Kitchen Hacks: ಪಾತ್ರೆ ಕಲೆ ತೆಗೆಯೋಕೆ ಇಲ್ಲಿದೆ ಟಿಪ್ಸ್
ಅತ್ಯಂತ ಆಕರ್ಷಕ ಹಾಗೂ ಎಲ್ಲರ ಗಮನ ಸೆಳೆಯುವ ಪಾತ್ರೆ ಅಂದ್ರೆ ಮೆಲಮೈನ್ ಪಾತ್ರೆಗಳು. ಸುಂದರ ಡಿಸೈನ್ ಗಳಿಂದ ಹಾಗೂ ಬಣ್ಣಗಳಿಂದ ಮಹಿಳೆಯರ ಮನಸ್ಸು ಕದಿಯುತ್ತವೆ. ಚಂದ ಕಾಣ್ತಿದೆ ಅಂತಾ ಮನೆಗೆ ತಂದು ಬಳಸಿದ್ರೆ ಪಾತ್ರೆಗೆ ಅಂಟಿಕೊಂಡ ಕಲೆ ಹೋಗೋದೇ ಇಲ್ಲ. ಎಣ್ಣೆ ಜಿಡ್ಡು, ಕಲೆ ಎನ್ನುವ ಕಾರಣಕ್ಕೆ ಆ ಪಾತ್ರೆ ಮೂಲೆ ಸೇರುತ್ತೆ. ಆದ್ರೆ ಮತ್ತೆ ಅದನ್ನು ಝಗಮಗಗೊಳಿಸಬಹುದು.
ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಪಾತ್ರೆಗಳು ಲಭ್ಯವಿದೆ. ಮರದಿಂದ ಮಾಡಿದ ಪಾತ್ರೆ, ಮಣ್ಣಿನ ಪಾತ್ರೆಗಳು, ಉಕ್ಕಿನ ಪಾತ್ರೆ, ಮೆಲಮೈನ್ ಪಾತ್ರೆ, ಗ್ಲಾಸಿನ ಪಾತ್ರೆ ಹೀಗೆ ಸಾಕಷ್ಟು ಬಗೆಯ ಪಾತ್ರೆಗಳನ್ನು ನಾವು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಮೆಲಮೈನ್ ಪಾತ್ರೆಗಳು ಪ್ರಸಿದ್ಧಿ ಪಡೆಯುತ್ತಿವೆ. ಮೆಲಮೈನ್ ಒಂದು ರೀತಿಯ ಪ್ಲಾಸ್ಟಿಕ್ ಆಗಿದೆ. ಮೆಲಮೈನ್ ಪಾತ್ರೆಗಳು ಹಗುರವಾಗಿರುತ್ತವೆ. ಮೆಲಮೈನ್ ಪ್ಲೇಟ್, ಕಪ್, ಫೋರ್ಕ್ಸ್ ಮತ್ತು ಸ್ಪೂನ್ ನೋಡಲು ತುಂಬಾ ಸುಂದರವಾಗಿರುತ್ತದೆ. ಇದು ಗ್ರಾಹಕರನ್ನು ಆಕರ್ಷಿಸುತ್ತದೆ. ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ನಾವು ಮೆಲಮೈನ್ ಪಾತ್ರೆಗಳನ್ನು ನೋಡಬಹುದು.
ಈ ಪಾತ್ರೆ ನೋಡಲು ಚೆಂದ ಹೌದು. ಆದ್ರೆ ಒಮ್ಮೆ ಬಳಸಿದ ನಂತ್ರ ಬಣ್ಣ (Color) ಬದಲಾಗುತ್ತದೆ. ಆಹಾರಗಳು ಅದಕ್ಕೆ ಅಂಟಿಕೊಳ್ಳುತ್ತವೆ. ಅದನ್ನು ಸ್ವಚ್ಛಗೊಳಿಸುವುದು ಕಷ್ಟವಾಗುತ್ತದೆ. ಹಾಗಂತ ಕಲೆಯಿರುವ ಪಾತ್ರೆಗಳನ್ನು ಮತ್ತೆ ಬಳಸಲು ಇಷ್ಟವಾಗುವುದಿಲ್ಲ. ನಿಮ್ಮ ಮನೆಯಲ್ಲೂ ಆಹಾರದ ಕಲೆ ಅಂಟಿಕೊಂಡಿರುವ ಮೆಲಮೈನ್ (Melamine) ಪಾತ್ರೆಗಳಿದ್ದರೆ ಚಿಂತೆ ಬೇಡ. ನಾವು ಅದನ್ನು ಹೇಗೆ ಕ್ಲೀನ್ ಮಾಡೋದು ಎಂಬುದನ್ನು ನಿಮಗೆ ಹೇಳ್ತೇವೆ.
