ಕೆಲಸ ಮಾಡುವ ಆಸೆಯುಳ್ಳ ಮಹಿಳೆಯರಿಗಿಲ್ಲಿದೆ ಭಪಪೂರ ಅವಕಾಶ
ಬ್ಯೂಟಿಪಾರ್ಲರ್ ತೆರೆಯಲು ಹಣವಿಲ್ಲ ಆದ್ರೆ ಬ್ಯೂಟಿಷಿಯನ್ ಆಗುವ ಕನಸಿದೆ ಅಂದ್ರೆ ತಲೆಕೆಡಿಸಿಕೊಳ್ಳಬೇಡಿ. ಮನೆ ಕೆಲಸದ ಮಧ್ಯೆ ಮನೆ ಮನೆಗೆ ಹೋಗಿ ಹೇರ್ ಕಟ್ ಮಾಡಿದ್ರೆ ಸಾಕು, ಹಣ ಕೈ ಸೇರುತ್ತದೆ. ಮಹಿಳೆಯರು ಕೂಡ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದಾದ ವೆಬ್ಸೈಟ್ ಇದು.
ಕೆಲಸ ಮಾಡುವ ಬಯಕೆ ಮಹಿಳೆಯರಿಗಿರುತ್ತದೆ. ಮದುವೆ, ಮಕ್ಕಳಾದ್ಮೇಲೆ ಕೆಲಸ ಮಾಡಲು ಅವಕಾಶ ಸಿಗುವುದಿಲ್ಲ. ಒಮ್ಮೆ ವೃತ್ತಿ ಜೀವನ ಬಿಟ್ಮೇಲೆ ಮತ್ತೆ ಕೆಲಸಕ್ಕೆ ಸೇರುವುದು ಸುಲಭವೂ ಅಲ್ಲ. ಹಾಗಂತ ಮನೆಯಲ್ಲಿ ಕುಳಿತ್ರೆ ಆರ್ಥಿಕ ಸಮಸ್ಯೆ ಶುರುವಾಗುತ್ತದೆ, ಸ್ವಾವಲಂಭಿ ಬದುಕು ಬೇಕು ಎನ್ನುವವರು ಕೆಲಸಕ್ಕೆ ಹುಡುಕಾಟ ನಡೆಸ್ತಾರೆ. ನೀವೂ ಕೆಲಸಕ್ಕೆ ಹುಡುಕಾಟ ನಡೆಸ್ತಿದ್ರೆ ಅರ್ಬನ್ ಕ್ಲಾಪ್ ಕಂಪನಿಯಲ್ಲಿ ನಿಮಗೆ ಅವಕಾಶವಿದೆ. ಅರ್ಬನ್ ಕ್ಲಾಪ್ ಕಂಪನಿಯಲ್ಲಿ ನೀವು ಹೇಗೆ ಕೆಲಸ ಗಿಟ್ಟಿಸಿಕೊಳ್ಳಬಹುದು ಎನ್ನುವ ಬಗ್ಗೆ ನಾವು ಹೇಳ್ತೇವೆ.
ಅರ್ಬನ್ ಕ್ಲಾಪ್ (Urban Clap) ಕೆಲಸವೇನು ? : ಅರ್ಬನ್ ಕ್ಲಾಪ್ ಕಂಪನಿ 2014ರಲ್ಲಿ ಶುರುವಾಗಿದೆ. ಮನೆ ಕೆಲಸಕ್ಕೆ ಜನಬೇಕೆಂದ್ರೆ ಅವರನ್ನು ಹುಡುಕುವುದು ಕಷ್ಟ. ನಗರ ಪ್ರದೇಶದಲ್ಲಿ ಯಾರೂ ಸುಲಭವಾಗಿ ಸಿಗುವುದಿಲ್ಲ. ಗೂಗಲ್ (Google) ನಲ್ಲಿ ಸರ್ಚ್ ಮಾಡಿ ಕೆಲಸಕ್ಕೆ ಜನರನ್ನು ಕರೆದ್ರೂ ಅವರು ಸರಿಯಾಗಿ ಮಾಡ್ತಾರೆ ಎನ್ನುವ ಭರವಸೆಯಿಲ್ಲ. ಅನೇಕ ಬಾರಿ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಆದ್ರೆ ಈಗ ಮನೆ ಕೆಲಸ (House Work) ಕ್ಕೆ, ರಿಪೇರಿ ಕೆಲಸ ಮಾಡುವ ಜನರನ್ನು ಹುಡುಕುವುದು ಸುಲಭ. ಅರ್ಬಲ್ ಕ್ಲಾಪ್ ಕಂಪನಿಯಲ್ಲಿ ನಿಮಗೆ ಎಲ್ಲ ರೀತಿಯ ಕೆಲಸಗಾರರು ಸಿಗ್ತಾರೆ. ಅರ್ಬನ್ ಕ್ಲಾಪ್ ದೈನಂದಿನ ಕೆಲಸವನ್ನು ಸುಲಭಗೊಳಿಸಿದೆ. ದೈನಂದಿನ ಕೆಲಸಕ್ಕೆ ಅಗತ್ಯವಿರುವ ಜನರನ್ನು ಇದು ಒದಗಿಸುತ್ತದೆ.
