ಅಬ್ಬಬ್ಬಾ ಈ ದಾದಿ ದಿನಕ್ಕೆ ಲಕ್ಷ ಸಂಪಾದಿಸ್ತಾರಂತೆ! ಮಾಡೋದೇನಪ್ಪಾ ಅಂಥದ್ದು?
ಮಕ್ಕಳನ್ನು ನೋಡಿಕೊಂಡ್ರೆ ಎಷ್ಟು ಹಣ ಸಿಗುತ್ತೆ ಮಹಾ..? ತಿಂಗಳಿಗೆ 10 – 12 ಸಾವಿರ ಸಿಕ್ಕಿದ್ರೆ ಹೆಚ್ಚು ಎನ್ನುವ ಭಾರತೀಯರು ಗ್ಲೋರಿಯಾ ಸಂಬಳ ಕೇಳಿ ಹೌಹಾರ್ತಾರೆ. ಯಾಕೆಂದ್ರೆ ಆಕೆ ಗಂಟೆಗೆ 13 ಸಾವಿರದ ಮೇಲೆ ಸಂಪಾದನೆ ಮಾಡ್ತಾಳೆ.

ಸಮಾಜದಲ್ಲಿ ಚಿಕ್ಕ ಅಥವಾ ದೊಡ್ಡ ಕೆಲಸ ಅಂತಾ ಯಾವುದೂ ಇಲ್ಲ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ರೆ ಅದ್ರಿಂದ ಸಿಗುವ ಲಾಭ ದುಪ್ಪಟ್ಟಾಗಿರುತ್ತದೆ. ಸಾಮಾನ್ಯವಾಗಿ ನಾವು ಇಂಜಿನಿಯರ್, ಡಾಕ್ಟರ್, ಸಂಶೋಧಕರು ಹೀಗೆ ಹೆಚ್ಚು ಸಂಬಳ ಬರುವ ಉದ್ಯೋಗವನ್ನು ದೊಡ್ಡ ಹುದ್ದೆ ಎಂದು ವಿಂಗಡಿಸುತ್ತೇವೆ. ಅದೇ ರೀತಿ ಕಡಿಮೆ ಸಂಬಳ ಸಿಗುವ ಹುದ್ದೆಯನ್ನು ಕೆಳಮಟ್ಟದಲ್ಲಿ ನೋಡ್ತೇವೆ. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ದಾದಿಯರ ಕೆಲಸ ಸಮಾಜದಲ್ಲಿ ಇನ್ನೂ ಕೆಳ ಹಂತದಲ್ಲೇ ಇದೆ. ಆದ್ರೆ ಈ ದಾದಿ ಸಂಬಳ ಕೇಳಿದ್ಮೇಲೆ ನಿಮ್ಮ ನಂಬಿಕೆ ಸುಳ್ಳಾಗಬಹುದು. ಹೆಚ್ಚಿಗೆ ಸಂಬಳ ಪಡೆಯುವ ದಾದಿಯರೂ ಇದ್ದಾರೆ ಎಂಬುದು ಮನದಟ್ಟಾಗಬಹುದು.
ಭಾರತ (India) ದಲ್ಲಿ ದಾದಿಯರ ಸಂಬಳ ಬಹಳ ಕಡಿಮೆ. ಶ್ರೀಮಂತ ವ್ಯಕ್ತಿಗಳ ಮನೆಯಲ್ಲಿ ಕೆಲಸ ಮಾಡುವ ದಾದಿಯರು ಮಾತ್ರ ತಕ್ಕಮಟ್ಟಿಗೆ ಸಂಬಳ ಪಡೆಯುತ್ತಾರೆ. ಆದ್ರೆ ಈ ದಾದಿ ಸಂಬಳ ಸಾವಿರದಲ್ಲಿಲ್ಲ. ಲಕ್ಷದಲ್ಲಿದೆ. ಎರಡು ತಿಂಗಳಷ್ಟೆ ಕೆಲಸ (Work) ಮಾಡಿದ್ರೂ ಪ್ರೈವೆಟ್ ಜೆಟ್ ನಲ್ಲಿ ಪ್ರಯಾಣ ಬೆಳೆಸ್ತಾಳೆ ಈ ದಾದಿ. ಆಕೆ ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ನೌಕದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆ ಹರಿಹರದ ಗಟ್ಟಿಗಿತ್ತಿ ಯುವತಿ!
