ಮಹಿಳೆಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಗುರಾಯಿಸಿದರೆ ಜೈಲೇ ಗತಿ...!
ಮಹಿಳೆಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಕಾಲ ಗುರಾಯಿಸಿದರೆ ಅವರನ್ನು ಐಪಿಸಿ ಸೆಕ್ಷನ್ ಅಡಿ ಬಂಧಿಸಲಾಗುವುದು ಎಂದು ರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ ಎಂಬ ಎನ್‌ಜಿಒ ಒಂದು ಟ್ವಿಟ್ಟರ್‌ನಲ್ಲಿ ಟ್ವಿಟ್ ಮಾಡಿದ್ದು, ಈ ಟ್ವಿಟ್ ಸಾಕಷ್ಟು ವೈರಲ್ ಆಗುವ ಜೊತೆ ಜನರನ್ನು ದಾರಿ ತಪ್ಪಿಸಿದ ಆರೋಪ ಕೇಳಿ ಬಂದಿದೆ.
ಮಹಿಳೆಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಕಾಲ ಗುರಾಯಿಸಿದರೆ ಅವರನ್ನು ಐಪಿಸಿ ಸೆಕ್ಷನ್ ಅಡಿ ಬಂಧಿಸಲಾಗುವುದು ಎಂದು ರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ ಎಂಬ ಎನ್‌ಜಿಒ ಒಂದು ಟ್ವಿಟ್ಟರ್‌ನಲ್ಲಿ ಟ್ವಿಟ್ ಮಾಡಿದ್ದು, ಈ ಟ್ವಿಟ್ ಸಾಕಷ್ಟು ವೈರಲ್ ಆಗುವ ಜೊತೆ ಜನರನ್ನು ದಾರಿ ತಪ್ಪಿಸಿದ ಆರೋಪ ಕೇಳಿ ಬಂದಿದೆ. ನವಂಬರ್ 27 ರಂದು ರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ (NCIB) ಹೆಸರಿನ ಎನ್‌ಜಿಒ ಸಂಸ್ಥೆ ಟ್ವಿಟ್ಟೊಂದನ್ನು ಮಾಡಿದ್ದು, 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಮಹಿಳೆ ಅಥವಾ ಯುವತಿಯನ್ನು ಗುರಾಯಿಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಹಾಗೂ 509 ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಟ್ವಿಟ್ ಮಾಡಿದೆ.
ಹಿಂದಿಯಲ್ಲಿ ಈ ಟ್ವಿಟ್ ಮಾಡಲಾಗಿದ್ದು, NCIB Headquarters ಹೆಸರಿನಡಿ ಈ ಕಾತೆ ವೇರಿಫೈ ಆಗಿದ್ದು, 'ಅಮೂಲ್ಯ ಮಾಹಿತಿ, ಮಹಿಳೆ ಅಥವಾ ಯುವತಿಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಕಾಲ ನೋಡಿದಲ್ಲಿ ಇದು ನಿಮ್ಮನ್ನು ಜೈಲಿಗೆ ಹೋಗುವಂತೆ ಮಾಡಬಹುದು. ತಿಳಿದೋ ತಿಳಿಯದೆಯೋ, ತಮಾಷೆಗಾಗಿಯೋ ಪರಿಚಿತ ಅಥವಾ ಅಪರಿಚಿತ ಮಹಿಳೆಯನ್ನು ಗುರಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಲೈಂಗಿಕ ದೌರ್ಜನ್ಯದಡಿ ಬರುತ್ತವೆ ಎಂದು ಟ್ವಿಟ್ ಮಾಡಲಾಗಿದೆ.
ಎನ್‌ಸಿಬಿಐ ಹೆಸರು ಹಾಗೂ ಟ್ವಿಟ್ಟರ್ ಹ್ಯಾಂಡಲ್ ಆಗಿರುವ NCIB Headquarters ಹಾಗೂ ಅದರ ಕೆಂಪು ಹಾಗೂ ನೀಲಿ ಬಣ್ಣದ ಲೋಗೋ ಜನರಿಗೆ ಅದು ಪೊಲೀಸ್ ಇಲಾಖೆಗೆ ಸೇರಿದ ಖಾತೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ. ಅಲ್ಲದೇ ಈ ಟ್ವಿಟ್ಟರ್ ಖಾತೆಯ ವಿವರದಲ್ಲಿಯೂ ಅದೂ ಎನ್‌ಜಿಒ ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಆದರೆ ಟ್ವಿಟ್ಟರ್ ಯುಆರ್‌ಎಲ್ ಕ್ಲಿಕ್ ಮಾಡಿದಲ್ಲಿ ಮಾತ್ರ ಅದು ಸರ್ಕಾರಿ ಸಂಸ್ಥೆಯಲ್ಲ ಎಂಬುದು ತಿಳಿಯುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಏಕೆಂದರೆ ಅಂತಹದೊಂದು ಸೆಕ್ಷನ್ ಭಾರತೀಯ ದಂಡ ಸಂಹಿತೆಯಲ್ಲಿ ಇರುವ ಬಗ್ಗೆ ಅನೇಕರಿಗೆ ಗೊತ್ತಿಲ್ಲ.
