ಚೆಂದದ ಕೂದಲು ನಿಮ್ಮದಾಗಬೇಕಾ? ಏನೇನೋ ಟ್ರೈ ಮಾಡೋ ಬದಲು ಇಲ್ಲಿವೆ ಈಸಿ ಟಿಪ್ಸ್
ಕೂದಲು ನಮ್ಮ ಆರೋಗ್ಯ ಹಾಗೂ ಸೌಂದರ್ಯ ಎರಡಲ್ಲೂ ಮುಖ್ಯ. ಉದ್ದವಾದ, ದಟ್ಟವಾದ, ಕಪ್ಪು ಕೂದಲನ್ನು ಎಲ್ಲರೂ ಬಯಸ್ತಾರೆ. ಆದ್ರೆ ಇದು ಈಗಿನ ಸಮಯದಲ್ಲಿ ಇದು ಕನಸಿನ ಮಾತಾಗಿದೆ ಅಂತಿದ್ರೆ ಈ ಉಪಾಯ ಫಾಲೋ ಮಾಡಿ.
ದೇಹದ ಇತರ ಭಾಗದಲ್ಲಿ ಬೆಳೆಯುಷ್ಟು ವೇಗವಾಗಿ ತಲೆ ಕೂದಲು ಬೆಳೆಯೋದಿಲ್ಲ. ನಾಲ್ಕು ದಿನಕ್ಕೆ ಐಬ್ರೋ ಬಂದ್ಬಿಡುತ್ತೆ. ಇಲ್ಲಿ ಬರೋ ಬದಲು ತಲೆ ಮೇಲೆ ಕೂದಲು ಹುಟ್ಟಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಂದುಕೊಳ್ತೇವೆ. ಆದ್ರೆ ತಲೆ ಕೂದಲು ಮಾತ್ರ ವೇಗವಾಗಿ ಬೆಳೆಯೋದೇ ಇಲ್ಲ. ಮಾರುಕಟ್ಟೆಯಲ್ಲಿರುವ ದುಬಾರಿ ಶಾಂಪೂ, ಆಯಿಲ್ ಬಳಸಿದ್ರೂ ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುವ ಕನಸು ನನಸಾಗೋದಿಲ್ಲ. ತಲೆ ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ತಜ್ಞರು ಹೇಳಿದ್ದಾರೆ.
ತಜ್ಞರ ಪ್ರಕಾರ, ಜಾಹೀರಾತಿ (Advertisement) ನಲ್ಲಿ ತೋರಿಸಿದಂತೆ ದಟ್ ಅಂತಾ ನಮ್ಮ ಕೂದಲು (Hair) ಬೆಳೆಯೋಕೆ ಸಾಧ್ಯವೇ ಇಲ್ಲ. ಹಾಗೆ ಎಲ್ಲ ಮನೆ ಮದ್ದುಗಳು ಎಲ್ಲರಿಗೂ ಪರಿಣಾಮಕಾರಿಯಾಗುತ್ತೆ ಎನ್ನಲೂ ಸಾಧ್ಯವಿಲ್ಲ. ನಮ್ಮ ಜೀವನಶೈಲಿ, ನಾವಿರುವ ವಾತಾವರಣ, ನಾವು ಸೇವಿಸುವ ಆಹಾರ, ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಇವೆಲ್ಲವೂ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಕೂದಲು ಬೆಳವಣಿಗೆಗೆ ಇದ್ರಲ್ಲಿ ಯಾವುದು ಅಡ್ಡಯಾಗ್ತಿದೆ ಎಂಬುದನ್ನು ಪತ್ತೆ ಮಾಡೋದು ಮುಖ್ಯವಾಗುತ್ತದೆ. ನಾವಿಂದು ಕೂದಲ ಬೆಳವಣಿಗೆಗೆ ನಾವು ಏನೆಲ್ಲ ಮಾಡ್ಬಹುದು ಎಂಬುದನ್ನು ನಿಮಗೆ ಹೇಳ್ತೇವೆ.
