Asianet Suvarna News Asianet Suvarna News

ಶಾಂಪೂ ಆದ್ಮೇಲೆ ಕಂಡೀಶನರ್ ಬಳಸಲೇಬೇಕಾ?

ಬಹಳಷ್ಟು ಜನ ತಲೆ ಸ್ನಾನ ಮಾಡುವಾಗ ಶಾಂಪೂ ಬಳಸಿ ಸುಮ್ಮನಾಗುತ್ತಾರೆ. ಆದರೆ, ಹೇರ್ ಕಂಡಿಶನರ್ ಬಳಸುವುದೇ ಇಲ್ಲ. ಅದರ ಅಗತ್ಯವೇನಿಲ್ಲ ಎಂದುಕೊಳ್ಳುತಾರೆ. ಆದರೆ, ನೀವು ಶಾಂಪೂ ಬಳಸುತ್ತಿದ್ದರೆ, ತಕ್ಷಣವೇ ಹೇರ್ ಕಂಡಿಷನರ್ ಅನ್ನು ಬಳಸಬೇಕು.

Is conditioner important after shampooing hair skr
Author
First Published Feb 19, 2024, 6:19 PM IST

ಬಹಳಷ್ಟು ಜನ ತಲೆ ಸ್ನಾನ ಮಾಡುವಾಗ ಶಾಂಪೂ ಬಳಸಿ ಸುಮ್ಮನಾಗುತ್ತಾರೆ. ಆದರೆ, ಹೇರ್ ಕಂಡಿಶನರ್ ಬಳಸುವುದೇ ಇಲ್ಲ. ಅದರ ಅಗತ್ಯವೇನಿಲ್ಲ ಎಂದುಕೊಳ್ಳುತಾರೆ. ಆದರೆ, ನೀವು ಶಾಂಪೂ ಬಳಸುತ್ತಿದ್ದರೆ, ತಕ್ಷಣವೇ ಹೇರ್ ಕಂಡಿಷನರ್ ಅನ್ನು ಬಳಸಬೇಕು. ನಿಮ್ಮ ಕೂದಲು ಆರೋಗ್ಯಕರ, ಸುಂದರವಾಗಿರಲು ಕಂಡೀಷನರ್ ಅತ್ಯಗತ್ಯ.  

ಶಾಂಪೂ ನಿಮ್ಮ ಕೂದಲನ್ನು ಸ್ವಚ್ಛಗೊಳಿಸುತ್ತದೆ. ತೈಲ ಮತ್ತು ಕಲ್ಮಶಗಳ ಸಂಗ್ರಹವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ, ಕೂದಲಿಗೆ ತೇವಾಂಶವನ್ನು ಮರಳಿ ಸೇರಿಸಲು ಕಂಡೀಷನಿಂಗ್ ಮುಖ್ಯವಾಗಿದೆ. ಚರ್ಮಕ್ಕೆ ಸ್ನಾನವಾದ ಮೇಲೆ ಮಾಯಿಶ್ಚರೈಸರ್ ಹಚ್ಚುವಂತೆ ಕೂದಲಿಗೆ ಕಂಡಿಶನರ್ ಅಗತ್ಯ. ನೀವು ಬಳಸುತ್ತಿರುವ ನಿರ್ದಿಷ್ಟ ಉತ್ಪನ್ನವನ್ನು ಆಧರಿಸಿ ನಿಮ್ಮ ಕಂಡಿಷನರ್‌ನ ಪ್ರಯೋಜನಗಳು ಮತ್ತು ಉಪಯೋಗಗಳು ಬದಲಾಗುತ್ತವೆ.


 

ಹೇರ್ ಕಂಡಿಷನರ್ ಅನ್ನು ಯಾವುದಕ್ಕಾಗಿ ಬಳಸಲಾಗುತ್ತದೆ?
ಹೇರ್ ಕಂಡಿಷನರ್ ಬಳಕೆಗಳು ಹಲವು. ನಿಮ್ಮ ಕೂದಲಿಗೆ ಪೋಷಣೆ ನೀಡುವುದರಿಂದ ಹಿಡಿದು, ಹೊಳಪನ್ನು ನೀಡುವುದು, ಆರ್ದ್ರಗೊಳಿಸುವುದು ಸೇರಿದಂತೆ ಹೇರ್ ಕಂಡಿಷನರ್ ಪ್ರಯೋಜನಗಳು ವ್ಯಾಪಕವಾಗಿರುತ್ತವೆ ಮತ್ತು ಎಲ್ಲರಿಗೂ ಅನ್ವಯಿಸುತ್ತವೆ. ವಿಶೇಷವಾಗಿ ನೀವು ಒಣ ಕೂದಲನ್ನು ಹೊಂದಿದ್ದರೆ, ಹೇರ್ ಕಂಡಿಷನರ್ ನಿಮ್ಮ ಎಳೆಗಳಿಗೆ ವರದಾನವಾಗಿದೆ. 

