Asianet Suvarna News Asianet Suvarna News

ಹೊಸ ವರ್ಷದಲ್ಲಿ ಈ ಐದು ಸೂತ್ರ ಪಾಲಿಸಿ, ಶ್ರೀಮಂತರಾಗಿ!

ಲೈಫ್‌ನಲ್ಲಿ ಆದಷ್ಟು ಬೇಗನೆ ಹಣ ಮಾಡಿ ಸೆಟಲ್‌ ಆಗಬೇಕು ಅನ್ನೋಂದು ಎಲ್ಲರ ಕನಸು. ಅಂಥ ಸೂತ್ರಗಳನ್ನು ರೆಸಲ್ಯೂಶನ್‌ಗಳಾಗಿ ತೆಗೆದುಕೊಂಡು ಆಚರಣೆಗೆ ತರಲು ಹೊಸ ವರ್ಷದ ದಿನವೇ ಬೆಸ್ಟ್ ಡೇ. ಈಗಿನಿಂದಲೇ ಇವುಗಳನ್ನು ಪಾಲಿಸಿ.

 

keep these five monetary policy in new year and become rich
Author
Bengaluru, First Published Dec 31, 2020, 2:55 PM IST

ಮಿಲಿಯನೇರ್‌, ಬಿಲಿಯನೇರ್‌ಗಳಾಗಿರುವ, ದೊಡ್ಡ ಉದ್ಯಮಿಗಳಾಗಿರುವವರು ಬೇರೆಯವರಿಗೆ ಟಿಫ್ಸ್‌ ಕೊಡುವಾಗ, ನಿಮ್ಮ ಜೀವನಶೈಲಿಯಲ್ಲಿ ಭಾರಿ ಬದಲಾವಣೆ ಮಾಡಿಕೊಳ್ಳಿ ಎಂದೇನೂ ಹೇಳುವುದಿಲ್ಲ. ಬಹಳ ಸರಳವಾದ ಕೆಲವು ಸಂಗತಿಗಳನ್ನು ಹೇಳುತ್ತಾರೆ. ಅಂತ ಐದು ಟಿಫ್ಸ್‌ಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಇವುಗಳನ್ನು ಮನಸ್ಸಿಟ್ಟು ಪಾಲಿಸಿದರೆ ನೀವು ಅತ್ಯಲ್ಪ ಕಾಲದಲ್ಲಿ ಹಣವಂತರಾಗುವುದು ಗ್ಯಾರಂಟಿ.

ಹಲವು ಆದಾಯ ಮೂಲಗಳು
ಸಾಮಾನ್ಯವಾಗಿ ನಾವು ಒಂದು ಕೆಲಸ, ಒಂದು ಸಂಬಳೆನ್ನುವಷ್ಟಕ್ಕೆ ತೃಪ್ತರಾಗಿಬಿಡುತ್ತೇವೆ. ನಮ್ಮ ಸಂಸಾರದ ಎಲ್ಲ ಅಗತ್ಯಗಳೂ ಅಷ್ಟರಲ್ಲೇ ಪೂರೈಕೆಯಾಗಲಿ ಅಂತ ಬಯಸುತ್ತೇವೆ. ಆದರೆ ಇದು ತಪ್ಪು. ಯಶಸ್ವಿ ಉದ್ಯಮಿಗಳು ಹೇಳುವ ಪ್ರಕಾರ, ನೀವು ಹಲವು ಆದಾಯ ಮೂಲಗಳನ್ನು ಹೊಂದಿರಬೇಕು. ಥಾಮಸ್‌ ಸಿ ಕೊರ್ಲಿ ಎಂಬಾತ ಹಲವು ಹಣವಂತರ ಬಗೆ ಅಧ್ಯಯನ ಮಾಡಿ ‘ಚೇಂಜ್‌ ಯುವರ್‌ ಹ್ಯಾಬಿಟ್ಸ್‌, ಚೇಂಜ್‌ ಯುವರ್‌ ಲೈಫ್‌’ ಎಂಬ ಪುಸ್ತಕ ಬರೆದಿದ್ದಾನೆ. ಅದರಲ್ಲಿ ಅವನು ಹೇಳುವ ಪ್ರಕಾರ, ಯಶಸ್ವಿ ವ್ಯಕ್ತಿಗಳು ಹಲವು ಮೂಲಗಳಿಂದ ಇನ್‌ಕಮ್‌ ಪಡೆಯುತ್ತಿರುತ್ತಾರೆ. ಮೊದಲ ಬಾರಿಗೆ ಲಕ್ಷ ಡಾಲರ್‌ ಗಳಿಕೆ ಮಾಡಿದವರು ಕನಿಷ್ಠ ಮೂರಾದರೂ ಇನ್‌ಕಮ್‌ಗಳನ್ನು ಹೊಂದಿದ್ದರಂತೆ. ಉದಾಹರಣೆಗೆ ಮನೆ ಬಾಡಿಗೆ, ಸೈಡ್‌ ಬ್ಯುಸಿನೆಸ್‌ ಇತ್ಯಾದಿ. ಬರುವ ಎರಡು ಆದಾಯಗಳಲ್ಲಿ ಸಣ್ಣದನ್ನು ಖರ್ಚು ಮಾಡಿ, ದೊಡ್ಡ ಆದಾಯವನ್ನು ಉಳಿಸಿ ಎಂದೂ ಆತ ಹೇಳುತ್ತಾನೆ.

