Cleaning Tips: ಕಿಚನ್ ಕ್ಯಾಬಿನೆಟ್ ಹ್ಯಾಂಡಲ್ ಕ್ಲೀನ್ ಮಾಡೋಕೆ ಇಲ್ಲಿದೆ ಸುಲಭ ಟಿಪ್ಸ್
Kitchen Hacks: ಕಿಚನ್ ಕ್ಯಾಬಿನೆಟ್ ಕ್ಲೀನ್ ಮಾಡಿದ್ರೆ ಸಾಲೋದಿಲ್ಲ. ಅದ್ರ ಹ್ಯಾಂಡಲ್ ಕೂಡ ಸ್ವಚ್ಛಗೊಳಿಸ್ಬೇಕು. ಅದ್ರಲ್ಲಿ ಧೂಳಿನ ಜೊತೆ ಇರುವ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯ ಹಾಳು ಮಾಡುತ್ವೆ.
ಅಡುಗೆ ಮನೆ (Kitchen) ಶುಚಿಯಾಗಿದ್ದರೆ ಅಡುಗೆ (Cooking) ರುಚಿಯಾಗಿರುತ್ತದೆ ಎಂಬ ಮಾತಿದೆ. ಅಡುಗೆ ಮನೆಯಲ್ಲಿ ಆರೋಗ್ಯ (Health) ಅಡಗಿದೆ. ಅಡುಗೆ ಮನೆ ಸ್ವಚ್ಛತೆ (Clean) ಬಹಳ ಮುಖ್ಯ. ಅಡುಗೆ ಮನೆಯನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಿದ್ರೆ ಸಾಕಾಗುವುದಿಲ್ಲ. ಮೂಲೆ – ಮೂಲೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಕಿಚನ್ ಕ್ಲೀನಿಂಗ್ ಎಂದಾಗ ನಮ್ಮ ತಲೆಯಲ್ಲಿ ಹೋಗೋದು ಕಿಚನ್ ಕ್ಯಾಬಿನೆಟ್ ಜೊತೆ ಫ್ರಿಜ್ (Fridge), ಗ್ಯಾಸ್ ಒಲೆ. ಆದ್ರೆ ಕಿಚನ್ ಕ್ಯಾಬಿನೆಟ್ ನ ಹ್ಯಾಂಡಲ್ (Handle) ನಿರ್ಲಕ್ಷ್ಯ ಮಾಡ್ತೇವೆ. ಅದನ್ನು ಅನೇಕರು ಸ್ವಚ್ಛಗೊಳಿಸುವುದಿಲ್ಲ. ಮನೆಯ ಅತಿ ಹೆಚ್ಚು ಬಳಕೆಯಾಗುವ ವಸ್ತು (Material) ಗಳಲ್ಲಿ ಇದೂ ಒಂದು. ಕಪಾಟಿನ ಬಾಗಿಲು(door) ತೆರೆಯಲು ಪದೇ ಪದೇ ನಾವು ಹ್ಯಾಂಡಲ್ ಬಳಸ್ತೇವೆ. ಇದ್ರಿಂದ ಹ್ಯಾಂಡಲ್ ಬಣ್ಣ (Color ) ಬದಲಾಗಿರುತ್ತದೆ. ಅದ್ರಲ್ಲಿ ಒಂದಿಷ್ಟು ಕೊಳಕು, ಧೂಳಿರುತ್ತದೆ. ಆದ್ದರಿಂದ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿದೆ. ಆದಾಗ್ಯೂ, ಹ್ಯಾಂಡಲ್ ಅನ್ನು ಸ್ವಚ್ಛಗೊಳಿಸುವುದು ಕಷ್ಟವೇನಲ್ಲ. ಕೆಲವು ಸರಳ ಉಪಾಯದ ಮೂಲಕ ನೀವು ಹ್ಯಾಂಡಲ್ ಸ್ವಚ್ಛಗೊಳಿಬಹುದು. ಅಡುಗೆಮನೆಯ ಕ್ಯಾಬಿನೆಟ್ ಹ್ಯಾಂಡಲ್ ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನು ಹೇಳ್ತೇವೆ.
ನಿಯಮಿತ ಸ್ವಚ್ಛತೆ : ಮೊದಲೇ ಹೇಳಿದಂತೆ ಹ್ಯಾಂಡಲ್ ಗಳನ್ನು ನೀವು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಪ್ರತಿ ದಿನ ಅಥವಾ ಎರಡು ದಿನಕ್ಕೊಮ್ಮೆಯಾದ್ರೂ ನೀವು ಕ್ಲೀನ್ ಮಾಡ್ಬೇಕು. ಅದನ್ನು ಸುಲಭವಾಗಿ ಮಾಡಬಹುದು. ಅದಕ್ಕೆ ಹೆಚ್ಚಿನ ಸಮಯ (Time ) ಹಿಡಿಯುವುದಿಲ್ಲ. ಇದಕ್ಕೆ ನೀವು ವಿನೇಗರ್ (Vinegar) ಬಳಸಬಹುದು. ಒಂದು ಬಾಟಲಿಗೆ ವಿನೇಗರ್ ಹಾಗೂ ನೀರ (Water) ನ್ನು ಮಿಕ್ಸ್ ಮಾಡಿ. ಅದನ್ನು ಹ್ಯಾಂಡಲ್ ಮೇಲೆ ಸ್ಪ್ರೇ (Spray) ಮಾಡಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತ್ರ ಬಟ್ಟೆ (Clothes)ಯಿಂದ ಕ್ಲೀನ್ ಮಾಡಿ. ನಿಮ್ಮ ಹ್ಯಾಂಡಲ್ ನಲ್ಲಿರುವ ಕೊಳೆಯನ್ನು ವಿನೇಗರ್ ತೆಗೆಯುತ್ತದೆ.