ಈ ದಾದಿ ಅಂತಿಂತವಳಲ್ಲ : ದಿನಕ್ಕೆ ಲಕ್ಷ ಸಂಪಾದನೆ ಮಾಡುವ ಈ ದಾದಿ ಹೆಸರು ಗ್ಲೋರಿಯಾ ರಿಚರ್ಡ್ (Gloria Richard). ಗ್ಲೋರಿಯಾ ವಯಸ್ಸು ಕೇವಲ 34 ವರ್ಷ. ನ್ಯೂಯಾರ್ಕ್ ನಿವಾಸಿ ಗ್ಲೋರಿಯಾ, ಕೋಟ್ಯಾಧಿಪತಿಗಳ ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಕೋಟ್ಯಾಧಿಪತಿಗಳಲ್ಲದೆ ಕೆಲವೊಮ್ಮೆ ಸಾಮಾನ್ಯ ಜನರ ಮಕ್ಕಳನ್ನೂ ನೋಡಿಕೊಳ್ತೇನೆ ಎನ್ನುತ್ತಾಳೆ ಗ್ಲೋರಿಯಾ. ಈ ಕೆಲಸಕ್ಕೆ ಆಕೆ ಗಂಟೆಯ ಲೆಕ್ಕದಲ್ಲಿ ಹಣ ಪಡೆಯುತ್ತಾಳೆ.
ತಿಂಗಳಿಗೆ ಗ್ಲೋರಿಯಾ ಸಂಬಳ ಎಷ್ಟು ಗೊತ್ತಾ? : ಗ್ಲೋರಿಯಾ ಒಂದು ಗಂಟೆ ಮಕ್ಕಳನ್ನು ನೋಡಿಕೊಂಡ್ರೆ ಸುಮಾರು 167 ಡಾಲರ್ ಪಡೆಯುತ್ತಾಳೆ. ಅಂದ್ರೆ ಸುಮಾರು 13.8 ಸಾವಿರ ರೂಪಾಯಿಯಾಗುತ್ತದೆ. ಆಕೆ ದಿನದಲ್ಲಿ 12 ರಿಂದ 15 ಗಂಟೆ ನಿರಂತರ ಕೆಲಸ ಮಾಡುತ್ತಾಳೆ. ಅಂದ್ರೆ ದಿನಕ್ಕೆ ಸುಮಾರು 2000 ಡಾಲರ್, ರೂಪಾಯಿಯಲ್ಲಿ ಸುಮಾರು 1.6 ಲಕ್ಷ ರೂಪಾಯಿ ಸಂಪಾದನೆ ಮಾಡಿದಂತಾಯ್ತು. ಎರಡು ತಿಂಗಳಿಗೆ ಎಷ್ಟಾಯ್ತು ಅನ್ನೋದನ್ನು ನೀವೇ ಲೆಕ್ಕ ಮಾಡ್ಕೊಳ್ಳಿ.
ಮಹಿಳೆಯರು ಚಿತ್ರ, ವಿಚಿತ್ರವಾಡಿದರೆ ಮೆಂಟಲ್ ಹೆಲ್ತ್ ಸಮಸ್ಯೆ, ಭೂತದ ಕಾಟವಲ್ಲ!
