ಅಬ್ಬಬ್ಬಾ..ಈತನಿಗಿದೆ ಬರೋಬ್ಬರಿ 4 ಅಡಿ ಉದ್ದದ ಕೂದಲು; ವಿಶ್ವ ದಾಖಲೆಗೆ ಸೇರ್ಪಡೆ
ತಲೆಗೂದಲು ಸಾಮಾನ್ಯವಾಗಿ ಭುಜದ ವರೆಗೆ, ಕೆಲವೊಬ್ಬರಿಗೆ ಸೊಂಟದ ವರೆಗೆ ಉದ್ದವಿರುತ್ತದೆ. ಆದ್ರೆ ಇವರ ಕೂದಲು ಬರೋಬ್ಬರಿ 146 ಸೆಂ.ಮೀ (4 ಅಡಿ 9.5 ಇಂಚು) ಉದ್ದವಿದೆ. ವಿಶ್ವ ದಾಖಲೆಗೂ ಪಾತ್ರವಾಗಿದೆ. ಹೀಗೆ ಉದ್ದ ಕೂದಲಿನಿಂದ ವರ್ಲ್ಡ್ ರೆಕಾರ್ಡ್ ಮಾಡಿರೋದು ಹುಡುಗಿ ಅಲ್ಲ ಹುಡುಗ ಅನ್ನೋದು ಅಚ್ಚರಿಯ ವಿಷಯ.

ಭಾರತದ ಉತ್ತರ ಪ್ರದೇಶದ 15 ವರ್ಷ ವಯಸ್ಸಿನ ಹುಡುಗ ವಿಶ್ವದಲ್ಲಿ ಅತೀ ಉದ್ದದ ಕೂದಲನ್ನು ಹೊಂದಿದ್ದಾನೆ. ಈತನ ಹೆಸರು ವಿಶ್ವ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಈತನ ಹೆಸರು ಸಿಡಾಕ್. ಕೂದಲು ಬರೋಬ್ಬರಿ 146 ಸೆಂ.ಮೀ (4 ಅಡಿ 9.5 ಇಂಚು) ಉದ್ದವಿದೆ. ಅತಿ ಉದ್ದದ ಕೂದಲಿರುವ ಹುಡುಗ ಎಂದು ಈತ ಹೆಸರು ಮಾಡಿದ್ದಾನೆ. ಮಾತ್ರವಲ್ಲ ವರ್ಲ್ಡ್ ರೆಕಾರ್ಡ್‌ನಲ್ಲಿ ಈತನ ಹೆಸರು ದಾಖಲಾಗಿದೆ. ಆದರೆ ಹೀಗೆ ಕೂದಲನ್ನು ಬೆಳೆಸುವುದು ಸಿಡಾಕ್ ಪಾಲಿಗೆ ಸುಲಭದ ಕೆಲಸವಾಗಿಲ್ಲ.
ಸಿಡಾಕ್ ತನ್ನ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುತ್ತಾನೆ. ಪ್ರತಿ ಬಾರಿ ಕನಿಷ್ಠ ಒಂದು ಗಂಟೆಯನ್ನು ತೊಳೆಯಲು ಮತ್ತು ಒಣಗಿಸಲು ಮೀಸಲಿಡುತ್ತಾನೆ. 'ನನ್ನ ತಾಯಿಯ ಸಹಾಯವಿಲ್ಲದಿದ್ದರೆ ಕೂದಲು (Hair) ತೊಳೆಯಲು ಇಡೀ ದಿನ ಬೇಕಾಗುತ್ತದೆ' ಎಂದು ಸಿಡಾಕ್ ಹೇಳುತ್ತಾನೆ. ಸಿಡಾಕ್ ತನ್ನ ಕೂದಲನ್ನು ಒಂದು ನಂಬಿಕೆಯ ಆಧಾರದ ಮೇಲೆ ಬೆಳೆಸುತ್ತಿದ್ದಾನೆ. ಏಕೆಂದರೆ ಅವನು ಸಿಖ್. ಧರ್ಮದ ಮೂಲ ತತ್ವಗಳಲ್ಲಿ ಒಂದಾದ ಕೂದಲನ್ನು ಎಂದಿಗೂ ಕತ್ತರಿಸಬಾರದು. ಏಕೆಂದರೆ ಅದು ದೇವರ ಕೊಡುಗೆಯಾಗಿದೆ ಎಂಬ ಮಾತನ್ನು ನಂಬುತ್ತಾನೆ.
