Asianet Suvarna News Asianet Suvarna News

ವಿಶ್ವ ಮಹಿಳಾ ದಿನ; ಸಂಗೀತ, ಶಿಕ್ಷಣ ಮತ್ತು ಸಂಶೋಧನೆ.. ಡಾ. ಹೇಮಲತಾ ಜೀವನ

ವಿಶ್ವ ಮಹಿಳಾ ದಿನಾಚರಣೆ/ ಸಂಶೊಧಕಿ ಹೇಮಲತಾ ಅವರ ಸಾಧನೆ/ ಸಂಶೋಧನೆ, ಶಿಕ್ಷಣ, ಸಂಗೀತಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಹೇಮಲತಾಮೂರ್ತಿ/ ಟೋಮ್ಯಾಟೋ ಬಗ್ಗೆ ವಿಶೇಷ ಅಧ್ಯಯನ

international women s day special Educationist Dr Hemalatha S Murthy Life and achievements mah
Author
Bengaluru, First Published Mar 8, 2021, 8:57 PM IST

ಬೆಂಗಳೂರು (ಮಾ.  08)   ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳನ್ನು ಮತ್ತೊಮ್ಮೆ ಹೇಳುತ್ತಿದ್ದೇವೆ.  ಸಾಧನೆಯ ಶಿಖರದಲ್ಲಿ ಪ್ರಜ್ವಲಿಸುತ್ತಿರುವ ಮಹಿಳೆಯರು ಲಕ್ಷಾಂತರ ಜನರಿದ್ದಾರೆ.  ಸಂಶೋಧನೆ, ಶಿಕ್ಷಣ, ಸಂಗೀತಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಹೇಮಲತಾಮೂರ್ತಿ ಅವರ  ಜೀವನ  ನಮ್ಮ ಮುಂದೆ ಇದೆ.

ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರು.ತಂದೆ  ಶ್ರೀನಿವಾಸ ಮೂರ್ತಿ.ತಾಯಿ ಕಲಾ ಮೂರ್ತಿ. ಹೇಮಲತಾ,ಆರಂಭದಲ್ಲಿ ಆಯ್ಕೆ ಮಾಡಿಕೊಂಡ ಕ್ಷೇತ್ರ ಸಂಗೀತ.  ಚೂಡಾಮಣಿ ಅವರಲ್ಲಿ ವೀಣಾ ತರಬೇತಿ ಕಲಿಯಲು ಮುಂದಾದರು.  ಗುರುಗಳ ಮಾರ್ಗದರ್ಶನದ ಜೊತೆ ಜೊತೆಗೆ ವೀಣೆಯಲ್ಲಿ ಪರಿಣತಿ ಹೊಂದುತ್ತಾ ಸಾಗಿದ ಹೇಮಾ ಸಂಗೀತ ಪಯಣದ ಜೊತೆಗೆ ನೃತ್ಯ ಅಭ್ಯಾಸದ ಕಡೆಗೂ ಗಮನ ಹಸಿರಿಸದರು. ಸುಧಾಮೂರ್ತಿ ಅವರಲ್ಲಿ ನೂಪುರ ವೈಭವದ ಕಲಿಕೆ ಪ್ರಾರಂಭಿಸಿ ಅದರಲ್ಲಿಯೂ ಪ್ರೌಢಿಮೆಗಳಿಸಿಕೊಂಡರು.

ಎಂ.ಎಸ್ಸಿ (ಮೈಕ್ರೋಬಯಾಲಜಿ)ಮುಗಿಸಿ  ಸಂಶೋಧನೆಯ ಬೆನ್ನು ಹತ್ತಿದರು. ಡಾ.ರಾಮನಾಥ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯತ್ತ ಹೆಜ್ಜೆ ಇಟ್ಟರು.  ಅಡುಗೆ ಮನೆಯ ಆಲ್ ಟೈಮ್ ಫೇವರೇಟ್ ಟೊಮ್ಯಾಟೋ ಬಗೆಗಿನ ಸಂಶೋಧನೆ ಹೇಮಲತಾ ಅವರಿಗೆ ತಮ್ಮ ಗುರುತನ್ನು ಜಗತ್ತಿಗೆ ಸಾರಲು  ವೇದಿಕೆಯಾಗಿತು.

ಆಟೋ ಓಡಿಸುತ್ತ ಬದುಕು ಕಟ್ಟಿಕೊಂಡ ನಂದಿನಿ

ಟೊಮ್ಯಾಟೋ ತರಕಾರಿಯೋ ಅಥವಾ ಹಣ್ಣೋ ಎಂಬುದರ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆ ನಡೆದಿದೆ.ಯಾವುದೇ ತರಕಾರಿ ಆಗಿರಲಿ.ಅದು ಹೆಚ್ಚಿನ ಭಾಗ ಔಷಧಿ ಗುಣವನ್ನು ಹೊಂದಿರುತ್ತದೆ.ಆದರೆ ಅದನ್ನುಸಂಶೋಧನೆ ಮಾಡಿ ಯಾವ ಔಷಧಿ ಗುಣ ಇರುತ್ತದೆ ಎಂಬುದನ್ನು ಮತ್ತು ಆ ತರಕಾರಿಯ ಮಹತ್ವವನ್ನು ತಿಳಿಸುವುದು ವಿಜ್ಞಾನಿಗಳು.

