Asianet Suvarna News Asianet Suvarna News

Mother’s Day 2022: ಅಮ್ಮನಿಗಾಗಿ ಇಷ್ಟೂ ಮಾಡಲಾರೆವಾ?

ಇಂದು ಅಮ್ಮಂದಿರ ದಿನ. ಅಮ್ಮನನ್ನು ಖುಷಿಪಡಿಸಬೇಕು, ಅಮ್ಮನ ಮುಖದಲ್ಲಿ ನಗು ಮೂಡಿಸಬೇಕು ಎನ್ನುವ ಆಸೆ ಎಲ್ಲ ಮಕ್ಕಳಿಗೂ ಇರುವುದು ಸಹಜ. ಅದಕ್ಕಾಗಿ ಕೇವಲ ವಿಶ್‌ ಮಾಡಿದರೆ ಸಾಲದು. ಕೆಲವು ವಿಶೇಷಗಳನ್ನೂ ಅವರಿಗಾಗಿ ಮಾಡಬೇಕು.
 

Make your mother feel special today
Author
Bangalore, First Published May 8, 2022, 12:55 PM IST

ಒಡಲ ಕುಡಿಗೆ ತನ್ನ ಉಸಿರು (Breathe), ರಕ್ತ (Blood) ನೀಡಿ ಪೊರೆದಾಕೆ ಅಮ್ಮ (Mother). ಜಗತ್ತಿನಲ್ಲಿ ನಂಬಬಹುದಾದ ಯಾವುದಾದರೊಂದು ಜೀವ ಇದ್ದರೆ ಅದು ಅಮ್ಮ ಒಬ್ಬರೇ. ಅಮ್ಮನ ಬಗ್ಗೆ ಹೇಳಿದಷ್ಟೂ ಮುಗಿಯುವುದಿಲ್ಲ. ಇಂಥ ಅಮ್ಮಂದಿರಿಗಾಗಿ ಇಂದು (ಮೇ 8) ಅಮ್ಮಂದಿರ ದಿನವನ್ನು ಆಚರಿಸಲಾಗುತ್ತಿದೆ. ಮಕ್ಕಳ (Children) ಪಾಲಿಗೆ ಪ್ರತಿದಿನವೂ ಅಮ್ಮನ ದಿನವೇ. ಅಮ್ಮನ ದಿನವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಆಚರಿಸಿ ಬಿಡುವಂಥದ್ದಲ್ಲ. ಆದರೂ ಈ ದಿನದ ನೆಪದಲ್ಲಿ ಅಮ್ಮನನ್ನು ಒಂದಿಷ್ಟು ಖುಷಿಪಡಿಸಲು ಸಾಧ್ಯವಾದರೆ ಅದಕ್ಕಿಂತ ದೊಡ್ಡದು ಬೇರೇನೂ ಇಲ್ಲ. 

ಹೊಸದಾಗಿ ಅಮ್ಮನಾದ ಯುವತಿ, ಮಧ್ಯವಯಸ್ಸಿನ (Middle Age) ಅಮ್ಮ, ಮೊಮ್ಮಕ್ಕಳನ್ನು ಕಂಡಿರುವ (Senior) ಅಮ್ಮ, ಒಂಟಿ (Single) ಅಮ್ಮ, ಕೌಟುಂಬಿಕ ದೌರ್ಜನ್ಯಗಳನ್ನು ಎದುರಿಸುತ್ತಿರುವ ಅಮ್ಮ, ಉದ್ಯೋಗಸ್ಥ (Workning) ಅಮ್ಮ…ಹೀಗೆ ಅಮ್ಮಂದಿರ ಪಾತ್ರದಲ್ಲಿ ಹಲವು ವಿಭಿನ್ನತೆಗಳಿವೆ. ಎಲ್ಲರಿಗೂ ಅವರದ್ದೇ ಆದ ಜವಾಬ್ದಾರಿಗಳು (Responsibility), ಸಂಕಟಗಳು, ಸಂಕಷ್ಟಗಳು (Problems). ಆದರೆ, ಯಾವುದೇ ಅಮ್ಮನಾದರೂ ಅಮ್ಮ ಅಮ್ಮನೇ. ಹೀಗಾಗಿ, ಆಕೆಗಾಗಿ ಈ ದಿನವನ್ನು ಮೀಸಲಿಡಿ. 

