Asianet Suvarna News Asianet Suvarna News

ಕಾಮೋದ್ರೇಕಕ್ಕೆ ದೇಹದ ಅಂಗ ಬಳಕೆ ಕೂಡ ಅತ್ಯಾಚಾರ : ಜೀವಾವಧಿ ಶಿಕ್ಷೆ

  • ಲೈಂಗಿಕವಾಗಿ ಉದ್ರೇಕಗೊಳ್ಳಲು ದೇಹದ ಯಾವುದೇ ಅಂಗವನ್ನೂ ಬಳಸುವುದು ಕೂಡ ಅತ್ಯಾಚಾರ 
  •  ಕೇರಳ ಹೈಕೋರ್ಟ್‌ನಿಂದ ಅತ್ಯಾಚಾರ ಬಗೆಗೆ ಮಹತ್ವದ ತೀರ್ಪು 
Sexual assault between thighs also rape says Kerala High court snr
Author
Bengaluru, First Published Aug 6, 2021, 8:58 AM IST
  • Facebook
  • Twitter
  • Whatsapp

ಕೊಚ್ಚಿ (ಆ.06): ಲೈಂಗಿಕವಾಗಿ ಉದ್ರೇಕಗೊಳ್ಳಲು ದೇಹದ ಯಾವುದೇ ಅಂಗವನ್ನೂ ಬಳಸುವುದು ಕೂಡ ಅತ್ಯಾಚಾರ ಎನಿಸಿಕೊಳ್ಳುತ್ತದೆ ಎಂದು ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ತನ್ಮೂಲಕ ಅತ್ಯಾಚಾರದ ವ್ಯಾಖ್ಯೆಯನ್ನೇ ವಿಸ್ತರಿಸಿದೆ.

ಲೈಂಗಿಕ ಉದ್ರೇಕತೆ ಪಡೆಯುವ ಉದ್ದೇಶದಿಂದ ಸಂತ್ರಸ್ತೆಯ ಕಾಲುಗಳನ್ನು ಬಿಗಿಯಾಗಿ ಬಂಧಿಸುವಂತೆ ಮಾಡಿ ಅಲ್ಲಿ ವ್ಯಕ್ತಿಯೊಬ್ಬ ದೌರ್ಜನ್ಯ ಎಸಗಿದ ಕೃತ್ಯವನ್ನೂ ಐಪಿಸಿ ಸೆಕ್ಷನ್‌ 375ರಡಿ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. 

ವಿದ್ಯಾರ್ಥಿನಿ ಮೇಲೆ ಮೈಸೂರು ವಿವಿ ಪ್ರಾಧ್ಯಾಪಕನಿಂದ ರೇಪ್‌

ಬಲವಂತದ ಲೈಂಗಿಕ ಕ್ರಿಯೆ ಎಂದರೆ ಅದು ದೇಹದ ಖಾಸಗಿ ಅಂಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಮಹಿಳೆಯ ಯಾವುದೇ ಭಾಗ ಕೂಡ ಸೇರುತ್ತದೆ. ಕಾನೂನು ಇದನ್ನು ಹೇಳುತ್ತದೆ ಎಂದಿದೆ. ಬಾಲಕಿಯೊಬ್ಬಳ ಮೇಲೆ ಈ ಕೃತ್ಯ ಎಸಗಿದ ಸಂಬಂಧ ಕೇರಳದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ನೀಡಿ ಈ ಆದೇಶ ಹೊರಡಿಸಿದೆ.

Follow Us:
Download App:
  • android
  • ios