ಲಂಡನ್ ಜಾಬ್ ಬಿಟ್ಟು ಭಾರತದಲ್ಲಿ ಉದ್ಯಮ ಆರಂಭಿಸಿ ಕೋಟಿ ಕೋಟಿ ಗಳಿಸ್ತಿರೋ ಅಂಬಾನಿ ಸೊಸೆ!
ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಅಂಬಾನಿ ಕುಟುಂಬವೂ ಒಂದು. ಹಲವಾರು ವಲಯಗಳಲ್ಲಿ ಉದ್ಯಮ ನಡೆಸುತ್ತಾ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಅಂಬಾನಿ ಸೊಸೆಯಂದಿರ ಚಾಣಾಕ್ಷತನವೂ ಕಡಿಮೆಯೇನಿಲ್ಲ. ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್‌ನಂತೆಯೇ ಅಂಬಾನಿ ಕುಟುಂಬದ ಈ ಸೊಸೆಯೂ ಕೋಟಿ ಕೋಟಿ ಗಳಿಸುವ ಬಿಸಿನೆಸ್ ನಡೆಸ್ತಿದ್ದಾರೆ. ಯಾರಾಕೆ?
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಲ್ಲೊಬ್ಬರು ಬಿಲಿಯನೇರ್ ಮುಕೇಶ್ ಅಂಬಾನಿ. ಅಂಬಾನಿ ಸೊಸೆಯಂದಿರ ಚಾಣಾಕ್ಷತನವೂ ಕಡಿಮೆಯೇನಿಲ್ಲ. ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಹಲವು ಕೋಟಿಗಳ ಉದ್ಯಮವನ್ನು ಮುನ್ನಡೆಸುತ್ತಾರೆ. ಹಾಗೆಯೇ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಸೊಸೆಯಂದಿರೂ ಬಿಸಿನೆಸ್‌ನಲ್ಲಿ ಹಿಂದೆ ಬಿದ್ದಿಲ್ಲ.
ಹಾಗೆಯೇ ಬ್ರಿಲಿಯಂಟ್ ಅಂಬಾನಿ ಸೊಸೆಯಂದಿರಲ್ಲಿ ಒಬ್ಬರು ಕ್ರಿಶಾ ಶಾ. ಇಶಾ ಅಂಬಾನಿ, ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಹೋಲಿಸಿದರೆ ಕಡಿಮೆ ಮಾತನಾಡುತ್ತಾರೆ, ಸಾರ್ವಜನಿಕವಾಗಿ ಕಡಿಮೆ ಕಾಣಸಿಗುತ್ತಾರೆ.
ಕ್ರಿಶಾ ಶಾ, ಉದ್ಯಮಿ ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಹಿರಿಯ ಮಗ ಮತ್ತು ಮುಖೇಶ್ ಅಂಬಾನಿ ಅವರ ಸೋದರಳಿಯ ಜೈ ಅನ್ಮೋಲ್ ಅಂಬಾನಿಯನ್ನು ವಿವಾಹವಾಗಿದ್ದಾರೆ.
