ರೇಷ್ಮೆ ಸೀರೆ, ಗಂಡನನ್ನು ಗಾಳಿಗೆ ಬಿಟ್ರೆ ಬಾಳಿಕೆ ಜಾಸ್ತಿ, ಇಲ್ಲದಿದ್ರೆ ಎರಡೂ ಸೊರಗೋಗ್ತವೆ!
ರೇಷ್ಮೆ ಸೀರೆ ಬಂಗಾರಕ್ಕಿಂತ ಹೆಚ್ಚು ಮಾನ್ಯತೆ ಪಡೆದಿದೆ. ಅದನ್ನು ಜನರು ಸದಾ ಕಪಾಟಿನಲ್ಲಿ ಬಚ್ಚಿಡುತ್ತಾರೆ. ದುಬಾರಿ ಬೆಲೆ ನೀಡಿದ ಸೀರೆಯನ್ನು ಉಡೋದು ಕಷ್ಟ, ಹಾಳಾದ್ರೆ ಎನ್ನುವ ಭಯ ಬೇರೆ. ಹಾಗೆ ಕಪಾಟಿನಲ್ಲಿಟ್ರೆ ಸೀರೆ ಹಾಳಾಗುತ್ತೇ ವಿನಃ ಉಡೋಕೆ ಬರಲ್ಲ. ಹೆಚ್ಚುಕಾಲ ರೇಷ್ಮೆ ಸೀರೆ ನಿಮ್ಮ ಜೊತೆಗಿರಬೇಕೆಂದ್ರೆ ನೀವು ಏನು ಮಾಡ್ಬೇಕು ಗೊತ್ತಾ?
ರೇಷ್ಮೆ ಸೀರೆ ಉಟ್ಟ ನಾರಿಯ ಸೌಂದರ್ಯ ದುಪ್ಪಟ್ಟಾಗುತ್ತದೆ. ಆದ್ರೆ ಈ ರೇಷ್ಮೆ ಸೀರೆಯನ್ನು ಸುಲಭವಾಗಿ ಖರೀದಿ ಮಾಡಲು ಸಾಧ್ಯವಿಲ್ಲ. ಅದ್ರ ಬೆಲೆ ದುಬಾರಿ. ಹಾಗೆ ಅದನ್ನು ಸರಿಯಾಗಿ ಇಟ್ಟುಕೊಳ್ಳೋದು ಸವಾಲಿನ ಕೆಲಸ. ಅದೆಷ್ಟೇ ಕಷ್ಟವಿರಲಿ, ಮದುವೆ ಸಂದರ್ಭದಲ್ಲಿ ಯುವತಿಯರು ರೇಷ್ಮೆ ಸೀರೆ ಖರೀದಿ ಮಾಡ್ತಾರೆ. ಜೀವನದಲ್ಲಿ ಒಮ್ಮೆ ತೆಗೆದುಕೊಳ್ಳುವ ಸೀರೆ ಅಂದ್ರೆ ಅದು ರೇಷ್ಮೆ ಸೀರೆ ಎನ್ನುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ಮಹಿಳೆಯರ ಬಳಿ ನಾಲ್ಕೈದು ರೇಷ್ಮೆ ಸೀರೆ ಎನೋ ಇರುತ್ತೆ. ಹಾಗಂತ ಕಂಡ ಕಂಡಲ್ಲಿ ಅದನ್ನು ಉಡೋದಿಲ್ಲ. ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ರೇಷ್ಮೆ ಸೀರೆಯನ್ನು ಒಮ್ಮೆ ಧರಿಸಿದ ನಂತ್ರ ಅದನ್ನು ಸರಿಯಾಗಿ ಫೋಲ್ಡ್ ಮಾಡಿ, ಒಂದು ಬ್ಯಾಗ್ ನಲ್ಲಿ ಹಾಕಿ ಕಪಾಟಿನಲ್ಲಿ ಬಚ್ಚಿಡುತ್ತಾರೆ. ಕೆಲವರು ಪೇಪರ್ ಸುತ್ತಿ, ಅದ್ರ ಮೇಲೆ ಕವರ್ ಹಾಕಿ ನಂತ್ರ ಸೀರೆ ಬ್ಯಾಗ್ ಅಥವಾ ಸೂಟ್ಕೇಸ್ ನಲ್ಲಿ ರೇಷ್ಮೆ ಸೀರೆ ಇಡ್ತಾರ. ಆದ್ರೆ ನೀವು ರೇಷ್ಮೆ ಸೀರೆಯನ್ನು ಬಳಸದೆ ಇಟ್ಟರೆ ಹೆಚ್ಚು ಬಾಳಿಕೆ ಬರುತ್ತೆ ಅನ್ನೋದು ತಪ್ಪು. ಕಪಾಟಿನಲ್ಲಿ, ಪಾಲಿಥೀನ್ ಕವರ್ ನಲ್ಲಿ ಹಾಗೆ ಇಟ್ಟ ಸೀರೆ ಹತ್ತಾರು ವರ್ಷಗಳ ನಂತ್ರ ಹರಿಯುವ ಸಾಧ್ಯತೆಯಿದೆ.
