ಅಡುಗೆ ಮನೆ ವಾಸನೆಯಾಗುವುದೇ ಸಿಂಕ್‌ನಿಂದ, ಕ್ಲೀನ್ ಮಾಡೋದು ಹೇಗೆ?

ಅಡುಗೆ ಮನೆ ಸ್ವಚ್ಛವಾಗಿದ್ರೆ ಸಾಲದು, ಪ್ರತಿ ದಿನ ಪಾತ್ರೆ ತೊಳೆಯುವ ಸಿಂಕ್ ಕೂಡ ಕ್ಲೀನ್ ಆಗಿರಬೇಕು. ಅನೇಕರು ಸಿಂಕ್ ಕ್ಲೀನ್ ಸುದ್ದಿಗೆ ಹೋಗೋದಿಲ್ಲ. ಇದ್ರಿಂದ ಸೊಳ್ಳೆ ಕಾಟ ಹೆಚ್ಚಾಗುವ ಜೊತೆಗೆ ನೀರು ಬ್ಲಾಕ್ ಆಗುತ್ತದೆ. ಹೆಚ್ಚು ಖರ್ಚಿಲ್ಲದೆ ಆರಾಮವಾಗಿ ಮನೆಯಲ್ಲಿರುವ ವಸ್ತು ಬಳಸಿಯೇ ಸಿಂಕ್ ಕ್ಲೀನ್ ಮಾಡಬಹುದು.
 

How To Unclog A Kitchen Sink Pipe

ಮನೆಯಲ್ಲಿ ಹೆಚ್ಚು ಬಳಕೆಯಾಗುವ ಜಾಗದಲ್ಲಿ ಅಡುಗೆ ಮನೆ ಸಿಂಕ್ ಕೂಡ ಒಂದು. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಿಂಕ್ ಫುಲ್ ಬ್ಯುಸಿಯಾಗಿರುತ್ತದೆ. ಒಂದಿಷ್ಟು ಪಾತ್ರೆಗಳು ಸಿಂಕ್ ನಲ್ಲಿ ಇರೋದು ಮಾಮೂಲಿ. ನಮ್ಮಲ್ಲಿ ಬಹುತೇಕರು ಪಾತ್ರೆ ತೊಳೆಯುವ ಮೊದಲು ಕಸವನ್ನು ಕಸದ ಡಬ್ಬಕ್ಕೆ ಹಾಕುವುದಿಲ್ಲ. ಹಾಗೆಯೇ ಪಾತ್ರೆಗಳನ್ನು ವಾಶ್ ಮಾಡಲು ಮುಂದಾಗ್ತಾರೆ. ಇದ್ರಿಂದಾಗಿ ಆಹಾರ ಸಿಂಕ್ ಪೈಪ್ ಸೇರುತ್ತದೆ. ಈರುಳ್ಳಿ ಪೀಸ್, ತರಕಾರಿ ಚೂರುಗಳು, ಟೀ ಪುಡಿ ಹೀಗೆ ನಾವು ತಿಂದುಳಿದ ವಸ್ತುಗಳು ಸಿಂಕ್ ಪೈಪ್ ನಲ್ಲಿ ಸೇರಿಕೊಳ್ತವೆ. ನಮ್ಮ ಕಣ್ಣಿಗೆ ಕಾಣದೆ ಕೂದಲುಗಳು ಕೂಡ ಸಿಂಕ್ ಒಳಗೆ ಹೋಗಿರುತ್ತದೆ. ಸಿಂಕ್ ಸೇರುವ ಈ ಎಲ್ಲ ವಸ್ತುಗಳು ಪೈಪ್ ನಲ್ಲಿಯೇ ಜಮಾ ಆಗುವುದ್ರಿಂದ ಪೈಪ್ ಕಟ್ಟಿಕೊಳ್ಳುತ್ತದೆ. ನೀರು ಸರಿಯಾಗಿ ಹೋಗುವುದಿಲ್ಲ. ಅದ್ರಿಂದ ವಾಸನೆ ಬರಲು ಪ್ರಾರಂಭವಾಗುತ್ತದೆ. ಇದ್ರಿಂದ ಅತಿಥಿಗಳ ಮುಂದೆ ಮುಜುಗರವಾಗುತ್ತದೆ. ಅಷ್ಟೇ ಅಲ್ಲ ಅದ್ರಿಂದ ನೊಣ, ಸೊಳ್ಳೆಯ ಕಾಟ ಶುರುವಾಗುತ್ತದೆ. ಕೆಲವು ಬಾರಿ, ಈ ಸಿಂಕ್ ಪೈಪ್ ಒಡೆದು ಅವಾಂತರವಾಗುವುದಿದೆ. ನಿಮ್ಮ ಮನೆಯಲ್ಲೂ ಇದೇ ಸಮಸ್ಯೆಯಾಗ್ತಿದೆ ಎಂದಾದ್ರೆ ಕೆಲ ಸುಲಭ ಟಿಪ್ಸ್ ಫಾಲೋ ಮಾಡುವ ಮೂಲಕ ಸಿಂಕ್ ಪೈಪ್ ಸ್ವಚ್ಛಗೊಳಿಸಿ. ಅಡುಗೆ ಮನೆಯಲ್ಲಿರುವ ಎರಡೇ ವಸ್ತುಗಳನ್ನು ಬಳಸಿಕೊಂಡು ನೀವು ಸಿಂಕ್ ಕ್ಲೀನ್ ಮಾಡಬಹುದು. 