ಸೆಕ್ಷನ್ 294
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 ಅಶ್ಲೀಲ ಕೃತ್ಯಗಳು ಹಾಗೂ ಹಾಡುಗಳ ಬಗೆಗಿನ ವಿವಾದಗಳ ಬಗ್ಗೆ ವ್ಯವಹರಿಸುತ್ತದೆ. ಯಾರು ಇತರರಿಗೆ ಕಿರಿಕಿರಿ ಮಾಡುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪದಗಳ (Obscene words) ಹಾಡನ್ನು ಹಾಡುತ್ತಾರೋ ಅಂತವರಿಗೆ ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ದಂಡ ಎರಡನ್ನು ವಿಧಿಸಲಾಗುತ್ತದೆ.
ಸೆಕ್ಷನ್ 509
ಹಾಗೆಯೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509ರ ಪ್ರಕಾರ ಮಹಿಳೆಯ ವಿಧೇಯತೆಯನ್ನು (Obedience) ಅವಮಾನಿಸುವ ಉದ್ದೇಶದಿಂದ ಹಾವಭಾವದ ಮೂಲಕ ವ್ಯವಹರಿಸುವ ಹಾಗೂ ಸನ್ನೆಯ ಮೂಲಕ ಅಸಭ್ಯವಾಗಿ ವರ್ತಿಸುವ ಸನ್ನೆ ಮಾಡಿ ಕರೆಯುವ ಮುಂತಾದ ಕೃತ್ಯಗಳ ವಿರುದ್ಧ ಇರುವ ಸೆಕ್ಷನ್ ಆಗಿದ್ದು ಇಂತಹ ಪ್ರಕರಣಗಳಲ್ಲಿ ಒಂದು ವರ್ಷದಿಂದ ಮೂರು ವರ್ಷದವರೆಗೆ ಸರಳ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಇದೆಂಥಾ ಶಿಕ್ಷಣ... ಐ ಲವ್ ಯೂ ಮೇರಿ ಜಾನ್ ಎಂದು ಶಿಕ್ಷಕಿಗೆ ಕಿರುಕುಳ ನೀಡಿದ ವಿದ್ಯಾರ್ಥಿಗಳು
ಆದರೆ ಈ ಎರಡು ಸೆಕ್ಷನ್‌ಗಳು ಮಹಿಳೆ ಘನತೆಗೆ ಕುಂದು ಉಂಟು ಮಾಡುವ ಪ್ರಕರಣಗಳಲ್ಲಿ ಶಿಕ್ಷೆ ನೀಡುತ್ತದೆ. ಮಹಿಳೆಯನ್ನು ಗುರಾಯಿಸುವುದು ಕೂಡ ತಪ್ಪು ಎಂಬುದು ಈ ಸೆಕ್ಷನ್ ಕೆಳಗೆ ಬರಬಹುದು. ಆದರೆ ಎನ್‌ಜಿಒ ಹೇಳಿದಂತೆ ಗುರಾಯಿಸುವುದಕ್ಕೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ ಸೆಕ್ಷನ್ ಇಲ್ಲ. ಹಾಗಾಗಿಯೇ 14 ಸೆಕೆಂಡ್‌ಗಿಂತ ಹೆಚ್ಚು ಗುರಾಯಿಸಿದರೆ ಜೈಲು ಶಿಕ್ಷೆ ಎಂದು ಹೇಳುವುದಕ್ಕೆ ಯಾವುದೇ ಸೆಕ್ಷನ್ ಇಲ್ಲ ಎಂಬುದು ಪೊಲೀಸ್ ಮೂಲಗಳ ಮಾಹಿತಿ. ಹೀಗಾಗಿ ಇದೊಂದು ದಾರಿ ತಪ್ಪಿಸುವ ಟ್ವಿಟ್ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಹಾಗಾದರೆ 14 ಸೆಕೆಂಡ್‌ಗಿಂತ ಕಡಿಮೆ ಕಾಲ ಗುರಾಯಿಸಿದರೆ ತಪ್ಪಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
Chikkamagaluru: ಕ್ಯಾಬ್ ಚಾಲಕನಿಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಕಂಬಕ್ಕೆ ಕಟ್ಟಿ ಥಳಿತ