Intimate Health: ಯೋನಿ ಬಗ್ಗೆ ಇರೋ ಅಪನಂಬಿಕೆಗಳಿವು!
ನಮ್ಮ ದೇಹದ ಅಂಗಗಳ ಬಗ್ಗೆ ಮಾತನಾಡೋಕೆ ನಮಗೆ ಮುಜುಗರ. ಹಾಗಾಗಿಯೇ ಎಲ್ಲವನ್ನೂ ನಾವು ನಂಬುತ್ತೇವೆ. ಯಾವುದು ಸತ್ಯ, ಯಾವುದು ಮಿಥ್ಯ ಎಂಬುದನ್ನು ಅರಿಯದೆ ತಪ್ಪು ಮಾಡಿ ಆಮೇಲೆ ಸಂಕಷ್ಟ ಎದುರಿಸ್ತೇವೆ.
ಯೋನಿಗೆ ಸಂಬಂಧಿಸಿದಂತೆ ನಮಗೆ ಇನ್ನೂ ಸರಿಯಾದ ಜ್ಞಾನವಿಲ್ಲ. ಮಾಹಿತಿ ಕೊರತೆಯಿಂದ ಅನೇಕ ಸುಳ್ಳು ವಿಷ್ಯಗಳನ್ನು ಸತ್ಯವೆಂದು ನಂಬಿದ್ದೇವೆ. ಅದನ್ನೇ ನಮ್ಮ ಮಕ್ಕಳಿಗೆ ಹೇಳ್ತೇವೆ. ಮೊದಲು ವಯಸ್ಕರು ಯೋನಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಹೊಂದಿರಬೇಕು. ಇದ್ರಿಂದ ನಿಮ್ಮ ಆರೋಗ್ಯವನ್ನು ನೀವು ರಕ್ಷಿಸಿಕೊಳ್ಳಬಹುದು. ನಾವಿಂದು ಯೋನಿಗೆ ಸಂಬಂಧಿಸಿದಂತೆ ಇರುವ ಕೆಲ ಮಿಥ್ಯಗಳ ಬಗ್ಗೆ ನಿಮಗೆ ಹೇಳ್ತೇವೆ.
ಯೋನಿ (Vagina) ಗೆ ಸಂಬಂಧಿಸಿದ ಕೆಲ ಮಿಥ್ಯಗಳು :
ಲೈಂಗಿಕ ಕ್ರಿಯೆ ನಿರಂತರವಾಗಿದ್ದರೆ ಕಾಲಾನಂತರದಲ್ಲಿ ಯೋನಿ ಸಡಿಗೊಳ್ಳುತ್ತದೆ : ಮಹಿಳೆ, ಪುರುಷ ಸೇರಿದಂತೆ ಎಲ್ಲರೂ ಇದನ್ನು ನಂಬುತ್ತಾರೆ. ಆದ್ರೆ ಇದು ದೊಡ್ಡ ಸುಳ್ಳು. ಲೈಂಗಿಕ (sexual) ಕ್ರಿಯೆ ನಂತ್ರ ಯೋನಿ ಸಡಿಲವಾಗೋದಿಲ್ಲ. ಯೋನಿ ಸ್ನಾಯುಗಳನ್ನು ಹೊಂದಿರುತ್ತದೆ. ಅವು ಹಿಗ್ಗುವ ಗುಣವನ್ನು ಹೊಂದಿರುತ್ತವೆ. ಲೈಂಗಿಕ ಕ್ರಿಯೆ ನಡೆದು ಸ್ವಲ್ಪ ಸಮಯದ ನಂತ್ರ ಅವು ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ವಯಸ್ಸಾದ್ಮೇಲೆ ಅಥವಾ ಸಾಮಾನ್ಯ ಹೆರಿಗೆ (childbirth) ನಂತ್ರ ಯೋನಿ ಸಡಿಲವಾಗುತ್ತದೆಯೇ ವಿನಃ ಸಂಭೋಗ ಇದಕ್ಕೆ ಕಾರಣವಲ್ಲ.
ಆರೋಗ್ಯಕರ ಯೋನಿಯಿಂದ ವಾಸನೆ ಬರಲು ಸಾಧ್ಯವಿಲ್ಲ : ಯೋನಿಯ ವಾಸನೆ ಹಾಗೂ ಯೋನಿ ಆರೋಗ್ಯಕ್ಕೆ ಸಂಬಂಧವಿಲ್ಲ. ಪ್ರತಿಯೊಬ್ಬರ ಯೋನಿ ಒಂದು ವಾಸನೆ ಹೊಂದಿರುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾಗಳೂ ಈ ವಾಸನೆಗೆ ಕಾರಣವಾಗಿರುತ್ತದೆ. ಮುಟ್ಟಿನ ಸಮಯದಲ್ಲಿ, ಲೈಂಗಿಕ ಕ್ರಿಯೆ ನಂತ್ರ ಅಥವಾ ಹಾರ್ಮೋನ್ ಬದಲಾವಣೆ ಸಂದರ್ಭದಲ್ಲಿ ಯೋನಿಯಿಂದ ವಾಸನೆ ಬರಬಹುದು. ಹಾಗಂತ ಯೋನಿ ಆರೋಗ್ಯ ಹಾಳಾಗಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ.