Diwali 2022 : ಹಬ್ಬದ ಋತುವಿನಲ್ಲಿ ಸ್ವೀಟ್ ರುಚಿ ಹಾಳಾಗ್ಬಾರದಾ? ಇಲ್ಲಿದೆ ಟಿಪ್ಸ್

ಅಡುಗೆ ಸೋಡಾ (Baking Soda) – ವಿನಗೆರ್ ನಲ್ಲಿದೆ ಪರಿಹಾರ : ಒಂದು ಪಾತ್ರೆಗೆ 2 ಚಮಚ ಅಡಿಗೆ ಸೋಡಾ ಮತ್ತು 1 ಚಮಚ ವಿನೆಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ನೀವು ಅಗತ್ಯವೆನ್ನಿಸಿದ್ರೆ ಸ್ವಲ್ಪ ನೀರನ್ನು ಹಾಕಬಹುದು. ನಂತ್ರ ಈ ಮಿಶ್ರಣವನ್ನು ನೀವು ಸಿಂಕ್ ಗೆ ಹಾಕಬೇಕು. ಈ ಮಿಶ್ರಣ ಸಿಂಕ್ ಪೈಪ್ (Sink Pipe) ಸೇರಬೇಕು. ಇದರ ನಂತರ 1 ಚಮಚ ಅಡಿಗೆ ಸೋಡಾವನ್ನು ಸಿಂಕ್ ಮೇಲೆ ಸುರಿಯಿರಿ. 10 ನಿಮಿಷಗಳ ಕಾಲ ಹಾಗೆ ಬಿಡಿ. ನೀವು ಸಿಂಕ್ ರಂಧ್ರವನ್ನು ರಬ್ಬರ್ (Rubber) ಸ್ಟಾಪನಿಂದ ಮುಚ್ಚಿದ್ರೆ ಒಳ್ಳೆಯದು.

ವಿನೆಗರ್ ಮತ್ತು ಅಡಿಗೆ ಸೋಡಾ ಸಿಂಕ್ ಪೈಪ್ ಕ್ಲೀನ್ ಮಾಡುತ್ತದೆ. ನೀವು ಇನ್ನೊಂದು ಕಡೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಸಿದ್ಧಪಡಿಸಿಕೊಳ್ಳಿ. 10 ನಿಮಿಷದ ನಂತ್ರ ರಬ್ಬರ್ ಸ್ಟಾಪ್ ತೆಗೆದು, ಸಿಂಕ್ ಗೆ ಬಿಸಿ ನೀರನ್ನು ಹಾಕಿ. ನಂತ್ರ ಸ್ವಲ್ಪ ಸಮಯದವರೆಗೆ ಟ್ಯಾಪ್ ಬಿಟ್ಟು, ನೀರು ಪೈಪ್ ಗೆ ಹೋಗುವಂತೆ ನೋಡಿಕೊಳ್ಳಿ. ಹೀಗೆ ಮಾಡಿದ್ರೆ ಸಿಂಕ್ ಪೈಪ್ ನಲ್ಲಿರುವ ಕೊಳಕು ಬಿಟ್ಟುಕೊಂಡು ಕೆಳಗೆ ಇಳಿಯಲು ಶುರುವಾಗುತ್ತದೆ.   

ಆಹಾರದಿಂದ ಸುಟ್ಟ ವಾಸನೆ ತೆಗೆದುಹಾಕಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಿಂಕ್ ಪೈಪ್ ಕ್ಲೀನ್ ಗೆ ಇನೋ ಬಳಸಿ : ಪ್ರತಿಯೊಬ್ಬರ ಮನೆಯಲ್ಲಿಯೂ ಇರುವ ವಸ್ತುಗಳಲ್ಲಿ ಇನೋ ಕೂಡ ಒಂದು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವ ಜನರು ಇನೋ ಇಟ್ಟುಕೊಂಡಿರ್ತಾರೆ. ಇದು ನಿಮ್ಮ ಹೊಟ್ಟೆ ಕ್ಲೀನ್ ಮಾಡುವುದು ಮಾತ್ರವಲ್ಲ ಸಿಂಕ್ ಪೈಪ್ ಸ್ವಚ್ಛಗೊಳಿಸಲು ನೆರವಾಗುತ್ತದೆ. ಮೊದಲು ಒಂದು ಪಾತ್ರೆಗೆ ಇನೋ ಮತ್ತು ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ದ್ರಾವಣವನ್ನು ಸಿಂಕ್‌ನ ಪೈಪ್‌ಗೆ ಸುರಿಯಿರಿ. 20-25 ನಿಮಿಷಗಳ ಕಾಲ ಹಾಗೆ ಬಿಡಿ. ಇದರ ನಂತರ  ಬಿಳಿ ವಿನೆಗರ್ ಅನ್ನು ಸಿಂಕ್ ಮೇಲಿಂದ ಹಾಕಿ. 10 ನಿಮಿಷ ಹಾಗೆ ಬಿಡಿ. ನಂತ್ರ ಬಿಸಿ ನೀರನ್ನು ಸಿಂಕ್ ಗೆ ಸುರಿಯಿರಿ. ಮೊದಲು ನಿಂತು, ನಿಂತು ಹೋಗ್ತಿದ್ದ ನೀರು ಸರಾಗವಾಗಿ ಹೋಗೋದನ್ನು ನೀವು ನೋಡಬಹುದು. ಇನೋ ಸಿಂಕ್ ನಲ್ಲಿ ಒತ್ತಡವನ್ನು ಸೃಷ್ಟಿ ಮಾಡುವ ಜೊತೆಗೆ ಅಲ್ಲಿನ ಕೊಳಕು ಸುಲಭವಾಗಿ ಕೆಳಗೆ ಹೋಗುವಂತೆ ಮಾಡುತ್ತದೆ.

Latest Videos
Follow Us:
Download App:
  • android
  • ios