Asianet Suvarna News Asianet Suvarna News

ಮಹಿಳೆಯರು ಚಿತ್ರ, ವಿಚಿತ್ರವಾಡಿದರೆ ಮೆಂಟಲ್ ಹೆಲ್ತ್ ಸಮಸ್ಯೆ, ಭೂತದ ಕಾಟವಲ್ಲ!

ಚಿತ್ರವಿಚಿತ್ರವಾಗಿ ಕಿರುಚುತ್ತಿದ್ರೆ, ಮಧ್ಯರಾತ್ರಿ ಕೂಗಾಟ ಜೋರಾಗಿದ್ರೆ ವೈದ್ಯರ ಬಳಿ ಕರೆದೊಯ್ಯುವ ಬದಲು ಭೂತ ಬಿಡಿಸುವವರ ಬಳಿ ಓಡ್ತೇವೆ. ಮಹಿಳೆಯನ್ನು ಹೆಚ್ಚಾಗಿ ಕಾಡುವ ಇದು ಭೂತಕಾಟವಲ್ಲ. ಒಂದು ರೀತಿ ರೋಗ. 
 

What Is Hysteria And Its Symptoms And How Can We Treat This Disease
Author
First Published May 31, 2023, 3:53 PM IST

ಇಡೀ ದಿನ ಗೊಣಕ್ತಿದ್ದರೆ, ಕಿರುಚಾಡುತ್ತಿದ್ದರೆ, ಆಗಾಗ ಮೂರ್ಛೆ ಹೋಗ್ತಿದ್ದರೆ, ಮೈ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡ್ರೆ ಜನರು ಆಕೆಗ ಭೂತ ಹಿಡಿದಿದೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಮಾಟ – ಮಂತ್ರ, ಪೂಜೆಯನ್ನು ಮಾಡಿ, ಸೊಪ್ಪು, ಬೇರಿನ ಸಹಾಯದಿಂದ ಇದನ್ನು ಹೋಗಲಾಡಿಸುವ ಪ್ರಯತ್ನ ನಡೆಯುತ್ತಿತ್ತು. ಈಗ್ಲೂ ಮಹಿಳೆ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ರೆ ಆಕೆ ಮೈಮೇಲೆ ಭೂತ ಬರುತ್ತೆ ಎಂದೇ ಭಾವಿಸುವವರಿದ್ದಾರೆ. ವಾಸ್ತವವಾಗಿ ಅದು ಭೂತ, ಪಿಶಾಚಿ ಕಾಟವಲ್ಲ. ಅದು ಹಿಸ್ಟೀರಿಯಾದ ಲಕ್ಷಣ. ನಾವಿಂದು ಹಿಸ್ಟೀರಿಯಾ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಹಿಸ್ಟೀರಿಯಾ (Hysteria) ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದೆ. ಹಿಸ್ಟೀರಿಯಾ ಹೆಚ್ಚಾಗಿ ಮಹಿಳೆ ಹಾಗೂ ಹುಡುಗಿಯರಲ್ಲಿ ಕಂಡು ಬರುತ್ತದೆ. ಹಾಗಂತ ಪುರುಷರನ್ನು ಕಾಡೋದಿಲ್ಲ ಎಂದಲ್ಲ. ಆರಂಭದಲ್ಲಿ ಇದು ಮಹಿಳೆಯರಿಗೆ ಸೀಮಿತವಾಗಿದೆ ಎಂದು ಭಾವಿಸಲಾಗಿತ್ತು. ಈ ರೋಗ (Disease) ವನ್ನು ಪ್ರಾಚೀನ ಈಜಿಪ್ಟಿನವರು ಸ್ವಾಭಾವಿಕ ಗರ್ಭಾಶಯದ ಚಲನೆ ಎಂದು ವಿವರಿಸಿದ್ದರು. ಅಂಗರಚನಾಶಾಸ್ತ್ರಜ್ಞ ಥಾಮಸ್ ವೈಲ್ಸ್ 1600 ರ ದಶಕದಲ್ಲಿ ಹಿಸ್ಟೀರಿಯಾ ಮಹಿಳೆಯರಿಗೆ ಮಾತ್ರ  ಸೀಮಿತವಾಗಿದೆ ಎಂಬ ಕಲ್ಪನೆಯನ್ನು ಕಿತ್ತೆಸೆದರು. ಹಿಸ್ಟೀರಿಯಾ  ಗರ್ಭಾಶಯದಲ್ಲಿ ಹುಟ್ಟುವ ರೋಗವಲ್ಲ, ಮೆದುಳಿನಲ್ಲಿ ಎಂದು ಅವರು ದೃಢಪಡಿಸಿದರು. ಇದಾದ್ಮೇಲೆ ಹಿಸ್ಟೀರಿಯಾ ಪುರುಷರನ್ನೂ ಕಾಡುತ್ತದೆ ಎಂಬ ಅರಿವು ಜನರಲ್ಲಿ ಮೂಡಿತು.

