ಬೆಂಗಳೂರು(ಡಿ.25): IT ರಿಟರ್ನ್ಸ್ ಸಲ್ಲಿಕೆಗೆಯನ್ನು ಹಲವರು ನಿರ್ಲಕ್ಷ್ಯಿಸುತ್ತಾರೆ. ಕೆಲವರಿಗೆ ಈ ಕುರಿತು ಮಾಹಿತಿ ತಿಳಿದಿರುವುದಿಲ್ಲ. ಇದರಿಂದ ಹಲವು ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಪಿಂಚಣಿದಾರರು IT ರಿಟರ್ನ್ಸ್ ಸಲ್ಲಿಕೆ ಮಾಡಲು ಹಿಂಜರಿಯುತ್ತಾರೆ. ಇದು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಲಿದೆ. 

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೇಂದ್ರ ಸರ್ಕಾರ!

ಐಟಿ ರಿಟರ್ಸನ್ ಸಲ್ಲಿಕೆ ಮಾಡಿದ ಪಿಂಚಣಿದಾರರು ಆಕಸ್ಮಿಕ ಸಾವೀಗೀಡಾದರೆ, ಪಿಂಚಣಿದಾರ ಕಳೆದ 3 ವರ್ಷಗಳಲ್ಲಿ ಪಡೆದ ಆದಾಯದ 10 ಪಟ್ಟು  ಹಣ ಪಡೆಯಲು ಕುಟುಂಬ ಅರ್ಹರಾಗಿರುತ್ತದೆ.  ಉದಾಹರಣೆಗೆ, ಪಿಂಚಣಿದಾರರ ಮಾಸಿಕ ಪಿಂಚಣಿ 25000 / - ಇದ್ದರೆ, ಅವರ ವಾರ್ಷಿಕ ಆದಾಯ 3,00,000. ಮೂರು ವರ್ಷಗಳವರೆಗೆ ಅವರ ಸರಾಸರಿ ಆದಾಯ  3,00,000 . ಹೀಗಾಗಿ  3 ಲಕ್ಷದ 10 ಪಟ್ಟು - 30, 00, 000 ರೂಪಾಯಿಗಳನ್ನು ಸರ್ಕಾರದಿಂದ ಪಡೆಯುಲು ಕುಟಂಬ ಅರ್ಹವಾಗಿರುತ್ತದೆ.

ವರ್ಕ್ ಫ್ರಂ ಹೋಂ ಎಫೆಕ್ಟ್‌ : ಈ ಬಾರಿ ನಿಮಗೆ ಹೆಚ್ಚು ತೆರಿಗೆ!.

ಈ ಸೌಲಭ್ಯ ಪಡೆಯಲು ಐಟಿ ರಿಟರ್ನ್ಸ್ ದಾಖಲೆಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಇದನ್ನು ಹೊರತುಪಡಿಸಿದ ಇನ್ಯಾವ ದಾಖಲೆ ಪತ್ರ, ಪುರಾವೆಗಳನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ. ಇದರಿಂದ ಪ್ರತಿ ವರ್ಷ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವ ಪಿಂಚಣಿದಾರರ ಕುಟುಂಬಕ್ಕೆ ದೊಡ್ಡ ಆರ್ಥಿಕ ಪರಿಹಾರ ಸಿಗಲಿದೆ. ಒಂದು ವೇಳೆ ಪಿಂಚಣಿದಾರರು ಐಟಿ ರಿಟರ್ನ್ ಸಲ್ಲಿಕೆ ಮಾಡಲು ನಿರ್ಲಕ್ಷ್ಯ ವಹಿಸಿದ್ದರೆ, ಅಥವಾ ಹಿಂದೇಟುಹಾಕಿದ್ದರೆ, ಈ ಸೌಲಭ್ಯದಿಂದ ಕುಟುಂಬ ವಂಚಿತವಾಗಲಿದೆ.