Kitchen Hacks: ವಾಸನೆ ಬರ್ತಿರೋ ಗ್ರೈಂಡರ್ ಹೀಗೆ ಕ್ಲೀನ್ ಮಾಡಿ
ಅಡುಗೆ ಮನೆ ಸ್ವಚ್ಛವಾಗಿದ್ರೆ ರೋಗದಿಂದ ದೂರವಿರಬಹುದು. ಅನೇಕ ಬಾರಿ ಅಡುಗೆ ಮನೆಯೇ ರೋಗ ಹರಡಲು ಮೂಲವಾಗಿರುತ್ತದೆ. ಅಡುಗೆಗೆ ಬಳಸುವ ಪ್ರತಿಯೊಂದು ವಸ್ತು ಸ್ವಚ್ಛವಾಗಿರಬೇಕು. ಅದ್ರಲ್ಲಿ ಮಿಕ್ಸಿ, ಗ್ರೈಂಡರ್ ಕೂಡ ಹೊರತಾಗಿಲ್ಲ.
ಮನೆಯ ಮೂಲೆ ಮೂಲೆ ಸ್ವಚ್ಛಗೊಳಿಸೋದು ಸ್ವಲ್ಪ ಕಷ್ಟದ ಕೆಲಸ. ಹಾಗೆಯೇ ಅಡುಗೆ ಮನೆಯ ಕೆಲ ವಸ್ತುಗಳನ್ನು ನಾವು ನಿರ್ಲಕ್ಷ್ಯ ಮಾಡ್ತಾವೆ. ಪ್ರತಿ ದಿನ ಅಡುಗೆಗೆ ಬಳಸುವ ಕೆಲ ಪಾತ್ರೆಗಳನ್ನೇ ನಾವು ಪ್ರತಿ ದಿನ ಕ್ಲೀನ್ ಮಾಡೋದಿಲ್ಲ. ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಸ್ಥಾನ ಪಡೆದಿರುವ ವಸ್ತುಗಳಲ್ಲಿ ಮಿಕ್ಸರ್ ಹಾಗೂ ಗ್ರೈಂಡರ್ ಮುಖ್ಯವಾದದ್ದು. ಸಾಂಬಾರ್ ಗೆ ಮಸಾಲೆ ರುಬ್ಬುವುದ್ರಿಂದ ಹಿಡಿದು ಚಟ್ನಿ ಬೀಸುವವರೆಗೆ ನಾವು ಮಿಕ್ಸರ್, ಗ್ರೈಂಡರ್ ನಿಂದ ಕೆಲಸ ಪಡೆಯುತ್ತೇವೆ. ಆದ್ರೆ ಪ್ರತಿ ದಿನ ಅದನ್ನು ಸ್ವಚ್ಛಗೊಳಿಸಲು ಹೋಗೋದಿಲ್ಲ. ಕೆಲವರು ತಿಂಗಳಿಗೊಮ್ಮೆ ಗ್ರೈಂಡರ್ ಕ್ಲೀನ್ ಮಾಡ್ತಾರೆ. ಹಾಗೆ ಮಾಡಿದಾಗ ಗ್ರೈಂಡರ್ ನಿಂದ ವಾಸನೆ ಬರಲು ಶುರುವಾಗುತ್ತದೆ. ಇದನ್ನು ಸ್ವಚ್ಛಗೊಳಿಸೋದು ಕಷ್ಟ ಎನ್ನುವ ಕಾರಣಕ್ಕೆ ಕ್ಲೀನಿಂಗ್ ಗೆ ಕೈ ಹಾಕದ ಅನೇಕ ಮಹಿಳೆಯರಿದ್ದಾರೆ. ಆದ್ರೆ ನೀವು ಗ್ರೈಂಡರ್‌ನ್ನು ಕೂಡ ಸುಲಭವಾಗಿ, ಬೇಗ ಸ್ವಚ್ಛಗೊಳಿಸಬಹುದು. ಇದ್ರಿಂದ ಗ್ರೈಂಡರ್‌ನಿಂದ ಬರುವ ವಾಸನೆ ತಡೆಯಬಹುದು.
ಸುಲಭವಾಗಿ ಗ್ರೈಂಡರ್ (Grinder) ಹೀಗೆ ಕ್ಲೀನ್ (Clean) ಮಾಡಿ :
ವಿನೆಗರ್ (Vinegar) ನಲ್ಲಿದೆ ಹೊಳಪಿನ ಗುಟ್ಟು : ಮೇಲಿಂದ ಮೇಲೆ ಕ್ಲೀನ್ ಮಾಡಿ ಹಾಗೆ ಬಿಟ್ಟಾಗ ಗ್ರೈಂಡರ್ ನಲ್ಲಿ ಆಹಾರ ಹಾಗೆ ಉಳಿದಿರುತ್ತದೆ. ಕೆಲ ಮೂಲೆಯಲ್ಲಿ ಆಹಾರದ ಕಲೆ ಬಿದ್ದಿರುತ್ತದೆ. ಇದ್ರಿಂದ ಗ್ರೈಂಡರ್ ಹಳೆಯದಂತೆ ಕಾಣುತ್ತದೆ. ಅದನ್ನು ನೀವು ಹೊಳೆಯುವಂತೆ ಮಾಡ್ಬೇಕು, ಅದಕ್ಕೆ ಹೊಸ ರೂಪ ನೀಡಬೇಕೆಂದ್ರೆ ವಿನೆಗರ್ ಬಳಸಬಹುದು. ವಿನೆಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ವಿನೆಗರ್ ನಿಂದ ಗ್ರೈಂಡರ್ ಕ್ಲೀನ್ ಮಾಡೋದು ಸುಲಭ. ಮೊದಲು ವಿನೆಗರ್ ಮತ್ತು ನೀರನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಗ್ರೈಂಡರ್ ಒಳಗೆ ಹಾಕಿ ಕೆಲವು ಸೆಕೆಂಡ್ ಕೈ ಆಡಿ. ನಂತರ ನೀವು ಗ್ರೈಂಡರ್ ಸ್ವಚ್ಛಗೊಳಿಸಿ. ಯಾವುದೇ ಕಾರಣಕ್ಕೂ ಗ್ರೈಂಡರ್ ಸ್ವಿಚ್ ಹಾಕಿ ಅದನ್ನು ಕ್ಲೀನ್ ಮಾಡಲು ಹೋಗ್ಬೇಡಿ.
