ಮದುವೆಯ ಬಂಧಕ್ಕೆ ಬಿದ್ದ ಮೇಲೆ ಬಂಧಿಯಾಗಿಬೇಕೆಂಬ ನಿಯಮವಿಲ್ಲ. ಸಂಬಂಧ ಹಳಸಿದಾಗ ಒಟ್ಟಿಗೆ ಬಾಳಿ ಪ್ರಯೋಜನವಿಲ್ಲ. ಈಗಿನ ಜನರು ಈ ಮಾತನ್ನು ತುಸು ಹೆಚ್ಚಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಆದ್ರೆ ಕೆಲವು ಬುಡಕಟ್ಟು ಜನಾಂಗದಲ್ಲಿ ಹಿಂದಿನಿಂದಲೂ ಸಂಬಂಧಕ್ಕೆ ಬೆಲೆ ನೀಡಲಾಗಿದೆ. ಪತಿ ಆಯ್ಕೆಯಿಂದ ಹಿಡಿದು,ಪತಿ ಬದಲಿಸುವ ಅಧಿಕಾರವೂ ಮಹಿಳೆಯರಿಗಿದೆ. 

ಪರಸ್ಪರ ನಂಬಿಕೆ,ವಿಶ್ವಾಸವಿದ್ದಲ್ಲಿ ಮಾತ್ರ ಸಂಬಂಧ ಗಟ್ಟಿಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧ ಮುರಿದು ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ಹಿಂದೆ,ಕಷ್ಟವಾದರೂ ಪತಿ ಜೊತೆಗಿರುತ್ತಿದ್ದ ಮಹಿಳೆ(women )ಯರು ಈಗ ಸ್ವಾತಂತ್ರ(freedom)ರಾಗಿದ್ದಾರೆ. ಪತಿಗೆ ವಿಚ್ಛೇದನ ನೀಡಿ ತಮ್ಮ ಬದುಕು ನೋಡಿಕೊಳ್ಳುವ ಸಾಮರ್ಥ್ಯ,ಧೈರ್ಯ ಮಹಿಳೆಯರಿಗಿದೆ. ವಿದೇಶದಲ್ಲಿ ಮಾಮೂಲಿ ಎನ್ನುವಂತಿದ್ದ ವಿಚ್ಛೇದನ (Divorce) ಈಗ ಭಾರತ(India)ದಲ್ಲೂ ಕಾಮನ್ ಆಗಿದೆ. ಆದರೆ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ (Pakistan) ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ. ಹೀಗಿರುವಾಗ್ಲೂ ಅಲ್ಲಿನ ಬುಡಕಟ್ಟು (Tribe) ಜನಾಂಗದ ಮಹಿಳೆಯರಿಗೆ ವಿಶೇಷ ಅಧಿಕಾರವಿದೆ. ಪರ ಪುರುಷ ಇಷ್ಟವಾದರೆ ಇಲ್ಲಿನ ಮಹಿಳೆಯರು ಪತಿಯಿಂದ ದೂರವಾಗಿ ಆತನ ಜೊತೆ ವಾಸ ಶುರು ಮಾಡುತ್ತಾರೆ.

ಪಾಕಿಸ್ತಾನದ ಈ ಮಹಿಳೆಯರಿಗಿದೆ ಸ್ವಾತಂತ್ರ : ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಅಫ್ಘಾನಿಸ್ತಾನದ ಗಡಿಯಲ್ಲಿರುವ ಚಿತ್ರಲ್ ಕಣಿವೆಯಲ್ಲಿ ಬಿರಿರ್ (Birir), ಬಂಬುರಾತ್ (Bamburat) ಮತ್ತು ರಾಂಬೂರ್(Rambur) ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ಕಲಶ (Kalash) ಎಂಬ ಬುಡಕಟ್ಟು ಜನಾಂಗವಿದೆ. ಈ ಸಮುದಾಯವು ಹಿಂದೂಕುಶ್ ಪರ್ವತ ಶ್ರೇಣಿಯ ಸುತ್ತಮುತ್ತಲಿದೆ. ಈ ಬುಡಕಟ್ಟಿನ ಸಂಸ್ಕೃತಿ ಪಾಕಿಸ್ತಾನದ ಸಂಸ್ಕೃತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಳಶ ಬುಡಕಟ್ಟು ಜನಾಂಗದ ಜನಸಂಖ್ಯೆ ಸುಮಾರು 4 ಸಾವಿರ.

