ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಬಹುದು. ಕೀಟಗಳನ್ನು ಓಡಿಸಲು ಸೀಮೆಎಣ್ಣೆ ಬೆರೆಸಿ ಸಿಂಪಡಿಸಿ. ಕಬ್ಬಿಣ, ಮರದ ವಸ್ತುಗಳಿಗೆ ಹೊಳಪು ನೀಡಲು ಬಳಸಿ. ದೀಪಕ್ಕೆ ಎಣ್ಣೆಯಾಗಿಯೂ, ಬಾಗಿಲು/ಕಿಟಕಿಗಳಿಗೆ ಲೂಬ್ರಿಕಂಟ್ ಆಗಿಯೂ ಉಪಯೋಗಿಸಬಹುದು. ಇದರಿಂದ ಖರ್ಚು ಕಡಿಮೆಯಾಗಿ, ಮನೆ ಸ್ವಚ್ಛವಾಗಿರುತ್ತದೆ.
ಮನೆಯಲ್ಲಿ ಪೂರಿ (Puri) ಇಲ್ಲ ಪಕೋಡ (Pakoda ) ಮಾಡಿದ ನಂತ್ರ ಬಾಣಲೆಯಲ್ಲಿ ಅಡುಗೆ ಎಣ್ಣೆ (cooking oil) ಉಳಿದೇ ಉಳಿಯುತ್ತೆ. ಈ ಎಣ್ಣೆಯನ್ನು ಮತ್ತೆ ಬಳಸೋಕೆ ಆಗೋದಿಲ್ಲ. ತಳಕ್ಕೆ ಒಂದಿಷ್ಟು ಕರಕಲು ಕುಳಿತಿರುತ್ತೆ. ಪದೇ ಪದೇ ಅದೇ ಎಣ್ಣೆಯನ್ನು ಬಳಸ್ತಾ ಇದ್ರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಾಗಾಗಿ ಮಹಿಳೆಯರು ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಲು ಇಷ್ಟಪಡೋದಿಲ್ಲ. ಸಿಹಿ ಪದಾರ್ಥವನ್ನು ಕರಿದ ಎಣ್ಣೆಯನ್ನು ಮರು ಬಳಸಿದ್ರೆ ಆಹಾರದ ರುಚಿ ಕೂಡ ಹಾಳಾಗುತ್ತೆ. ಎಣ್ಣೆ ಎಷ್ಟೇ ಇರಲಿ, ಅದನ್ನು ಎಸೆಯುವವರ ಸಂಖ್ಯೆ ಸಾಕಷ್ಟಿದೆ. ನೀವೂ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಇನ್ನೊಮ್ಮೆ ಬಳಸದೆ ಎಸೆಯುತ್ತೀರಿ ಎಂದಾದ್ರೆ ಇನ್ಮುಂದೆ ಅದನ್ನು ಚೆಲ್ಲುವ ಕೆಲಸ ಮಾಡ್ಬೇಡಿ. ಅದನ್ನು ಹೇಗೆ ಮರು ಬಳಕೆ ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಪೂರಿ ಬೇಯಿಸಿದ ಎಣ್ಣೆಯಲ್ಲಿ ಮತ್ತೇನ್ ಮಾಡ್ಬಹುದು ಅಂತ ನೀವು ಆಲೋಚನೆ ಮಾಡ್ತಿದ್ರೆ, ನಿಮ್ಮ ಮನೆಯನ್ನು ಕೀಟಗಳಿಂದ ಮುಕ್ತಗೊಳಿಸಲು ಅದು ಸಹಾಯ ಮಾಡುತ್ತೆ ಅಂತ ನಾವು ಭರವಸೆ ನೀಡ್ತೇವೆ. ನಿಮ್ಮ ಮನೆಯನ್ನು ಸ್ವಚ್ಛವಾಗಿಡಲು, ಕೀಟಗಳಿಂದ ಮನೆಯನ್ನು ದೂರವಿಡಲು ಈ ಎಣ್ಣೆ ಸಹಾಯಕಾರಿ. ಇದು ನಿಮ್ಮ ಖರ್ಚನ್ನು ಕೂಡ ಕಡಿಮೆ ಮಾಡುತ್ತದೆ. ಇರುವೆ, ಇಲಿ ಸೇರಿದಂತೆ ಜಿರಳೆಯಂತದ ಕೀಟಗಳ ಕಾಟದಿಂದ ನಿಮ್ಮ ಮನೆಯನ್ನು ಈ ಎಣ್ಣೆ ಮುಕ್ತಗೊಳಿಸುತ್ತದೆ.
