'ಎದೆಹಾಲು ನೀಡಿಯೇ 15 ಕೆಜಿ ತೂಕ ಇಳಿಸಿದೆ..' ನಟಿಯ ಮಾತಿಗೆ ಅಚ್ಚರಿಪಟ್ಟ ಸೋಶಿಯಲ್ ಮೀಡಿಯಾ!
ಹಮಾಮ್ ಸೋಪ್‌ನ ಜಾಹೀರಾತಿನ ಮೂಲಕವೇ ಪ್ರಖ್ಯಾತಿ ಪಡೆದ ಮಾಡೆಲ್ ಹಾಗೂ ರಂಗಭೂಮಿ ಕಲಾವಿದೆ ಮೇಖಾ ರಾಜನ್, ಈಗ ತಮ್ಮ ಹೊಸ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ.
ಕೆಲವೊಬ್ಬರಿದ್ದಾರೆ ವದಂತಿಗಳಿಂದಲೇ ಜನಪ್ರಿಯತೆ ಗಳಿಸುತ್ತಾರೆ. ಇಂಥ ಜನಪ್ರಿಯ ಹೇಳಿಕೆಗಳಿಂದಲೇ ಗಮನಸೆಳೆದು ನಂತರ ಸಿನಿಮಾ, ಧಾರಾವಾಹಿಗಳಿಗೆ ಬಂದವರ ಕಥೆ ನಮ್ಮ ಮುಂದಿದೆ. . ಅಂತಹವರಲ್ಲಿ ನಟಿ ಮೇಖಾ ರಾಜನ್ ಕೂಡ ಒಬ್ಬರು. ರಂಗಭೂಮಿ ಕಲಾವಿದೆಯಾಗಿರುವ ಮೇಘಾ, ಹಮಾಮ್ ಸೋಪ್ ಜಾಹೀರಾತಿನ ಮೂಲಕ ಪ್ರೇಕ್ಷಕರಿಗೆ ಪರಿಚಿತರು. ಈ ಜಾಹೀರಾತಿನ ಮೂಲಕ ಅನೇಕರ ಗಮನ ಸೆಳೆದಿರುವ ಮೇಖಾ ಈಗ ತಮ್ಮ ಸೌಂದರ್ಯದ ಗುಟ್ಟು ಏನು ಅನ್ನೋದನ್ನು ತಿಳಿಸಿದ್ದು, ಎದೆಹಾಲು ನೀಡುವ ಮೂಲಕವೇ ತಾವು 15 ಕೆಜಿ ತೂಕ ಇಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಇನ್ನು ಅವರ ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿಪಟ್ಟಿದ್ದು, ಇದು ನಿಜವೇ ಎಂದು ಹುಡುಕಾಟ ಆರಂಭಿಸಿದ್ದಾರೆ.
ಮೇಖಾ ರಾಜನ್ ಅವರ ಪ್ರಕಾರ, ನಿದ್ರೆ ಮಾನವ ದೇಹದ ಪ್ರಮುಖ ಅವಶ್ಯಕತೆ. ಎಂಟು ಗಂಟೆಗೆ ಮುಂಚೆಯೇ ಊಟ ಮಾಡಿ ನಿದ್ದೆ ಮಾಡುತ್ತೇನೆ, ಹಾಗಾಗಿ ಬೆಳಗ್ಗೆ ಏಳಲು ತೊಂದರೆಯಾಗುವುದಿಲ್ಲ ಎನ್ನುತ್ತಾರೆ ನಟಿ. ತಮಿಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೇಖಾ ಈ ಪ್ರತಿಕ್ರಿಯೆ ನೀಡಿದ್ದು, ನಿತ್ಯವೂ ಯೋಗ, ಈಜು, ನಡಿಗೆ ಅಭ್ಯಾಸ ಮಾಡುತ್ತೇನೆ ಎಂದಿದ್ದಾರೆ. ಇನ್ನು ಗರ್ಭಿಣಿಯಾಗಿದ್ದ ಸಮಯದಲ್ಲಿ ತೂಕ ವಿಪರೀತವಾಗಿ ಏರಿಕೆಯಾಗಿತ್ತು. ಅದನ್ನು ಹೇಗೆ ಇಳಿಸಿಕೊಂಡೆ ಎನ್ನುವುದನ್ನೂ ತಿಳಿಸಿದ್ದಾರೆ.
