Asianet Suvarna News Asianet Suvarna News

ತಾಯ್ತನ, ಕೆರಿಯರ್ ಒಟ್ಟಿಗೆ ನಿಭಾಯಿಸೋ ಕಷ್ಟ ಹೆಣ್ಣಿಗಷ್ಟೇ ಗೊತ್ತು ಎಂದ ಕೋರ್ಟ್

  • ಮೆಟರ್ನಿಟಿ ರಜೆ ಪಡೆದಿದ್ದಕ್ಕೆ ಕೆಲಸದಿಂದ ಕಿತ್ತು ಹಾಕಿದ ಸರ್ಕಾರ
  • ಕೋರ್ಟ್ ಮೊರೆ ಹೋದ ಹೆಣ್ಣಿಗೆ ಸಿಕ್ತು ನ್ಯಾಯ
Kerala High Court Reinstates Woman Fired For Availing Maternity Leave dpl
Author
Bangalore, First Published Aug 6, 2021, 12:14 PM IST

ತಿರುವನಂತಪುರಂ(ಆ.05): ಮೆಟರ್ನಿಟಿ ರಜೆ ತೆಗೆದುಕೊಳ್ಳುವುದು ಹೆಣ್ಮಕ್ಕಳಿಗೆ ಉದ್ಯೋಗದಲ್ಲಿದ್ದಾಗ ಎದುರಾಗುವ ದೊಡ್ಡ ಸಮಸ್ಯೆ. ಬಹಳಷ್ಟು ಸಲ ಕೆಲಸ ಬಿಡು, ಇಲ್ಲ ಕಚೇರಿಗೆ ಬಾ ಎಂದಷ್ಟೇ ಆಯ್ಕೆಗಳು ತಾಯಿಯಾಗುವ ಹೆಣ್ಣಿನ ಮುಂದಿರುತ್ತದೆ. ನವಜಾತ ಶಿಶುವನ್ನು ಬಿಟ್ಟು ಕಚೇರಿಗೆ ಹೋಗುವುದು ಸಾಧ್ಯವಿಲ್ಲ ಎಂದಾದಾಗ ಬಹಳಷ್ಟು ಹೆಣ್ಣುಮಕ್ಕಳು ಕುಟುಂಬ ಮುಖ್ಯ ಎಂದು ಕೆಲಸದ ಆಸೆಯನ್ನೇ ಬಿಟ್ಟು ಮನೆ ಸೇರಬೇಕಾಗುತ್ತದೆ. ಈ ಮೂಲಕ ಅವರ ಆರ್ಥಿಕ ವರಮಾನವೂ ನಿಲ್ಲುತ್ತದೆ. ಇಂತಹದ್ದೇ ಒಂದು ಘಟನೆ ಕೇರಳದಲ್ಲಿ ವರದಿಯಾಗಿದೆ.

ಅಮ್ಮನಾಗಲಿರುವ ಮಹಿಳೆ ರಜೆ ಕೇಳಿದ್ದಾರೆ. ರಜೆ ಸಿಗದಿದ್ದಾಗ ರಜೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ಕೆಲಸದಿಂದಲೇ ತೆಗೆದುಹಾಕಲಾಗಿದೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಈಕೆಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಕೆಲವು ಸೂಕ್ಷ್ಮ ವಿಚಾರಗಳನ್ನೂ ಎತ್ತಿ ಹಿಡಿದಿದೆ.

ಕಾಮೋದ್ರೇಕಕ್ಕೆ ದೇಹದ ಅಂಗ ಬಳಕೆ ಕೂಡ ಅತ್ಯಾಚಾರ : ಜೀವಾವಧಿ ಶಿಕ್ಷೆ

ಮಹಿಳೆಗೆ ಹೆರಿಗೆ ರಜೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಮಹಿಳೆ ಕೇರಳ ಹೈಕೋರ್ಟ್ ನ್ಯಾಯ ಒದಗಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೆರಿಗೆ ರಜೆ ನೀಡದೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲು ಸರ್ಕಾರ ಹೇಳಿರುವ ಕಾರಣವನ್ನು ಕೋರ್ಟ್ ತಳ್ಳಿ ಹಾಕಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ದೇವನ್ ರಾಮಚಂದ್ರನ್ ಅವರು ತೀರ್ಪು ಹೇಳುವಾಗ ತಾಯ್ತನ ಮತ್ತು ಕೆರಿಯರ್ ಜೊತೆಗೇ ನಿರ್ವಹಿಸುವುದು ಎಷ್ಟು ಕಷ್ಟ ಎಂದು ಒಬ್ಬ ಹೆಣ್ಣು ಮಾತ್ರ ತಿಳಿಯಲು ಸಾಧ್ಯ ಎಂದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವಂದನಾ ಶ್ರೀಮೇಧಾ ಎಂಬ ಮಹಿಳೆ ಹೆರಿಗೆ ರಜೆ ನೀಡದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ಮಹಿಳೆ. ಅನಧಿಕೃತ ಗೈರುಹಾಜರಿಗಾಗಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ತನ್ನ ಮನವಿಯಲ್ಲಿ ಹೆರಿಗೆ ರಜೆಗಾಗಿ ತಾನು ನೀಡಿದ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ವಾದಿಸಿದ್ದಾರೆ.

ಹೆರಿಗೆ ರಜೆಗಾಗಿ ಸಂಬಂಧ ಪಟ್ಟ ಇಲಾಖೆ ಪ್ರತಿನಿಧಿಗಳನ್ನು, ಲವಾರು ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು ಎಂದು ಶ್ರೀಮೇಧಾ ಹೇಳಿದ್ದಾರೆ. ನಂತರ ವಕೀಲ ಬಿ. ಮೋಹನ್‌ಲಾಲ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

Follow Us:
Download App:
  • android
  • ios