ಇತಿಹಾಸ,ವಾಸ (History):
ಈ ಸಮುದಾಯದ ಜನರನ್ನು ಅಲೆಕ್ಸಾಂಡರ್ ವಂಶಸ್ಥರು ಎಂದು ಕರೆಯಲಾಗುತ್ತದೆ. ಹಿಂದೂ ಕುಶ್ ಪರ್ವತಗಳ ಬಗ್ಗೆ ಅನೇಕ ಐತಿಹಾಸಿಕ ಉಲ್ಲೇಖಗಳಿವೆ. ಅಲೆಕ್ಸಾಂಡರ್ ಈ ಪ್ರದೇಶವನ್ನು ಗೆದ್ದಿದ್ದನು ಎನ್ನಲಾಗುತ್ತದೆ. ಈ ಸಮುದಾಯದ ಜನರು ಮರ ಮತ್ತು ಮಣ್ಣಿನಿಂದ ಮಾಡಿದ ಸಣ್ಣ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮೊದಲೇ ಹೇಳಿದಂತೆ ಇಲ್ಲಿನ ಮಹಿಳೆಯರು,ಪಾಕಿಸ್ತಾನದ ಮಹಿಳೆಯರಿಗಿಂತ ಅನೇಕ ವಿಷ್ಯಗಳಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಈ ಸಮುದಾಯದ ಮಹಿಳೆಯರು ಯಾವುದೇ ಹಬ್ಬ ಅಥವಾ ಸಮಾರಂಭದಲ್ಲಿ ಪುರುಷರೊಂದಿಗೆ ಕುಳಿತು ಮದ್ಯ(Alcohol) ಸೇವಿಸುತ್ತಾರೆ.

ಆರ್ಥಿಕ ಸ್ವಾತಂತ್ರ : ಈ ಸಮುದಾಯದಲ್ಲಿ ಮಹಿಳೆಯರದ್ದು ಮೇಲುಗೈ. ಹೆಚ್ಚಿನ ಸಂಪಾದನೆ ಮಾಡುವವರು ಮಹಿಳೆಯರು. ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ.ಸಮುದಾಯದ ಮಹಿಳೆಯರು ಕುರಿ (Sheep )ಮೇಯಿಸಲು ಹೋಗುತ್ತಾರೆ. ಇದಲ್ಲದೇ ಮನೆಯಲ್ಲಿ ಬಣ್ಣಬಣ್ಣದ ಹೂಮಾಲೆ, ಪರ್ಸ್ (Purse) ಗಳನ್ನು ತಯಾರಿಸುತ್ತಾರೆ. ಅಲಂಕಾರವನ್ನು ಇಷ್ಟಪಡುವ ಮಹಿಳೆಯರು ತಲೆಯ ಮೇಲೆ ವಿಶೇಷ ರೀತಿಯ ಟೋಪಿ (cap)ಯನ್ನು ಧರಿಸುತ್ತಾರೆ. ಅವರ ಕುತ್ತಿಗೆಗೆ ಕಲ್ಲಿನ ಬಣ್ಣಬಣ್ಣದ ಮಾಲೆಗಳನ್ನು ಧರಿಸುತ್ತಾರೆ.