Stress and Happiness: ಒತ್ತಡವನ್ನು ಖುಷಿಯನ್ನಾಗಿ ಬದಲಿಸಿಕೊಳ್ಳಿ!

ಹಿಸ್ಟೀರಿಯಾ ಒಂದು ಗಂಭೀರ ಮಾನಸಿಕ ಸಮಸ್ಯೆಯಾಗಿದೆ. ನರವೈಜ್ಞಾನಿಕ ಸ್ಥಿತಿಯಾಗಿದೆ. ಮಾನಸಿಕ ಮತ್ತು ನರಗಳ ಅಸ್ವಸ್ಥತೆಯಿಂದ ಈ ಸಮಸ್ಯೆ ಉದ್ಭವಿಸಬಹುದು. ಹಿಸ್ಟೀರಿಯಾದಿಂದ ಬಳಲುತ್ತಿರುವ ವ್ಯಕ್ತಿ ವಿಚಿತ್ರವಾದ ಭ್ರಮೆಯಲ್ಲಿ ಇರುತ್ತಾನೆ. ಪದೇ ಪದೇ ಮೂರ್ಛೆ ಹೋಗುತ್ತಾನೆ.  ಆತಯನಿಗೆ ಉಸಿರುಗಟ್ಟಿಸಿ ಅನುಭವವಾಗುತ್ತದೆ.  ಮಹಿಳೆ ಹಾಗೂ ಪುರುಷರಲ್ಲಿ ರೋಗ ಲಕ್ಷಣಗಳು ಭಿನ್ನವಾಗಿರುತ್ತವೆ. ಮನಸ್ಥಿತಿ ಬದಲಾದಂತೆ ಅವರ ಕೂಗಾಡ, ಗೊಣಗುವಿಕೆ ಕೂಡ ಬದಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಹಿಸ್ಟೀರಿಯಾಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. 20 ನೇ ಶತಮಾನದವರೆಗೆ ಭಾರತದಲ್ಲಿ ಇದಕ್ಕೆ ಭೂತೋಚ್ಚಾಟನೆ ಮತ್ತು ವಾಮಾಚಾರದೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.  

ಹಿಸ್ಟೀರಿಯಾದ ಲಕ್ಷಣಗಳು : ಹಿಸ್ಟೀರಿಯಾ ರೋಗಕ್ಕೆ ತುತ್ತಾದ ವ್ಯಕ್ತಿಗಳು ಸದಾ ದಣಿದ ಭಾವನೆಯಲ್ಲಿರುತ್ತಾರೆ. ತಲೆತಿರುಗುವಿಕೆ ಮತ್ತು ಮೂರ್ಛೆ ಸಾಮಾನ್ಯವಾಗಿರುತ್ತದೆ. ಅತಿ ಹೆಚ್ಚು ಒತ್ತಡದಿಂದ ಅವರು ಬಳಲುತ್ತಾರೆ. ಹಿಸ್ಟೀರಿಯಾ ರೋಗ ಲಕ್ಷಣದಲ್ಲಿ ತಲೆನೋವು ಕೂಡ ಸೇರಿದೆ. ಉಸಿರಾಟದ ಸಮಸ್ಯೆಯನ್ನು ರೋಗಿಗಳು ಎದುರಿಸುತ್ತಾರೆ. ದೇಹದ ಎಲ್ಲ ಭಾಗದಲ್ಲಿ ವಿಪರೀತ ನೋವಿರುತ್ತದೆ.