ಕೊಳಕಾದ ಬಾಚಣಿಗೆ ಸ್ವಚ್ಛಗೊಳಿಸಲು 6 ಸುಲಭ ಟಿಪ್ಸ್
ಉಳಿದ ಅಡುಗೆ ಎಣ್ಣೆ ಮರುಬಳಕೆ ಹೇಗೆ? : ಎಣ್ಣೆಯನ್ನು ನೀವು ಎರಡು ರೀತಿಯಲ್ಲಿ ಬಳಕೆ ಮಾಡಬಹುದು. ಮೊದಲನೇಯದಾಗಿ ನೀವು ಕೀಟಗಳನ್ನು ಮನೆಯಿಂದ ಓಡಿಸಲು ಬಯಸಿದ್ರೆ ಎಣ್ಣೆ ಜೊತೆ ಸೀಮೆ ಎಣ್ಣೆಯನ್ನು ಮಿಕ್ಸ್ ಮಾಡಬೇಕು. ನಿಮ್ಮ ಮನೆಯಲ್ಲಿ ಸೀಮೆ ಎಣ್ಣೆ ಇದ್ದಲ್ಲಿ ಅದನ್ನು ಈ ಎಣ್ಣೆಗೆ ಹಾಕಿ. ನಂತ್ರ ಕೀಟಗಳು ಬರುವ ಜಾಗದಲ್ಲಿ ಈ ಎಣ್ಣೆಯನ್ನು ಸಿಂಪಡಿಸಿ. ಮನೆಯ ಮೂಲೆ, ಕಿಟಕಿ ಅಥವಾ ಬಾಗಿಲಿನ ಮೂಲೆಗೆ ಇದನ್ನು ಹಾಕಿ. ಮನೆಯ ಮಧ್ಯ ಭಾಗದಲ್ಲಿ, ಮಕ್ಕಳು – ವೃದ್ಧರು ಓಡಾಡುವ ಜಾಗದಲ್ಲಿ ಎಣ್ಣೆ ಬೀಳದಂತೆ ನೋಡಿಕೊಳ್ಳಿ. ಇದು ಅನಾಹುತಕ್ಕೆ ಕಾರಣವಾಗ್ಬುದು. ಹಾಗಾಗಿ ಎಚ್ಚರಿಕೆಯಿಂದ ಮತ್ತೆ ಕಡಿಮೆ ಪ್ರಮಾಣದಲ್ಲಿ ಎಣ್ಣೆಯನ್ನು ಕೀಟ ಬರುವ ಜಾಗಕ್ಕೆ ಸಿಂಪಡಿಸಿ. ಇದ್ರ ವಾಸನೆಗೆ ಇರುವೆ ಮಾತ್ರವಲ್ಲ ಇಲಿ ಕೂಡ ನಿಮ್ಮ ಮನೆ ಪ್ರವೇಶ ಮಾಡುವುದಿಲ್ಲ.
ನೀವು ಉಳಿದ ಅಡುಗೆ ಎಣ್ಣೆಯನ್ನು ಕಬ್ಬಿಣ ಸೇರಿದಂತೆ ಕೆಲ ವಸ್ತುಗಳು ತುಕ್ಕು ಹಿಡಿಯದಂತೆ ತಡೆದು, ಅದಕ್ಕೆ ಹೊಳಪು ನೀಡಬಹುದು. ನೀವು ಗಾರ್ಡನ್ ಗೆ ಬಳಸುವ ಕಬ್ಬಿಣದ ವಸ್ತುಗಳು, ಮನೆಯ ಬಾಗಿಲಿನ ಹಿಡಿಕೆ ಸೇರಿದಂತೆ ಮರದ ವಸ್ತುಗಳಿಗೆ ಪಾಲಿಶ್ ನೀಡಲು ನೀವು ಈ ಎಣ್ಣೆ ಬಳಸಬಹುದು. ಒಂದು ಹಗುರ ಬಟ್ಟೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಪಾಲಿಶ್ ಮಾಡ್ಬೇಕು. ಇದ್ರಿಂದ ಪಿಠೋಪಕರಣ ಹಾಗೂ ಕಬ್ಬಿಣದ ವಸ್ತುಗಳ ಹೊಳಪು ಹೆಚ್ಚಾಗುತ್ತದೆ.
ಚಳಿಗಾಲದ ಪಾದದ ಬಿರುಕುಗಳಿಗೆ ಮನೆಮದ್ದುಗಳು
ನೀವು ಅಲಂಕಾರಿಕ ದೀಪಕ್ಕೆ ಈ ಎಣ್ಣೆಯನ್ನು ಬಳಸಬಹುದು. ಕೆಲವರು ತಮ್ಮ ಮನೆಯಲ್ಲಿ ಲಾಟಿನ್ ಸೇರಿದಂತೆ ಅಲಂಕಾರಿಕ ದೀಪಕ್ಕೆ ಎಣ್ಣೆ ಹಾಕಿ ಬೆಳಗುತ್ತಾರೆ. ನೀವು ದುಬಾರಿ ಬೆಲೆ ನೀಡಿ ದೀಪದ ಎಣ್ಣೆ ತರುವ ಬದಲು ಅಡುಗೆ ಮಾಡಿ ಉಳಿದ ಎಣ್ಣೆಯನ್ನು ಇದಕ್ಕೆ ಹಾಕ್ಬಹುದು. ಇಷ್ಟೇ ಅಲ್ಲ ನಿಮ್ಮ ಮನೆ ಬಾಗಿಲು ಅಥವಾ ಕಿಟಕಿ ತೆರೆಯುವಾಗ, ಹಾಕುವಾಗ ಸೌಂಡ್ ಬರ್ತಿದ್ದರೆ ಗ್ರೀಸ್ ರೂಪದಲ್ಲಿ ಎಣ್ಣೆಯನ್ನು ಮರುಬಳಕೆ ಮಾಡಿ. ಶಬ್ಧ ಬರುವ ಜಾಗಕ್ಕೆ ಎಣ್ಣೆ ಹಾಕಿ. ಇದು ಲೂಬ್ರಿಕಂಟ್ ನಂತೆ ಕೆಲಸ ಮಾಡುತ್ತದೆ.
