ಮೊಬೈಲ್ ಟವರ್ ಹತ್ತಿರ ಗರ್ಭಿಣಿ ಇದ್ದರೆ ಹುಟ್ಟೋ ಮಗುವಿನ ಮೇಲೆ ಬೀರುತ್ತಾ ಪರಿಣಾಮ?

ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಟವರ್ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಮೊಬೈಲ್ ಕಂಪನಿಗಳು ಅಲ್ಲಲ್ಲಿ ಟವರ್ ನಿರ್ಮಾಣ ಮಾಡ್ತಿವೆ. ಆದ್ರೆ ಈ ಮೊಬೈಲ್ ಟವರ್ ತಿಳಿಯದೆ ನಮ್ಮ ಆರೋಗ್ಯ ಹದಗೆಡಿಸ್ತಿದೆ. ಗರ್ಭಿಣಿಯರಿಗೆ ಇದು ಮತ್ತಷ್ಟು ಅಪಾಯಕಾರಿ.
 

Is It Safe To Live Near Cell Phone Tower During Pregnancy

ಮೊಬೈಲ್ ಬಳಕೆ ಯಾರಿಗೂ ಒಳ್ಳೆಯದಲ್ಲ. ಇದು ಗೊತ್ತಿದ್ರೂ ಮೊಬೈಲ್ ನಿಂದ ದೂರ ಹೋಗೋಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್ ಗಳಿಂದ ಅತ್ಯಂತ ಅಪಾಯಕಾರಿ ವಿಕಿರಣ  ಹೊರಬರುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಸಾಮಾನ್ಯ ಮನುಷ್ಯನಿಗೆ ಇದು ಅಪಾಯಕಾರಿ ಅಂದ್ಮೇಲೆ ಗರ್ಭಿಣಿಯರಿಗೆ ದೊಡ್ಡ ಮಟ್ಟದಲ್ಲಿ ಇದು ಪ್ರಭಾವ ಬೀರುತ್ತದೆ. ಮೊಬೈಲ್ ವಿಕಿರಣವು ಗರ್ಭಿಣಿಯ ಭ್ರೂಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲ ಗರ್ಭಿಣಿಯರು ಮೊಬೈಲ್ ಟವರ್ ಬಳಿಯೇ ವಾಸಿಸ್ತಾರೆ. ಅಲ್ಲಿಂದ ಹೊರಸೂಸುವ ವಿಕಿರಣಗಳು ಭ್ರೂಣದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.

ಹೆಚ್ಚಾಗ್ತಿದೆ ಗರ್ಭಪಾತ (Miscarriage) : ಇತ್ತೀಚಿನ ದಿನಗಳಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚಾಗ್ತಿವೆ. ಇದಕ್ಕೆ ಮೊಬೈಲ್ (Mobile) ಟವರ್ ಬಳಕೆ ಕಾರಣವೆಂದು ವೈದ್ಯರು ಅಂದಾಜಿಸಿದ್ದಾರೆ. ಮೊಬೈಲ್ ಟವರ್ ನಿಂದ ಹೊರಸೂಸುವ ವಿಕಿರಣಗಳು ಭ್ರೂಣದ ಬೆಳವಣಿಕೆಯನ್ನು ತಡೆಯುತ್ತವೆ ಎನ್ನಲಾಗಿದೆ. ಗರ್ಭಪಾತದ ಶೇಕಡಾ 10ರಷ್ಟು ಪ್ರಕರಣಕ್ಕೆ ಮೊಬೈಲ್ ಟವರ್ ವಿಕಿರಣ ಕಾರಣ ಎನ್ನಲಾಗುತ್ತದೆ.  ಮೊಬೈಲ್ ಟವರ್‌ ಬಳಿ ವಾಸಿಸುವ ಗರ್ಭಿಣಿಯರಿಗೆ, ಟವರ್ ನಿಂದ ಬರುವ ವಿಕಿರಣ ಹಾನಿಯಾಗುತ್ತದೆ. ಆದ್ರೆ ಇದಕ್ಕೆ ಸ್ಪಷ್ಟವಾಗಿ ಯಾವುದೇ ಪುರಾವೆ ಸಿಗ್ತಿಲ್ಲ.   

ಟವರ್ (Tower) ಗಿಂತ ಫೋನ್ ಅಪಾಯಕಾರಿ: ನಿಮ್ಮ ಮನೆಯ ಸಮೀಪ ಟವರ್ ಇರಲಿ ಇಲ್ಲ ನಿಮ್ಮ ಮನೆ ಮೇಲೆಯೇ ಟವರ್ ಇರಲಿ, ಈ ಟವರ್ ಗಿಂತ ನಿಮ್ಮ ಮನೆಯ ಒಳಗಿರುವ ಫೋನ್ ಅಪಾಯಕಾರಿ ಎಂಬುದು ನಿಮಗೆ ತಿಳಿದಿರಲಿ. ಮೊಬೈಲ್ ಟವರ್ ಗಿಂತ ಮೊಬೈಲ್ ನಿಂದ ಹೆಚ್ಚು ತೀವ್ರವಾದ ವಿಕಿರಣ ಹೊರಸೂಸುತ್ತದೆ. ಟವರ್ ನಿಂದ ಹೊರ ಬರುವ ವಿಕಿರಣ ನಿರಂತರವಾಗಿರುವುದ್ರಿಂದ ಅದ್ರ ತೀವ್ರತೆ ಕಡಿಮೆಯಿದ್ದರೂ ಅದು ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಟವರ್ ಹಾಗೂ ಸ್ಮಾರ್ಟ್ ಫೋನ್ ವಿಕಿರಣಗಳು ಗರ್ಭಿಣಿಯರ ಮೇಲೆ ಯಾವ ಅಡ್ಡಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು ಎನ್ನುತ್ತಾರೆ ತಜ್ಞರು.   