ನೀಲಂ ಮತ್ತು ನಿಕುಂಜ್ ಷಾ ಅವರ ಕಿರಿಯ ಮಗಳಾಗಿರುವ ಕ್ರಿಶಾ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಅರ್ಥಶಾಸ್ತ್ರದಲ್ಲಿ ಶಿಕ್ಷಣವನ್ನು ಪಡೆದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಾಮಾಜಿಕ ನೀತಿ ಮತ್ತು ಅಭಿವೃದ್ಧಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಲಂಡನ್‌ನಲ್ಲಿನ ಆಕ್ಸೆಂಚರ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಆ ಬಳಿಕ ಸೃಜನಶೀಲ ಸಹಯೋಗ, ಅಂತರಾಷ್ಟ್ರೀಯ ನೆಟ್‌ವರ್ಕಿಂಗ್ ಮತ್ತು ಸಮುದಾಯ ನಿರ್ಮಾಣಕ್ಕೆ ಒತ್ತು ನೀಡುವ ಸಾಮಾಜಿಕ ನೆಟ್‌ವರ್ಕಿಂಗ್ ವೇದಿಕೆಯಾದ ಡಿಸ್ಕೋ ಎಂಬ ಉದ್ಯಮವನ್ನು ಆರಂಭಿಸಲು ಭಾರತಕ್ಕೆ ಮರಳಿದಳು. COVID-19 ಸಾಂಕ್ರಾಮಿಕದ ಮಧ್ಯೆ, ಅವರು #Lovenotfea ಮಾನಸಿಕ ಸ್ವಾಸ್ಥ್ಯ ಅಭಿಯಾನವನ್ನು ಪ್ರಾರಂಭಿಸಿದರು.
ಕ್ರಿಶಾ ಅವರ ತಂದೆ, ನಿಕುಂಜ್ ಶಾ, ನಿಕುಂಜ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 2021ರ ವರೆಗೂ ಮುಂಬೈನಲ್ಲಿ ಯಶಸ್ವಿ ವ್ಯಾಪಾರವನ್ನು ನಡೆಸಿದರು. ಕ್ರಿಶಾ ತಾಯಿ, ಫ್ಯಾಷನ್ ಡಿಸೈನರ್ ಆಗಿರುವ ನೀಲಂ ಶಾ, 25 ವರ್ಷಗಳ ವಿರಾಮದ ನಂತರ 2010ರಲ್ಲಿ ತನ್ನ ಮಗಳು ನೃತಿಯ ಸಹಯೋಗದೊಂದಿಗೆ ವೃತ್ತಿಯನ್ನು ಪುನರಾರಂಭಿಸಿದರು.
ನೀಲಮ್ ಮುಂಬೈನ ಸೋಫಿಯಾ ಕಾಲೇಜಿನಲ್ಲಿ ಫ್ಯಾಶನ್ ಅಧ್ಯಯನದಲ್ಲಿ ಪದವಿ ಪಡೆದರು ಮತ್ತು ನಿಕುಂಜ್ ಶಾ ಅವರನ್ನು ಮದುವೆಯಾಗುವ ಮೊದಲು ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡಿದ್ದರು.
ನೃತಿ, ಕ್ರಿಶಾ ಅವರ ಅಕ್ಕ. 159k Instagram ಅನುಯಾಯಿಗಳೊಂದಿಗೆ ಫ್ಯಾಷನ್ ಬ್ಲಾಗರ್ ಆಗಿದ್ದು, ಸೌಂದರ್ಯ, ಫ್ಯಾಷನ್ ಬಗ್ಗೆ ಮಾಹಿತಿ ನೀಡುತ್ತಾರೆ.
ಕ್ರಿಶಾ, ಹಿರಿಯ ಸಹೋದರ ಮಿಶಾಲ್, ತಂದೆಯ ಕಂಪನಿ ಮತ್ತು ಸ್ಟಾರ್ಟ್ಅಪ್‌ನ್ನು ನಿರ್ವಹಿಸುತ್ತಿದ್ದಾರೆ. ಕ್ರಿಶಾ ಸ್ಥಾಪಿಸಿರುವ ಡಿಸ್ಕೋ ಸಂಸ್ಥೆಯ ಸಿಒಒ ಆಗಿ ಸೇವೆ ಸಲ್ಲಿಸುತ್ತಾರೆ. ಹೆಚ್ಚುವರಿಯಾಗಿ, ಮಿಶಾಲ್ ಅವರ ತಂದೆಯ ಕಂಪನಿಯಾದ ನಿಕುಂಜ್ ಗ್ರೂಪ್‌ನಲ್ಲಿ ನಿರ್ದೇಶಕ ಸ್ಥಾನವನ್ನು ಹೊಂದಿದ್ದಾರೆ.