2020 ಕಲಿಕೆಯ ವರ್ಷ; ಕೊರೋನಾ ಕಲಿಸಿದ ಈ ಆರ್ಥಿಕ ಪಾಠವನ್ನು ಎಂದಿಗೂ ಮರೆಯಬೇಡಿ ...

ಉಳಿತಾಯವೇ ಆದಾಯ
ಆದಾಯ ಎಷ್ಟೇ ದೊಡ್ಡದಾಗಿರಲಿ, ಅದೆಲ್ಲ ಖರ್ಚಾಗಿ ಹೋದರೆ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಮಿಲಿಯನೇರ್‌ಗಳು, ಬಿಲಿಯನೇರ್‌ಗಳು ತಮ್ಮ ವಾರ್ಷಿಕ ಆದಾಯದ ಕನಿಷ್ಠ 20 ಶೇಕಡ ಹಣವನ್ನು ಉಳಿತಾಯಕ್ಕೆ, ಹೂಡಿಕೆಗೆ ಮೀಸಲಿಡುತ್ತಾರಂತೆ. ಹಾಗಂತ ‘ಐ ವಿಲ್‌ ಟೀಚ್‌ ಯು ಟು ಬಿ ರಿಚ್‌’ ಎನ್ನುವ ಸೆಲ್‌ಧಿ ಹೆಲ್ಪ್‌ ಪುಸ್ತಕ ಬರೆದ ರಮಿತ್‌ ಸೇಥಿ ಎಂಬ ಲೇಖಕ ಹೇಳುತ್ತಾರೆ.

keep these five monetary policy in new year and become rich

ನೇರವಾಗಿ ಉಳಿತಾಯಕ್ಕೇ ಹೋಗಲಿ
ಉಳಿತಾಯ ಅಥವಾ ಹೂಡಿಕೆಗೆಂದು ನೀವು ನಿಗದಿಪಡಿಸಿದ ಮೊತ್ತ, ನಿಮ್ಮ ಸಂಬಳದಿಂದ ನೇರವಾಗಿ ಕಡಿತಗೊಳ್ಳುವಂತೆ ಇರಲಿ. ಅಂದರೆ ಅದು ನಿಮ್ಮ ಕೈಗೂ ಬರುವ ಮುನ್ನವೇ ಹೂಡಿಕೆಗೆ, ಉಳಿತಾಯಕ್ಕೆ ಹೋಗಿಬಿಡಬೇಕು. ಒಮ್ಮೆ ಕೈಗೆ ಸಿಕ್ಕಿತೆಂದರೆ ಅದು ನಾನಾ ಕಾರಣಗಳ ನೆಪದಲ್ಲಿ ಖರ್ಚಾಗಿಬಿಡಬಹುದು. ಈ ವರ್ಷ ನಾನು ಐದು ಲಕ್ಷದಷ್ಟು ಹಣ ಉಳಿಸುತ್ತೇನೆ ಎಂದುಕೊಂಡರೆ, ಪ್ರತಿ ತಿಂಗಳೂ ನನ್ನ ಬ್ಯಾಂಕ್‌ ಅಕೌಂಟ್‌ನಿಂದ ಇಂತಿಷ್ಟು ಹಣ ಅಲ್ಲಿಗೆ ಹೋಗಿಬಿಡಬೇಕು. ಹಾಗೆ ಸ್ವಯಂಚಾಲಿತ ಪೇಮೆಂಟ್‌ ಅನ್ನು ನೀವು ನಗದಿಪಡಿಸಿಕೊಳ್ಳುವುದು ಲೇಸು. ಇದು ಗ್ರಾಂಟ್‌ ಸಬಾಟಿಯರ್‌ ಎಂಬ ಮಿಲಿಯನೇರ್‌ನ ಸಲಹೆ.

