Cleaning Tips: ಭಯವಿಲ್ಲದೆ ಹೀಗೆ ಮಾಡಿ ಸ್ವಿಚ್ ಬೋರ್ಡ್ ಕ್ಲೀನಿಂಗ್

ಮನೆಯ ಮೂಲೆ ಮೂಲೆ ಕ್ಲೀನ್ ಮಾಡಿರ್ತೇವೆ. ಆದ್ರೆ ಸ್ವಿಚ್ ಬೋರ್ಡ್ ಸುದ್ದಿಗೆ ಹೋಗೋದಿಲ್ಲ. ಸ್ವಿಚ್ ಬೋರ್ಡ್ ಗೆ ನೀರು ಬಳಸಿದ್ರೆ ಶಾಕ್ ಹೊಡೆಯುತ್ತೆ ಎನ್ನುವ ಭಯ ಎಲ್ಲರಿಗೂ ಇದ್ದೇ ಇರುತ್ತೆ. ಶಾಕ್ ಹೊಡೆಸಿಕೊಳ್ಳದೆ ಸ್ವಿಚ್ ಬೋರ್ಡ್ ಕ್ಲೀನ್ ಮಾಡೋಕೆ ಇಲ್ಲಿದೆ ಟಿಪ್ಸ್.
 

How To Clean Switch Board With Hydrogen Peroxide

ದೀಪಾವಳಿ ಹತ್ತಿರ ಬರ್ತಿದೆ. ಮನೆ ಕ್ಲೀನಿಂಗ್ ಈಗಲೇ ಶುರುವಾಗಿದೆ. ಮಹಿಳೆಯರು ಮನೆಯ ಒಂದೊಂದು ಮೂಲೆಯನ್ನೂ ಸ್ವಚ್ಛಗೊಳಿಸಲು ಶುರು ಮಾಡ್ತಾರೆ. ಮನೆಯ ಗೋಡೌನ್, ಫ್ಯಾನ್, ಶೋ ಕೇಸ್ ಸೇರಿದಂತೆ ಮನೆಯ ಮೂಲೆ ಮೂಲೆ ಸ್ವಚ್ಛಗೊಳಿಸುವುದು ತಲೆನೋವಿನ ಕೆಲಸ. ಮನೆಯ ಎಲ್ಲ ಭಾಗ ಕ್ಲೀನ್ ಆದ್ರೂ ಅನೇಕರ ಮನೆಯ ಸ್ವಿಚ್ ಬೋರ್ಡ್ ಕಪ್ಪಾಗಿರುತ್ತದೆ. ಅದು ಕರೆಂಟ್ ಎಂಬ ಕಾರಣಕ್ಕೆ ಸ್ವಿಚ್ ಬೋರ್ಡ್ ಕ್ಲೀನ್ ಮಾಡುವ ಸುದ್ದಿಗೆ ಜನರು ಹೋಗೋದಿಲ್ಲ. ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸುವುದು ಕೂಡ ಬಹಳ ಮುಖ್ಯ. ಯಾಕೆಂದ್ರೆ ಕರೆಂಟ್ ಹಾಕಲು ಹೋದಾಗ ಸ್ವಿಚ್ ಬೋರ್ಡ್ ಕೊಳಕಾಗಿದ್ದರೆ ಅದನ್ನು ಮುಟ್ಟಲು ಮನಸ್ಸು ಬರೋದಿಲ್ಲ. ಇಂದು ನಾವು ಸುಲಭವಾಗಿ ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸೋದು ಹೇಗೆ ಎಂಬುದನ್ನು ಹೇಳ್ತೇವೆ.

ಸ್ವಿಚ್ ಬೋರ್ಡ್ (Switch Board) ಕ್ಲೀನ್ ಮಾಡಲು ಸುಲಭ ಮಾರ್ಗ :
ಕೊಳಕು ಸ್ವಿಚ್ ಬೋರ್ಡ್ ಸ್ವಚ್ಛ (Clean) ಗೊಳಿಸುವುದು ತುಂಬಾ ಸುಲಭದ ಕೆಲಸ. ಆದರೆ, ಸ್ವಚ್ಛಗೊಳಿಸುವ ಮೊದಲು ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸುವ ಮೊದಲು ಮೇನ್ ಸ್ವಿಚ್ ಆಫ್ ಮಾಡಿದ್ರೆ ಒಳ್ಳೆಯದು. ಮನೆಯ ಮೇನ್ ಸ್ವಿಚ್ ಆಫ್ ಮಾಡಿದ ನಂತ್ರ ಈ ವಿಷ್ಯವನ್ನು ಮನೆಯ ಎಲ್ಲರಿಗೂ ಹೇಳಿ. ಯಾಕೆಂದ್ರೆ ಅವರು ನಿಮಗೆ ತಿಳಿಯದೆ ಸ್ವಿಚ್ ಹಾಕಿದ್ರೆ ಅಪಾಯವಾಗುವ ಸಾಧ್ಯತೆಯಿರುತ್ತದೆ.