ಹೀಗಿರುವಾಗ ಹೇಮಲತಾ ಟೊಮ್ಯಾಟೋ ಆಯ್ಕೆ ಮಾಡಿಕೊಂಡು ಸಂಶೋಧನೆ ನಡೆಸುತ್ತಾರೆ. ಮಾರ್ಗದರ್ಶಕರ ಮೂಲಕ ಪ್ರಬಂಧ ಮಂಡಿಸಿ ಪಿ.ಹೆಚ್.ಡಿ ಪದವಿ ಪಡೆದುಕೊಳ್ಳುತ್ತಾರೆ.  ಟೊಮ್ಯಾಟೋ ರೈತರ ಪಾಲಿಗೂ ಆಶಾದಾಯಕ ಬೆಳೆ. ನಾವು ಮಾಡಿರುವ ಸಂಶೋಧನೆ ರೈತರ ಮನೆಗೆ ತಲುಪಬೇಕು. ಟೊಮ್ಯಾಟೋವನ್ನು ಕೆಡದಂತೆ ಜಾಸ್ತಿ ದಿನ ಕಾಪಾಡಿಕೊಳ್ಳುವುದು ಹೇಗೆ?  ಆರೋಗ್ಯದ  ಲಾಭಗಳು ಯಾವುವು? ಎಂಬುದನ್ನು ಹೇಮಲತಾ ವಿವರಿಸುತ್ತ ಹೋಗುತ್ತಾರೆ.

ಮಹೀಂದ್ರ ಟ್ರ್ಯಾಕ್ಟರ್ ಜಾಹೀರಾತಿಗೆ ದೇಶವೇ ಸಲಾಂ

ವಿದೇಶಗಳಲ್ಲಿಯೂ ಹೇಮಾ ಸಾಧನೆ:  ಭಾಷಣಕಾರಳಾಗಿ ವಿವಿಧ ದೇಶಗಳಾದ ಶ್ರೀಲಂಕಾ,ಕೌಲಾಲಾಂಪುರ ಮತ್ತು ಥೈಲ್ಯಾಂಡ್ ನಲ್ಲಿ ಭಾಗವಹಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ  ಹೇಮಲತಾಮೂರ್ತಿ ಅವರು ನೀಡಿದ ಕೊಡುಗೆಗಳನ್ನು ಗಮನಿಸಿ ಅಬ್ದುಲ್ ಕಲಾಂ ಯೂನಿವರ್ಸಿಟಿ(ಲಕ್ನೋ) ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಿದೆ.  2009 ರಲ್ಲಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ತಮ್ಮ ಕೆಲಸ ಮಾಡಿದ್ದವರು ಹೇಮಲತಾ. 

ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿಯೂ ಭಾಗವಹಿಸಿ  ಕಾಂಟ್ರಿಬ್ಯೂಷನ್ ಫೀಲ್ಡ್ ಆಫ್ ಎಜುಕೇಷನ್ ಬಗ್ಗೆ ಪ್ರಬಂಧ ಮಂಡಿಸಿ ಅದರಲ್ಲಿಯೂ ಯಶಸ್ಸು  ಸಾರಧಿಸಿದರು. ಮಂಡನ್ ನಲ್ಲಿಯೂ ಮತ್ತೊಂದು ಡಾಕ್ಟರೇಟ್ ಗೌರವಕ್ಕೆ ಪಾತ್ರವಾದರು.

ಮಾತು-ಮಂಥನದ ಸೆಮಿನಾರ್.: ಹಿಂದುಳಿದ ವರ್ಗದ ಹೆಣ್ಣು ಮಕ್ಕಳಲ್ಲಿ ನಾಯಕತ್ವ ಗುಣ ತುಂಬುವ ಕೆಲಸ ಮಾಡಬೇಕು ಎಂಬುದು ಹೇಮಾ ಅವರ ಬಹುದೊಡ್ಡ ಕನಸು. ಆಧುನಿಕ ಜಗತ್ತಿನ ಮಹಿಳೆ ಮತ್ತಷ್ಟು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು ಎಂದು  ಹೇಮಲತಾ ಹೇಳುತ್ತಾರೆ. ಶಿಕ್ಷಣ  ಕ್ಷೇತ್ರದಲ್ಲಿ ದೃಢ ಗ ಹೆಜ್ಜೆ ಇಡುತ್ತಿರುವ ಹೇಮಲತಾ ಅವರಿಗೆ ಮಹಿಳಾ ದಿನದ ಈ ಸಂದರ್ಭದಲ್ಲಿ  ಗುಡ್  ಲಕ್.... 

 

Follow Us:
Download App:
  • android
  • ios