ರೇಷ್ಮೆ (Silk) ಸೀರೆ ಬಾಳಿಕೆ ಬರಬೇಕು ಅಂದ್ರೆ ನೀವು ಅದನ್ನು ಆಗಾಗ ಬಳಸ್ತಿರಬೇಕು ಎನ್ನುತ್ತಾರೆ ತಜ್ಞರು. 80 ವರ್ಷಗಳ ಹಳೆ ಸೀರೆ (Sarees) ಕೂಡ ಈಗ ಬಳಕೆಗೆ ಯೋಗ್ಯವಾಗಿದೆ ಅಂದ್ರೆ ಅದನ್ನು ತಿಂಗಳಿಗೆ ಅಥವಾ ಆರು ತಿಂಗಳಿಗೆ ಬಳಸ್ತಿರೋದೇ ಕಾರಣ. ನಾವು ರೇಷ್ಮೆ ಸೀರೆಯನ್ನು ಅಪರೂಪಕ್ಕೆ ಬಳಸಿ ಅದನ್ನು ಬಚ್ಚಿಡುವ ಬದಲು ಅದನ್ನು ಪದೇ ಪದೇ ಬಳಸಬೇಕು. ಹಾಗೆ ರೇಷ್ಮೆ ಸೀರೆಯನ್ನು ಗಾಳಿಯಾಡುವ ಪ್ರದೇಶದಲ್ಲಿ ಇಡಬೇಕು. ಆಗ್ಲೇ ಸೀರೆ ಮತ್ತಷ್ಟು ಗಟ್ಟಿಯಾಗೋದು.
ಪತಿ ಸಾವಿನ ನಂತ್ರ ಆನ್ಲೈನ್‌ನಲ್ಲಿ ಸೆಕ್ಸ್ ಟಾಯ್ಸ್ ಖರೀದಿಸಿದ ಮಹಿಳೆ, ಏನಿದೆ ತಪ್ಪು?
ಇಷ್ಟೇ ಅಲ್ಲದೆ ರೇಷ್ಮೆ ಸೀರೆಯನ್ನು ಯಾವಾಗಲೂ ಡ್ರೈ ಕ್ಲೀನ್ (Dry Clean) ಮಾಡಬೇಕು. ನೀವು ಮೊದಲ ಬಾರಿಗೆ ರೇಷ್ಮೆ ಸೀರೆಯನ್ನು ತೊಳೆಯುತ್ತಿದ್ದರೆ ಸೀರೆ ಮೇಲೆ ಬರೆದಿರುವ ಮಾಹಿತಿಯನ್ನು ಸರಿಯಾಗಿ ಓದಿ ನಂತ್ರ ತೊಳೆಯಬೇಕು. ನೀವು ಮನೆಯಲ್ಲಿ ರೇಷ್ಮೆ ಸೀರೆಯನ್ನು ತೊಳೆಯಲು ಬಯಸಿದರೆ ಶಾಂಪೂ ಬಳಸಿ. ಇದಕ್ಕಾಗಿ ಸೀರೆಯನ್ನು ಮೂರು ಭಾಗಗಳಲ್ಲಿ ವಿಂಗಡನೆ ಮಾಡಿಕೊಂಡು ತೊಳೆಯಬೇಕು. ಸೆರಗು, ಬಾರ್ಡರ್ ಮತ್ತು ಉಳಿದ ಭಾಗವನ್ನು ಬೇರೆ ಬೇರೆಯಾಗಿ ವಾಶ್ ಮಾಡಬೇಕು. ರೇಷ್ಮೆ ಸೀರೆಯನ್ನು ತೊಳೆಯಲು ಪ್ರೋಟೀನ್ ಭರಿತ ಶಾಂಪೂ ಬಳಸುವುದನ್ನು ಮರೆಯಬಾರದು.
ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಹಾಟ್ ಫೋಟೋಸ್ ವೈರಲ್
ರೇಷ್ಮೇ ಸೀರೆಯನ್ನು ಮೂರು ತಿಂಗಳಿಗೊಮ್ಮೆಯೂ ಉಡುವ ಅವಕಾಶ ಸಿಕ್ಕಿಲ್ಲವೆಂದ್ರೆ ಅದನ್ನು ತೆಗೆದು ಅದನ್ನು ಬೇರೆ ರೀತಿಯಲ್ಲಿ ಮಡಚಿಡಿ. ಇಲ್ಲವೆಂದ್ರೆ ನೀವು ಸೀರೆ ಮಡಚಿಟ್ಟ ಜಾಗಕ್ಕೆ ಮಡಿಕೆ ಗುರುತುಗಳು ಉಂಟಾಗುತ್ತವೆ. ರೇಷ್ಮೆ ಸೀರೆಗಳನ್ನು ಇತರ ಬಟ್ಟೆಗಳಿಂದ ಪ್ರತ್ಯೇಕವಾಗಿ ಇರಿಸಿ. ಇಷ್ಟೇ ಅಲ್ಲ ರೇಷ್ಮೆ ಸೀರೆಗಳು ಸಹ ಬಣ್ಣ ಬಿಡುತ್ತವೆ. ಆದ್ದರಿಂದ ನೀರಿನಲ್ಲಿ ನೆನೆಸುವ ಮೊದಲು ಸೀರೆಯನ್ನು ಒಂದು ಮೂಲೆಯಲ್ಲಿ ನೆನೆಸಿ ಪರೀಕ್ಷಿಸಿಕೊಳ್ಳಿ. ವಾಷಿಂಗ್ ಮೆಷಿನ್ ನಲ್ಲಿ ರೇಷ್ಮೆ ಸೀರೆ ಒಗೆಯುವ ತಪ್ಪು ಮಾಡಬೇಡಿ, ಸೀರೆ ಬೇಗ ಹಾಳಾಗುತ್ತದೆ. ರೇಷ್ಮೆ ಸೀರೆಯನ್ನು ತೊಳೆಯಲು ಬಿಸಿ ನೀರನ್ನು ಬಳಸಬೇಡಿ. ರೇಷ್ಮೆ ಸೀರೆಯ ಮೇಲೆ ನೇರವಾಗಿ ಸುಗಂಧ ದ್ರವ್ಯವನ್ನು ಸಿಂಪಡಿಸಬೇಡಿ. ಮಳೆಗಾಲದಲ್ಲಿ ಸೀರೆಗಳನ್ನು ಕಬೋರ್ಡ್‌ನಿಂದ ಹೊರತೆಗೆದು ಪರೀಕ್ಷಿಸುತ್ತಿರಬೇಕು. ನೀವು ಆಗಾಗ ಅದನ್ನು ಬಳಸುತ್ತಿದ್ದರೆ ಇದ್ರ ಅಗತ್ಯವಿರೋದಿಲ್ಲ. ಸೂಟ್‌ಕೇಸ್‌ನಲ್ಲಿ ದೀರ್ಘಕಾಲ ಇಡುವ ಸೀರೆಗಳಿಂದ ವಾಸನೆ ಬರಲು ಪ್ರಾರಂಭಿಸುತ್ತದೆ. ಅದನ್ನು ಹೋಗಲಾಡಿಸಲು ನೀವು ಒಣ ಹೂವುಗಳು ಮತ್ತು ಎಲೆಗಳನ್ನು ಸೂಟ್ಕೇಸ್ ನಲ್ಲಿ ಇಡಬೇಕು.