ನೀರಿನ ಬಾಟಲ್‌ ಹಳದಿ ಬಣ್ಣಕ್ಕೆ ತಿರುಗಿದೆಯೇ ? ಕ್ಲೀನ್ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್‌

ಸ್ವಿಚ್ ಬೋರ್ಡ್ ಕ್ಲೀನ್ ಮಾಡಲು ಹೈಡ್ರೋಜನ್ ಪೆರಾಕ್ಸೈಡ್ : ಕೊಳಕು ಸ್ವಿಚ್ ಬೋರ್ಡ್‌ ಸ್ವಚ್ಛಗೊಳಿಸಲು ಹೈಡ್ರೋಜನ್ ಪೆರಾಕ್ಸೈಡ್ (Hydrogen Peroxide) ಒಳ್ಳೆಯ ಪರಿಹಾರವಾಗಿದೆ. ಅಡುಗೆ ಮನೆಯ ಸ್ವಿಚ್ ಬೋರ್ಡ್ ಗೆ ಎಣ್ಣೆ, ತರಕಾರಿ, ಸಾಂಬಾರ ಪದಾರ್ಥಗಳ ಕಲೆ ಅಂಟಿಕೊಳ್ಳುತ್ತದೆ.  ಹೈಡ್ರೋಜನ್ ಪೆರಾಕ್ಸೈಡ್ ಸಹಾಯದಿಂದ ಸ್ವಿಚ್ ಬೋರ್ಡ್ ಹೊಳೆಯುವಂತೆ ಮಾಡಬಹುದು. ಒಂದು ಕಪ್ ನೀರಿಗೆ 2 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ. ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿ, ಸ್ವಿಚ್ ಮೇಲಿ ಇರಿಸಿ ನಂತ್ರ ಎರಡು ನಿಮಿಷ ಇಡಿ. ನಂತ್ರ ಸ್ವಿಚ್ ಬೋರ್ಡನ್ನು ಬ್ರಷ್ ನಿಂದ ಉಜ್ಜಿ ಕ್ಲೀನ್ ಮಾಡಿ. ನಂತ್ರ ಒಣಗಿದ ಬಟ್ಟೆಯಿಂದ ಒರೆಸಿ.

ಹೈಡ್ರೋಜನ್ ಪೆರಾಕ್ಸೈಡ್ ಜೊತೆ ಅಡಿಗೆ ಸೋಡಾ : ಸ್ವಿಚ್ ಬೋರ್ಡ್ ಕ್ಲೀನ್ ಮಾಡಲು ಅಡಿಗೆ ಸೋಡಾ ಕೂಡ ಬಳಸಬಹುದು. ಒಂದು ಪಾತ್ರೆಗೆ ಒಂದು ಕಪ್ ನೀರು ಮತ್ತು ಹೈಡ್ರೋಜನ್ ಪೆರಾಕ್ಸೈಡ್ (Hydrogen Peroxide)  ಸೇರಿಸಿ. ಅದಕ್ಕೆ 2-3 ಚಮಚ ಅಡಿಗೆ ಸೋಡಾ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಐದು ನಿಮಿಷಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಇಡಿ. ನಂತ್ರ ಹತ್ತಿ ಉಂಡೆಯಲ್ಲಿ ಇದನ್ನು ಅದ್ದಿ ನಂತ್ರ ಸ್ವಿಚ್ ಬೋರ್ಡ್ ಮೇಲೆ ಇಡಿ. 2 ನಿಮಿಷಗಳ ನಂತರ ಬ್ರಷ್ ನಿಂದ ಸ್ಕ್ರಬ್ ಮಾಡಿ. ನಂತ್ರ ಬಟ್ಟೆಯಿಂದ ಒರೆಸಿದ್ರೆ ಸ್ವಿಚ್ ಬೋರ್ಡ್ ಹೊಳೆಯೋದನ್ನು ನೀವು ನೋಡಬಹುದು.  

ಮಕ್ಕಳ ಹಾಲಿನ ಬಾಟಲಿ ಕ್ಲೀನ್ ಮಾಡಲು ಸಿಂಪಲ್ ಟಿಪ್ಸ್

ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಿದ ನಂತ್ರ ಈ ವಿಷ್ಯ ನೆನಪಿರಲಿ : ಮನೆಯಲ್ಲಿರುವ ಸ್ವಿಚ್ ಬೋರ್ಡ್ (Switch Board) ಸ್ವಚ್ಛಗೊಳಿಸಿದ ನಂತ್ರ ತಕ್ಷಣವೇ ಸ್ವಿಚ್ ಬೋರ್ಡ್ ಬಳಸಬೇಡಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಲು ಸಾಧ್ಯವಾದಷ್ಟು ಕಡಿಮೆ ನೀರನ್ನು ಬಳಸಿ. ಹಾಗೆಯೇ ಸ್ವಿಚ್ ಬೋರ್ಡ್ ಆನ್ ಮಾಡುವ ವೇಳೆ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಿ. ಕೈ ಒದ್ದೆ ಇರುವಾಗ ಸ್ವಿಚ್ ಹಾಕಬೇಡಿ.
 

Latest Videos
Follow Us:
Download App:
  • android
  • ios