ಮೊದಲ ಬಾರಿ ಸೆಕ್ಸ್ – ಬ್ಲೀಡಿಂಗ್ ಆಗ್ಲೇಬೇಕು : ಈ ಬಗ್ಗೆ ಸಾಕಷ್ಟು ಚರ್ಚೆ, ವಿವಾದಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೂ ಜನರು ಇದನ್ನು ಸತ್ಯವೆಂದೇ ನಂಬುತ್ತಾರೆ. ಮೊದಲ ಬಾರಿ ಸಂಭೋಗ ಬೆಳೆಸಿದಾಗ ಎಲ್ಲರಿಗೂ ಬ್ಲೀಡಿಂಗ್ ಆಗ್ಬೇಕೆಂದೇನಿಲ್ಲ. ಎಲ್ಲರಿಗೂ ಸಂಭೋಗದ ವೇಳೆಯೇ ಕನ್ಯಾಪೊರೆ ಹರಿಯಬೇಕಾಗಿಲ್ಲ. ಕನ್ಯಾಪೊರೆ ಹರಿದಾಗ ನೋವು, ರಕ್ತಸ್ರಾವವಾಗುವುದು ಸಾಮಾನ್ಯ. ಹಾಗಂತ ಮೊದಲ ಬಾರಿ ಸಂಭೋಗ ನಡೆಸಿದಾಗ ಬ್ಲೀಡಿಂಗ್ ಆಗಿಲ್ಲವೆಂದ್ರೆ ನೀವು ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ವ್ಯಾಯಾಮ, ಸೈಕ್ಲಿಂಗ್, ಟ್ಯಾಂಪೂನ್ ಬಳಕೆ ಸೇರಿದಂತೆ ಬೇರೆ ಕಾರಣಕ್ಕೆ ಕನ್ಯಾಪೊರೆ ಹರಿದಿದ್ದಲ್ಲಿ ಸಂಭೋಗದ ವೇಳೆ ರಕ್ತಸ್ರಾವ ಆಗೋದಿಲ್ಲ.
ಮಹಿಳೆಯರ ಎದೆ ಅಳತೆ ತೆಗೆಯುವುದು ತಪ್ಪು: ಹೈಕೋರ್ಟ್
ಪ್ಯುಬಿಕ್ ಕೂದಲು ತೆಗೆದ್ರೆ ಯೋನಿ ಸ್ವಚ್ಛವಾಗುತ್ತೆ : ಯೋನಿ ಸ್ವಚ್ಛತೆ ವಿಷ್ಯಕ್ಕೆ ಬಂದ್ರೆ ಅನೇಕರು ಪ್ಯುಬಿಕ್ ಕೂದಲನ್ನು ವಿಲನ್ ರೀತಿ ನೋಡ್ತಾರೆ. ಆದ್ರೆ ಇದು ಬಹಳ ದೊಡ್ಡ ತಪ್ಪು ಕಲ್ಪನೆ. ಪ್ಯುಬಿಕ್ ಕೂದಲು, ಯೋನಿಯ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಪ್ಯುಬಿಕ್ ಕೂದಲನ್ನು ತೆಗೆದ್ರೆ ಅಪಾಯ ಹೆಚ್ಚು. ಇದ್ರಿಂದ ಸೋಂಕು ಹರಡುವುದಲ್ಲದೆ ಚರ್ಚದ ಮೇಲೆ ದುದ್ದು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಪ್ಯುಬಿಕ್ ಕೂದಲು ತೆಗೆಯೋದ್ರಿಂದ ನಿಮಗೆ ಕಿರಿಕಿರಿಯಾಗ್ಬಹುದು.
ಮಗಳ ತಲೆ ತುಂಬಾ ಹೇನು..ಸಾಯಿಸೋದಕ್ಕೆ ಸಸ್ಯಾಹಾರಿ ಅಮ್ಮನ ಅಬ್ಜೆಕ್ಷನ್!
ಯೋನಿ ಡಿಸ್ಚಾರ್ಜ್ ಅನಾರೋಗ್ಯಕರ : ಯೋನಿ ಡಿಸ್ಚಾರ್ಜ್ ನಿಮ್ಮ ಯೋನಿ ಮತ್ತು ಗರ್ಭಕಂಠದ ಒಳಗಿನ ಗ್ರಂಥಿಗಳಿಂದ ಬರುತ್ತದೆ. ಈ ಗ್ರಂಥಿಗಳು ಯೋನಿ ಡಿಸ್ಚಾರ್ಜ್ ಎಂಬ ಸಣ್ಣ ಪ್ರಮಾಣದ ದ್ರವವನ್ನು ಉತ್ಪತ್ತಿ ಮಾಡುತ್ತವೆ. ಪ್ರತಿದಿನ ದ್ರವವು ಯೋನಿಯಿಂದ ಹೊರಬರುತ್ತದೆ, ಇದು ಯೋನಿಯ ಹಳೆಯ ಕೋಶಗಳನ್ನು ಸ್ವಚ್ಛಗೊಳಿಸುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆ. ನಿಮ್ಮ ಯೋನಿಯನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿಡಲು ಇದು ಒಂದು ಮಾರ್ಗವಾಗಿದೆ. ನಿಯಮಿತ ವಿಸರ್ಜನೆಯು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತದೆ. ಆದರೆ ಬಣ್ಣ ಮತ್ತು ವಾಸನೆಯಲ್ಲಿ ಸಾಕಷ್ಟು ಬದಲಾವಣೆಗಳಿದ್ದರೆ, ವಿಸರ್ಜನೆ ಅತಿ ಹೆಚ್ಚಾಗಿದ್ದರೆ ಆಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದು ಸೋಂಕು ಅಥವಾ ಹಾರ್ಮೋನ್ ಬದಲಾವಣೆಯಿಂದ ಸಂಭವಿಸಿರಬಹುದು. ಈ ಸಮಯದಲ್ಲಿ ವೈದ್ಯರನ್ನು ಭೇಟಿಯಾಗುವುದು ಸೂಕ್ತ.