ಆಲ್ಕೋಹಾಲ್ ಮಾಡುತ್ತೆ ಕ್ಲೀನಿಂಗ್ : ಗ್ರೈಂಡರ್ ಮತ್ತು ಮಿಕ್ಸರ್ ಕಂಟೇನರ್ ಸ್ವಚ್ಛಗೊಳಿಸಲು ನೀವು ಆಲ್ಕೋಹಾಲ್ ಕೂಡ ಬಳಸಬಹುದು. ಆಲ್ಕೋಹಾಲ್ ಗೆ ಸ್ವಲ್ಪ ನೀರು ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಗ್ರೈಂಡರ್ ಗೆ ಹಾಕಿ 10 ನಿಮಿಷಗಳ ಕಾಲ ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಸ್ವಚ್ಛತೆಗೆ ನಿಂಬೆ ಸಿಪ್ಪೆ : ಗ್ರೈಂಡರ್ ಅಥವಾ ಮಿಕ್ಸರ್ ಕೊಳಕಾಗಿದ್ದರೆ, ಇದ್ರಿಂದ ವಾಸನೆ ಬರ್ತಿದ್ದಂತೆ ನಿಂಬೆ ಹಣ್ಣಿನ ಸಿಪ್ಪೆ ಬಳಕೆ ಮಾಡಿ. ನಿಂಬೆ ಹಣ್ಣಿನ ರಸವನ್ನು ತೆಗೆದು ಸಿಪ್ಪೆಯನ್ನು ಗ್ರೈಂಡರ್ ಗೆ ಹಾಕಿ ಉಜ್ಜಿ. ಸ್ವಲ್ಪ ಸಮಯದ ನಂತ್ರ ಅದನ್ನು ಶುದ್ಧ ನೀರಿನಿಂದ ಕ್ಲೀನ್ ಮಾಡಿ. ಗ್ರೈಂಡರ್ ಹೊಳೆಯುವುದಲ್ಲದೆ ವಾಸನೆ ಹೋಗುತ್ತದೆ.
ಮುಟ್ಟಿನ ಸಮಯದಲ್ಲಿ Feminine wash ಬಳಸ್ಬೋದಾ ? ತಜ್ಞರು ಏನಂತಾರೆ ?
ಗ್ರೈಂಡರ್ ಕ್ಲೀನ್ ಮಾಡಲು ಅಡುಗೆ ಸೋಡಾ : ಅನೇಕ ವಸ್ತುಗಳಿಗೆ ಹೊಸ ರೂಪ ನೀಡುವ ಶಕ್ತಿ ಅಡುಗೆ ಸೋಡಾಕ್ಕಿದೆ. ನೀವು ಗ್ರೈಂಡರ್ ಸ್ವಚ್ಛಗೊಳಿಸಲೂ ಅಡುಗೆ ಸೋಡಾ ಬಳಕೆ ಮಾಡಬಹುದು. ಮೊದಲು ಅಡುಗೆ ಸೋಡಾಕ್ಕೆ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತ್ರ ಈ ಪೇಸ್ಟನ್ನು ಗ್ರೈಂಡರ್ ಗೆ ಹಚ್ಚಿ. 15 ನಿಮಿಷ ಹಾಗೆ ಬಿಟ್ಟು ನಂತ್ರ ಶುದ್ಧ ನೀರಿನಿಂದ ಕ್ಲೀನ್ ಮಾಡಿ.
Kitchen Hacks: ಪಾತ್ರೆ ಕಲೆ ತೆಗೆಯೋಕೆ ಇಲ್ಲಿದೆ ಟಿಪ್ಸ್
ಲಿಕ್ವಿಡ್ ಡಿಟರ್ಜೆಂಟ್ ಬಳಸಿ ನೋಡಿ : ಗ್ರೈಂಡರ್ ಕ್ಲೀನ್ ಮಾಡದೆ ತುಂಬಾ ದಿನವಾಗಿದೆ, ವಾಸನೆ ಬರ್ತಿದೆ ಎನ್ನುವವರು ಲಿಕ್ವಿಟ್ ರಿಟರ್ಜೆಂಟನ್ನು ಸ್ವಚ್ಛತೆಗೆ ಬಳಸಬಹುದು. ಲಿಕ್ವಿಡ್ ಡಿಟರ್ಜೆಂಟ್ ಗೆ ಹನಿ ನೀರನ್ನು ಸೇರಿಸಿ ಈ ಪೇಸ್ಟನ್ನು ಗ್ರೈಡರ್ ಗೆ ಹಾಕಿ, ಸ್ವಚ್ಛ ಸಮಯದ ನಂತ್ರ ಸ್ವಚ್ಛಗೊಳಿಸಿ.