Kitchen Hacks: ಕತ್ತರಿಸಿದ ಈರುಳ್ಳಿ ವಾಸನೆ ಬರುತ್ತೆ ಅಲ್ವಾ? ಏನು ಮಾಡಬೇಕು ಅದಕ್ಕೆ?
ಈರುಳ್ಳಿ ಕತ್ತರಿಸುವಾಗ ಕಣ್ಣಿನ ಉರಿ, ನೀರು ಮಾಮೂಲಿ. ಇದನ್ನು ತಪ್ಪಿಸೋಕೆ ಒಂದೇ ಬಾರಿ ಈರುಳ್ಳಿ ಕತ್ತರಿಸಿ ಸಂಗ್ರಹಿಸುವ ಪ್ಲಾನ್ ಮಾಡ್ತಾರೆ ಕೆಲವರು. ಆದ್ರೆ ಫ್ರಿಜ್ ನಲ್ಲಿಟ್ಟ ಕತ್ತರಿಸಿದ ಈರುಳ್ಳಿ ಒಂದು ಗಂಟೆಯಲ್ಲೇ ವಾಸನೆ ಬರ್ತಿರುತ್ತದೆ. ಇದ್ರಿಂದ ಮಾಡಿದ ಕೆಲಸ ವ್ಯರ್ಥವಾಗುತ್ತೆ.
ಸಲಾಡ್ ನಿಂದ ಮಸಾಲೆ ಪುರಿಯವರೆಗೆ, ಸಾಂಬಾರ್ ನಿಂದ ಫಿಜ್ಜಾವರೆಗೆ ಈರುಳ್ಳಿ ಬೇಕೇಬೇಕು. ಕೆಲ ಮಹಿಳೆಯರಿಗೆ ಈರುಳ್ಳಿ ಇಲ್ಲದೆ ಉಪ್ಪಿಟ್ಟು ಮಾಡೋಕೆ ಬರಲ್ಲ. ತರಕಾರಿ ಇಲ್ಲವೆಂದ್ರೆ ಓಕೆ, ಈರುಳ್ಳಿ ಇಲ್ಲ ಅಂದ್ರೆ ಕಷ್ಟ. ಮೊಸರನ್ನದ ಜೊತೆ ಈರುಳ್ಳಿ ಕಚ್ಚಿ ತಿಂದ್ರೆ ಊಟ ಮುಗಿದಂತೆ ಎನ್ನುವವರಿದ್ದಾರೆ. ಈರುಳ್ಳಿಯನ್ನು ಅನೇಕ ಅಡುಗೆಗೆ ಬಳಕೆ ಮಾಡಲಾಗುತ್ತದೆ. ಅಡುಗೆ ಮನೆಯಲ್ಲಿ ಪ್ರಮುಖ ಜಾಗ ಪಡೆದಿರುವ ಈ ಈರುಳ್ಳಿ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತೆ. ಈರುಳ್ಳಿ ಕತ್ತರಿಸೋದು ಬಲು ಕಷ್ಟದ ಕೆಲಸ. ಅನೇಕ ಮಹಿಳೆಯರಿಗೆ ಸಮಯವಿರೋದಿಲ್ಲ. ಈರುಳ್ಳಿ ಹೆಚ್ಚುತ್ತ ಕುಳಿತ್ರೆ ಸಮಯವಾಗುತ್ತೆ. ಹಾಗಾಗಿ ಒಂದೇ ಬಾರಿ ಸಾಕಷ್ಟು ಈರುಳ್ಳಿ ಹೆಚ್ಚಿಡುವ ಪ್ಲಾನ್ ಮಾಡ್ತಾರೆ. ಆದ್ರೆ ಹೆಚ್ಚಿಟ್ಟ ಈರುಳ್ಳಿ ಕೆಲವೇ ಗಂಟೆಗಳಲ್ಲಿ ನೀರು ಬಿಡಲು ಶುರುವಾಗುತ್ತದೆ. ವಾಸನೆ ಬರಲು ಶುರುವಾಗುತ್ತದೆ. ಫ್ರಿಜ್ ನಲ್ಲಿ ಹೆಚ್ಚಿದ ಈರುಳ್ಳಿ ಇಟ್ಟರೆ ವಾಸನೆ ಇಡೀ ಫ್ರಿಜ್ ಆವರಿಸುತ್ತದೆ. ಇದ್ರಿಂದ ಬೇರೆ ಆಹಾರ ಕೂಡ ರುಚಿ, ವಾಸನೆ ಕಳೆದುಕೊಳ್ಳುತ್ತದೆ. ಹೆಚ್ಚಿದ ಈರುಳ್ಳಿಯನ್ನು ಹೇಗೆ ಇಡೋದು ಎಂಬ ಚಿಂತೆ ಅನೇಕ ಮಹಿಳೆಯರಿಗಿದೆ. ಹೆಚ್ಚಿದ ಈರುಳ್ಳಿ ರುಚಿಕೆಡದಂತೆ ಇಡಬಹುದು. ಅದಕ್ಕೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕು. ನಾವಿಂದು ಹೆಚ್ಚಿದ ಈರುಳ್ಳಿಯನ್ನು ಹೇಗೆ ಇಡಬೇಕು ಎಂಬ ಬಗ್ಗೆ ನಿಮಗೆ ತಿಳಿಸ್ತೇವೆ.
