Recipe Tips : ರುಚಿ ರುಚಿ, ಉಬ್ಬಿದ ಪೂರಿ ತಯಾರಿಸೋದು ಹೀಗೆ

ಪೂರಿ ಎಲ್ಲರಿಗೂ ಇಷ್ಟ. ಆದ್ರೆ ಹೊಟೇಲ್ ನಂತೆ ಉಬ್ಬಿದ ಪೂರಿ ತಯಾರಿಸೋಕೆ ಎಲ್ಲರಿಗೂ ಸಾಧ್ಯವಿಲ್ಲ. ಪೂರಿ ಎಲ್ಲರ ಮೆಚ್ಚುಗೆ ಗಳಿಸಬೇಕೆಂದ್ರೆ, ಮತ್ತೆ ಮತ್ತೆ ತಿನ್ನುವಂತ ರುಚಿ ಬರ್ಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 

How To Make Poori Crispy And Tasty easy tips here

ಪೂರಿ ಎಲ್ಲರಿಗೂ ಅಚ್ಚುಮೆಚ್ಚಿನ ಆಹಾರ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇದನ್ನು  ತಿನ್ನಲು ಇಷ್ಟಪಡ್ತಾರೆ. ಅನೇಕರ ಮನೆಯಲ್ಲಿ ವಾರಕ್ಕೆ ಒಮ್ಮೆಯಾದ್ರೂ ಪೂರಿ ಇದ್ದೇ ಇರುತ್ತೆ. ಇನ್ನು ಕೆಲವರು ಅಪರೂಪಕ್ಕಾದ್ರೂ ಪೂರಿ ತಿನ್ನುತ್ತಾರೆ. ಹೊಟೇಲ್ ನಲ್ಲಿ ಮಾಡಿದಂತೆ ಪೂರಿಯನ್ನು ಮನೆಯಲ್ಲಿ ಮಾಡೋಕೆ ಆಗಲ್ಲ ಎಂದು ಕೆಲವರು ಬೇಸರಪಟ್ಟುಕೊಳ್ತಾರೆ. ಪೂರಿ ಮಾಡುವುದು ಕಷ್ಟದ ಕೆಲಸವೇನಲ್ಲ. ಹೊಟೇಲ್ ರೀತಿಯಲ್ಲೇ ನೀವು ಪೂರಿ ಮಾಡಬಹುದು. ಗೆಸ್ಟ್ ಮುಂದೆ ಭೇಷ್ ಎನ್ನಿಸಿಕೊಳ್ಳಬಹುದು. ಅದಕ್ಕೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕಾಗುತ್ತದೆ. ನಾವಿಂದು  ರುಚಿ ರುಚಿಯಾದ ಪೂರಿ ಮಾಡೋದು ಹೇಗೆ ಎಂಬುದನ್ನು ಹೇಳ್ತೇವೆ. 