•    ಅಡುಗೆ ಮಾಡಿ (Cook for Her)
ಪ್ರತಿದಿನವೂ ಅಮ್ಮ ಮನೆಯವರಿಗಾಗಿ ಅಡುಗೆ ಮಾಡುವುದು ಇದ್ದಿದ್ದೇ. ಇವತ್ತೊಂದು ದಿನ ನೀವೇ ಅಡುಗೆ ಮಾಡಿ ಆಕೆಗೆ ಬಡಿಸಿ. ಅವಳಿಗೆ ಏನು ಇಷ್ಟವೋ ಅದನ್ನೇ ಮಾಡಿ. ಆಕೆ ಖುಷಿಪಡದಿದ್ದರೆ ಕೇಳಿ.

ಬಾಗಿಲು ಹಾಕ್ಕೊಂದು ಕೂತಿರ್ತಿದ್ದೆ, ಅಮ್ಮ ಬಗ್ಗಿ ನೋಡುತ್ತಿದ್ದರು: ಸೀತಾರಾಮ್

•    ಹರಟೆ ಹೊಡೆಯಿರಿ (Talk with Mother)
ಇಂದು ಹೇಗೂ ಭಾನುವಾರ. ಇವತ್ತೊಂದು ದಿನ ನಿಮ್ಮ ಇತರೆಲ್ಲ ಕೆಲಸ ಕಾರ್ಯ ಬದಿಗಿಟ್ಟು ಅಮ್ಮನ ಜತೆಗಿರಿ. ಅವಳೊಂದಿಗೆ ಮುಕ್ತವಾಗಿ ಮಾತಾಡಿ. ಹರಟೆ ಹೊಡೆದು ನಗುತ್ತಿರಿ. ಮಕ್ಕಳು ನಿರಾಳವಾಗಿ ಜತೆಗಿದ್ದರೆ ಅಮ್ಮನಿಗೆ ಸಖತ್‌ ಖುಷಿಯಾಗುವುದು ಗ್ಯಾರೆಂಟಿ. ಈ ದಿನ ಅಮ್ಮನ ಬಗ್ಗೆ ಯಾವುದೇ ವಿಚಾರಕ್ಕೆ ಅಸಮಾಧಾನವಾದರೂ ಬೈಯ್ಯಬೇಡಿ.

•    ಜತೆಯಾಗಿ ಸಿನಿಮಾ (Film) ನೋಡಿ 
ಈಗಂತೂ ಮನೆಯಲ್ಲೇ ಕುಳಿತುಕೊಂಡು ಸಿನಿಮಾ ವೀಕ್ಷಣೆ ಮಾಡಲು ಸಾಧ್ಯ. ಅಮ್ಮನಿಗೆ ಯಾವ ಸಿನಿಮಾ ಇಷ್ಟವೆಂದು ತಿಳಿದುಕೊಂಡು ಅದನ್ನು ನೋಡುವ ಅವಕಾಶ ಕಲ್ಪಿಸಿ. ಜತೆಗೆ ನೀವೂ ನೋಡಿ. ಥಿಯೇಟರ್‌ ಹೋದರೂ ಸರಿ. ಸ್ನೇಹಿತರ ಜತೆ ಸಿನಿಮಾ ನೋಡುವುದು ಯಾವಾಗಲೂ ಇದ್ದಿದ್ದೇ. ಈ ದಿನ ಅಮ್ಮನೊಂದಿಗೆ ಚಿತ್ರ ವೀಕ್ಷಿಸಿ.