ಗರ್ಭ ಧರಿಸಲು ಸಮಸ್ಯೆ ಆಗುತ್ತಿದೆಯೇ? ಹಾಗಿದ್ರೆ ಇದಕ್ಕೆ ಪಿಸಿಒಡಿ ಕಾರಣ !
ಡೀಪ್ ಕ್ಲೀನಿಂಗ್ : ಪ್ರತಿ ದಿನ ಸ್ವಚ್ಛಗೊಳಿಸುವುದಲ್ಲದೆ ಕೆಲವೊಮ್ಮೆ ಹ್ಯಾಂಡಲ್ ಗಳನ್ನು ಮತ್ತಷ್ಟು ಕ್ಲೀನ್ ಮಾಡುವ ಅಗತ್ಯವಿರುತ್ತದೆ. ಹ್ಯಾಂಡಲ್ ಮೂಲೆಯಲ್ಲಿ ಕೊಳಕು ಸಿಕ್ಕಿರುವ ಸಾಧ್ಯತೆಯಿರುತ್ತದೆ. ಹಾಗಾಗಿ ತಿಂಗಳಿಗೊಮ್ಮೆ ನೀವು ಡೀಪ್ ಕ್ಲೀನಿಂಗ್ ಮಾಡುವ ಮೂಲಕ ಬ್ಯಾಕ್ಟೀರಿಯಾ (Bacteria) ಮಾತ್ರವಲ್ಲದೆ ಯಾವುದೇ ರೀತಿಯ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನೀವು ಮೊದಲು ಹ್ಯಾಂಡಲ್ ಹೊರತೆಗೆಯಿರಿ. ನಂತ್ರ ಬೆಚ್ಚಗಿನ ನೀರು, ವಿನೆಗರ್ ಮತ್ತು ಒಂದು ಹನಿ ಸೌಮ್ಯವಾದ ಪಾತ್ರೆ ಸೋಪ್ (Soap) ಅನ್ನು ಬಕೆಟ್‌ನಲ್ಲಿ ಹಾಕಿ ಮತ್ತು ಕಿಚನ್ ಕ್ಯಾಬಿನೆಟ್ ಹ್ಯಾಂಡಲ್ ಅನ್ನು ಈ ನೀರಿನಲ್ಲಿ 30 ನಿಮಿಷಗಳ ಕಾಲ ಬಿಡಿ. ನಂತ್ರ ಹಿಡಿಕೆಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಅಗತ್ಯವಿದ್ದರೆ, ಅವುಗಳನ್ನು ಮೃದುವಾದ ಬ್ರಷ್ (Brush) ನಿಂದ ನಿಧಾನವಾಗಿ ಉಜ್ಜಿ.
ಕಂಗನಾ ರಣಾವತ್ ಹೇಳಿದಂತೆ ಹೆಂಡ್ತಿಗೆ ಮೋಸ ಮಾಡೋ ಗಂಡಂದಿರು ಕೊಡೋ ಕಾರಣಗಳಿವು !
ಹ್ಯಾಂಡಲ್ ಯಾವುದು ಎನ್ನುವುದರ ಮೇಲೆ ಸ್ವಚ್ಛತೆ ನಿರ್ಧಾರ : ಕಿಚನ್ ಕ್ಯಾಬಿನೆಟ್ ಹ್ಯಾಂಡಲ್ ಕ್ಲೀನ್ ಮಾಡ್ಬೇಕೆಂಬ ಕಾರಣಕ್ಕೆ ಎಲ್ಲ ಹ್ಯಾಂಡಲ್ ಗೆ ಒಂದೇ ರೀತಿಯ ವಸ್ತು ಬಳಸಿದ್ರೆ ಅದು ಹಾಳಾಗುತ್ತದೆ. ಹಾಗಾಗಿ ಮೊದಲು ಹ್ಯಾಂಡಲ್ ಯಾವುದು ಎಂಬುದನ್ನು ನೋಡಿಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಕ್ಯಾಬಿನೆಟ್ ಹಿಡಿಕೆಗಳು ಮರದ್ದಾಗಿದ್ದರೆ, ನೀವು ಕಠಿಣವಾದ ಮಾರ್ಜಕಗಳನ್ನು ಬಳಸಬಾರದು. ಸೌಮ್ಯವಾದ ಸೋಪನ್ನು ಸ್ವಚ್ಛಗೊಳಿಸಲು ನೀವು ಬಳಸಬೇಕು. ಮರದ ಹ್ಯಾಂಡಲ್ ಗಳನ್ನು ನೀರಿನಲ್ಲಿ ನೆನೆ ಹಾಕಿದ್ರೆ ಹಾಳಾಗುವ ಸಾಧ್ಯತೆಯಿರುತ್ತದೆ. ಲೋಹ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಕ್ಯಾಬಿನೆಟ್ ಹ್ಯಾಂಡಲ್‌ಗಳನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಸೋಪ್ ಮತ್ತು ನೀರು ಸಾಕಾಗುತ್ತದೆ. ಹಿತ್ತಾಳೆಯಿಂದ ಮಾಡಿದ ಹ್ಯಾಂಡಲ್ ಕೊಳಕಾಗಿದ್ದರೆ ಅಡುಗೆ ಸೋಡಾ ಹಾಗೂ ನಿಂಬೆ ರಸದಿಂದ ಸ್ವಚ್ಛಗೊಳಿಸಿ, ಕ್ಲೀನ್ ಮಾಡಿ.