ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!
ನಿಜಕ್ಕೂ ಏಲಿಯನ್‌ಗಳು ಇವೆಯಾ? ಅವು ಭೂಮಿಕಾ ಬಂದರೆ ಏನಾಗುತ್ತೆ? ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ ಇಸ್ರೋ ಅಧ್ಯಕ್ಷ ಡಾ.ಸೋಮನಾಥ್
ಏಲಿಯನ್‌ಗಳು ಎನ್ನುವ ಕಲ್ಪನೆಯೇ ಕುತೂಹಲವಾದದ್ದು. ಮನುಷ್ಯದ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್. ಏಲಿಯನ್ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ, ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಆದರೆ ಏಲಿಯನ್ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ. ಇದೀಗ ಇದರ ಬಗ್ಗೆ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ಸೋಮನಾಥ್ ಅವರು ಕೆಲವು ಕೌತುಕ ಎನ್ನುವ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನಂಬಲಸಾಧ್ಯವಾಗಿರುವ ಮಾಹಿತಿಗಳನ್ನೂ ಅವರು ನೀಡಿದ್ದಾರೆ.
ಭೂಮಿಯ ಹೊರತಾಗಿಯೂ ನಮಗಿಂತ ಸಾವಿರ ವರ್ಷಗಳಷ್ಟು ಮುಂದಿರುವ ಯಾವುದಾದರೂ ನಾಗರಿಕತೆಯ ಗ್ರಹದ ಜೀವಿಗಳು, ನಮಗಿಂತಲೂ ಅಭಿವೃದ್ಧಿ ಹಾಗೂ ತಂತ್ರಜ್ಞಾನದಲ್ಲಿ ಮುಂದಿದ್ದು, ನಮ್ಮನ್ನು ವಿಶ್ವದ ಯಾವುದಾದರೂ ಒಂದು ಮೂಲೆಯಿಂದ ನಮ್ಮ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನೋಡುತ್ತಿರುವ ಎಲ್ಲಾ ಸಾಧ್ಯತೆಗಳು ಇವೆ ಎನ್ನುವುದು ಡಾ.ಸೋಮನಾಥ್ ಅವರ ಮಾತು. ಬ್ರಹ್ಮಾಂಡವು ಶತಕೋಟಿ ಆಕಾಶಕಾಯಗಳು, ನಕ್ಷತ್ರಗಳು ಮತ್ತು ಗ್ರಹಗಳಿಂದ ಹೋಗಿರುವಂಥದ್ದು. ಆದರೆ ಈ ವಿಶಾಲ ಜಗತ್ತಿನಲ್ಲಿ ಜೀವಿಗಳಿಗೆ ಆಶ್ರಯ ನೀಡುವ ಅಥವಾ ನಿಡಬಲ್ಲ ಏಕೈಕ ಗ್ರಹವೆಂದರೆ ಭೂಮಿ. ಮುಂದಿನ 1000 ವರ್ಷಗಳಲ್ಲಿ ತಂತ್ರಜ್ಞಾನವು ಜಾಗತಿಕವಾಗಿ ಹೆಚ್ಚಾಗುತ್ತದೆ ಎನ್ನುವುದು ನಿಜವಾದರೂ, ಭೂಮಿಯ ಹೊರತಾಗಿಯೂ ಬೇರೆ ಯಾವುದೋ ಗ್ರಹವು ಇದಾಗಲೇ ಸಾವಿರಾರು ವರ್ಷಗಳಷ್ಟು ಮುಂದುವರಿದಿರಬಹುದು ಇಲ್ಲವೇ 200 ವರ್ಷಗಳಷ್ಟು ಹಿಂದಕ್ಕೆ ಇದ್ದಿರಲೂಬಹುದು. ಆದ್ದರಿಂದ ಯಾವುದೇ ಅನ್ಯಜೀವಿಯ ಅಸ್ತಿತ್ವದಲ್ಲಿ ಇಲ್ಲ ಎನ್ನಲು ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ದಿನವೊಂದಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ: ಬಾಹ್ಯಾಕಾಶದ ಕೌತುಕ ತೆರೆದಿಟ್ಟ ಸುನಿತಾ ವಿಲಿಯಮ್ಸ್