ಈ ಬ್ಯೂಟಿ ಟ್ರಿಕ್ಸ್ ಬಳಸಿ ಲವ್ ಬೈಟ್ ಕಾಣದಂತೆ ಮಾಡಿ…
ಕೂದಲು ಎಷ್ಟು ನಿಧಾನವಾಗಿ ಬೆಳೆಯುತ್ತೆ ಗೊತ್ತಾ? : ನಿಮಗೆ ಅಚ್ಚರಿಯಾಗ್ಬಹುದು. ನಮ್ಮ ತಲೆ ಕೂದಲಿನ ಬೆಳವಣಿಗೆ ಬಹಳ ನಿಧಾನ. ತಲೆ ಕೂದಲು ತಿಂಗಳಿಗೆ ಅರ್ಧ ಇಂಚು ಅಂದ್ರೆ ಸುಮಾರು 1.3 ಸೆಂ.ಮೀಟರ್ ಮಾತ್ರ ಬೆಳೆಯುತ್ತದೆ. ಕೂದಲು ದಪ್ಪವಾಗಿ ಹಾಗೂ ವೇಗವಾಗಿ ಬೆಳೆಯಲು ವೈದ್ಯಕೀಯ ಶಾಸ್ತ್ರದಲ್ಲಿ ಒಂದೇ ಒಂದು ಮಾರ್ಗವಿದೆ. ಅದು ಮಿನೊಕ್ಸಿಡಿಲ್ (Minoxidil) ಮಾತ್ರೆ. ಆದ್ರೆ ಇದನ್ನು ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೂದಲು ನಷ್ಟದ ಚಿಕಿತ್ಸೆಗಾಗಿ ಮಾತ್ರ ಬಳಸಲಾಗುತ್ತದೆ.
ಕೂದಲು ಉದುರಲು ಕಾರಣವೇನು ಗೊತ್ತಾ? : ಕೂದಲು ಉದುರಲು ಅನೇಕ ಕಾರಣವಿದೆ. ಧೂಮಪಾನ, ಆಲ್ಕೋಹಾಲ್ ಮತ್ತು ಹೆಚ್ಚಿನ ಸಕ್ಕರೆಯುಕ್ತ ಆಹಾರ ಸೇವನೆ ಕೂಡ ಇದಕ್ಕೆ ಕಾರಣ. ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡದೆ ಹೋದಾಗ ಕೂದಲಿಗೆ ಅಗತ್ಯವಿರುವ ಪೋಷಕಾಂಶ ಲಭ್ಯವಾಗೋದಿಲ್ಲ. ಇದ್ರಿಂದ ಕೂದಲು ಅತಿಯಾಗಿ ಉದುರುತ್ತದೆ ಎನ್ನುತ್ತಾರೆ ತಜ್ಞರು. ನೀವು ಕೂದಲನ್ನು ಹೇಗೆ ಕಟ್ಟುತ್ತೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಬಿಗಿಯಾಗಿ ಕಟ್ಟಿದ್ರೆ ಕೂದಲು ಮುರಿಯಲು ಕಾರಣವಾಗುತ್ತದೆ.
ಕೂದಲು ವೇಗವಾಗಿ ಬೆಳೆಯಬೇಕೆಂದ್ರೆ ಏನು ಮಾಡ್ಬೇಕು? : ಆರೋಗ್ಯವಂತ ವ್ಯಕ್ತಿ ಕೂದಲು ಆರೋಗ್ಯವಾಗಿರುತ್ತದೆ. ಹಾಗಾಗಿ ಕೂದಲ ಆರೈಕೆಗೆ ದುಬಾರಿ ಉತ್ಪನ್ನಗಳನ್ನು ಹುಡುಕುವ ಬದಲು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.
ಸಮತೋಲಿತ ಆಹಾರ (Balanced Food) : ಕೂದಲ ಶೇಕಡಾ 97ರಷ್ಟು ಬೆಳವಣಿಗೆ ಪ್ರೋಟೀನ್ ಅವಲಂಭಿಸಿದೆ. ಮೀನು, ಹಣ್ಣು ಮತ್ತು ತರಕಾರಿಗಳಲ್ಲಿ ಕಂಡುಬರುವ ಒಮೆಗಾ 3 ಕೊಬ್ಬಿನಾಮ್ಲಗಳನ್ನು ನಿಯಮಿತ ಪ್ರಮಾಣದ ಸೇವನೆ ಮಾಡಬೇಕು. ಜೊತೆಗೆ ಪ್ರೋಟೀನ್, ವಿಟಮಿನ್, ಖನಿಜ ಮತ್ತು ನೀರು ಡಯಟ್ ನಲ್ಲಿ ಇರಬೇಕು. ಮಧ್ಯಾಹ್ನದ ಊಟದಲ್ಲಿ ಅಂಗೈ ಗಾತ್ರದಷ್ಟಿ ಪ್ರೋಟೀನ್ ಸೇವನೆ ಮಾಡಿ. ಮೀನು, ಮೊಟ್ಟೆ, ಮಾಂಸ, ಚೀಸ್,ಬೇಳೆಕಾಳುಗಳನ್ನು ಸೇವಿಸಿ. ಊಟದಲ್ಲಿ ಕಾರ್ಬೋಹೈಡ್ರೇಟ್ ಕೂಡ ಇರಲಿ. ಬ್ರೌನ್ ರೈಸ್, ಗೋಧಿ, ಸಿಪ್ಪೆಯಿರುವ ಆಲೂಗಡ್ಡೆ ಅಥವಾ ಓಟ್ ಮೀಲ್ ಡಯಟ್ ನಲ್ಲಿ ಇರಲಿ.
