Asianet Suvarna News Asianet Suvarna News

Recycle : ಹಾಲಿನ ಪ್ಯಾಕೆಟ್ ಎಸಿಬೇಡಿ, ಹೀಗೆ ಬಳಸಿ

ಹಾಲಿನ ಪ್ಯಾಕೆಟನ್ನು ಜನರು ಕಸಕ್ಕೆ ಹಾಕುತ್ತಾರೆ. ಆದ್ರೆ ಅದನ್ನು ಕಸಕ್ಕೆ ಹಾಕಿ ಪರಿಸರ ಹಾಳು ಮಾಡುವ ಬದಲು ಅದನ್ನು ಮರುಬಳಕೆ ಮಾಡಬಹುದು. ಅದ್ರಲ್ಲಿ ಅನೇಕ ವಸ್ತುಗಳನ್ನು ತಯಾರಿಸಬಹುದು. 
 

How To Reuse Plastic Milk Packets
Author
First Published Dec 26, 2022, 4:34 PM IST

ಪ್ರತಿಯೊಬ್ಬರ ಮನೆಯಲ್ಲೂ ಹಾಲನ್ನು ಬಳಸಲಾಗುತ್ತದೆ. ನಗರವಾಸಿಗಳು ಪ್ಯಾಕೆಟ್ ಹಾಲನ್ನು ಆಶ್ರಯಿಸಿರುತ್ತಾರೆ. ನಂದಿನಿ, ಕೃಷ್ಣ, ದೊಡ್ಳಾ ಹೀಗೆ ಅವರಿಗೆ ಅನುಕೂಲವೆನಿಸುವ ಹಾಲನ್ನು ಬಳಸ್ತಾರೆ. ಪ್ಯಾಕೆಟ್ ನಲ್ಲಿ ಬರುವ ಹಾಲನ್ನು ಪಾತ್ರೆಗೆ ಸುರಿದ ಮೇಲೆ ಪ್ಯಾಕೆಟನ್ನು ಎಸೆಯುತ್ತಾರೆ. ಪ್ರತಿ ದಿನ ನಮ್ಮ ಮನೆಯ ಕಸದಲ್ಲಿ ಈ ಹಾಲಿನ ಪ್ಯಾಕೆಟ್ ಇದ್ದೇ ಇರುತ್ತದೆ. ಕಸದಿಂದ ರಸ ಮಾಡುವವರು ಈ ಹಾಲಿನ ಪ್ಯಾಕೆಟ್ ಬಳಸಿಕೊಂಡು ಕೆಲ ವಸ್ತುಗಳನ್ನು ತಯಾರಿಸಬಹುದು. ನಾವಿಂದು ಹಾಲಿನ ಪ್ಯಾಕೆಟ್ ನಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ನಿಮಗೆ ಹೇಳ್ತೆವೆ. 

ಹಾಲಿ (Milk) ನ ಕವರ್ (Cover) ಹೀಗೆ ಬಳಸಿ : 
ಮರು ಮಾರಾಟ :
ಹಾಲಿನ ಪ್ಯಾಕೆಟನ್ನು ನೀವು ಮರು ಮಾರಾಟ ಮಾಡಬಹುದು. ಹಾಲಿನ ಪ್ಯಾಕೆಟ್ ಖರೀದಿ ಮಾಡುವ ಕೆಲ ಕಂಪನಿಗಳಿವೆ. ನೀವು ಪ್ಯಾಕೆಟನ್ನು ಸರಿಯಾಗಿ ಕತ್ತರಿಸಿ ಅದನ್ನು ಕ್ಲೀನ್ ಮಾಡಿ ಒಣಗಿಸಿ ಸಂಗ್ರಹಿಸಿಡಬೇಕು. ನಂತ್ರ ನಿಮ್ಮ ಸುತ್ತ ಯಾವ ಪ್ರದೇಶದಲ್ಲಿ ಹಾಲಿನ ಪ್ಯಾಕೆಟ್ ಖರೀದಿ (Purchase) ಮಾಡುವವರಿದ್ದಾರೆ ಎಂಬುದನ್ನು ಪರೀಕ್ಷೆ (Test) ಮಾಡಿ. ಅವರನ್ನು ಸಂಪರ್ಕಿಸಿ, ಅವರಿಗೆ ಪ್ಯಾಕೆಟ್ ಮಾರಾಟ ಮಾಡಿ. ಇದ್ರಿಂದ ನೀವು ಹಣ (Money) ಪಡೆಯಬಹುದು. ಜೊತೆಗೆ ಪರಿಸರ (Environment) ರಕ್ಷಣೆಗೆ ನಿಮ್ಮದೊಂದು ಸಣ್ಣ ಕಾಣಿಕೆ ನೀಡಿದಂತಾಗುತ್ತದೆ.

ಕವರ್ ರೀತಿ ಬಳಕೆ ಮಾಡಿ :  ಹಾಲಿನ ಕವರ್ ಸ್ಟ್ರಾಂಗ್ ಆಗಿರುತ್ತದೆ. ನೀವು ಅದನ್ನು ಪುಸ್ತಕ (Book) ದ ಕವರ್ ಆಗಿ ಬಳಸಬಹುದು. ಮೊದಲು ಎರಡು ಹಾಲಿನ ಕವರ್ ಕತ್ತರಿಸಿ, ಅದನ್ನು ಟೇಪ್ ಅಥವಾ ಅಂಟಿನಿಂದ ಜೋಡಿಸಿಕೊಳ್ಳಿ. ನಂತ್ರ ಅದನ್ನು ನೀವು ನಿಮ್ಮ ಪುಸ್ತಕಕ್ಕೆ ಕವರ್ ಆಗಿ ಬಳಸಿ. 

