Asianet Suvarna News Asianet Suvarna News

ಮನೆ, ಕೆಲಸ ಬ್ಯಾಲೆನ್ಸ್ ಮಾಡೋ ಹೆಣ್ಣು ಹೈರಾಣವಾಗದಿರಲಿ

ಕುಟುಂಬದ ಜವಾಬ್ದಾರಿ ಹಾಗೂ ಕಚೇರಿ ಕೆಲಸ ಎರಡನ್ನೂ ನಿಭಾಯಿಸುವುದು ಹೇಳಿದಷ್ಟು ಸುಲಭವಲ್ಲ. ಕೆಲಸ ಮಾಡುವ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ರೆ ಎಲ್ಲವೂ ಸುಲಭವಾಗುತ್ತದೆ ಎಂಬುದು ನೆನಪಿರಬೇಕು.
 

How To Manage Working Woman Home Office
Author
Bangalore, First Published Jul 26, 2022, 4:59 PM IST

ಇತ್ತೀಚಿನ ದಿನಗಳಲ್ಲಿ  ಹೆಚ್ಚಿನ ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಬಯಸ್ತಾರೆ. ಮನೆಯಲ್ಲಿ ಅಥವಾ ಕಚೇರಿಗೆ ಹೋಗಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಮನೆ ಮತ್ತು ಕಚೇರಿ ಎರಡನ್ನೂ ನಿಭಾಯಿಸುವುದು ಅವರಿಗೆ ಕಷ್ಟವಾಗ್ತಿದೆ. ಅವರು ಬುದ್ಧಿವಂತಿಕೆಯಿಂದ ವರ್ತಿಸಿದರೆ  ಅವರು ಎರಡೂ ಸ್ಥಳಗಳಲ್ಲಿ ಯಶಸ್ವಿಯಾಗಬಹುದು. ಅನೇಕ ಉದ್ಯೋಗಸ್ಥ ಮಹಿಳೆಯರು ತಮ್ಮ ಎಲ್ಲಾ ಮನೆಕೆಲಸಗಳನ್ನು ತಾವೇ ಮಾಡಲು ಬಯಸುತ್ತಾರೆ. ಇದಕ್ಕೆ ಎರಡು ಕಾರಣಗಳಿದೆ.  ಮೊದಲನೆಯದಾಗಿ ಅವರು ಇತರರ ಕೆಲಸವನ್ನು ಇಷ್ಟಪಡುವುದಿಲ್ಲ ಮತ್ತು ಎರಡನೆಯದಾಗಿ ಅವರು ಇದಕ್ಕೆ ವ್ಯರ್ಥವಾಗುವ ಹಣವನ್ನು ಉಳಿಸಲು ಬಯಸುತ್ತಾರೆ. ಕಾರಣ ಏನೇ ಇರಲಿ, ಫಲಿತಾಂಶ ಮಾತ್ರ ಒಂದೇ. ಅದು ಆಯಾಸ. ಮನೆಗೆ ಅತಿಥಿಗಳು ಬಂದರೆ  ಕೆಲಸ ಹಾಗೂ ಆಯಾಸ ಎರಡು ಪಟ್ಟು ಹೆಚ್ಚಾಗುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎನ್ನುವ ಮಹಿಳೆಯರು ಕೆಲ ಟ್ರಿಕ್ಸ್ ಪಾಲನೆ ಮಾಡ್ಬೇಕು. ನಾವಿಂದು ವೃತ್ತಿ ಹಾಗೂ ಮನೆ ಎರಡನ್ನೂ ಬುದ್ಧಿವಂತಿಕೆಯಿಂದ ಹೇಗೆ ನಿಭಾಯಿಸಬೇಕು ಎಂಬುದನ್ನು ಹೇಳ್ತೇವೆ.

