Asianet Suvarna News Asianet Suvarna News

ಅಂತಾರಾಷ್ಟ್ರೀಯ ಮಹಿಳಾ ದಿನ: ಮಹೀಂದ್ರ ಟ್ರಾಕ್ಟರ್ ಜಾಹೀರಾತಿಗೆ ದೇಶವೇ ಸಲಾಂ!

ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಈ ವಿಶೇಷ ದಿನಕ್ಕಾಗಿ ಮಹೀಂದ್ರ ಟ್ರಾಕ್ಟರ್ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಈ ಜಾಹೀರಾತು ಇದೀಗ ಭಾರತೀಯರ ಮನತಟ್ಟಿದೆ. ಟ್ರಾಕ್ಟರ್ ಜಾಹೀರಾತಿನ ಮೂಲಕ ಮಹೀಂದ್ರ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಈ ಜಾಹೀರಾತು ವಿಡಿಯೋ ಹಾಗೂ ಹೆಚ್ಚಿನ ವಿವರ ಇಲ್ಲಿದೆ.
 

Mahindra special tractor advertisement on international womens day ckm
Author
Bengaluru, First Published Mar 7, 2021, 9:16 PM IST

ಬೆಂಗಳೂರು(ಮಾ.07): ಭಾರತದಲ್ಲಿ ಮಹೀಂದ್ರ ಗ್ರೂಪ್ ಉದ್ಯಮದ ಜೊತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ಇದೀಗ ಮಹೀಂದ್ರ ತನ್ನ ಟ್ರಾಕ್ಟರ್ ಮೂಲಕ ಮಹಿಳಾ ದಿನಕ್ಕೆ ವಿಶೇಷ ಸಂದೇಶ ರವಾನಿಸಿದೆ. ಮಹಿಳೆಯರ ಮೇಲಿನ ಮನೋಭಾವ, ದೃಷ್ಟಿಕೋನ, ಅಸಡ್ಡೆಗಳನ್ನು ಬದಲಾಯಿಸುವ ಹಾಗೂ ರೈತರಿಗೆ ಸಲಾಂ ಹೇಳುವ ಜಾಹೀರಾತನ್ನು ಬಿಡುಗಡೆ ಮಾಡಿದೆ.

ಚಾಯ್ ಪಕೋಡ ಮಾರುತ್ತಿದ್ದಾರೆ ಭಾರತದ ಅತೀ ದೊಡ್ಡ ರಾಜ್ಯದ ಸಿಎಂ ಅಕ್ಕ!

ಮಹಿಳಾ ದಿನಕ್ಕೆ ಮಹಿಳೆಯರ ಸಬಲೀಕರಣ ಹಾಗೂ ದೇಶದ ರೈತರಿಗೆ ನಮನ ಸಲ್ಲಿಸುವು ನಿಟ್ಟಿನಲ್ಲಿ ಮಹೀಂದ್ರ ಈ ಜಾಹೀರಾತನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಟ್ರಾಕ್ಟರ್ ಡ್ರೈವಿಂಗ್ ಲೈಸೆನ್ಸ್‌ಗಾಗಿ RTO ಪೊಲೀಸ್ ಅಧಿಕಾರಿ ಬಳಿ ಶಕ್ತಿ ಅನ್ನೋ ಹುಡುಗಿ ಆಗಮಿಸುತ್ತಾಳೆ. 

 

ಇದುವರೆಗೂ ಟ್ರಾಕ್ಟರ್ ಡ್ರೈವಿಂಗ್‍ಗೆ ಹುಡಿಯನ್ನು ನೋಡಿಲ್ಲ. ಇದು ಟ್ರಾಕ್ಟರ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭದ ಮಾತಲ್ಲ  ಎಂದು ಪೊಲೀಸ್ ಅಧಿಕಾರಿ ದರ್ಪದಿಂದ ಹೇಳುವ ಮಾತಿದೆ. ಪರೋಕ್ಷವಾಗಿ ಇದು ಹೆಣ್ಣುಮಕ್ಕಳಿಗಲ್ಲ ಅನ್ನೋ ದಾಟಿಯಲ್ಲಿ ಹೇಳುವ ದೃಶ್ಯವಿದೆ. ಇದಕ್ಕೆ ಹೆಣ್ಣುಮಗಳು ಅಷ್ಟೇ ದಿಟ್ಟ ಉತ್ತರ ನೀಡುತ್ತಾಳೆ.

ಇಂದಿನಿಂದ ನೀವು ಟ್ರಾಕ್ಟರ್ ಲೈಸೆನ್ಸ್‌ನಲ್ಲಿ ಹೆಣ್ಣುಮಕ್ಕಳನ್ನು ನೋಡುತ್ತೀರಿ. ಕಷ್ಟ ಇಲ್ಲದಿದ್ದರೆ ಎಲ್ಲರೂ ರೈತರಾಗುತ್ತಿದ್ದರು ಎಂದು ಟ್ರಾಕ್ಟರ್ ಓಡಿಸಿ ಪೊಲೀಸರ ದೃಷ್ಠಿಕೋನವನ್ನೇ ಬದಲಾಯಿಸುತ್ತಾಳೆ.  ಈ ಜಾಹೀರಾತು ಇದೀಗ ದೇಶದಲ್ಲೇ ಚರ್ಚೆಯಾಗುತ್ತಿದೆ. ಮಹಿಳಾ ದಿನಕ್ಕೆ ಮಹಿಳೆಯರಿಗೆ ಹಾಗೂ ದೇಶದ ರೈತರಿಗೆ ನಮನ ಸಲ್ಲಿಸಿದ ಮಹೀಂದ್ರ ಟ್ರಾಕ್ಟರ್‌ಗೆ ಇದೀಗ ಭಾರತವೇ ಸಲಾಂ ಹೇಳುತ್ತಿದೆ.

Follow Us:
Download App:
  • android
  • ios