Womens Health Day History: ಮಹಿಳೆಯರನ್ನು ಕಾಡುತ್ತೆ ಈ ಪೋಷಕಾಂಶದ ಕೊರತೆ

 ಮಹಿಳೆಯರಿಗೆ ಕೆಲ ಸಮಸ್ಯೆಗಳು ಕಾಮನ್. ಅದನ್ನು ಎಂದಿಗೂ ಯಾರ ಬಳಿಯೂ ಹೇಳುವುದಿಲ್ಲ. ಹಾಗೆ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯುವುದಿಲ್ಲ. ಇದ್ರಿಂದಾಗಿ ಮಹಿಳೆ ಅನಾರೋಗ್ಯ ಹೆಚ್ಚಾಗುತ್ತದೆ. ಈ ಎಲ್ಲದರ ಬದಲು ಆರಂಭದಲ್ಲಿಯೇ ವೈದ್ಯರಿಗೆ ತೋರಿಸಿದ್ರೆ ಅಪಾಯದಿಂದ ಪಾರಾಗಬಹುದು.

International Womens Health Day History

ಮಹಿಳೆ (Woman) ಯರು ತಮ್ಮ ಆರೋಗ್ಯ (Health) ದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಸಣ್ಣಪುಟ್ಟ ಸಮಸ್ಯೆ (Problem) ಗಳನ್ನು ನಿರ್ಲಕ್ಷ್ಯ ಮಾಡ್ತಾರೆ. ಮುಂದೊಂದು ದಿನ ಇದೇ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ ಎಂಬ ಸಂಗತಿ ಅವರಿಗೆ ತಿಳಿದಿರೋದಿಲ್ಲ. ಮಹಿಳೆ ಎಲ್ಲ ಕ್ಷೇತ್ರದಲ್ಲಿ ಮುಂದಿದ್ದಾಳೆ ನಿಜ. ಆದ್ರೆ ಆರೋಗ್ಯದ ವಿಷ್ಯದಲ್ಲಿ ಆಕೆ ಹಿಂದಿದ್ದಾಳೆ. ಪ್ರತಿ ಬಾರಿಯೂ ಆರೋಗ್ಯದ ವಿಷ್ಯ ಬಂದಾಗ ಆಕೆ ಹಿಂದೆ ಸರಿಯುತ್ತಾಳೆ. ಅನೇಕ ಮಹಿಳೆಯರು ವೈದ್ಯರ ಬಳಿ ಹೋಗಲು ಮನಸ್ಸು ಮಾಡುವುದಿಲ್ಲ. ಮನೆಯಲ್ಲಿರುವ ಔಷಧಿ ಅಥವಾ ಮನೆ ಮದ್ದನ್ನು ಆಶ್ರಯಿಸುತ್ತಾರೆ. ಮತ್ತೆ ಕೆಲ ಲೈಂಗಿಕ ಖಾಯಿಲೆಗಳನ್ನು ಅವರು ಯಾರ ಬಳಿಯೂ ಹೇಳೋದಿಲ್ಲ. ಮಹಿಳೆಯರಿಗೆ ಅವರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಈಗ್ಲೂ ಇದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಮೇ 28ರಂದು ಮಹಿಳಾ ಆರೋಗ್ಯ ದಿನವನ್ನು ಆಚರಿಲಾಗುತ್ತದೆ. ಇಂದು ನಾವು ಮಹಿಳಾ ಆರೋಗ್ಯ ದಿನದ ಇತಿಹಾಸ, ಉದ್ದೇಶ ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಡುವ ವಿಟಮಿನ್ ಕೊರತೆ ಯಾವುದು ಎಂಬುದನ್ನು ಹೇಳ್ತೇವೆ. 

ಅಂತರರಾಷ್ಟ್ರೀಯ ಮಹಿಳಾ ಆರೋಗ್ಯ ದಿನದ ಇತಿಹಾಸ :  ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನವನ್ನು ಮೇ 28ರಂದು ಆಚರಿದಲಾಗುತ್ತದೆ. 1987 ರಿಂದಲೇ ಇದು ಜಾರಿಗೆ ಬಂದಿದೆ.  1987 ರಲ್ಲಿ, ಕೋಸ್ಟರಿಕಾದಲ್ಲಿ WGNRR ಸದಸ್ಯರ ಪುನರ್ಮಿಲನದ ಸಮಯದಲ್ಲಿ ಇದ್ರ ಬಗ್ಗೆ ಚರ್ಚೆಯಾಯ್ತು. ಸದಸ್ಯರೆಲ್ಲ ಮೇ 28 ರಂದು ಮಹಿಳಾ ಆರೋಗ್ಯಕ್ಕಾಗಿ ಅಂತರರಾಷ್ಟ್ರೀಯ ಮಹಿಳಾ ಆರೋಗ್ಯ ದಿನ ಆಚರಿಸುವ ಘೋಷಣೆ ಮಾಡಿದ್ರು. ಅಂದಿನಿಂದ, ಪ್ರತಿ ವರ್ಷ ಮೇ 28 ರಂದು  ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.  