ಮನೆಯಲ್ಲಿರಲಿ ಕೆಲ ಯಂತ್ರ : ಮನೆ (Home) ಕೆಲಸದವರ ಅಗತ್ಯವಿಲ್ಲ ಎನ್ನುವ ಮಹಿಳೆಯರು ಬೇಗ ಬೇಗ ಕೆಲಸ ಮಾಡಲು ಯಂತ್ರದ ಸಹಾಯ ಪಡೆಯಬಹುದು. ಮನೆ ಸ್ವಚ್ಛಗೊಳಿಸಲು ವ್ಯಾಕ್ಯೂಮ್ ಕ್ಲೀನರ್ (Cleaner ) ಬಳಸಿದ್ರೆ ರೊಟ್ಟಿ ಮಾಡಲು ಯಂತ್ರ ತರಬಹುದು. ಹಾಗೆಯೇ ಪಾತ್ರೆ ತೊಳೆಯಲು, ಬಟ್ಟೆ ತೊಳೆಯಲು ಯಂತ್ರದ ಸಹಾಯ ಪಡೆಯಬಹುದು. ಇದರಿಂದ ಸಮಯಕ್ಕೆ ಆಹಾರ ಬೇಯಿಸಬಹುದು. 

ಮಕ್ಕಳ (Children) ಆರೈಕೆ : ಮಕ್ಕಳು ಚಿಕ್ಕವರಾಗಿದ್ದರೆ, 24 ಗಂಟೆಗಳ ಕಾಲ ಮಕ್ಕಳನ್ನು ನೋಡಿಕೊಳ್ಳಲು ನೀವು ಒಬ್ಬರನ್ನು ನೇಮಿಸುವುದು ಅನಿವಾರ್ಯವಾಗುತ್ತದೆ. ಮಕ್ಕಳು ದೊಡ್ಡವರಾಗಿದ್ದರೆ, ತಮ್ಮ ಕೆಲಸವನ್ನು ಅವರು ಮಾಡುತ್ತಿದ್ದರೆ  ಅವರಿಗೆ ಕೆಲ ಕೆಲಸ ಕಲಿಸಿ. ಶಾಲೆಗೆ ಸಿದ್ಧವಾಗುವುದು, ಟಿಫನ್ ಬಾಕ್ಸ್ ತುಂಬುವುದು, ಬ್ಯಾಗ್ ತುಂಬುವುದು ಇದನ್ನೆಲ್ಲ ಅವರಿಗೆ ಕಲಿಸಿ. ಆಗ ನಿಮ್ಮ ಕೆಲಸ ಸುಲಭವಾಗುತ್ತದೆ.

ಗರ್ಭಪಾತಕ್ಕೆ ಮಹಿಳೆಯನ್ನೇ ದೂರುವುದು ಯಾಕೆ, ಆಕೆ ಕಾರಣಳಲ್ಲ; ಅಧ್ಯಯನ

ಟೈಂ ಟೇಬಲ್ ಸಿದ್ಧಪಡಿಸಿ : ಮನೆ ಹಾಗೂ ಕೆಲಸ ಈ ಎರಡರ ಮಧ್ಯೆ ಸಮಯ ಇಲ್ಲ ಎನ್ನುವವರು ಸಮಯವನ್ನು ಹೊಂದಿಸಿಕೊಳ್ಳಬೇಕು. ಟೈಂ ಟೇಬಲ್ ಸಿದ್ಧಪಡಿಸಬೇಕು. ಸೋಮವಾರ ಬಟ್ಟೆ ಸ್ವಚ್ಛಗೊಳಿಸಿದ್ರೆ ಮಂಗಳವಾರ ಮನೆಯನ್ನು ಸ್ವಚ್ಛಗೊಳಿಸುವುದು, ಬುಧವಾರ ಶಾಪಿಂಗ್ ಮಾಡುವುದು ಹೀಗೆ. 