ನಗರದಲ್ಲಿ ಅರ್ಬನ್ ಕಂಪನಿ ನೀಡುವ ಸೇವೆಗಳು ಯಾವುವು? : ಅರ್ಬನ್ ಕಂಪನಿಯು ಹೇರ್‌ಕಟ್ಸ್, ಸ್ಪಾಗಳು, ಸಲೂನ್‌ಗಳು, ಮನೆ ಸ್ವಚ್ಛಗೊಳಿಸುವುದು, ಹೋಮ್ ಪೇಂಟಿಂಗ್ ಮತ್ತು ಎಲೆಕ್ಟ್ರಾನಿಕ್ ರಿಪೇರಿ ಮುಂತಾದ ವಿವಿಧ ಸೇವೆಗಳಿಗೆ ಆನ್‌ಲೈನ್ ಬುಕಿಂಗ್ ಸೇವೆಯನ್ನು ಒದಗಿಸುತ್ತದೆ.
ವಿದೇಶದಲ್ಲೂ ಅರ್ಬನ್ ಕಂಪನಿ ಒದಗಿಸುತ್ತೆ ಸೇವೆ : ಭಾರತದಲ್ಲಿ ಅನೇಕ ನಗರಗಳಲ್ಲಿ ಅರ್ಬನ್ ಕಂಪನಿ ಸೇವನೆ ಒದಗಿಸುತ್ತದೆ. ಕಂಪನಿಯು ಆಗ್ರಾ, ಅಹಮದಾಬಾದ್, ಭೋಪಾಲ್, ಬೆಂಗಳೂರು, ಭುವನೇಶ್ವರ, ದೆಹಲಿ, ಎನ್ ಸಿಆರ್, ಇಂದೋರ್, ಜೈಪುರ, ಕೋಲ್ಕತ್ತಾ, ಮುಂಬೈ, ಲಕ್ನೋ, ವಡೋದರಾ ಸೇರಿದಂತೆ ಒಟ್ಟು 30 ನಗರಗಳಲ್ಲಿ ತನ್ನ ಸೇವೆಗಳನ್ನು ಒದಗಿಸುತ್ತದೆ. ಇದಲ್ಲದೆ ಅಬುಧಾಬಿ, ದುಬೈ, ಸಿಡ್ನಿ ಮತ್ತು ಸಿಂಗಾಪುರದಲ್ಲಿಯೂ ತನ್ನ ಸೇವನೆಯನ್ನು ನೀಡುತ್ತಿದೆ.
Career : ನಿಮಗೂ ಹೀಗನ್ನಿಸಿದ್ರೆ ಜಾಬ್ ಬದಲಿಸಿ
ಈ ಅರ್ಬನ್ ಕಂಪನಿಯಲ್ಲಿ ನೀವೂ ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ? : ಅರ್ಬನ್ ಕಂಪನಿಗೆ ಸೇರುವ ಮೊದಲು ನಿಮ್ಮ ನಗರದಲ್ಲಿ ಅದ್ರ ಸೇವೆ ಲಭ್ಯವಿದ್ಯಾ ಎಂಬುದನ್ನು ಪತ್ತೆ ಮಾಡಿ. ಅರ್ಬನ್ ಕಂಪನಿ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ನಗರದ ಹೆಸರನ್ನು ನಮೂದಿಸಿದ್ರೆ ಆಗ ನಿಮ್ಮ ನಗರದಲ್ಲಿ ಸೇವೆ ಲಭ್ಯವಿದೆಯೇ ಎಂಬುದು ನಿಮಗೆ ಗೊತ್ತಾಗುತ್ತದೆ. ನೀವು ಅರ್ಬನ್ ಕಂಪನಿ ವೆಬ್ಸೈಟ್ ಗೆ ಹೋಗಿ ನಿಮ್ಮ ಊರು, ಹೆಸರು, ಫೋನ್ ನಂಬರ್ ಹಾಗೂ ನೀವು ಯಾವ ಕೆಲಸ ಮಾಡಲು ಬಯಸುತ್ತೀರಿ ಎಂಬುದನ್ನು ನಮೂದಿಸಬೇಕು. ನಂತ್ರ ಸಂಪರ್ಕಿಸಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡ್ಬೇಕು.
ವೆಬ್ಸೈಟ್ ನಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಂಡ ತಕ್ಷಣ ನಿಮ್ಮ ಫೋನ್ ಗೆ ಸಂದೇಶ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಅರ್ಬನ್ ಕಂಪನಿ ಅಪ್ಲಿಕೇಷನ್ ಡೌನ್ಲೋಡ್ ಮಾಡಬೇಕು. ನಂತ್ರ ಅಪ್ಲಿಕೇಷನ್ ಪೂರ್ಣಗೊಳಿಸಿ ಸೆಂಡ್ ಮಾಡಬೇಕಾಗುತ್ತದೆ. ನಿಮ್ಮ ಪ್ರೊಫೈಲ್ ಚೆಕ್ ಮಾಡಿದ ನಂತ್ರ ಕಂಪನಿ ನಿಮ್ಮ ಆಯ್ಕೆ ಬಗ್ಗೆ ತಿಳಿಸುತ್ತದೆ. ಅರ್ಬನ್ ಕಂಪನಿಯಲ್ಲಿ ನಿಮ್ಮ ಗಳಿಕೆಗೆ ಮಿತಿಯಿಲ್ಲ. ನೀವು ಎಷ್ಟು ಲೀಡ್ ಪಡೆಯುತ್ತೀರಿ ಎನ್ನುವ ಆಧಾರದ ಮೇಲೆ ನಿಮ್ಮ ಗಳಿಕೆ ನಿಂತಿರುತ್ತದೆ.
ಯಾವ ರಾಶಿಯವರಿಗೆ ಯಾವ ಉದ್ಯೋಗ ಬೆಸ್ಟ್? ಇಲ್ಲಿದೆ ಲಿಸ್ಟ್