Asianet Suvarna News Asianet Suvarna News

ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ 'ಖಾಸಗಿ ಫೋಟೋಸ್‌' ವೈರಲ್‌! ಅವಿವೇಕಿಗಳಿಗೆ ಉತ್ತರವಿದು ಎಂದ ಎಂಎಲ್‌ಎ

ರಾಜಕೀಯ ಬೇರೆ..ವೈಯುಕ್ತಿಕ ಜೀವನವೇ ಬೇರೆ. ಇದು ಅಕ್ಷರಶಃ ನಿಜ ಅನ್ನೋದನ್ನು ಕಾಫಿ ನಾಡು ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ನಯನ ಮೋಟಮ್ಮ ತೋರಿಸಿಕೊಟ್ಟಿದ್ದಾರೆ. ಟ್ವಿಟರ್‌ನಲ್ಲಿ ಅವರು ಮಾಡಿರೋ ಪೋಸ್ಟ್ ಎಲ್ಲೆಡೆ ವೈರಲ್ ಆಗ್ತಿದೆ.

Karnataka Assembly election, Nayana motamma shared her private photos on twitter Vin
Author
First Published May 20, 2023, 7:17 PM IST

ರಾಜಕೀಯ ಅಂದ್ರೆ ಖಾದಿ ಬಟ್ಟೆ, ವೈಟ್ ಶರ್ಟ್‌ ತೊಟ್ಟು ಓಡಾಡೋದು, ಖಾದಿ, ಕಾಟನ್ ಸೀರೆಯನ್ನು ಮಾತ್ರ ಉಡೋದು, ಯಾವಾಗ್ಲೂ ಗಂಭೀರವಾಗಿರೋದು. ಸಭೆ-ಸಮಾರಂಭಗಳಲ್ಲಿ ದೊಡ್ಡದಾಗಿ ಭಾಷಣ ಬಿಗಿಯೋದು, ಜನರ ಸೇವೆಗೆ ಅಂತಾನೆ ಜೀವನ ಮುಡಿಪಾಗಿಡೋದು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ರಾಜಕಾರಣಿಗಳನ್ನು ಹಾಗೆ ನೋಡೋಕೇನೆ ಇಷ್ಟಪಡುತ್ತಾರೆ. ಜನಸಾಮಾನ್ಯರ ಪಾಲಿಗೆ ಉತ್ತಮ ರಾಜಕಾರಣಿಯ ಗುಣಲಕ್ಷಣಗಳಿವು. ಆದ್ರೆ ವಾಸ್ತವದಲ್ಲಿ ನೋಡುವುದಾದರೆ ರಾಜಕಾರಣಿಗಳು ಮನುಷ್ಯರಲ್ವಾ, ಅವ್ರಿಗೂ ಎಲ್ಲರಂತ ಹಲವು ಕನಸುಗಳಿರೋದಲ್ವಾ. ಹೊಸ ಸ್ಥಳಗಳನ್ನು ಸುತ್ತಾಡೋದು, ಟ್ರೆಂಡೀ ಡ್ರೆಸ್ ತರೋದು ಇದೆಲ್ಲಾ ಅವರಿಗೆ ನಿಷಿದ್ಧವಾಗಿಲ್ಲ. ಆದರೂ ರಾಜಕಾರಣಿಗಳು ಹೀಗೆಲ್ಲಾ ಮಾಡಿದರೆ ಯಾಕೆ ಅಪರಾಧಿಯಂತೆ ನೋಡಲಾಗುತ್ತೆ.

ಈ ಬಗ್ಗೆ ಕಾಫಿ ನಾಡು ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ನಯನ ಮೋಟಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಯನಾ ಮೋಟಮ್ಮ ಅವರ ಖಾಸಗಿ ಫೋಟೋಸ್‌ಗಳನ್ನು ಒಳಗೊಂಡ ವಿಡಿಯೋ ಇದಾಗಿದೆ. ಸ್ವತಃ ಈ ವಿಡಿಯೋವನ್ನು ನಯನಾ ಮೋಟಮ್ಮ ಅವರು ಹಂಚಿಕೊಂಡಿದ್ದಾರೆ. 'ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ. ಹೌದು... ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು' ಎಂದು ಶೀರ್ಷಿಕೆ ನೀಡಿ ನಯನಾ ಮೋಟಮ್ಮ ಮಾಡಿರೋ ಟ್ವಿಟರ್ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ನಯನಾ ಅವರ ಈ ನೇರ ನಡೆ ಮತ್ತು ಧೈರ್ಯ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

ಲೈಫ್‌ನಲ್ಲಿ ಹೀಗಿದ್ದರೆ ಸಕ್ಸಸ್‌ ಆಗುವುದು ಸುಲಭ; ಡಿಕೆಶಿ ಮಗಳು ಐಶ್ವರ್ಯ ಜೀವನ ಪಾಠ

ಸ್ವತಃ  ತಾವೇ ತಮ್ಮ ಖಾಸಗಿ ಫೋಟೋಸ್‌ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವೈಯಕ್ತಿಯ ಜೀವನ ಮತ್ತು ರಾಜಕೀಯ ಜೀವನ ವಿಭಿನ್ನವಾಗಿರುತ್ತವೆ. ಈ ವಿಚಾರ ಅವಿವೇಕಿಗಳಿಗೆ ತಿಳಿದಿರಲಿ ಎಂದು ವಿರೋಧಿಗಳಿಗೆ ನೇರವಾಗಿ  ಹೇಳಿದ್ದಾರೆ. ಸದ್ಯ ನಯನಾ ಅವರ ಧೈರ್ಯಕ್ಕೆ ಅವರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾರು ಈ ನಯನಾ ಮೋಟಮ್ಮ?
ಈ ಬಾರಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿಯ ವಿಶೇಷತೆ ಎಂದರೆ ಮೊದಲ ಬಾರಿಗೆ ಟಿಕೆಟ್ ಪಡೆದಿದ್ದ ಮಹಿಳಾ ಮಣಿಗಳು ಗೆದ್ದು ಕಮಾಲ್ ಮಾಡಿದ್ದಾರೆ. ಅದರಲ್ಲಿ ನಯನ ಮೋಟಮ್ಮ ಕೂಡ ಒಬ್ಬರು. ನಯನ ಮೋಟಮ್ಮ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ದಲಿತವಾದಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಯನ ಅವರು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ವಿರೋಧದ ನಡುವೆಯೂ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದು ಬಂದಿದ್ದಾರೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಬಡ್ಡಿ ಗಳಿಕೆ ಮೇಲೆ ತೆರಿಗೆ; ಸಿಬಿಡಿಟಿ ಅಧಿಸೂಚನೆಯಲ್ಲಿ ಮಾಹಿತಿ

ಬಿಜೆಪಿಯ ಶಾಸಕರಾಗಿದ್ದ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿತ್ತು. ಆದ್ರೆ ನಯನಾ ಮೊಟಮ್ಮ ಗೆಲುವು ಸಾಧಿಸಿ ಶಾಸಕಿಯಾಗಿದ್ದಾರೆ.

Follow Us:
Download App:
  • android
  • ios