ಮಕ್ಕಳೊಂದಿಗೆ ಸಮಯ ಕಳೆಯಿರಿ : ಕೆಲಸ ಮಾಡುವ ಮಹಿಳೆಯರಿಗೆ ತಮ್ಮ ಮಕ್ಕಳೊಂದಿಗೆ ಕಳೆಯಲು ಕಡಿಮೆ ಸಮಯ ಸಿಗುತ್ತದೆ. ಆದ್ದರಿಂದ ನೀವು ಮನೆಯಲ್ಲಿದ್ದಾಗ ನಿಮ್ಮ ಮಕ್ಕಳೊಂದಿಗೆ ಸಂವಹನ ನಡೆಸಿ. ಇದರಿಂದ ಅವರು ನಿಮ್ಮ ಅನುಪಸ್ಥಿತಿಯನ್ನು ಅನುಭವಿಸುವುದಿಲ್ಲ. ಹಾಗೆಯೇ ಬಿಲ್ ಪಾವತಿ ಜವಾಬ್ದಾರಿಯೆಲ್ಲ ನಿಮ್ಮ ಮೈಮೇಲಿದ್ದರೆ ಇವೆಲ್ಲವನ್ನೂ ನೀವು ಆನ್ಲೈನ್ ಮಾಡಬಹುದು. ಹಾಗೆಯೇ ವಸ್ತುಗಳನ್ನು ತರಲು ಕೂಡ ನೀವು ಆನ್ಲೈನ್ ವೆಬ್ಸೈಟ್ ಬಳಸಬಹುದು. ಇದರಿಂದ ನಿಮ್ಮ ಸಮಯ ಉಳಿಯುತ್ತದೆ. ಮಕ್ಕಳು ದೊಡ್ಡವರಾಗಿದ್ದರೆ ಅವರ ಸಹಾಯ ಪಡೆಯಬಹುದು.   

ಹದಿಹರೆಯ ಹುಡುಗಿಯರನ್ನು ಕಾಡೋ ಹಿಸ್ಟೀರಿಯಾಗೆ ಮನೆ ಮದ್ದು

ಕಚೇರಿ ಸಮಸ್ಯೆಗಳನ್ನು ಮನೆಯಲ್ಲಿ ಹಂಚಿಕೊಳ್ಳಬೇಡಿ : ನಿಮ್ಮ ಕಚೇರಿಯ (Office Work) ತೊಂದರೆಗಳು ಮತ್ತು ಒತ್ತಡವನ್ನು ಮನೆಗೆ ತರಬೇಡಿ. ಕಚೇರಿ ವಿಷ್ಯವನ್ನಿಟ್ಟುಕೊಂಡು ನಿಮ್ಮ ಪತಿ ಅಥವಾ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ. ಕಚೇರಿ ಮತ್ತು ಮನೆ ಎರಡರ ನಡುವೆ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳಬೇಕು. ನಿಮಗೆ ಹುಷಾರಿಲ್ಲದಿದ್ದಲ್ಲಿ ಅಥವಾ ತೊಂದರೆಯಾಗಿದ್ದರೆ ಅದನ್ನು ಮುಚ್ಚಿಡಬೇಡಿ.

ಹಿರಿಯರ ಜೊತೆ ಸಮಯ : ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಅಥವಾ ಮಾವ ಇದ್ದರೆ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಅವರು ಸಮಯಕ್ಕೆ ಸರಿಯಾಗಿ ಆಹಾರ, ಚಹಾ-ತಿಂಡಿ ಮತ್ತು ಔಷಧಿಗಳನ್ನು ನೀಡಬೇಕು,. ಆದ್ದರಿಂದ ಅವರು ಯಾವುದೇ ಸಮಸ್ಯೆ ಎದುರಿಸದ ರೀತಿಯಲ್ಲಿ ನಿಮ್ಮ ಸಮಯವನ್ನು ವಿಭಜಿಸಿ.  
 

Follow Us:
Download App:
  • android
  • ios