ಟಿಶ್ಯೂ (Tissue) ಪೇಪರ್ ಬಳಸಿ : ಮೊದಲನೇಯದಾಗಿ ನಾವೆಲ್ಲ ಮಾಡುವ ತಪ್ಪೆಂದ್ರೆ ಆಹಾರ ತಿಂದ್ಮೇಲೆ ಪಾತ್ರೆಯನ್ನು ಹಾಗೆ ಸಿಂಕ್ ಗೆ ಹಾಕ್ತೇವೆ. ಮೆಲಮೈನ್ ಪಾತ್ರೆಯಲ್ಲಿ ಈ ತಪ್ಪು ಮಾಡಬಾರದು. ಆಹಾರ ತಿಂದ ನಂತ್ರ ಬಿಟ್ಟ ಆಹಾರವನ್ನು ಡಸ್ಟ್ ಬಿನ್ ಗೆ ಹಾಕಿ, ಟಿಶ್ಯುವಿನಿಂದ ಪ್ಲೇಟ್ ಕ್ಲೀನ್ ಮಾಡ್ಬೇಕು.
Kitchen Hacks : ಫ್ರಿಡ್ಜ್ ನಲ್ಲಿ ಈ ದ್ರವ ಆಹಾರವನ್ನು ಅಪ್ಪಿತಪ್ಪಿಯೂ ಇಡ್ಬೇಡಿ
ಉಗುರು ಬೆಚ್ಚಗಿನ ನೀರು ಬಳಸಿ : ಆಹಾರ ಸೇವನೆ ಮಾಡಿದ ತಕ್ಷಣ ನಿಮಗೆ ಪಾತ್ರೆ ತೊಳೆಯಲು ಸಾಧ್ಯವಾಗಿಲ್ಲವೆಂದ್ರೆ ಟಿಶ್ಯೂದಲ್ಲಿ ಕ್ಲೀನ್ ಮಾಡಿದ ನಂತ್ರ ಪಾತ್ರೆಗೆ ನೀರು ಹಾಕಿಡಿ. ಉಗುರು ಬೆಚ್ಚಗಿನ ನೀರನ್ನು ನೀವು ಬಳಸಬೇಕು. ಉಗುರು ಬೆಚ್ಚಗಿನ ನೀರನ್ನು ಪ್ಲೇಟ್ ಗೆ ಹಾಕಿ ಹಾಗೆ ಬಿಟ್ಟಲ್ಲಿ ಅದಕ್ಕೆ ಕೊಳೆ ಹಿಡಿಯುವುದಿಲ್ಲ.
ಸ್ಕ್ರಬ್ಬರ್ (Scrubber) ಬಳಕೆ ಮಾಡಿ : ಮೆಲಮೈನ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಮೃದುವಾದ ಸ್ಕ್ರಬ್ ಬಳಸಬೇಕಾಗುತ್ತದೆ. ಬಹುತೇಕರ ಮನೆಯಲ್ಲಿ ಸ್ಟೀಲ್ ಸ್ಕ್ರಬ್ ಇರುತ್ತದೆ. ಅದನ್ನು ನೀವು ಮೆಲಮೈನ್ ಪಾತ್ರೆ ಸ್ವಚ್ಛಗೊಳಿಸಲು ಬಳಸಬಾರದು. ಸ್ಟೀಲ್ ಸ್ಕ್ರಬ್ ಬಳಸಿದ್ರೆ ಪಾತ್ರೆ ಸ್ಕ್ರಾಚ್ ಆಗುತ್ತದೆ.