ಮೊಬೈಲ್ ಟವರ್ ಕೆಲಸ : ಮೊಬೈಲ್ ಟವರ್‌ನ ವಿಕಿರಣವು 60 ಡಿಗ್ರಿ ಕೋನದ ಕೆಳಗೆ ಹರಿಯುತ್ತದೆ. ಜನಸಂಖ್ಯೆ ಹೆಚ್ಚಿದ್ದಲ್ಲಿ  ಸಿಗ್ನಲ್ ಆಂಟೆನಾವನ್ನು 110 ಡಿಗ್ರಿ ಕೋನದಲ್ಲಿ ಅಳವಡಿಸಲಾಗುತ್ತದೆ. ಇದು ಸಿಗ್ನಲ್ ಜನರನ್ನು ತಲುಪಲು ಅನುವು ಮಾಡಿಕೊಡುತ್ತದೆ. ಜನರು ದೂರದಲ್ಲಿದ್ದರೆ, ಆಂಟೆನಾವನ್ನು ಲಂಬವಾಗಿ ಇರಿಸಲಾಗುತ್ತದೆ. ಇದನ್ನು 90 ಡಿಗ್ರಿ ಕೋನ ಎಂದು ಕರೆಯಲಾಗುತ್ತದೆ. ಮೊಬೈಲ್ ಫೋನ್‌ಗಳು ರೇಡಿಯೊಫ್ರೀಕ್ವೆನ್ಸಿ (RF) ಸಂಕೇತಗಳೊಂದಿಗೆ ಮಾಹಿತಿಯನ್ನು ರವಾನಿಸುತ್ತವೆ. ನಾವು ಸೆಲ್ ಫೋನ್‌ಗಳಿಂದ ಕರೆ ಮಾಡಿದಾಗ, ಮೊಬೈಲ್ ಫೋನ್ ಟವರ್‌ಗಳ ಒಳಗೆ ಮತ್ತು ಹೊರಗೆ ಸಿಗ್ನಲ್‌ಗಳು ರವಾನೆಯಾಗುತ್ತವೆ. ಮೊಬೈಲ್ ಟವರ್‌ಗಳು ವಿದ್ಯುತ್ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತವೆ ಮತ್ತು ರೇಡಿಯೊಫ್ರೀಕ್ವೆನ್ಸಿ ತರಂಗಗಳನ್ನು ಪರಿಸರಕ್ಕೆ ರವಾನಿಸುತ್ತವೆ. 

ಗರ್ಭಾವಸ್ಥೆಯಲ್ಲಿ instant noodles ತಿನ್ನೋದು ತುಂಬಾನೆ ಡೇಂಜರ್

ಕ್ಯಾನ್ಸರ್ ಅಪಾಯ : ರೇಡಿಯೊಫ್ರೀಕ್ವೆನ್ಸಿ ತರಂಗಗಳ ಶಕ್ತಿಯ ಮಟ್ಟವು ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಮೊಬೈಲ್ ಟವರ್‌ಗಳಿಂದ ಹೊರಸೂಸುವ ವಿಕಿರಣದಿಂದ ಕ್ಯಾನ್ಸರ್ ಉಂಟಾಗುವ ಅಪಾಯ ಕಡಿಮೆ ಎನ್ನುತ್ತಾರೆ ತಜ್ಞರು. ಆದ್ರೆ ಮೊಬೈಲ್ ನಿಂದ ಹೊರಸೂಸುವ ವಿಕಿರಣ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.  ಗರ್ಭಾವಸ್ಥೆಯಲ್ಲಿ ತಾಯಿ ಮೊಬೈಲ್ ಬಳಕೆ ಮಾಡ್ತಿದ್ದರೆ ಮಗುವಿಗೆ ಬಾಲ್ಯದಲ್ಲಿ ಕ್ಯಾನ್ಸರ್ ಕಾಡುವ ಸಾಧ್ಯತೆಯಿರುತ್ತದೆ ಎನ್ನಲಾಗಿದೆ.

ಶೂ ಕಡಿತದಿಂದ ಕಾಲಲ್ಲಿ ಗಾಯವಾಗಿದ್ಯಾ ? ನಿವಾರಣೆಗೆ ಐಸ್ ಕ್ಯೂಬ್ ಬಳಸಿದ್ರೆ ಸಾಕಾಗುತ್ತೆ

ತಜ್ಞರ ಅಭಿಪ್ರಾಯ : ಮೊಬೈಲ್ ಹಾಗೂ ಮೊಬೈಲ್ ಟವರ್ ಎರಡೂ ಸುರಕ್ಷಿತವಲ್ಲ. ಮೊಬೈಲ್ ಟವರ್ ಬಳಿ ವಾಸವಾಗುವುದು ತಾಯಿ ಹಾಗೂ ಮಗುವಿಗೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಸಾಧ್ಯವಾದಷ್ಟು ಗರ್ಭಿಣಿಯರು ಮೊಬೈಲ್ ಟವರ್ ನಿಂದ ದೂರವಿರಬೇಕು. ಹಾಗೆಯೇ ಮೊಬೈಲ್ ಬಳಕೆಯನ್ನು ಕಡಿಮೆ ಮಾಡ್ಬೇಕು ಎನ್ನುತ್ತಾರೆ ತಜ್ಞರು.   

Latest Videos
Follow Us:
Download App:
  • android
  • ios