ಈಗ ಶತಮಾನದಷ್ಟು ಹಿಂದಕ್ಕೆ ಹೋಗಿ ನೋಡುವುದಾದರೆ, ಆಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ ಭೂಮಿಯ ಮೇಲಿನ ತಂತ್ರಜ್ಞಾನ ಇಂದಿಗೆ ಅಗಾಧವಾಗಿ ಬೆಳೆದಿದೆ. ಈ ಕ್ಷಿಪ್ರ ಬೆಳವಣಿಗೆಯ ಜೊತೆಗೆ, ಅನ್ಯಗ್ರಹ ಜೀವಿಗಳ ಅಸ್ತಿತ್ವವೂ ಇದ್ದಿರುವ ಎಲ್ಲಾ ಸಾಧ್ಯತೆಗಳೂ ಇವೆ. ಏಕೆಂದರೆ, ಮನುಷ್ಯರು ಸೇರಿದಂತೆ ವಿಶ್ವದಲ್ಲಿರುವ ಎಲ್ಲಾ ಜೀವಿಗಳು ಕಳೆದ ನೂರು ವರ್ಷಗಳಲ್ಲಿ ವಿಕಸನಗೊಳ್ಳುತ್ತಲೇ ಬಂದಿವೆ. ಕೆಲವು ಜಾತಿಗಳು ತಂತ್ರಜ್ಞಾನದಲ್ಲಿ ಮನುಷ್ಯರಿಗಿಂತ ಮುಂದಿರಬಹುದು. ಇತರರು ಹಿಂದೆ ಇದ್ದಾರೆ. ಆದ್ದರಿಂದ ಭೂಮಿಯನ್ನಷ್ಟೇ ಅಲ್ಲದೇ, ಅನ್ಯಗ್ರಹಗಳ ಇರುವಿಕೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಭೂಮಿಗಿಂತಲೂ ಸಾವಿರಾರು ವರ್ಷ ಮುಂದುವರಿದಿರಬಹುದು ಎನ್ನುವ ಮಾತು ಇಸ್ರೋ ಅಧ್ಯಕ್ಷರದ್ದು.
ಇದೇ ವೇಳೆ ಸೋಮನಾಥ್ ಅವರು, ಒಂದು ವೇಳೆ ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದು ಬಿಟ್ಟರೆ ಏನೆಲ್ಲಾ ಅಪಾಯ ಆಗಬಹುದು ಎನ್ನುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಅನ್ಯಗ್ರಹ ಜೀವಿಗಳು ಮತ್ತು ಭೂಮಿಯ ಮೇಲಿನ ಜೀವಿಗಳ ಜೀವನ ಕ್ರಮದಲ್ಲಿ ಸಂಪೂರ್ಣ ವ್ಯತ್ಯಾಸವಿದೆ. ಎರಡೂ ಜೀವನಶೈಲಿ ಸಂಪೂರ್ಣ ಭಿನ್ನವಾದಂಥದ್ದು. ಅನ್ಯಜೀವಿಗಳ ದೇಹವು ಬಹುಶಃ ಜೀನೋಮಿಕ್ ಮತ್ತು ಪ್ರೊಟೀನ್ ಆಧರಿತವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಅವು ಏನಾದರೂ ಭೂಮಿಯ ಮೇಲೆ ಬಂದರೆ, ಮನುಷ್ಯ ಮತ್ತು ಅವುಗಳ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಇದು ತುಂಬಾ ಅಪಾಯಕಾರಿ ಮಟ್ಟವನ್ನೂ ತಲುಪಬಹುದು ಎಂದಿದ್ದಾರೆ.
ಸತ್ತ ವ್ಯಕ್ತಿ ಎದ್ದು ಬಂದ! ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಎದ್ದ ಯುವಕ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