ಮೈನೆ ಪ್ಯಾರ್ ಕಿಯಾ, ಛತ್ರಪತಿ, ಪಾಯಲ್ ಮುಂತಾದ ಚಿತ್ರಗಳ ಖ್ಯಾತಿಯ ನಟಿ ಭಾಗ್ಯಶ್ರೀ ಕಿಚಡಿ ತಯಾರಿಸುವ ವಿಧಾನದೊಂದಿಗೆ ಅದರ ಪ್ರಯೋಜನಗಳನ್ನು ಕೂಡಾ ತಿಳಿಸಿದ್ದಾರೆ. 

ಸರಳವಾದ ಖಿಚಡಿಯು ನನ್ನ ಮುಖ್ಯವಾದ ಕಂಫರ್ಟ್ ಫುಡ್ ಎನ್ನುತ್ತಾರೆ 'ಮೈನೆ ಪ್ಯಾರ್ ಕಿಯಾ' ನಟಿ ಭಾಗ್ಯಶ್ರೀ. ಖಿಚಡಿಯ ಆರೋಗ್ಯ ಲಾಭಗಳನ್ನು ಹೇಳುತ್ತಾ, ಇದು ಹೊಟ್ಟೆಯ ಅಸ್ವಸ್ಥತೆಗೆ ಅತ್ಯಂತ ಪರಿಣಾಮಕಾರಿ ಮನೆಮದ್ದು ಎನ್ನುತ್ತಾರೆ ನಟಿ. ಏಕೆಂದರೆ, ಖಿಚಡಿಯು ದೇಹಕ್ಕೆ ಶಕ್ತಿಗಾಗಿ ಪ್ರೋಟೀನ್ ಜೊತೆಗೆ ಚೇತರಿಸಿಕೊಳ್ಳಲು ಸಹಾಯ ಮಾಡುವ ಪೋಷಕಾಂಶಗಳನ್ನು ಒದಗಿಸುತ್ತದೆ. ಜೀರ್ಣಿಸಿಕೊಳ್ಳಲು ಸುಲಭ, ನೀವು ಅಸ್ವಸ್ಥರಾಗಿದ್ದರೆ ಇದು ಸೂಕ್ತ ಊಟವಾಗಿದೆ.

ಖಿಚಡಿಯಲ್ಲಿ ಹೆಚ್ಚು ಬೆಂದ ಅಕ್ಕಿ ಜೀರ್ಣಿಸಿಕೊಳ್ಳಲು ಸುಲಭ ಮತ್ತು ಅನಾರೋಗ್ಯದ ಸಂದರ್ಭದಲ್ಲಿ ಹೆಚ್ಚು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಮೊಳಕೆ ಬಂದ ಹೆಸರುಕಾಳು ಒಂದು ಪ್ರೋಟೀನ್. ಜೊತೆಗೆ, ಉತ್ತಮ ಫೈಬರ್ ಹೊಂದಿದೆ. ಹಳದಿಯು ಉರಿಯೂತ, ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಹೊಟ್ಟೆಯ ಆಮ್ಲಗಳ ನಾಶಕಾರಿ ಪರಿಣಾಮವನ್ನು ಕಡಿಮೆ ಮಾಡಲು ತುಪ್ಪವು ಕೋಮಲ ಹೊಟ್ಟೆಯ ಒಳಪದರದ ಮೇಲೆ ರಕ್ಷಣಾತ್ಮಕ ಪದರವನ್ನು ರಚಿಸುತ್ತದೆ.

ಸುಧಾ ಮೂರ್ತಿ ಬಾಬ್ ಕಟ್ ಮಾಡಿಕೊಂಡಿದ್ದಕ್ಕೂ ಅವರಕ್ಕನ ಮದುವೆಗೂ ಏನು ಸಂಬಂಧ?

ಅಂದ ಹಾಗೆ ಈ ಸರಳ ಕಿಚಡಿ ಮಾಡುವ ವಿಧಾನ
ಕುಕ್ಕರ್‌ನಲ್ಲಿ 1 ಲೋಟ ಅಕ್ಕಿಗೆ ಅರ್ಧ ಲೋಟ ಹೆಸರುಕಾಳು ಹಾಕಿ. ಜೊತೆಗೆ ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ತುಪ್ಪ ಹಾಕಿ. 3 ಲೋಟ ನೀರಿನೊಂದಿಗೆ ಬೇಯಲು ಬಿಡಿ. ಅಷ್ಟೇ, ಆರೋಗ್ಯಕರ ಖಿಚಡಿ ರೆಡಿ. 

ಈ ಕಿಚಿಡಿಯು ಬೆಳಗಿನ ಉಪಹಾರಕ್ಕಾಗಲೀ, ಮಧ್ಯಾಹ್ನದ ಊಟಕ್ಕೇ ಆಗಲಿ, ಅಥವಾ ತಡರಾತ್ರಿಯ ಹಸಿವು ನೀಗಿಸಲು ಕೂಡಾ ಉತ್ತಮ ಉಪಾಯವಾಗಿದೆ. ಏಕೆಂದರೆ ಇದು ತಯಾರಿಸಲು 5 ನಿಮಿಷ ಸಾಕಾಗಿದೆ. ಮತ್ತು ಆರೋಗ್ಯಕ್ಕೆ ಬಹಳ ಹಿತಕರವಾಗಿರುತ್ತದೆ. ಬೆಳಗ್ಗೆ ಕಚೇರಿಗೆ ಹೋಗುವ, ಮಕ್ಕಳನ್ನು ತಯಾರು ಮಾಡುವ ಗಡಿಬಿಡಿಯಲ್ಲಿರುವ ಮಹಿಳೆಯರು ಇದನ್ನು ತಯಾರಿಸಿದರೆ ಅರ್ಧ ಸಮಯ ಉಳಿಯುತ್ತದೆ.


View post on Instagram