ಬುಡಕಟ್ಟು ಜನಾಂಗದೊಂದಿಗೆ ಡ್ಯಾನ್ಸ್ ಮಾಡಿದ ಪ್ರಿಯಾಂಕಾ ವಾದ್ರಾ ವೀಡಿಯೋ ವೈರಲ್

ಕಾಮೋಸ್ ಹಬ್ಬ (Camos festival) : ಕಾಮೋಸ್ ಹಬ್ಬವು ಈ ಸಮುದಾಯದ ವಿಶೇಷ ಹಬ್ಬವಾಗಿದೆ (special festival). ಮಹಿಳೆಯರು ಮತ್ತು ಹುಡುಗಿಯರು ತಮಗಾಗಿ ಪುರುಷರನ್ನು ಹುಡುಕುವ ಸಂದರ್ಭ ಇದಾಗಿದೆ. ಅವಿವಾಹಿತ ಹೆಣ್ಣು ಮಕ್ಕಳಿಗೆ ಈ ಹಬ್ಬ ವಿಶೇಷವಾಗಿದ್ದರೂ,ವಿವಾಹಿತ ಮಹಿಳೆಯರೂ ಈ ಸಂಭ್ರಮದಲ್ಲಿ ಪಾಲ್ಗೊಂಡು,ಪಾಲುದಾರರನ್ನು ಹುಡುಕುತ್ತಾರೆ. ಭಾರತದಲ್ಲಿ ಸಂಬಂಧಕ್ಕೆ ಈಗಲೂ ಬೆಲೆಯಿದೆ. ವಿದೇಶಗಳಲ್ಲಿ ಸಂಬಂಧ ಬಟ್ಟೆ (Clothes )ಬದಲಿಸಿದಂತೆ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಒಬ್ಬ ಇಷ್ಟವಾಗಿಲ್ಲವೆಂದರೆ ಇನ್ನೊಬ್ಬನ ಜೊತೆ ಸಂಬಂಧ ಬೆಳೆಸಲು ವಿದೇಶದಲ್ಲಿ ಮುಕ್ತ ಅಧಿಕಾರವಿದೆ. ಪಾಕಿಸ್ತಾನದಲ್ಲಿಯೂ ಇಂಥ ಅಧಿಕಾರ ಮಹಿಳೆಗೆ ಸಿಕ್ಕಿದೆ ಎಂದರೆ ನಂಬಲು ಕಷ್ಟ. ಆದರೆ ಈ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಂಬಂಧ ಬೆಳೆಸಲು ಮುಕ್ತ ಅಧಿಕಾರ ನೀಡಲಾಗಿದೆ. ಮದುವೆಯಾದ ಮಹಿಳೆಯರು ಕಾಮೋಸ್ ಹಬ್ಬದಲ್ಲಿ ಇನ್ನೊಬ್ಬ ಪುರುಷನನ್ನು ಇಷ್ಟಪಟ್ಟರೆ ಅವರು ತಮ್ಮ ಮದುವೆಯನ್ನು ಮುರಿಯಬಹುದು. ತಮಗಿಷ್ಟವಾದ ಪರ ಪುರುಷನ ಜೊತೆ ವಾಸಿಸಬಹುದು. ಇದಕ್ಕೆ ಆಕೆ ಪತಿಯಾಗಲಿ,ಕುಟುಂಬಸ್ಥರಾಗಲಿ ವಿರೋಧ ವ್ಯಕ್ತಪಡಿಸುವುದಿಲ್ಲ. ಸಂಗಾತಿ ಆಯ್ಕೆ ಸೇರಿದಂತೆ ಕೆಲ ವಿಷಯಗಳಲ್ಲಿ ಸ್ವಾತಂತ್ರವಿದ್ದರೂ ಇಲ್ಲಿನ ಮಹಿಳೆಯರಿಗೆ ಕೆಲ ನಿರ್ಬಂಧಗಳಿವೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಮನೆಯಲ್ಲಿ ವಾಸಿಸುವಂತಿಲ್ಲ. ಮಹಿಳೆಯರಿಗಾಗಿ ಪ್ರತ್ಯೇಕ ಮನೆಯಿರುತ್ತದೆ. ಅಲ್ಲಿಯೇ ಇರಬೇಕು.