ವಿಶ್ವ ಮಹಿಳಾ ಆರೋಗ್ಯ ದಿನದ ಆಚರಣೆ ಉದ್ದೇಶ : ಗ್ಲೋಬಲ್ ವುಮೆನ್ಸ್ ಗ್ಲೋಬಲ್ ನೆಟ್‌ವರ್ಕ್ ಫಾರ್ ರಿಪ್ರೊಡಕ್ಟಿವ್ ರೈಟ್ಸ್ (WGNRR ) ಅಡಿಯಲ್ಲಿ ಇದನ್ನು ಆಚರಿಸಲಾಗುತ್ತದೆ. ರಾಷ್ಟ್ರದಾದ್ಯಂತ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳ (SRHR) ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಗುರಿಯಾಗಿದೆ. ಪ್ರತಿ ಮಹಿಳೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕನ್ನು ಹೊಂದಿದ್ದಾಳೆ.  ಅವಳು ಪ್ರಪಂಚದ ಯಾವುದೇ ಭಾಗದಿಂದ ಬಂದಿರಲಿ, ಯಾವ ಜನಾಂಗ, ಧರ್ಮಕ್ಕೆ ಸೇರಿರಲಿ, ಇದು ಅಲ್ಲಿ ಮಹತ್ವ ಪಡೆಯುವುದಿಲ್ಲ. ಮಹಿಳೆಯರು ಮತ್ತು ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ದಿನ ಅನೇಕ ಕಾರ್ಯಕ್ರಮಗಳು ನಡೆಯತ್ತವೆ.

ಭಾರತದಲ್ಲಿ ಇನ್ನೂ ಮುಟ್ಟಿನ ಬಗ್ಗೆ ಮಿಥ್, ತೊಲಗುತ್ತೆ ಯಾವಾಗ?

ಮಹಿಳೆಯರಿಗೆ ಅಗತ್ಯ ಈ ಪೋಷಕಾಂಶ : ಮಹಿಳೆಯರು ತಮ್ಮ ದೇಹ ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿನ ಜ್ಞಾನವನ್ನಾದ್ರೂ ಹೊಂದಿರಬೇಕು. ಆಗ ಅವರಿಗೆ ಯಾವ ಸಮಸ್ಯೆಯಾಗಿದೆ ಎಂಬುದನ್ನು ಅವರೇ ಬೇಗ ಗುರುತಿಸಬಹುದು. ಸಾಮಾನ್ಯವಾಗಿ ಮಹಿಳೆಯರು ಕೆಲ ಪೋಷಕಾಂಶಗಳ ಕೊರತೆ ಎದುರಿಸುತ್ತಾರೆ.

ಮಹಿಳೆಯರ ದೇಹದಲ್ಲಿ ಕಬ್ಬಿಣದ ಕೊರತೆ ಕಂಡುಬರುತ್ತದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ.  

ವಿಧವೆಯರ ಹಣೆಗೆ ತಿಲಕವಿಟ್ಟು ವಿಧವಾ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಗ್ರಾಮ

ಮಹಿಳೆಯರು ವಿಟಮಿನ್ ಬಿ 12 ಕೊರತೆಯನ್ನು ಸಹ ಎದುರಿಸುತ್ತಾರೆ. ಇದರಿಂದಾಗಿ ಅವರಿಗೆ  ಸುಸ್ತು, ಕೂದಲು ಉದುರುವಿಕೆ, ಖಿನ್ನತೆ, ದೌರ್ಬಲ್ಯ, ಆಲಸ್ಯ ಮುಂತಾದ ಸಮಸ್ಯೆ ಕಂಡುಬರುತ್ತವೆ. ಮಹಿಳೆಯರಿಗೂ ಕ್ಯಾಲ್ಸಿಯಂ ಅತ್ಯಗತ್ಯ. ಆಗಾಗ್ಗೆ ಮಹಿಳೆಯರು ಈ ಪೋಷಕಾಂಶದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಅವರಿಗೆ ಮೂಳೆಗಳಲ್ಲಿ ನೋವು ಕಾಣಿಸುತ್ತದೆ. ವಿಟಮಿನ್ ಡಿ ಅತ್ಯಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ಅದೇ ಸಮಯದಲ್ಲಿ, ವಿಟಮಿನ್ ಡಿ ಮಹಿಳೆಯರಿಗೆ ಬಹಳ ಮುಖ್ಯವಾಗಿದೆ. ಇದರ ಕೊರತೆಯು ಸ್ನಾಯು ನೋವಿಗೆ ಕಾರಣವಾಗಬಹುದು. ಮಹಿಳೆಯರು ನಿಗದಿತ ಸಮಯಕ್ಕೆ ಇವುಗಳ ಪರೀಕ್ಷೆ ಮಾಡಿಸಬೇಕು. ಅಗತ್ಯವಿನಿಸಿದ್ರೆ ವೈದ್ಯರ ಸಲಹೆ ಪಡೆದು ಮಾತ್ರೆ ಸೇವನೆ ಮಾಡ್ಬೇಕು. 

Latest Videos
Follow Us:
Download App:
  • android
  • ios