Mental Health: ಮಾನಸಿಕ ಸಮಸ್ಯೆ ಇರೋರ ಬಳಿ ಏನೆಲ್ಲ ಮಾತಾಡ್ಬಾರ್ದು ಗೊತ್ತಾ?

ಹಿಸ್ಟೀರಿಯಾಕ್ಕೆ ಕಾರಣ : ಮಾನಸಿಕ ಅಸ್ವತ್ಥತೆಯ ಈ ರೋಗಕ್ಕೆ ಅನೇಕ ಕಾರಣವಿದೆ. ಖಿನ್ನತೆ, ಫೋಬಿಯಾ,ಆತಂಕ ಅಥವಾ ಒತ್ತಡ, ಹೆಚ್ಚು ಸೋಮಾರಿತನ ಕೂಡ  ಈ ರೋಗಕ್ಕೆ ಕಾರಣವಾಗುತ್ತದೆ.

ಹಿಸ್ಟೀರಿಯಾ ರೋಗಕ್ಕೆ ಮನೆ ಮದ್ದು (Home Remedy) : ಹಿಸ್ಟೀರಿಯಾ ರೋಗದ ಲಕ್ಷಣ ಆರಂಭದಲ್ಲಿರುವಾಗ್ಲೇ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅಲ್ಲದೆ ಮನೆಯಲ್ಲಿ ಕೆಲ ಪರಿಹಾರಗಳನ್ನು ಮಾಡಿಕೊಳ್ಳಬೇಕು. ಪ್ರತಿದಿನ ಒಂದು ಚಮಚ ಜೇನುತುಪ್ಪವನ್ನು ಸೇವನೆ ಮಾಡಬೇಕು.  ಪ್ರತಿದಿನ ಹಣ್ಣುಗಳನ್ನು ತಿನ್ನಬೇಕಾಗುತ್ತದೆ. ಅಲ್ಲದೆ  ತಾಜಾ ಬಾಳೆ ಕಾಂಡದ ರಸವನ್ನು ಕುಡಿಯುವುದ್ರಿಂದಲೂ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ನೀವು ಹುರಿದ ಇಂಗು-ಜೀರಿಗೆಯನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿತಾ ಬಂದ್ರೆ ನಿಮ್ಮ ಸಮಸ್ಯೆ ನಿಧಾನವಾಗಿ ಗುಣವಾಗುತ್ತದೆ. ಇದಲ್ಲದೆ ಹೀಸ್ಟಿರಿಯಾ ರೋಗಿಗೆ ಸಂಪೂರ್ಣ ಪೌಷ್ಟಿಕಾಂಶವನ್ನು ನೀಡಬೇಕು.  ವಿಟಮಿನ್ ಸಿ ಸಮೃದ್ಧವಾಗಿರುವ ದ್ರಾಕ್ಷಿ, ಕಿತ್ತಳೆ, ಅನಾನಸ್ ಮತ್ತು ಪಪ್ಪಾಯಿಯಂತಹ ಹಣ್ಣುಗಳನ್ನು ನೀಡಬೇಕು. ಪದೇ ಪದೇ ಹಿಸ್ಟೀರಿಯಾ ಕಾಡ್ತಿದೆ ಎನ್ನುವವರು ಒಂದು ತಿಂಗಳುಗಳ ಕಾಲ ಡೈರಿ ಡಯಟ್ ಮಾಡ್ಬೇಕು. ಈ ಸಮಸ್ಯೆಯಿಂದ ಹೊರಬರಲು ನಿದ್ರೆ ಹಾಗೂ ನಿಯಮಿತ ವ್ಯಾಯಾಮ ಮುಖ್ಯವಾಗುತ್ತದೆ.

Follow Us:
Download App:
  • android
  • ios