Asianet Suvarna News Asianet Suvarna News

International Widows Day 2022: ಸಮಾಜದಲ್ಲಿ ವಿಧವೆಗೂ ಇರಲಿ ಮನ್ನಣೆ

ಆಕೆ ಶುಭಕಾರ್ಯಗಳಿಗೆ ಹೋಗುವಂತಿಲ್ಲ, ಜರತಾರಿ ಸೀರೆ (Saree) ಉಡುವಂತಿಲ್ಲ, ಬಳೆ (Bangle) ಹಾಕುವಂತಿಲ್ಲ, ಹೂ (Flower) ಮುಡಿಯುವಂತಿಲ್ಲ.ವಿಧವೆಗೆ ಮಾತ್ರ ಯಾಕೆ ಇಷ್ಟೆಲ್ಲಾ ಕಟ್ಟುನಿಟ್ಟು. ಸಮಾಜ (Society)ದಲ್ಲಿ ಇಷ್ಟೊಂದು ಕಡೆಗಣನೆ. ಆಕೆಗೂ ಸಿಗಲಿ ಎಲ್ಲರಂತೆ ಮನ್ನಣೆ.

International Widows Day 2022, History, Significance And All You Need To Know Vin
Author
Bengaluru, First Published Jun 23, 2022, 11:03 AM IST

ಜಗತ್ತಿನಲ್ಲಿ ಎಲ್ಲದಕ್ಕೂ ಒಂದೊಂದು ದಿನವಿದೆ. ನಿರ್ಧಿಷ್ಟ ವ್ಯಕ್ತಿ, ವಸ್ತುವನ್ನು ನೆನಪಿಸಿಕೊಳ್ಳಲು, ಜನರಿಗೆ ಇದರ ಮಹತ್ವವನ್ನು ಸಾರಲು ಇಂಥಹದ್ದೊಂದು ದಿನವನ್ನು ಆಚರಿಸಲಾಗುತ್ತದೆ. ಸಂಬಂಧಗಳ (Relationship) ಮಹತ್ವವನ್ನು ಸಾರಲೆಂದೇ ಅಮ್ಮಂದಿರ ದಿನ, ಅಪ್ಪಂದಿರ ದಿನ, ಒಡಹುಟ್ಟಿದವರ ದಿನ, ಅಂತರಾಷ್ಟ್ರೀಯ ವಿಧವೆಯರ ದಿನ (International Widows Day). ಪತಿಯನ್ನು ಕಳೆದುಕೊಂಡು ಒಂಟಿ (Alone) ಜೀವನ ನಡೆಸುತ್ತಿರುವವರಿಗಾಗಿಯೇ ಈ ದಿನ ಮೀಸಲಾಗಿದೆ

ಅಂತಾರಾಷ್ಟ್ರೀಯ ವಿಧವೆಯರ ದಿನದ ಇತಿಹಾಸ
ವಿಧವೆಯರ ಧ್ವನಿಯನ್ನು ಎತ್ತಿ ಹಿಡಿಯಲು ವಿಶ್ವಸಂಸ್ಥೆಯು 2011ರಲ್ಲಿ ಅಂತಾರಾಷ್ಟ್ರೀಯ ವಿಧವೆಯರ ದಿನವನ್ನು ಪರಿಚಯಿಸಿತು. ವಿಧವೆಯರ ಸಂಪೂರ್ಣ ಹಕ್ಕುಗಳು ಮತ್ತು ಮಾನ್ಯತೆಗಾಗಿ ಕ್ರಮ ಕೈಗೊಳ್ಳಲು ಈ ದಿನವನ್ನು ಉದ್ದೇಶಿಸಲಾಗಿದೆ. ಗಮನಾರ್ಹವಾಗಿ ಲೂಂಬಾ ಫೌಂಡೇಶನ್‌ನಿಂದ ದಿನವನ್ನು ಆಚರಿಸಲಾಯಿತು. ಫೌಂಡೇಶನ್ 1954 ಲ್ಲಿ ಈ ದಿನದಂದು ಅಂತರರಾಷ್ಟ್ರೀಯ ವಿಧವೆಯರ ದಿನವನ್ನು ಗುರುತಿಸಲು ಜೂನ್ 23 ಅನ್ನು ಆಯ್ಕೆ ಮಾಡಿತು. ಲೂಂಬಾ ಫೌಂಡೇಶನ್ ಮೊದಲ ಬಾರಿಗೆ ಇದನ್ನು ಚಾಲ್ತಿಗೆ ತಂದಿತು. ಇದೇ ದಿನದಂದು ಆಚರಿಸಲು ಕಾರಣ ಇದೇ ದಿನ ಲೂಂಬಾ ಫೌಂಡೇಶನ್ ಸಂಸ್ಥಾಪಕರ ತಾಯಿ ವಿಧವೆಯಾಗಿದ್ದರು. 