ಗುಣಮಟ್ಟದ ನಿದ್ರೆಯಿಂದ ಕೂದಲು ಬೆಳವಣಿಗೆ (Hair Growth) : ದೇಹಕ್ಕೆ ನಿದ್ರೆ ಬಹಳ ಮುಖ್ಯ. ಗುಣಮಟ್ಟದ ನಿದ್ರೆ ನಿಮ್ಮ ಆರೋಗ್ಯದ ಜೊತೆ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ಒತ್ತಡದಲ್ಲಿರುವವರಿಗೆ ಗುಣಮಟ್ಟದ ನಿದ್ರೆ ಬಹಳ ಸಹಕಾರಿ.
ಸಪ್ಲಿಮೆಂಟ್ಸ್ ಮತ್ತು ವಿಟಮಿನ್ಸ್ (Supplement and Vitamins) : ಸಪ್ಲಿಮೆಂಟ್ಸ್ ಎಲ್ಲರಿಗೂ ಅಗತ್ಯವಿರೋದಿಲ್ಲ. ಕೂದಲ ಬೆಳವಣಿಗೆಗೆ ಪೋಷಕಾಂಶ ಅಗತ್ಯ. ಆಹಾರದಿಂದ ಸೂಕ್ತ ವಿಟಮಿನ್ಸ್ , ಪೋಷಕಾಂಶ ನಮಗೆ ಸಿಗ್ತಿಲ್ಲ ಎಂದಾಗ ನಾವು ಸಪ್ಲಿಮೆಂಟರಿ ಮೂಲಕ ಅದನ್ನು ಪಡೆಯಬೇಕು. ಪ್ರೋಟೀನ್, ಕಬ್ಬಿಣ, ಸತು, ವಿಟಮಿನ್ ಬಿ 12, ವಿಟಮಿನ್ ಡಿ, ಒಮೆಗಾ 3 ಮತ್ತು ಬಯೋಟಿನ್ ನಮಗೆ ಅತ್ಯಗತ್ಯವಾಗಿದೆ. ಇದರ ಸೇವನೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ನಿಯಮಿತ ಟ್ರಿಮ್ (Regular Trim) : ಟ್ರಿಮ್ ಮಾಡುವುದರಿಂದ ಕೂದಲು ವೇಗವಾಗಿ ಬೆಳೆಯುವುದಿಲ್ಲ, ಆದರೆ ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ. ಕೂದಲ ತುದಿಯಲ್ಲಿ ಕಂಡು ಬರುವ ಸೀಳನ್ನು ತೆಗೆದುಕಾಗುತ್ತದೆ. ಪ್ರತಿ ಆರು ಎಂಟು ವಾರಕ್ಕೊಮ್ಮೆ ಕೂದಲು ಟ್ರಿಮ್ ಮಾಡೋದು ಮುಖ್ಯ.
ನಿಯಮಿತ ಶಾಂಪೂ : ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಹಾಗಾಗಿ ನಿಯಮಿತವಾಗಿ ಶಾಂಪೂ ಮಾಡ್ಬೇಕು. ನೆತ್ತಿ ಸ್ವಚ್ಛವಾಗಿದ್ದರೆ ಕೂದಲು ಬೆಳವಣಿಗೆಯಾಗುತ್ತದೆ. ಕೂದಲು ಬೆಳವಣಿಗೆ ತಡೆಯುವ ಸತ್ತ ಚರ್ಮವನ್ನು ಹೋಗಲಾಡಿಸಲು ನೀವು ಎಫ್ಫೋಲಿಯೇಟಿಂಗ್ ಸ್ಕಾಲ್ಪ್ ಮಾಸ್ಕ್ ಬಳಸುವುದು ಒಳ್ಳೆಯದು. ಎಫ್ಫೋಲಿಯೇಟಿಂಗ್ ಮತ್ತು ಕ್ಲೆನ್ಸಿಂಗ್, ಕೂದಲ ಬೆಳವಣಿಗೆಗೆ ಅಡ್ಡಿಯಾಗುವ ಸತ್ತ ಚರ್ಮವನ್ನು ತೆಗೆಯುತ್ತದೆ. ಸ್ಕ್ರಬ್ ಕೂಡ ಮಾಡಬಹುದು. ಅದಕ್ಕೆ ನೀವು Salicylic Acid Exfoliating Scalp Treatment ಬಳಸಬಹುದು.