ಕತ್ತರಿಸಿದ ಈರುಳ್ಳಿ (Onion) ವಾಸನೆ ಬರಬಾರದು ಅಂದ್ರೆ ಹೀಗೆ ಮಾಡಿ :
ಈರುಳ್ಳಿಯನ್ನು ಒಣಗಿಸಿ : ಸಾಕಷ್ಟು ಈರುಳ್ಳಿಯನ್ನು ಒಂದೇ ಬಾರಿ ಕತ್ತರಿಸಿ ಸಂಗ್ರಹಿಸಿಡಲು ಬಯಸ್ತೀರಿ ಎಂದಾದ್ರೆ ನೀವು ಮೊದಲು ಈರುಳ್ಳಿಯನ್ನು ಕತ್ತರಿಸಿ. ನಂತ್ರ ಈ ಈರುಳ್ಳಿಯನ್ನು ಚೆನ್ನಾಗಿ ತೊಳೆಯಿರಿ. ನಂತ್ರ ಅದನ್ನು ಫ್ರಿಜ್ (Fridge) ನಲ್ಲಿ ಇಡಿ. ಫ್ರಿಜ್ ನಲ್ಲಿ ಇಡುವಾಗ ನೀವು ಈರುಳ್ಳಿ ಹಾಕ್ತಿರುವ ಬಾಕ್ಸ್ (Box) ಬಗ್ಗೆಯೂ ಗಮನ ನೀಡಿ. ಆ ಬಾಕ್ಸ್ ತೇವವಾಗಿರಬಾರದು. ಒಣಗಿದ ಬಾಕ್ಸ್ ನಲ್ಲಿ ಕತ್ತರಿಸಿ ಈರುಳ್ಳಿ ಹಾಕಿ ಎರಡು ಗಂಟೆ ಫ್ರಿಜರ್ ನಲ್ಲಿ ಇಟ್ಟರೆ ಈರುಳ್ಳಿ ಹಾಳಾಗುವುದಿಲ್ಲ. ಬಾಕ್ಸ್ ತೇವಗೊಂಡಿದ್ದರೆ ಕೆಲ ಗಂಟೆಗಳ ನಂತ್ರ ಈರುಳ್ಳಿ ಜಿಗುಟಾಗಿ ಅದ್ರಿಂದ ವಾಸನೆ ಬರಲು ಶುರುವಾಗುತ್ತದೆ.