Father’s Day: ಅಪ್ಪ-ಮಕ್ಕಳ ನಡುವೆ ಕಂದಕ ಸೃಷ್ಟಿಸುವ ಅಭ್ಯಾಸಗಳಿವು

ಅಂತಾರಾಷ್ಟ್ರೀಯ ವಿಧವೆಯರ ದಿನದ ಮಹತ್ವ
ಅಂತರಾಷ್ಟ್ರೀಯ ವಿಧವೆಯರ ದಿನವು ಮಹತ್ವದ್ದಾಗಿದೆ. ಏಕೆಂದರೆ ಇದು ವಿಧವೆಯರ ಧ್ವನಿಯನ್ನು ವರ್ಧಿಸಲು ಸಹಾಯ ಮಾಡುತ್ತದೆ. ವಿಧವೆಯರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರಿಗೆ ಅನುಕೂಲಕರವಾದ ನೀತಿಗಳನ್ನು ಪ್ರಚಾರ ಮಾಡುವುದು ಇದರ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ವಿಧವೆಯರಿಗೆ ಸಮಾನ ವೇತನ, ಪಿಂಚಣಿ ಮತ್ತು ಸಾಮಾಜಿಕ ರಕ್ಷಣೆಯೊಂದಿಗೆ ಯೋಗ್ಯವಾದ ಕೆಲಸವನ್ನು ಒದಗಿಸುವ ಮೂಲಕ ಇದನ್ನು ಸ್ಮರಿಸಬಹುದು. ವಿಶ್ವಸಂಸ್ಥೆಯು ವಿಧವೆಯರಿಗೆ ತಮ್ಮನ್ನು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಅಧಿಕಾರ ನೀಡುವುದು ಎಂದರೆ ಬಹಿಷ್ಕಾರವನ್ನು ಸೃಷ್ಟಿಸುವ ಮತ್ತು ತಾರತಮ್ಯದ ಅಭ್ಯಾಸಗಳನ್ನು ಉತ್ತೇಜಿಸುವ ಸಾಮಾಜಿಕ ಕಳಂಕಗಳನ್ನು ಪರಿಹರಿಸುವುದು ಎಂದರ್ಥ.

ವಿಧವೆಯರನ್ನು ಎಲ್ಲಾ ರೀತಿಯ ಸುಖಗಳಿಂದ ದೂರವೇ ಇಟ್ಟಿದೆ ನಮ್ಮ ಸಂಸ್ಕೃತಿ. ಅಲಂಕಾರ, ಸಂಸರ ಸುಖ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳದಂತೆ ಮಾಡುವ ಸಂಪ್ರದಾಯಗಳು ನಮ್ಮಲ್ಲಿ ಈಗಲೂ ಚಾಲ್ತಿಯಲ್ಲಿವೆ. ನಮ್ಮೊಳಗೆ ನೀವು ಒಬ್ಬರು ಎಂದು ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದಲೇ ವಿಶ್ವ ವಿಧವೆಯರ ದಿನ ಅವಶ್ಯಕವಾಗಿದೆ.