ಮೆಹಂದಿ ಕೋನದ ರೀತಿ ಬಳಸಿ : ನೀವು ಹಾಲಿನ ಕವರನ್ನು ಕೋನದ ರೀತಿಯಲ್ಲಿ ಬಳಸಬಹುದು. ಮೊದಲು ಅದನ್ನು ಕತ್ತರಿಸಿ, ಸ್ವಚ್ಛಗೊಳಿಸಿ ನಂತ್ರ ಅದನ್ನು ಕೊಳವೆ ಮಾಡಿ. ಅದಕ್ಕೆ ಮೆಹಂದಿ ಹಾಕಿ. ಇಲ್ಲವೆ ನೀವು ಹಾಲಿನ ಕೆನೆಯನ್ನು ಹಾಕಿ ಬಳಸಬಹುದು. 

ಹೊಲಿಗೆ ಮಷಿನ್ ದಾರ ಪದೇ ಪದೇ ಕಟ್ ಆಗ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಬಾಗಿಲು ತೋರಣ : ಹಾಲಿನ ಕವರನ್ನು ನೀವು ಪ್ರತಿ ದಿನ ಸಂಗ್ರಹಿಸುತ್ತ ಹೋದ್ರೆ ಸಂಖ್ಯೆ ಹೆಚ್ಚಾಗುತ್ತದೆ. ನಂತ್ರ ಅದನ್ನು ನೀವು ಸುಂದರ ಬಾಗಿಲು ತೋರಣವಾಗಿ ಬಳಸಬಹುದು. ಅದನ್ನು ಕತ್ತರಿಸಿ ಅದನ್ನು ಸುಂದರವಾಗಿ ಜೋಡಿಸಿ ಬಾಗಿಲು ತೋರಣ ಮಾಡಬಹುದು.  

ಹಾಲಿನ ಪ್ಯಾಕೆಟ್ ಮಾಲೆ : ಮನೆಯ ಮುಖ್ಯ ದ್ವಾರದ ಬಳಿ ಅನೇಕ ಮಾಲೆಗಳನ್ನು ನಾವು ಹಾಕಿರ್ತೇವೆ. ನಿಮ್ಮ ಕೈನಲ್ಲಿ ಅರಳಿದ ಮಾಲೆ ನಿಮ್ಮ ಮನೆ ಅಥವಾ ದೇವರ ಮನೆ ಮುಂದೆ ನೇತಾಡಬೇಕು ಅಂದ್ರೆ ನೀವು ಹೂವಿನ ಪ್ಯಾಕೆಟ್ ಕತ್ತರಿಸಿ ಮಾಲೆ ಮಾಡಬಹುದು. ಇದಲ್ಲದೆ ಕೂದಲಿಗೆ ಹೂವಿನ ಮಾಲೆ ರೂಪದಲ್ಲಿಯೂ ನೀವು ಬಳಕೆ ಮಾಡಬಹುದು. 

ಹಾಲಿನ್ ಪ್ಯಾಕೆಟ್ ನಲ್ಲಿ ಮ್ಯಾಟ್ : ನೀವು ಊಟ ಮಾಡುವಾಗ ಆಹಾರ ಕೆಳಗೆ ಬೀಳಬಾರದು ಅಂದ್ರೆ ಪ್ಲೇಟ್ ಕೆಳಗೆ ಈ ಹಾಲಿನ ಕವರ್ ನಿಂದ ಮ್ಯಾಟ್ ತಯಾರಿಸಿ ಬಳಬಹುದು. ಪ್ಯಾಕೆಟ್ ಕತ್ತರಿಸಿ, ಸುತ್ತ ಬಟ್ಟೆ ಹೊಲಿದು ನೀವು ಮ್ಯಾಟ್ ತಯಾರಿಸಬೇಕು. 

ಬ್ರೈಡಲ್ ಮೇಕಪ್‌ಗೂ ಮುನ್ನ ಇದನ್ನ ಮಾಡಿದ್ರೆ ಮದ್ವೆ ದಿನ ಮಿಂಚೋದು ಗ್ಯಾರಂಟಿ

ಗಿಡ ಬೆಳೆಸಲು ಬಳಸಿ : ಹಾಲಿನ ಪ್ಯಾಕೆಟ್‌ಗಳಲ್ಲಿ ಸಸ್ಯಗಳನ್ನು ಸಹ ನೆಡಬಹುದು. ನೀವು ಮಾಡಬೇಕಾಗಿರುವುದು ಏನೆಂದ್ರೆ ಹಾಲಿನ ಪ್ಯಾಕೆಟ್ ಅನ್ನು ಒಂದು ಬದಿಯಿಂದ ಸಂಪೂರ್ಣವಾಗಿ ಕತ್ತರಿಸುವುದು. ಇದಾದ ನಂತರ ಈ ಪ್ಯಾಕೆಟ್‌ಗೆ ಮಣ್ಣನ್ನು ಹಾಕಿ ಗಿಡವನ್ನು ನೆಡಬೇಕು. ಪ್ಯಾಕೆಟ್ ನಲ್ಲಿ ಗಿಡ ನೆಟ್ಟರೆ ಕುಂಡಕ್ಕೆ ನೀಡಬೇಕಾದ ಹಣ ಉಳಿಯುತ್ತದೆ.     
 

Follow Us:
Download App:
  • android
  • ios