ಶಾಂಪೂ ನೆತ್ತಿಯಿಂದ ಕೊಳಕನ್ನೇನೋ ತೆಗೆದು ಹಾಕುತ್ತದೆ. ಆದರೆ ಕಂಡೀಶನರ್ ಕೂದಲ ಎಳೆಗಳನ್ನು ಪೋಷಿಸುತ್ತದೆ. ನಿಮ್ಮ ಒಣ ಕೂದಲನ್ನು ಸ್ನಾನದ ಬಳಿಕ ಕೊಂಚ ಮೃದುವಾಗಿಸುತ್ತದೆ. ಏಕೆಂದರೆ, ಶಾಂಪೂವಿನಿಂದ ಕಳೆದುಹೋದ ತೇವಾಂಶವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ಕೂದಲಿನಲ್ಲಿ pH ಅನ್ನು ಸಮಗೊಳಿಸುತ್ತದೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. 

ಹೊಟ್ಟೆ ಕೆಟ್ಟಿದ್ಯಾ? ಮೊಳಕೆಕಾಳಿನ ಕಿಚಡಿ ತಿನ್ನಿ; ಇಲ್ಲಿದೆ ನಟಿ ಭಾಗ್ಯಶ್ರೀಯ ಸಿಂಪಲ್ ರೆಸಿಪಿ
 

ಅತ್ಯುತ್ತಮ ಹೇರ್ ಕಂಡಿಷನರ್ ಯಾವುದು?
ನಿಮ್ಮ ಕೂದಲಿಗೆ ಸರಿ ಹೊಂದುವ ಕಂಡೀಶನರೇ ಅತ್ಯುತ್ತಮ ಹೇರ್ ಕಂಡಿಷನರ್. ಆದರೆ, ಆರಿಸುವಾಗ ನೈಸರ್ಗಿಕವಾದುದನ್ನು ಆಯ್ದುಕೊಳ್ಳಿ. ನೀವು ಬಳಸುವ ಕಂಡಿಷನರ್ ಎಸ್‌ಎಲ್‌ಎಸ್ ಅಥವಾ ಪ್ಯಾರಬೆನ್‌ಗಳು, ಸಿಂಥೆಟಿಕ್ ಬಣ್ಣ ಅಥವಾ ಸುಗಂಧವನ್ನು ಹೊಂದಿದ್ದರೆ, ಉತ್ಪನ್ನದ ನಿರ್ಮಾಣವು ನೆತ್ತಿ ಮತ್ತು ಹಣೆಯ ಮೇಲೆ ಕಿರಿಕಿರಿ ಅಥವಾ ಮೊಡವೆಗಳನ್ನು ಉಂಟು ಮಾಡಬಹುದು. ಹಾಗಾಗಿ ಹಾನಿಕಾರಕ ರಾಸಾಯನಿಕಗಳಿಲ್ಲದ ಕಂಡೀಶನರ್ ಆಯ್ಕೆ ಮಾಡಿ. 

ಹೇಗೆ ಬಳಸುವುದು?
ಮೊದಲು ಶಾಂಪೂವಿನಿಂದ ಕೂದಲನ್ನು ತೊಳೆದ ಬಳಿಕ ಕಂಡೀಶನರ್ ಅನ್ನು ನೆತ್ತಿಗೆ ತಾಗಿಸದೆ ಕೇವಲ ಕೂದಲಿಗೆ ಅನ್ವಯಿಸಬೇಕು. 5 ನಿಮಿಷದ ಬಳಿಕ ತೊಳೆಯಬೇಕು. 
 

Follow Us:
Download App:
  • android
  • ios