ಬಳಸಿದ ಔಷಧಿ ಕವರ್ ಎಸೆಯುವ ಬದಲು ಹೀಗೆ ಬಳಸಿ.. ಕಿಚನ್ ಸಾಮಗ್ರಿಗಳು ಫುಲ್ ಕ್ಲೀನ್ ಆಗ್ತವೆ
Reuse medicine wrappers: ಸಾಮಾನ್ಯವಾಗಿ ನಾವು ಮಾತ್ರೆಗಳನ್ನು ಬಳಸಿದ ನಂತರ ಅದರ ಖಾಲಿ ಕವರ್‌ಗಳನ್ನು ಕಸ ಎಂದು ಎಸೆಯುತ್ತೇವೆ. ಆದರೆ ಈ ವೇಸ್ಟ್ ಮೆಟೀರಿಯಲ್ ಬಳಸಿ ನಿಮ್ಮ ಅಡುಗೆಮನೆಯ ಸಾಮಗ್ರಿ ಹೊಸದರಂತೆ ಹೊಳೆಯುವಂತೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?.

ಅಡುಗೆಮನೆಯ ಕೆಲಸ ಸುಲಭವಾಗುತ್ತೆ
ನಾವು ಸಾಮಾನ್ಯವಾಗಿ ಮಾತ್ರೆಗಳನ್ನು ಬಳಸಿದ ನಂತರ ಅದರ ಖಾಲಿ ಕವರ್‌ಗಳನ್ನು (Medicine Wrappers) ಕಸಕ್ಕೆ ಎಸೆಯುತ್ತೇವೆ. ಆದರೆ ಈ ವೇಸ್ಟ್ ಎಂದುಕೊಳ್ಳುವ ಕವರ್‌ಗಳು ನಿಮ್ಮ ಅಡುಗೆಮನೆಯ ಕೆಲಸವನ್ನು ಸುಲಭಗೊಳಿಸುತ್ತವೆ ಎಂಬುದು ನಿಮಗೆ ಗೊತ್ತೇ? ಹೌದು, ನಿಮ್ಮ ಅಡುಗೆ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು ಮತ್ತು ಮೊಂಡಾದ ಉಪಕರಣಗಳನ್ನು ಹರಿತಗೊಳಿಸಲು ಇವು ರಾಮಬಾಣ.
ಕತ್ತರಿಯನ್ನು ಹರಿತಗೊಳಿಸಲು (Sharpening Scissors)
ಬಳಸುತ್ತಾ ಬಳಸುತ್ತಾ ಕತ್ತರಿಯ ಅಂಚು ಮೊಂಡಾಗಿ ಯಾವುದನ್ನೂ ಸರಿಯಾಗಿ ಕತ್ತರಿಸದಿದ್ದರೆ ಈ ಟ್ರಿಕ್ ಬಳಸಿ. ಒಂದು ಖಾಲಿ ಮಾತ್ರೆ ಕವರ್ ತೆಗೆದುಕೊಳ್ಳಿ. ಅದನ್ನು ಕತ್ತರಿಯಿಂದ ಸಣ್ಣ ಸಣ್ಣ ತುಂಡುಗಳಾಗಿ 2-3 ನಿಮಿಷಗಳ ಕಾಲ ಕತ್ತರಿಸುತ್ತಾ ಇರಿ. ಮಾತ್ರೆ ಕವರ್‌ನ ಲೋಹದ ಅಂಶವು ಕತ್ತರಿಯ ಅಂಚನ್ನು ಹರಿತಗೊಳಿಸುತ್ತದೆ.
ಮಿಕ್ಸಿ ಜಾರ್ ಬ್ಲೇಡ್‌ಗಳ ಹರಿತಕ್ಕೆ
ಮಿಕ್ಸಿ ಜಾರ್‌ನ ಬ್ಲೇಡ್‌ಗಳು ಮೊಂಡಾಗಿ ಮಸಾಲೆ ಸರಿಯಾಗಿ ನುಣ್ಣಗೆ ಆಗುತ್ತಿಲ್ಲವೆಂದರೆ ಈ ಹ್ಯಾಕ್ ಕೆಲಸ ಮಾಡುತ್ತದೆ. ಮಾತ್ರೆ ಕವರ್‌ಗಳನ್ನು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರ್‌ನೊಳಗೆ ಹಾಕಿ. ನಂತರ ಮಿಕ್ಸಿಯನ್ನು 2 ನಿಮಿಷಗಳ ಕಾಲ ಓಡಿಸಿ. ಇದರಿಂದ ಬ್ಲೇಡ್‌ಗಳು ಮತ್ತೆ ಮೊದಲಿನಂತೆ ಹರಿತವಾಗುತ್ತವೆ.
ಸೀದ ಪಾತ್ರೆ ಅಥವಾ ಕಡಾಯಿ ಸ್ವಚ್ಛಗೊಳಿಸಲು
ಅಡುಗೆ ಮಾಡುವಾಗ ಕಡಾಯಿ ಅಥವಾ ತವಾ ಸೀದು ಹೋಗಿ ಕಪ್ಪಾಗಿದ್ದರೆ ಚಿಂತಿಸಬೇಡಿ. ಸೀದ ಪಾತ್ರೆಯ ಮೇಲೆ ಸ್ವಲ್ಪ ಉಪ್ಪು, ಅಡುಗೆ ಸೋಡಾ (Baking Soda) ಅಥವಾ ಈನೋ (Eno) ಹಾಕಿ. ನಂತರ ಸ್ವಲ್ಪ ಬಿಸಿ ನೀರನ್ನು ಸುರಿಯಿರಿ. ಈಗ ಖಾಲಿ ಮಾತ್ರೆ ಕವರ್‌ನಿಂದ 2-4 ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ. ಪಾತ್ರೆಯ ಮೇಲಿರುವ ಕಪ್ಪು ಕಲೆಗಳು ಮಾಯವಾಗಿ ಹೊಸದರಂತೆ ಹೊಳೆಯುತ್ತದೆ.
ಗಮನಿಸಿ (Safety Tip)
ಮಾತ್ರೆ ಕವರ್‌ಗಳು ಅಲ್ಯೂಮಿನಿಯಂ ಅಥವಾ ಲೋಹದ ಅಂಶವನ್ನು ಹೊಂದಿರುವುದರಿಂದ ಅವುಗಳ ಅಂಚುಗಳು ತುಂಬಾ ಚೂಪಾಗಿರುತ್ತವೆ. ಇದನ್ನು ಬಳಸುವಾಗ ನಿಮ್ಮ ಕೈಗಳು ಕಟ್ ಆಗದಂತೆ ಜಾಗರೂಕತೆ ವಹಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