ಪೂರಿ ಮಾಡುವಾಗ ಇದು ನೆನಪಿರಲಿ : 
ಪೂರಿ (Poori) ಹಿಟ್ಟನ್ನು ಹೀಗೆ ತಯಾರಿಸಿ : 
ಪೂರಿ ಹಿಟ್ಟುನ್ನು ಹೀಗೆ ತಯಾರಿಸಿ :
ಪೂರಿಯನ್ನು ರುಚಿ (Taste) ಕರಗೊಳಿಸಲು ಅದರ ಹಿಟ್ಟನ್ನು ತಯಾರಿಸುವಾಗ ಮುಖ್ಯವಾದ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೂರಿ ಹಿಟ್ಟನ್ನು ಕಲಸುವ ಮುನ್ನ ಹಿಟ್ಟಿಗೆ  ಎಣ್ಣೆ ಅಥವಾ ತುಪ್ಪವನ್ನು ಬಳಸಬೇಕು. ಹಿಟ್ಟಿಗೆ ಎಣ್ಣೆ ಅಥವಾ ತುಪ್ಪವನ್ನು (Ghee) ಹಾಕಿ ಸರಿಯಾಗಿ ಮಿಕ್ಸ್ ಮಾಡಬೇಕು. ನಂತ್ರ ನೀರ (Water) ನ್ನು ಹಾಕಿ ಹಿಟ್ಟನ್ನು ಕಲಸಬೇಕು. ಇದ್ರಿಂದ ಪೂರಿ ಉಬ್ಬುತ್ತದೆ. ಹಾಗೆಯೇ ಗರಿಗರಿಯಾಗುತ್ತದೆ.  ಎಣ್ಣೆ (Oil) ಅಥವಾ ತುಪ್ಪದ ಜೊತೆಗೆ  ಹಿಟ್ಟಿಗೆ ರುಚಿಗೆ ತಕ್ಕಂತೆ ಓಂ ಕಾಳು, ಉಪ್ಪು (Salt) ಮತ್ತು ಮೆಣಸಿನ ಪುಡಿಯನ್ನು ಸೇರಿಸಿದ್ರೆ ರುಚಿ ದುಪ್ಪಟ್ಟಾಗುತ್ತದೆ. ಪೂರಿ ಹಿಟ್ಟನ್ನು ತಯಾರಿಸಿದ ತಕ್ಷಣ ಪೂರಿ ಮಾಡಬೇಡಿ. ಹಿಟ್ಟನ್ನು ಕಲಸಿದ ನಂತ್ರ ಕನಿಷ್ಠ 15 ರಿಂದ 20 ನಿಮಿಷಗಳವರೆಗೆ ಹಾಗೆ ಬಿಡಿ. 

ಕಸೂರಿ ಮೇಥಿಯಲ್ಲಿದೆ ಮ್ಯಾಜಿಕ್ : ಪೂರಿ ಹೆಚ್ಚು ರುಚಿಯಾಗ್ಬೇಕೆಂದ್ರೆ ನೀವು ಕಸೂರಿ ಮೇಥಿಯನ್ನು ಬಳಸಬಹುದು. ಕಸೂರಿ ಮೇಥಿ ತುಂಬಾ ರುಚಿಕರವಾಗಿರುತ್ತದೆ. ಸ್ವಲ್ಪ ಕಸೂರಿ ಮೇಥಿ ಹಾಕಿದ್ರೂ ಪೂರಿ ರುಚಿ ಡಬಲ್ ಆಗುತ್ತದೆ. 

ಪೂರಿ ಹಿಟ್ಟಿಗೆ ಬೆರೆಸಿ ರವಾ : ಪೂರಿ ಹಿಟ್ಟಿಗೆ ರವೆ ಯಾಕೆ ಎಂದು ಪ್ರಶ್ನೆ ಮಾಡುವ ಮಹಿಳೆಯರಿದ್ದಾರೆ. ಗೋಧಿ ಹಿಟ್ಟನ್ನು ಮಾತ್ರ ಬಳಸಿ ಕೆಲವರ ಪೂರಿ ಮಾಡ್ತಾರೆ. ಈ ಗೋಧಿ ಹಿಟ್ಟಿನ ಪೂರಿ ಗರಿಗರಿಯಾಗುವುದಿಲ್ಲ. ಮೃದುವಾಗಿ ಅದು ರುಚಿ ಕಳೆದುಕೊಳ್ಳುತ್ತದೆ. ಪೂರಿ ಗರಿಗರಿಯಾಗ್ಬೇಕೆಂದ್ರೆ ನೀವು ರವಾ ಮಿಕ್ಸ್ ಮಾಡ್ಲೇಬೇಕು. ಹೆಚ್ಚಿನ ಪ್ರಮಾಣದಲ್ಲಿ ರವಾ ಹಾಕಿ ಯಡವಟ್ಟು ಮಾಡಿಕೊಳ್ಳಬೇಡಿ. ಮೂರರಿಂದ ನಾಲ್ಕು ಚಮಚ ರವಾ ಮಾತ್ರ ನೀವು ಬಳಸಬೇಕು. ಹೆಚ್ಚು ರವೆ ಹಾಕಿದ್ರೆ ಪೂರಿ ಸ್ವಾದ ಬದಲಾಗುತ್ತದೆ. ಹಾಗೆ ಅತಿ ಗರಿಯಾಗಿ ತಿನ್ನಲು ಕಷ್ಟವಾಗುತ್ತದೆ. 