ಹೆರಿಗೆಯ ವೇಳೆ ಹಾಗೂ ಹೆರಿಗೆಯಾದ ನಂತರ ನಾನು ಸಾಕಷ್ಟು ತೂಕವನ್ನು ಹೆಚ್ಚಿಸಿಕೊಂಡಿದ್ದೆ. ಹೆರಿಗೆಗೆ ಮುನ್ನ 60 ಕೆಜಿ ತೂಕ ಹೊಂದಿದ್ದೆ. ಆದರೆ, ಹೆರಿಗೆಯ ಬಳಿಕ ನನ್ನ ತೂಕ 80 ಕೆಜಿ ಆಗಿತ್ತು. ಹೆಚ್ಚಿನವರು ನನ್ನ ತೂಕವನ್ನು ನೋಡಿ ಅಚ್ಚರಿಪಟ್ಟಿದ್ದರು. ತೂಕ ಇಳಿಸಿಕೊಳ್ಳಲು ನಾನು ಕಂಡುಕೊಂಡ ಸುಲಭವಾದ ಮಾರ್ಗವೆಂದರೆ ನನ್ನ ಮಗುವಿಗೆ ಸ್ತನ್ಯಪಾನ ಮಾಡಿದ್ದು. ಹೌದು, ನನ್ನ ಮಗುವಿಗೆ ಹಾಲುಣಿಸುವ ಮೂಲಕ ನಾನು 15 ಕೆಜಿ ಕಳೆದುಕೊಂಡೆ. ಅದು ಜೈವಿಕವಾಗಿ ಸರಿಯಾದ ಮಾರ್ಗವಾಗಿದೆ. " ಮೇಖಾ ರಾಜನ್ ಹೇಳುತ್ತಾರೆ. ಆದರೆ, ಇದು ಸಾಧ್ಯವೇ ಎಂದು ಅವರ ಮಾತಿಗೆ ಎಂದು ಹಲವು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಎದೆಹಾಲು ನೀಡುವ ಮೂಲಕವೇ ತೂಕ ಇಳಿಸಿಕೊಳ್ಳುವುದು ಸಾಧ್ಯ ಎಂದು ತಿಳಿಸಿದ್ದಾರೆ.
ನಿವೇತಾ ಪೇತುರಾಜ್-ಉದಯನಿಧಿ ಸ್ಟ್ಯಾಲಿನ್ ಕುರಿತಾಗಿ 'ಬಿಗ್; ಗಾಸಿಪ್, 'ಇದೆಲ್ಲ ಸುಳ್ಳು..' ಎಂದ ನಟಿ!
ಇದೇ ವೇಳೆ ಮೇಕಪ್ ಹಾಕಿಕೊಳ್ಳುವುದಿಲ್ಲ ಎಂದಿರುವ ಮೇಖಾ, ಕಾಜಲ್ ಹಾಗೂ ವಾಸಿಲ್ ಮಾತ್ರ ಬಳಸುತ್ತೇನೆ ಎಂದಿದ್ದಾರೆ. ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆ ಅಥವಾ ದೀಪದ ಎಣ್ಣೆಯಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳುತ್ತೇನೆ ಎಂದೂ ನಟಿ ಸಂದರ್ಶನದಲ್ಲಿ ಹೇಳಿದ್ದಾರೆ.
ಮೈದುನ ಮಂಚಕ್ಕೆ ಕರೆದರೆ, ಗಂಡ ಅಡ್ಜಸ್ಟ್ ಮಾಡ್ಕೋ ಅಂತಾನೆ, ಕಣ್ಣೀರಿಟ್ಟ ಕಿರುತೆರೆ ನಟಿ!