•    ಅವರ ಸಲಹೆ (Suggestion) ಪಡೆಯಿರಿ
ಯಾವುದರೊಂದು ವಿಚಾರ ನಿಮ್ಮನ್ನು ಕೊರೆಯುತ್ತಿದ್ದರೆ ಅದನ್ನು ಇಂದು ಅಮ್ಮನೊಂದಿಗೆ ಹಂಚಿಕೊಳ್ಳಿ. ಅವರ ಸಲಹೆ ಪಡೆಯಿರಿ. ಅದನ್ನು ಪಾಲಿಸುತ್ತೀರೋ ಬಿಡುತ್ತೀರೋ ಮುಂದಿನ ಸಂದರ್ಭ ನೋಡಿ ನಿರ್ಧರಿಸಬಹುದು. ಅವರಿಂದ ಉತ್ತಮ ಸಲಹೆ ದೊರೆಯಲು ಸಾಧ್ಯ. ಸಮಸ್ಯೆಗಳ ಕುರಿತು ಅವರೊಂದಿಗೆ ಚರ್ಚಿಸಿ. ಇದರಿಂದಾಗಿ ಅವರೊಂದಿಗಿನ ಬಾಂಧವ್ಯ ಇನ್ನಷ್ಟು ಆಪ್ತವಾಗಲು ಸಾಧ್ಯ.

ಶೋ ಮಸ್ಟ್ ಗೋ ಆನ್ ಅನ್ನುತ್ತಿದ್ದ ಅಮ್ಮ: ಸುಧಾ ಬೆಳವಾಡಿ

•    ಅಮ್ಮನಿಗೆ ಯಾವುದಿಷ್ಟವೋ (Likings) ಅದನ್ನು ಮಾಡಿ
ನಮ್ಮಲ್ಲಿ ಎಷ್ಟು ಜನರಿಗೆ ಅಮ್ಮನಿಗೆ ಏನು ಇಷ್ಟ ಎನ್ನುವುದು ತಿಳಿದಿದೆ ಹೇಳಿ. ಇಂದು ಅವರಿಗೆ ಏನಿಷ್ಟವೋ ಅದನ್ನು ಕೇಳಿ. ಅದನ್ನು ಪೂರೈಸಲು ಯತ್ನಿಸಿ. ಅವರಿಗೆ ಇಷ್ಟವಾಗುವ ಅಡುಗೆ ಸೇರಿದಂತೆ ಸಂಗೀತ ಕೇಳುವುದು ಇಷ್ಟವಾಗಿದ್ದರೆ ಸಂಗೀತ ಕೇಳಿಸಿ. ಡಾನ್ಸ್‌ ಮಾಡಲು ಇಷ್ಟವೆಂದಾದರೆ ಅವರೊಂದಿಗೆ ಡಾನ್ಸ್‌ ಮಾಡಿ. ಹೋಟೆಲ್‌ ಗೆ ಹೋಗಲು ಇಷ್ಟಪಟ್ಟರೆ ಅದನ್ನೇ ಮಾಡಿ. ಹೊಸ ಡ್ರೆಸ್‌ ಖರೀದಿಸುವುದು ಇಷ್ಟವೆಂದಾದರೆ ಹೊಸ ಡ್ರೆಸ್‌ ಗಿಫ್ಟ್‌ ಮಾಡಿ. 

•    ಫ್ಯಾಮಿಲಿ ಆಲ್ಬಂ (Family Album) ಇರಲಿ
ಇಂದಿನ ದಿನದ ಫ್ಯಾಮಿಲಿ ಆಲ್ಬಂ ಮಾಡಿ. ಮೊಬೈಲ್‌ ನಲ್ಲೇ ಫೋಟೋಗಳಿರುವುದು ಸಹಜ. ಅದನ್ನು ಆಲ್ಬಂ ರೂಪಕ್ಕಿಳಿಸಿ. ಮೂರ್ನಾಲ್ಕು ಫೋಟೊವನ್ನಾದರೂ ಮಾಡಿಸಿ ಅಮ್ಮನಿಗೆ ನೀಡಿ.  
 

Follow Us:
Download App:
  • android
  • ios