Labour Of Love: ಒಂದು ವರ್ಷದ ಶ್ರಮ.. ಕಸೂತಿಯಲ್ಲಿ ಅರಳಿದ ರಾಮಾಯಣ

ಹೈದ್ರಾಬಾದಿನ ಮಹಿಳೆಯೊಬ್ಬರ ಕಲೆಯ ಮೇಲಿನ ಪ್ರೀತಿ, ಪರಿಶ್ರಮ ಹಾಗೂ ರಾಮನ ಭಕ್ತಿ ಗಮನ ಸೆಳೆದಿದೆ. ಅವರ ನಿರಂತರ ಕೆಲಸಕ್ಕೆ ಫಲ ಸಿಕ್ಕಿದೆ. ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆಯನ್ನು ಅವರು ನೀಡಿದ್ದಾರೆ.  
 

Hyderabad Woman Embroiders Entire Ramayana Heres How Long It Took roo

ಭಾರತದ ಪ್ರತಿಯೊಬ್ಬ ಪ್ರಜೆ ರಾಮಾಯಣದ ಬಗ್ಗೆ ತಿಳಿಯಬೇಕಿದೆ. ಬಾಲ್ಯದಲ್ಲಿಯೇ ಮಕ್ಕಳು ರಾಮಾಯಣವನ್ನು ಓದಿ ತಿಳಿದ್ರೆ ಅವರ ಮುಂದಿನ ಜೀವನಕ್ಕೆ ಇದು ಬಹಳ ಅನುಕೂಲವಾಗಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ್ಮೇಲೆ ರಾಮನ ಭಕ್ತರು ತಮ್ಮದೇ ರೀತಿಯಲ್ಲಿ ರಾಮ ಭಕ್ತಿ ತೋರಿಸುತ್ತಿದ್ದಾರೆ. ಒಂದ್ಕಡೆ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದ್ದರೆ ಇನ್ನೊಂದು ಕಡೆ ಜನರು ರಾಮನಿಗಾಗಿ ತಮ್ಮ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ವೇಳೆ ಕೆಲವರು ಸುದ್ದಿಗೆ ಬಂದಿದ್ದರು. ಈಗ ಹೈದ್ರಾಬಾದ್ ಮಹಿಳೆಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಕಲೆಯನ್ನು ಬಳಸಿಕೊಂಡು ರಾಮಾಯಣ ಕಥೆ ಹೇಳಿರುವ ಅವರ ತಾಳ್ಮೆಗೆ ಮೆಚ್ಚಲೇಬೇಕು. 

ಕಸೂತಿ (Embroidery) ಕಲೆಯಲ್ಲಿ ಅರಳಿದ ರಾಮಾಯಣ (Ramayana): ಹೈದ್ರಾಬಾದ್ ನ ಕಲಾವಿದೆ ಅಪರ್ಣಾ ಕನುಮುರಿ, ಕಸೂತಿ ಕಲೆ (Art)ಯನ್ನು ಬಳಸಿಕೊಂಡು ರಾಮಾಯಣ ಕಥೆ ಹೇಳಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುವ ಸಮಯದಲ್ಲೇ ಈ ನಿರ್ಧಾರ ಕೈಗೊಂಡಿದ್ದ ಅವರು ನಿರಂತರ ಕೆಲಸದ ಮೂಲಕ ಈಗ ಸಂಪೂರ್ಣ ಕಥೆ ಸಿದ್ಧಪಡಿಸಿದ್ದಾರೆ. ತಾಯಿ ಮತ್ತು ಅಜ್ಜಿಯಿಂದ ಕಸೂತಿ ಕಲೆ ಕಲಿತಿರುವ ಅಪರ್ಣಾ ಕನುಮುರಿ ಎಲ್ಲರ ಗಮನ ಸೆಳೆದಿದ್ದಾರೆ.

ಲಂಡನ್‌ ಜಾಬ್ ಬಿಟ್ಟು ಭಾರತದಲ್ಲಿ ಉದ್ಯಮ ಆರಂಭಿಸಿ ಕೋಟಿ ಕೋಟಿ ಗಳಿಸ್ತಿರೋ ಅಂಬಾನಿ ಸೊಸೆ!

ಅಪರ್ಣಾ ಕನುಮುರಿ ಬಾಲ್ಯದಲ್ಲಿಯೇ ಕಸೂತಿಯನ್ನು ಇಷ್ಟಪಟ್ಟಿದ್ದರು. ಅವರು ಅಜ್ಜಿ ಹಾಗೂ ತಾಯಿ ಸಹಾಯದಿಂದ ಕಸೂತಿಯ ಎಲ್ಲ ವಿಧವನ್ನು ಕಲಿತಿದ್ದರು. ಅಪರ್ಣಾ ಕನುಮುರಿ ಕಲಿತ ಕಲೆಯನ್ನು ಮರೆತಿರಲಿಲ್ಲ. ಅವರು ಟೇಬಲ್ ಕ್ಲಾತ್ ಸೇರಿದಂತೆ ಸಣ್ಣಪುಟ್ಟ ಕಸೂತಿ ಮಾತ್ರ ಮಾಡ್ತಿರಲಿಲ್ಲ, ತಮ್ಮ ಕಸೂತಿಯಲ್ಲಿ ಭಾವಚಿತ್ರ ಸೇರಿದಂತೆ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದರು.