Beauty Tips : ಬಣ್ಣ ಹಚ್ಚಿದ ಕೂದಲನ್ನು ಹೀಗೆ ಕೇರ್ ಮಾಡಿ
ನೆತ್ತಿ ಆರೋಗ್ಯ : ನೆತ್ತಿ ಆರೋಗ್ಯ ಬಹಳ ಮುಖ್ಯ. ನೆತ್ತಿ ಆರೋಗ್ಯ ಕಾಪಾಡುವ ಕ್ಯಾಮೆಲಿಯಾ ಎಣ್ಣೆ, ಅಲೋವೇರಾ, ಆಲಿವ್ ಎಣ್ಣೆಯನ್ನು ಬಳಸಬಹುದು. ಅಲ್ಲದೆ ಕ್ಲೋರೇನ್‌ನ (Klorane) ಆಂಟಿ ಪೋಲ್ಯೂಷನ್ ಶಾಂಪೂ ಕೂಡ ಒಳ್ಳೆಯದು.
ಕಂಡೀಷನರ್ ಬಳಕೆ (Conditioner Usage) : ಶಾಂಪೂ ಬಳಸಿದ ನಂತ್ರ ಕೂದಲು ಶುಷ್ಕವಾಗುತ್ತದೆ. ಅದನ್ನು ತೇವಗೊಳಿಸಲು ಮತ್ತು ಕೂದಲ ಸೌಂದರ್ಯ ಕಾಪಾಡಲು ಕಂಡೀಷನರ್ ಬಳಸಬೇಕು. ಉತ್ತಮ ಕಂಡಿಷನರ್ ನಿಮ್ಮ ಕೂದಲನ್ನು ಬಲಪಡಿಸುತ್ತವೆ. ಉದುರುವ ಸಮಸ್ಯೆ ಕಡಿಮೆ ಮಾಡುತ್ತವೆ.
ಹೇರ್ ಡ್ರೈ ಬಳಕೆ ಹೀಗಿರಲಿ : ನೀವು ಹೇರ್ ಡ್ರೈ ಬಳಸೋದು ಅನಿವಾರ್ಯ ಎಂದಾದ್ರೆ ಹೇರ್ ಡ್ರೈ ಮತ್ತು ಕೂದಲಿನ ಮಧ್ಯೆ 12 ಇಂಚು ಅಂತರವಿರಬೇಕು. ಕಡಿಮೆ ಶಾಖವನ್ನು ಬಳಸಬೇಕು.
ಬ್ಲೀಚಿಂಗ್ (Bleaching) ಮಿತವಾಗಿರಲಿ : ಕೂದಲಿಗೆ ಬಣ್ಣ ಹಚ್ಚೋದು ಕಾಮನ್. ಆದ್ರೆ ಅದಕ್ಕೆ ಯಾವ ರಾಸಾಯನಿಕ ಬಳಕೆಯಾಗಿದೆ ಎಂಬುದನ್ನು ಗಮನಿಸಬೇಕು. ವೃತ್ತಿಪರರಿಂದ ಮಾತ್ರ ಬ್ಲೀಚಿಂಗ್ ಮಾಡಿಸಿಕೊಳ್ಳಬೇಕು. ಹಾಗೆ ಬಣ್ಣ ಹಚ್ಚಿದ ಕೂದಲಿಗೆ ಸರಿಯಾದ ಆರೈಕೆ ಬೇಕು ಎನ್ನುತ್ತಾರೆ ತಜ್ಞರು.
ಕೂದಲು ವಾಶ್ ಮಾಡುವಾಗ ಎಚ್ಚರ : ಕೂದಲು ಕೊಳಕಾಗಿದೆ ಎಂಬ ಕಾರಣಕ್ಕೆ ಹೆಚ್ಚು ಉಜ್ಜಬಾರದು. ಕೂದಲು ಒದ್ದೆಯಾಗಿದ್ದಾಗ ದುರ್ಬಲವಾಗಿರುತ್ತದೆ. ಕೂದಲನ್ನು ಬಿಡಿಸಿ ನಿಧಾನವಾಗಿ ಸ್ವಚ್ಛಗೊಳಿಸಬೇಕು. ನೀವು ಬ್ರಷ್ ಬಳಕೆ ಮಾಡ್ತಿದ್ದರೆ ದುಂಡಾದ, ಪ್ಲ್ಯಾಸ್ಟಿಕ್ ಪ್ರಾಂಗ್ಸ್ ಹೊಂದಿರುವ ಬ್ರಷ್ ಬಳಸಿ. WetBrush Detangler Brush ಮತ್ತು Philip Kinglsey Vented Paddle Brush ಬಳಸುವಂತೆ ತಜ್ಞರು ಹೇಳ್ತಾರೆ.