ಗ್ಲೋರಿಯಾ ಕೆಲಸ ಹೇಳಿದಷ್ಟು ಸುಲಭವಲ್ಲ : ಮಕ್ಕಳನ್ನು ನೋಡಿಕೊಳ್ಳುವ ದಾದಿಯರ ಕೆಲಸ ಸುಲಭ ಅಲ್ಲವೇ ಅಲ್ಲ. ಅದ್ರಲ್ಲೂ ಗ್ಲೋರಿಯಾ ಕೆಲಸ ಮತ್ತಷ್ಟು ಕಠಿಣ. ಯಾಕೆಂದ್ರೆ ಗ್ಲೋರಿಯಾ, ಸಾಮಾನ್ಯ ಮಕ್ಕಳ ಆರೈಕೆ ಮಾಡೋದಿಲ್ಲ. ನ್ಯೂರೋ ಡೈವರ್ಜೆಂಟ್ ಮಕ್ಕಳನ್ನು ಮಾತ್ರ ನೋಡಿಕೊಳ್ಳುತ್ತಾರೆ. ಅಂದ್ರೆ ಈ ಮಕ್ಕಳ ಬುದ್ಧಿ ಬೆಳವಣಿಗೆ ತುಂಬಾ ನಿಧಾನವಾಗಿ ಆಗುತ್ತದೆ. ಈ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಆದ್ರೂ ನನಗೆ ಇಷ್ಟ ಎನ್ನುತ್ತಾಳೆ ಗ್ಲೋರಿಯಾ. ಗ್ಲೋರಿಯಾ ವರ್ಷದಲ್ಲಿ ಬರೀ ಎರಡು ತಿಂಗಳು ಮಾತ್ರ ಕೆಲಸ ಮಾಡ್ತಾಳಂತೆ. ಉಳಿದ 10 ತಿಂಗಳು ಖಾಲಿ ಇರ್ತಾಳಂತೆ. ಅನೇಕ ಮನೆಗಳಲ್ಲಿ ಸಂದರ್ಶನ ನೀಡಿರುವ ಗ್ಲೋರಿಯಾ ದಿನದಲ್ಲಿ ಸುಮಾರು 10 ಮನೆಯ ಮಕ್ಕಳನ್ನು ನೋಡಿಕೊಳ್ತಾಳೆ. ಶಾಲೆಯಿಂದ ಬಂದ ಮಕ್ಕಳನ್ನು ನೋಡಿಕೊಳ್ಳುವಂತೆ ಕೆಲ ಪಾಲಕರು ಆಕೆಗೆ ಹೇಳ್ತಾರಂತೆ. ಅನೇಕ ಪಾಲಕರನ್ನು ಆಕೆ ಇನ್ನೂ ಭೇಟಿಯೇ ಆಗಿಲ್ಲವಂತೆ.
ಗ್ಲೋರಿಯಾಗೆ ಸಿಗುತ್ತೆ ಈ ಎಲ್ಲ ಸೌಲಭ್ಯ : ಕೋಟ್ಯಾಧಿಪತಿಗಳ ಮಕ್ಕಳನ್ನು ನೋಡಿಕೊಳ್ಳುವ ಗ್ಲೋರಿಯಾ ಬರೀ ಲಕ್ಷಾಂತರ ರೂಪಾಯಿ ಸಂಬಳ ಮಾತ್ರ ಪಡೆಯೋದಿಲ್ಲ. ಆಕೆಗೆ ಇನ್ನೂ ಕೆಲ ಸೌಲಭ್ಯಗಳು ಸಿಗುತ್ತವೆ. ಖಾಸಗಿ ಜೆಟ್‌ಗಳಲ್ಲಿ ಪ್ರಯಾಣಿಸುವುದರಿಂದ ಹಿಡಿದು ಐಷಾರಾಮಿ ಪ್ರಯಾಣದವರೆಗೆ ಅನೇಕ ಸೌಲಭ್ಯ ಸಿಗುತ್ತದೆ. ಇದು ಆಕೆಗೆ ಮೋಜು ನೀಡುತ್ತದೆಯಂತೆ.