ಕೊರೊನಾ ಸಮಯದಲ್ಲಿ ಅವರಿಗೆ ಇನ್ನೊಂದು ಅವಕಾಶ ಸಿಕ್ಕಿತ್ತು. ಕಸೂತಿ ಕಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಂಡ್ರು. ಎಲೆಯಲ್ಲಿ ಬರೆದ ಪ್ರಾಚೀನ ಗ್ರಂಥಗಳನ್ನು ಕಸೂತಿಯಲ್ಲಿ ಮೂಡಿಸುವ ಪ್ರಯತ್ನ ನಡೆಸಿದ್ದರು. ಮುಂದಿನ ಪೀಳಿಗೆಗೆ ಮಹತ್ವದ ಕೊಡುಗೆ ನೀಡುವುದು ಅವರ ಉದ್ದೇಶವಾಗಿತ್ತು.

ರಾಮ ಮಂದಿರ ನಿರ್ಮಾಣದ ಬಗ್ಗೆ ಅವರು ಕೇಳಿದಾಗ ಇದ್ರ ಬಗ್ಗೆ ಗಂಭೀರ ಆಲೋಚನೆ ಮಾಡಿದ್ದರು. ಯುವಜನತೆಗೆ ನೆನಪಿಟ್ಟುಕೊಳ್ಳಬಹುದಾದಂತ ಯಾವುದೇ ಕೆಲಸ ಮಾಡಬೇಕೆಂದು ನಿರ್ಧಾರಕ್ಕೆ ಬಂದಿದ್ದರು. ಕಸೂತಿಯಲ್ಲಿ ರಾಮಾಯಣ ಮೂಡಿ ಬಂದ್ರೆ ಹೇಗೆ ಎಂಬ ಆಲೋಚನೆ ಅವರಿಗೆ ಬಂದಿತ್ತು. ಬರೀ ಆಲೋಚನೆ ಮಾಡಿ ಅದನ್ನು ಕೈಬಿಡದೆ ಅದನ್ನು ಜಾರಿಗೆ ತಂದ್ರು.

'ಎದೆಹಾಲು ನೀಡಿಯೇ 15 ಕೆಜಿ ತೂಕ ಇಳಿಸಿದೆ..' ನಟಿಯ ಮಾತಿಗೆ ಅಚ್ಚರಿಪಟ್ಟ ಸೋಶಿಯಲ್‌ ಮೀಡಿಯಾ!

ರಾಮ ಮಂದಿರ ಭೂಮಿ ಪೂಜೆ ದಿನದಂದೆ ಅಪರ್ಣಾ ಕನುಮುರಿ ಕೆಲಸ ಶುರು ಮಾಡಿದ್ದರು. ಲಾಕ್ ಡೌನ್ (Lockdown) ಇದ್ದ ಕಾರಣ ಅವರು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಕೆಲಸ ಮಾಡಿದ್ದರು. ದಿನಕ್ಕೆ ಸುಮಾರು ಹತ್ತು ಗಂಟೆಗಳ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡ್ತಿದ್ದರು ಅಪರ್ಣಾ ಕನುಮುರಿ. ನೂರು ಪುಟುಗಳಲ್ಲಿ ರಾಮಾಯಣವನ್ನು ಕಸೂತಿಯಲ್ಲಿ (Handicraft) ಮೂಡಿಸಿದ್ದಾರೆ ಅಪರ್ಣಾ ಕನುಮುರಿ. ಇದನ್ನು ಪೂರ್ಣಗೊಳಿಸಲು ಅವರಿಗೆ ಒಂದು ವರ್ಷದ ಸಮಯ ಬೇಕಾಗಿದೆ. ಮಕ್ಕಳನ್ನು ಆಕರ್ಷಿಸುವಂತೆ ಇದನ್ನು ಮಾಡುವುದು ಕೂಡ ಅಪರ್ಣಾ ಜವಾಬ್ದಾರಿ ಆಗಿತ್ತು. ಹಾಗಾಗಿ ಅದರಲ್ಲಿ ಸುಂದರ ಬಣ್ಣದ ಕಸೂತಿಯನ್ನು ನೀವು ನೋಡಬಹುದು.

ಈ ಕೆಲಸ ಮಾಡೋದು ಸುಲಭವಲ್ಲ. ಇದ್ರಲ್ಲಿ ನೂರಕ್ಕೂ ಹೆಚ್ಚು ಪುಟಗಳಿದ್ದು, ಒಂದೇ ಕಡೆ ಕುಳಿತು ಕೆಲಸ ಮಾಡುವ ತಾಳ್ಮೆ ಬೇಕು. ಅಮ್ಮ ಇದನ್ನು ಮಾಡಿತೋರಿಸಿದ್ದಾರೆ. ರಾಮಾಯಣ ಕಥೆ ಹಾಗೂ ಕಸೂತಿ ಕಲೆ ಎರಡೂ ಈ ಮೂಲಕ ಜೀವಂತವಾಗಿರಲಿದೆ. ಅಮ್ಮ ಮಾಡಿದ ಸಾಧನೆ ದೊಡ್ಡದು. ಅವರ ಮೇಲೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಕನುಮುರಿ ಅವರ ಮಗ ಅಂಚಿತ್. 

Latest Videos
Follow Us:
Download App:
  • android
  • ios