ಡಿಶ್ ವಾಶ್ (Dish Wash) ಸೋಪ್ ಬಳಕೆ ಮಾಡಿ : ನೀವು ಮೆಲಮೈನ್ ಪಾತ್ರೆ ಕ್ಲೀನ್ ಮಾಡಲು ಡಿಶ್ ವಾಶ್ ಸೋಪ್ ಬಳಸಬೇಕು. ಮೊದಲು ಉಗುರು ಬೆಚ್ಚಗಿನ ನೀರಿಗೆ ಡಿಶ್ ವಾಶ್ ಸೋಪ್ ಹಾಕಿ ಮಿಶ್ರಣ ತಯಾರಿಸಿ. ನೀವು ಡಿಶ್ ವಾಶ್ ಲಿಕ್ವಿಡ್ ಕೂಡ ಬಳಸಬಹುದು. ಅದನ್ನು ಮೆಲಮೈನ್ ಪಾತ್ರೆಗೆ ಹಾಕಿ, ನಿಧಾನವಾಗಿ ಸ್ಕ್ರಬ್ ಮಾಡಿದ್ರೆ ಕಲೆ ಉಳಿಯುವುದಿಲ್ಲ.
ಕಲೆ ತೆಗೆಯಲು ಅಡಿಗೆ ಸೋಡಾ (Soda), ನಿಂಬೆ (Lemon) : ಮೆಲಮೈನ್ ಪಾತ್ರೆ ಮೇಲೆ ಹಳದಿ ಕಲೆಯಾಗಿದ್ದರೆ ಮೊದಲು ಡಿಶ್ ವಾಶ್ ನಿಂದ ಕ್ಲೀನ್ ಮಾಡಿ. ಆದ್ರೂ ಕಲೆ ಹೋಗಿಲ್ಲವೆಂದಾದ್ರೆ ಅಡಿಗೆ ಸೋಡಾ ಮತ್ತು ನಿಂಬೆ ಹಣ್ಣನ್ನು ಬಳಸಿ ಸ್ವಚ್ಛಗೊಳಿಸಿ. ನಿಂಬೆ ಹಣ್ಣಿನ ಸಿಪ್ಪೆಗೆ ಅಡಿಗೆ ಸೋಡಾವನ್ನು ಹಾಕಿ ಅದನ್ನು ತಟ್ಟೆಗೆ ಉಜ್ಜಬೇಕು. ಇಲ್ಲವೆ ನಿಂಬೆ ರಸಕ್ಕೆ ಅಡುಗೆ ಸೋಡಾ ಬೆರೆಸಿ, ಮಿಶ್ರಣವನ್ನು ಪಾತ್ರೆ ಮೇಲೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಪಾತ್ರೆ ಕ್ಲೀನ್ ಮಾಡ್ಬೇಕು.
ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್
ಅಸಿಟೋನ್ ಬಳಸಿನೋಡಿ : ಅಸಿಟೋನ್ ಕೂಡ ಕಲೆ ತೆಗೆಯಲು ಸಹಾಯ ಮಾಡುತ್ತದೆ. ಮೆಲಮೈನ್ ಪಾತ್ರೆಗೆ ಕಲೆಯಾಗಿದ್ದರೆ ನೀವು ಅಸಿಟೋನ್ ಹಾಕಬಹುದು. ಪಾತ್ರೆಗೆ ಅಸಿಟೋನ್ ಹಾಕಿ ಸ್ವಲ್ಪ ಸಮಯ ಬಿಟ್ಟು ಪಾತ್ರೆ ತೊಳೆದ್ರೆ ಕಲೆ ಹಾಗೂ ಎಣ್ಣೆ ಜಿಡ್ಡು ಹೋಗುತ್ತದೆ.
ವಿನೆಗರ್ – ಅಡುಗೆ ಸೋಡಾ : ವಿನೆಗರ್ ಹಾಗೂ ಅಡುಗೆ ಸೋಡಾ ಮಿಶ್ರಣವನ್ನು ಪಾತ್ರೆಗೆ ಹಾಕಿ, ಸ್ವಲ್ಪ ಸಮಯ ಬಿಟ್ಟು ಸ್ಕ್ರಬ್ ಮಾಡಿದ್ರೆ ಮೆಲಮೈನ್ ನಲ್ಲಿರುವ ಕಲೆ ಹೋಗುತ್ತದೆ.