IT ರಿಟರ್ನ್ ಸಲ್ಲಿಕೆ ಹಾಗೂ ಪ್ರಯೋಜನ; ಹಿಂದೇಟು ಹಾಕಿ ಸೌಲಭ್ಯದಿಂದ ವಂಚಿತರಾಗಬೇಡಿ! ...

ಯಶಸ್ವಿ ವ್ಯಕ್ತಿಗಳೊಡನೆ ಸಂಪರ್ಕವಿರಲಿ
ಕೆಟ್ಟ ಹವ್ಯಾಸಗಳ, ದುರಭ್ಯಾಸಗಳಿಗಾಗಿ ಹಣ ವ್ಯಯ ಮಾಡುವವರ ಸಂಗ ನಿಮ್ಮನ್ನೂ ಅವರಂತೆಯೇ ಮಾಡುತ್ತದೆ. ಆದರೆ ಯಶಸ್ವಿ ವ್ಯಕ್ತಿಗಳ ಸಂಗ, ನಿಮಗೆ ಅವರ ಬದುಕಿನ ಕಲೆಯನ್ನು, ಹಣ ಮಾಡುವ ಕೌಶಲ್ಯಗಳನ್ನು ಕಲಿಯುವಂತೆ ಮಾಡುತ್ತದೆ. ನಿಮ್ಮ ಸ್ನೇಹಿತರ ಕಾಂಟ್ಯಾಕ್ಟುಗಳು ಕೂಡ ನಿಮಗೆ ನಾನಾ ರೀತಿಯಲ್ಲಿ ನೆರವಾಗಬಹುದು. ಶ್ರೀಮಂತರು, ಯಶಸ್ವಿ ವ್ಯಕ್ತಿಗಳ ನೆಟ್‌ವರ್ಕ್‌ನಲ್ಲಿ ಅವರಂಥವರೇ ಇರುತ್ತಾರೆ, ಯಾಕೆಂದು ಈಗ ನಿಮಗೆ ತಿಳಿದಿರಬಹುದಲ್ಲ.

ಥಿಂಕ್‌ ಬಿಗ್‌
ಯಶಸ್ವಿ ವ್ಯಕ್ತಿಗಳು ದೊಡ್ಡ ರೀತಿಯಲ್ಲಿ ಯೋಚಿಸುತ್ತಿರುತ್ತಾರಂತೆ. ಹಾಗೆಂದು ಇನ್ನೊಬ್ಬ ಮಿಲಿಯನೇರ್‌ ಸ್ಟೀವ್‌ ಸೀಬೋಲ್ಡ್‌ ಎನ್ನುವವನು ಹೇಳುತ್ತಾನೆ. ಎಂದರೆ, ನೀವು ಈ ವರ್ಷ ಐದು ಲಕ್ಷ ಉಳಿಸಬೇಕು ಎಂದುಕೊಂಡಿದ್ದರೆ, ನಿಮ್ಮ ಗುರಿಯನ್ನು ಹತ್ತು ಲಕ್ಷಕ್ಕೆ ನಿಗದಿಪಡಿಸಬೇಕು. ಈ ವರ್ಷ ನಿಮ್ಮ ಉದ್ಯಮದ ಹತ್ತು ಔಟ್‌ಲೆಟ್‌ಗಳನ್ನು ಆರಂಭಿಸಬೇಕಿದ್ದರೆ, ನಿಮ್ಮ ಗುರಿ  ಇಪ್ಪತ್ತು ಔಟ್‌ಲೆಟ್‌ಗಳಾಗಿರಬೇಕು. ಉಳಿಸಬೇಕೆಂದಿದ್ದರೆ ಈ ಕ್ಷಣವೇ ಆರಂಭಿಸಬೇಕು; ದೊಡ್ಡ ಮಟ್ಟದಲ್ಲಿ ನಿಮ್ಮ ಆದರ್ಶಗಳು, ಕನಸುಗಳು ಇರಬೇಕು. ಅಲ್ಪ ಕನಸುಗಳು ತಕ್ಷಣದ ಸುಖವನ್ನಷ್ಟೇ ಈಡೇರಿಸಲು ಸಮರ್ಥ.

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಔಟ್; ಕಾರಣವೇನು? ...

Follow Us:
Download App:
  • android
  • ios