ಈರುಳ್ಳಿ ಕತ್ತರಿಸುವುದು ದೊಡ್ಡ ಸಾಹಸವೇ ಸರಿ. ಏಕೆಂದರೆ ಕಟ್ ಮಾಡುವಾಗ ಅದರಲ್ಲಿರುವ ಸಲ್ಫರ್ ಅಂಶವು ಗಾಳಿಯಲ್ಲಿ ಬೆರೆತು ಕಣ್ಣಿನ ತೇವಾಂಶದೊಂದಿಗೆ ಸೇರಿದಾಗ ಉರಿ ಮತ್ತು ಕಣ್ಣೀರು ಬರುತ್ತದೆ.
kitchen Mar 14 2026
Author: Ashwini HR Image Credits:Freepik
Kannada
ಸರಳ ಉಪಾಯ
ಈ ಸರಳ ಉಪಾಯಗಳನ್ನು ಅನುಸರಿಸುವ ಮೂಲಕ ನೀವು ಆರಾಮವಾಗಿ ಈರುಳ್ಳಿ ಕತ್ತರಿಸಬಹುದು.
Image credits: Getty
Kannada
ನೀರಿನಲ್ಲಿ ನೆನೆಸಿಡಿ
ಈರುಳ್ಳಿಯ ಸಿಪ್ಪೆ ತೆಗೆದು ಕತ್ತರಿಸುವ ಅರ್ಧ ಗಂಟೆ ಮೊದಲು ತಣ್ಣೀರಿನಲ್ಲಿ ನೆನೆಸಿಡಿ. ಇದರಿಂದ ಈರುಳ್ಳಿಯಲ್ಲಿರುವ ಗ್ಯಾಸ್ ನೀರಿನಲ್ಲಿ ವಿಲೀನಗೊಂಡು ಕಣ್ಣೀರು ಬರುವುದನ್ನು ತಡೆಯುತ್ತದೆ.
Image credits: AI generated
Kannada
ಫ್ರಿಡ್ಜ್‌ನಲ್ಲಿಡಿ
ಈರುಳ್ಳಿ ಕತ್ತರಿಸುವ ಹತ್ತು ನಿಮಿಷ ಮೊದಲು ಅದನ್ನು ಫ್ರಿಡ್ಜ್‌ನಲ್ಲಿಡಿ. ಈರುಳ್ಳಿ ತಂಪಾಗುವುದರಿಂದ ಅದರಲ್ಲಿರುವ ಸಲ್ಫರ್ ಪ್ರಭಾವ ಕಡಿಮೆಯಾಗುತ್ತದೆ.
Image credits: Getty
Kannada
ಫ್ಯಾನ್ ಕೆಳಗೆ ಕಟ್ ಮಾಡಿ
ಗಾಳಿಯ ಹರಿವು ಹೆಚ್ಚಿರುವ ಕಡೆ (ಫ್ಯಾನ್ ಆನ್ ಮಾಡಿ) ಈರುಳ್ಳಿ ಕತ್ತರಿಸಿ. ಆಗ ಸಲ್ಫರ್ ಸಂಯುಕ್ತಗಳು ನೇರವಾಗಿ ನಿಮ್ಮ ಕಣ್ಣಿಗೆ ತಲುಪದೆ ಗಾಳಿಯಲ್ಲಿ ಹಾರಿ ಹೋಗುತ್ತವೆ.
Image credits: Freepik
Kannada
ಚಾಕುವಿಗೆ ನಿಂಬೆ ರಸ
ಈರುಳ್ಳಿ ಕತ್ತರಿಸುವ ಮುನ್ನ ಚಾಕುವಿಗೆ ಸ್ವಲ್ಪ ನಿಂಬೆ ರಸವನ್ನು ಹಚ್ಚಿ. ಇದು ಉರಿಯನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.
Image credits: Pinterest
Kannada
ಬಿಸಿ ನೀರು ಹತ್ತಿರವಿರಲಿ
ಈರುಳ್ಳಿ ಕತ್ತರಿಸುವಾಗ ನಿಮ್ಮ ಹತ್ತಿರ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟುಕೊಳ್ಳಿ. ಬಿಸಿ ನೀರಿನಿಂದ ಬರುವ ಆವಿಯು ಈರುಳ್ಳಿಯ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ.