾನ್ಯ.
•     ಸ್ಮಾರ್ಟ್‌ ಫೋನ್‌ (SmartPhone) ಸ್ವಚ್ಛವಾಗಿಡುವುದು ಮುಖ್ಯ. ಫೋನಿಗೂ ಮೊಡವೆಗೂ ಏನು ವ್ಯತ್ಯಾಸ ಎಂದು ಅಚ್ಚರಿಯಾಗಬಹುದು. ಮೊಬೈಲನ್ನು ನಾವು ಪದೇ ಪದೆ ಸ್ಪರ್ಶ ಮಾಡುತ್ತಿರುವುದರಿಂದ ಅದರ ಮೇಲ್ಮೈ ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುತ್ತಿರುತ್ತದೆ. ಈ ಬ್ಯಾಕ್ಟೀರಿಯಾ ಮುಖದ ಸಂಪರ್ಕಕ್ಕೆ ಬಂದಾಗ ಮೊಡವೆ ಉಂಟಾಗುತ್ತದೆ.

ಮೊಡವೆಯಿದ್ದರೆ ಹೀಗ್ಮಾಡಿ
•    ಮೊಡವೆಗಳನ್ನು ಚಿವುಟಬಾರದು, ಪದೇ ಪದೆ ಮುಟ್ಟಿಕೊಳ್ಳಬಾರದು.
•    ಮೇಕಪ್ ಹಾಕಿದಾಗ ಅದನ್ನು ತೆಗೆದಿರಿಸಿಯೇ ಮಲಗಬೇಕು. 
•    ಮೇಕಪ್ ಬ್ರಶ್ ಗಳನ್ನು ಆಗಾಗ ಕ್ಲೀನ್ ಮಾಡಿಕೊಳ್ಳಬೇಕು. 
•    ಆಹಾರ, ವಿಹಾರದ ವಿಚಾರದಲ್ಲಿ ಕಾಳಜಿ ವಹಿಸುವುದು ಮುಖ್ಯ. 
•    ಜೀವನಶೈಲಿಯನ್ನು ಸರಿಪಡಿಸಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಬೈ ಹೇಳಬಹುದು. 

Follow Us:
Download App:
  • android
  • ios