ಚೆಂದದ ಕೂದಲು ನಿಮ್ಮದಾಗಬೇಕಾ? ಏನೇನೋ ಟ್ರೈ ಮಾಡೋ ಬದಲು ಇಲ್ಲಿವೆ ಈಸಿ ಟಿಪ್ಸ್
ಚಿಕ್ಕವರಿದ್ದಾಗ ಕೂದಲನ್ನು ದ್ವೇಷಿಸುತ್ತಿದ್ದ ಸಿಡಾಕ್
ಸಿಡಾಕ್ ಕೂದಲನ್ನು ಬನ್‌ನಂತೆ ರೂಪಿಸಿ, ಸಿಖ್ಖರ ಪದ್ಧತಿಯಂತೆ ದಸ್ತಾರ್‌ನಿಂದ ಮುಚ್ಚುತ್ತಾನೆ. ಸಿಡಾಕ್ ಅವರ ಕುಟುಂಬ ಮತ್ತು ಅವರ ಅನೇಕ ಸ್ನೇಹಿತರು ಯಾರೂ ಅವನಷ್ಟು ಉದ್ದವಾದ ಕೂದಲನ್ನು ಹೊಂದಿಲ್ಲ. 'ನನ್ನ ಅನೇಕ ಸಂಬಂಧಿಕರು ನನ್ನ ಕೂದಲನ್ನು ನೋಡಿ ಅಚ್ಚರಿಪಡುತ್ತಾರೆ' ಎಂದು ಸಿಡಾಕ್ ಹೇಳುತ್ತಾನೆ. ಕೂದಲು ವಿಶ್ವ ದಾಖಲೆಯನ್ನು (World record) ನಿರ್ಮಿಸಿದೆ ಎಂದು ಸಿಡಾಕ್ ಅವರಿಗೆ ಹೇಳಿದಾಗ, ಅವರಲ್ಲಿ ಕೆಲವರು ಅಪನಂಬಿಕೆಗೆ ಒಳಗಾಗಿದ್ದರು: 'ಬಹುತೇಕರು ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸಿದ್ದರು ಮತ್ತು ಅವರಿಗೆ ಮನವರಿಕೆ ಮಾಡಲು ಕಷ್ಟವಾಯಿತು' ಎಂದು ಅವರು ಹೇಳಿದ್ದಾರೆ.
ಬಾಲ್ಯದ ವರ್ಷಗಳಲ್ಲಿ, ಸಿಡಾಕ್ ತನ್ನ ಕೂದಲನ್ನು ಒಣಗಿಸಲು ಮನೆಯ ಹೊರಗಡೆ ಬರುತ್ತಿದ್ದಾಗ ಅವನ ಸ್ನೇಹಿತರು ಕೀಟಲೆ ಮಾಡುತ್ತಿದ್ದರು. 'ನನ್ನ ಕೂದಲನ್ನು ತಮಾಷೆ ಮಾಡಿರುವುದು ನನಗೆ ಇಷ್ಟವಾಗುತ್ತಿರಲ್ಲಿಲ್ಲ' ಎಂದು ಸಿಡಾಕ್ ನೆನಪಿಸಿಕೊಳ್ಳುತ್ತಾರೆ. ತಾನು ದೊಡ್ಡವನಾದಾಗ ಅದನ್ನು ಕತ್ತರಿಸುತ್ತೇನೆ ಎಂದು ಸಿಡಾಕ್ ಸ್ವತಃ ಹೇಳಿಕೊಂಡಿದ್ದರು. ಆದರೆ ದೊಡ್ಡವನಾಗುತ್ತಾ ಹೋದಂತೆ ನನಗೆ ನನ್ನ ಕೂದಲಿನ ಮೇಲೆ ಪ್ರೀತಿ ಬೆಳೆಯಿತು. ನಾನು ಅದನ್ನು ತನ್ನ ಗುರುತಿನ ಭಾಗವೆಂದು ಪರಿಗಣಿಸುತ್ತಾನೆ ಎಂದು ಸಿಡಾಕ್ ಹೇಳುತ್ತಾರೆ.
ಉದ್ದ ಕೂದಲಿನ ಜೊತೆ ಈ ಗುಣಗಳು ಹೆಣ್ಣಿನಲ್ಲಿದ್ದರೆ ಗಂಡಿಗಿಷ್ಟ!
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2024 ಪುಸ್ತಕದಲ್ಲಿ ಸಿಡಾಕ್ ಹೆಸರು ಸೇರ್ಪಡೆಯಾಗಲಿದೆ. ಹದಿಹರೆಯದವರಲ್ಲಿ ಇದುವರೆಗೆ ಉದ್ದನೆಯ ಕೂದಲು ಬೆಳೆಸಿದವರು ಭಾರತೀಯ ನೀಲಾಂಶಿ ಪಟೇಲ್. ಇದು 200 ಸೆಂ (6 ಅಡಿ 6 ಇಂಚು) ಆಗಿತ್ತು. ಅವಳು ಅಂತಿಮವಾಗಿ 2021ರಲ್ಲಿ ತನ್ನ ಕೂದಲನ್ನು ಕತ್ತರಿಸಿ, ಅದನ್ನು ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದಳು. ಜೀವಂತ ಮನುಷ್ಯನ ಮೇಲೆ ಉದ್ದನೆಯ ಕೂದಲಿನ ದಾಖಲೆಗೆ ಪ್ರಸ್ತುತ ಯಾವುದೇ ಹೋಲ್ಡರ್ ಇಲ್ಲ.ಸಿಡಾಕ್ ಅವರು 18 ವರ್ಷ ತುಂಬಿದ ನಂತರ ಪ್ರಶಸ್ತಿಯನ್ನು ಪಡೆಯಬೇಕಾಗಿದೆ.