ಮಸಾಲೆಗೂ ಹುಳ ಹಿಡೀತಾ ಇದ್ಯಾ? ಇಲ್ಲಿವೆ ಸಿಂಪಲ್ ಸೊಲ್ಯೂಷನ್ಸ್

ಗಟ್ಟಿಯಾಗಿರಲಿ ಪೂರಿ ಹಿಟ್ಟು : ನೀವು ಪೂರಿ ಹಿಟ್ಟು ಮಿಕ್ಸ್ ಮಾಡುವಾಗ ಇದ್ರ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ಪೂರಿ ಹಿಟ್ಟು ಮೃದುವಾಗಿರಬಾರದು. ಮೃದುವಾದ್ರೆ ಪೂರಿ ರುಚಿಯಾಗೋದಿಲ್ಲ. ಪೂರಿ ಹಿಟ್ಟು ಸ್ವಲ್ಪ ಗಟ್ಟಿಯಿರಬೇಕು. ಆಗ ಪೂರಿ ಮಾಡೋದು ಸುಲಭ. ಜೊತೆಗೆ ಗರಿಯಾದ ಹಾಗೂ ಉಬ್ಬಿದ ಪೂರಿಯನ್ನು ನೀವು ತಯಾರಿಸಬಹುದು.

Cleaning Tips: ಭಯವಿಲ್ಲದೆ ಹೀಗೆ ಮಾಡಿ ಸ್ವಿಚ್ ಬೋರ್ಡ್ ಕ್ಲೀನಿಂಗ್

ಪೂರಿ ಕರಿಯುವ ವೇಳೆ ಎಣ್ಣೆ ಬಿಸಿಯಾಗಿರಲಿ : ಲಟ್ಟಣಿಸಿದ ಪೂರಿಯನ್ನು ನೀವು ಬಿಸಿ ಎಣ್ಣೆಗೆ ಹಾಕ್ಬೇಕು. ಮೊದಲು ಬಾಣಲೆಗೆ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿಕೊಳ್ಳಿ. ನಂತ್ರ ಪೂರಿ ಹಾಕಿ. ಆ ನಂತ್ರ ಗ್ಯಾಸ್ ಸಣ್ಣ ಉರಿಯಲ್ಲಿರುವಂತೆ ನೋಡಿಕೊಳ್ಳಿ. ಎಣ್ಣೆ ಬಿಸಿಯಾಗದೆ ನೀವು ಪೂರಿ ಮಾಡಿದ್ರೆ ಪೂರಿ ಉಬ್ಬುವುದಿಲ್ಲ. ಉಬ್ಬಿದ, ಗರಿಯಾದ ಪೂರಿ ಬೇಕೆಂದ್ರೆ ನೀವು ಬಿಸಿ ಬಿಸಿ ಎಣ್ಣೆಯಲ್ಲಿ ಕರಿಯಬೇಕು. ಹಾಗೆಯೇ ಕಡಿಮೆ ಎಣ್ಣೆಯಲ್ಲಿ ಪೂರಿ ತಯಾರಿಸಬೇಡಿ. ಎಣ್ಣೆಯಲ್ಲಿ ಪೂರಿ ಸಂಪೂರ್ಣ ಮುಳುಗುವಂತೆ ನೋಡಿಕೊಳ್ಳಿ.
 

Latest Videos
Follow Us:
Download App:
  • android
  • ios