ಕತ್ತರಿಸಿದ ಈರುಳ್ಳಿಯನ್ನು ಮುಚ್ಚಿಡಿ : ಅನೇಕ ಮಹಿಳೆಯರು ಎಲ್ಲ ಪದಾರ್ಥವನ್ನು ಫ್ರಿಜ್ ನಲ್ಲಿ ಹಾಗೆ ಇಡ್ತಾರೆ. ಫ್ರಿಜ್ ನಲ್ಲಿ ಆಹಾರವನ್ನು ಸದಾ ಮುಚ್ಚಿಡಬೇಕು. ಅದ್ರಲ್ಲೂ ಈರುಳ್ಳಿಯನ್ನು ನೀವು ಮುಚ್ಚಿಡಬೇಕಾಗುತ್ತದೆ. ಕತ್ತರಿಸಿದ ಈರುಳ್ಳಿ ಮುಚ್ಚಿಡದೆ ಹೋದ್ರೆ ವಾಸನೆ ಹೆಚ್ಚಾಗುವ ಜೊತೆಗೆ ಎಲ್ಲ ಆಹಾರ ವಾಸನೆ ಬರಲು ಶುರುವಾಗುತ್ತದೆ. ಅದೇ ಮುಚ್ಚಿಟ್ಟರೆ ವಾಸನೆ ಬರುವುದಿಲ್ಲ. ನೀವು ಪಾಲಿಥಿನ್ ಚೀಲದಲ್ಲಿ ಕತ್ತರಿಸಿದ ಈರುಳ್ಳಿ ಹಾಕಿಟ್ಟರೆ ಒಳ್ಳೆಯದು. ಇದ್ರಲ್ಲಿ ಈರುಳ್ಳಿ ಹಾಳಾಗುವುದಿಲ್ಲ. ಫ್ರಿಜ್ ನಲ್ಲಿರುವ ಇತರ ಆಹಾರ ಕೂಡ ಕೆಡುವುದಿಲ್ಲ.
Kitchen Hacks: ವಾಸನೆ ಬರ್ತಿರೋ ಗ್ರೈಂಡರ್ ಹೀಗೆ ಕ್ಲೀನ್ ಮಾಡಿ
ಗಾಜಿನ ಜಾರ್ ನಲ್ಲಿರಲಿ ಈರುಳ್ಳಿ : ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ತಾಜಾ ಇಡಬೇಕು ಎಂದಾದ್ರೆ ನಿಮಗೆ ಗಾಜಿನ ಜಾರ್ ಸಹಾಯ ಮಾಡುತ್ತದೆ. ಗಾಜಿನ ಜಾರನ್ನು ತಂಪಾದ ಸ್ಥಳದಲ್ಲಿ ಇಡಬೇಕು. ಈರುಳ್ಳಿಯನ್ನು ಕತ್ತರಿಸಿ ಗಾಜಿನ ಜಾರಿನಲ್ಲಿ ಹಾಕಿ, ಅದನ್ನು ತಂಪಾದ ಸ್ಥಳದಲ್ಲಿ ಇಡಿ. ಈರುಳ್ಳಿ ಬಳಸುವಾಗ ಜಾರ್ ನಿಂದ ಬೇಕಾದಷ್ಟು ಈರುಳ್ಳಿ ತೆಗೆದು ಉಳಿದಿದ್ದನ್ನು ಅಲ್ಲಿಯೇ ಇಡಿ. ಈ ವೇಳೆ ಜಾರ್ ಮುಚ್ಚಲನ್ನು ಸರಿಯಾಗಿ ಮುಚ್ಚಿ. ಹೀಗೆ ಮಾಡಿದ್ರೆ ನೀವು ತಿಂಗಳುಗಟ್ಟಲೆ ಈರುಳ್ಳಿ ಬಳಕೆ ಮಾಡಬಹುದು.
ಅಡುಗೆ ಮನೆ ವಾಸನೆಯಾಗುವುದೇ ಸಿಂಕ್‌ನಿಂದ, ಕ್ಲೀನ್ ಮಾಡೋದು ಹೇಗೆ?
ಏರ್ ಟೈಟ್ ಡಬ್ಬದಲ್ಲಿರಲಿ ಈರುಳ್ಳಿ : ಗಾಳಿ ಸೋಕಿದ್ರೆ ಯಾವುದೇ ವಸ್ತುವಾದ್ರೂ ಬೇಗ ಹಾಳಾಗುತ್ತದೆ. ನೀವು ಈರುಳ್ಳಿಯನ್ನು ಕೆಲ ದಿನ ಸಂಗ್ರಹಿಸಲು ಬಯಸಿದ್ರೆ ಅದನ್ನು ಏರ್ ಟೈಟ್ ಡಬ್ಬದಲ್ಲಿ ಹಾಕಿಡಿ.