Mother’s Day 2022: ಅಮ್ಮನಿಗಾಗಿ ಇಷ್ಟೂ ಮಾಡಲಾರೆವಾ?

ಅಂತಾರಾಷ್ಟ್ರೀಯ ವಿಧವೆಯರ ದಿನದ ಉದ್ದೇಶ
ವಿಧವೆ (Widow) ಎಂದರೆ ಪತಿ (Husband)ಯನ್ನು ಕಳೆದುಕೊಂಡವರು. ಇಂಥವರು ಸಮಾಜ (Society)ದಲ್ಲಿ ಒಮ್ಮೆಗೇ ಅಕ್ಶರಶಃ ಒಬ್ಬಂಟಿಯಾಗಿಬಿಡುತ್ತಾರೆ. ಎಲ್ಲರ ಅವಹೇಳನ, ಟೀಕೆಯನ್ನು ಎದುರಿಸಬೇಕಾಗುತ್ತದೆ. ಕೆಲವೊಬ್ಬರು ಧೈರ್ಯ ಕಳೆದುಕೊಂಡು ಪತಿಯ ಸಾವಿನ ಹಿಂದೆಯೇ ಸಾವಿಗೆ ಶರಣಾಗಿಬಿಡುತ್ತಾರೆ. ಹೀಗಾಗಿ ಪತಿಯನ್ನು ಕಳೆದು ಒಂಟಿಯಾದ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಧೈರ್ಯ ತುಂಬಲೆಂದೇ ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಅನೇಕ ಮಹಿಳೆಯರಿಗೆ, ತಮ್ಮ ಗಂಡನನ್ನು ಕಳೆದುಕೊಳ್ಳುವುದು ಎಂದರೆ ಅವರ ಮೂಲಭೂತ ಹಕ್ಕುಗಳು, ಆದಾಯ ಮತ್ತು ಪ್ರಾಯಶಃ ಅವರ ಮಕ್ಕಳಿಗಾಗಿ ದೀರ್ಘಾವಧಿಯ ಹೋರಾಟ. ಹೀಗಾಗಿ, ಪ್ರತಿ ವರ್ಷ ಜೂನ್ 23 ರಂದು, ಅವರ ಹಕ್ಕುಗಳು ಮತ್ತು ಸಾಮಾಜಿಕ ರಕ್ಷಣೆಯ ಮೇಲೆ ಬೆಳಕು ಚೆಲ್ಲಲು ಅಂತರರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ 258 ಮಿಲಿಯನ್ ವಿಧವೆಯರಿದ್ದಾರೆ ಎಂದು ತಿಳಿದುಬಂದಿದೆ.

ಇತರ ಸಮಸ್ಯೆಗಳ ಜೊತೆಗೆ, ಅನೇಕ ಮಹಿಳೆಯರು ಗಂಡನ ಮರಣಾನಂತರ ಸಾಮಾಜಿಕ, ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಾರೆ. ತಮ್ಮ ಸಂಗಾತಿಯನ್ನು ಕಳೆದುಕೊಂಡ ನಂತರ ಅವರ ದೈನಂದಿನ ಅಗತ್ಯಗಳನ್ನು ಮತ್ತು ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಪೂರೈಸಲು ಅವರಿಗೆ ಕಷ್ಟವಾಗುತ್ತದೆ. ಆದ್ದರಿಂದ, ಈ ದಿನವು ಅವರ ಬೆಂಬಲಕ್ಕೆ ನಿಲ್ಲಲು ಮತ್ತು ಅವರ ಜೀವನ ಪರಿಸ್ಥಿತಿಗಳನ್ನು ಉತ್ತಮಗೊಳಿಸಲು ಅಂತಾರಾಷ್ಟ್ರೀಯ ವಿಧವೆಯರ ದಿನ ಉತ್ತೇಜನ ನೀಡುತ್ತದೆ.

Follow Us:
Download App:
  • android
  • ios