ಉಜ್ಜಿ ಉಜ್ಜಿ ಸಾಕಾಗಿದ್ಯಾ? ಹೀಗೆ ಮಾಡಿದ್ರೆ ಟಾಯ್ಲೆಟ್ ಕಮೋಡ್ ಫಳ ಫಳ ಅಂತ ಹೊಳೆಯುತ್ತೆ!

Toilet Commode Cleaning Hacks: ಇಂದು ನಾವು ನಿಮಗೆ ಕೂಲ್ ಡ್ರಿಂಕ್ ಮತ್ತು ಟೊಮೆಟೋ ಕೆಚಪ್ ಬಳಸಿ ಕಲೆಗಳನ್ನು ಸ್ವಚ್ಛಗೊಳಿಸಬಹುದು.ಈ ಎರಡೂ ವಸ್ತುಗಳನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ. 

how to clean toile commode and tiles using cool drink and tomato ketchup mrq

ಬಾತ್‌ರೂಮ್, ಟಾಯ್ಲೆಟ್‌ ಸ್ವಚ್ಛಗೊಳಿಸಲು (Toile Commode Cleaning) ಜನರು ವಾರದಲ್ಲಿ ಒಂದು ದಿನವನ್ನು ಮೀಸಲಿರಿಸುತ್ತಾರೆ. ಕೆಲವೊಮ್ಮೆ ಹಠಮಾರಿ ಕಲೆಗಳು ಎಷ್ಟೇ ಉಜ್ಜಿದರೂ ಬಾತ್‌ರೂಮ್, ಟಾಯ್ಲೆಟ್ ಕ್ಲೀನ್ ಆಗಲ್ಲ. ಮನೆಯ ಹಾಲ್‌ನಲ್ಲಿ ಬಿಳಿ ಟೈಲ್ಸ್ ಹಾಕಿದ್ದರೆ ಒಂದು ಸಣ್ಣ ಕಲೆಯಾದ್ರೂ ದೊಡ್ಡದಾಗಿ ಕಾಣಿಸುತ್ತದೆ. ಎಷ್ಟೇ ಉಜ್ಜಿದರೂ ಕೆಲ ಕಲೆಗಳು ಹೋಗೋದೇ ಇಲ್ಲ. ಇಂದು ನಾವು ಹೇಳುವ ಎರಡು ವಸ್ತುಗಳನ್ನು ಬಳಸಿದ್ರೆ ಟಾಯ್ಲೆಟ್ ಫಳ ಫಳ ಅಂತ ಹೊಳೆಯುತ್ತದೆ. 

ಬಾತ್‌ರೂಮ್, ಟಾಯ್ಲೆಟ್, ವಾಶ್ ಬೇಸಿನ್, ಸಿಂಕ್, ಟೈಲ್ಸ್ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ನೂರಾರು ಉತ್ಪನ್ನಗಳು ಸಿಗುತ್ತವೆ. ಯಾವುದೇ ಉತ್ಪನ್ನ ಬಳಕೆ ಮಾಡಿದರೂ ಕಲೆ ಹೋಗಿಲು ಉಜ್ಜಲೇಬೇಕು ಅನ್ನೋದು ಹಲವರು ಅಭಿಪ್ರಾಯವಾಗಿದೆ. ಇನ್ನು ಕೆಲವರು ವಾಷಿಂಗ್ ಪೌಡರ್ ಸಹ ಬಳಸುತ್ತಾರೆ. ಇಂದು ನಾವು ನಿಮಗೆ ಕೂಲ್ ಡ್ರಿಂಕ್ ಮತ್ತು ಟೊಮೆಟೋ ಕೆಚಪ್ ಬಳಸಿ ಕಲೆಗಳನ್ನು ಸ್ವಚ್ಛಗೊಳಿಸಬಹುದು.ಈ ಎರಡೂ ವಸ್ತುಗಳನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ. 

ಕೂಲ್ ಡ್ರಿಂಕ್ ಮತ್ತು ಟೊಮೆಟೋ ಕೆಚಪ್

ಸ್ನಾನದ ಗೃಹ ಸೇರಿದಂತೆ ಟೈಲ್ಸ್ ಸ್ವಚ್ಛಗೊಳಿಸಲು ಕೂಲ್ ಡ್ರಿಂಕ್ ಮತ್ತು ಟೊಮೆಟೋ ಕೆಚಪ್ ಬಳಕೆ ಮಾಡಬಹುದು. ಇವುಗಳ ಬಳಕೆಯಿಂದ ಮನೆಯ ಮೂಲೆಗಳಲ್ಲಿ ಅಂಟಿಕೊಂಡಿರುವ ಕಲೆಗಳು ಸಹ ಮಾಯವಾಗುತ್ತವೆ. ಕಲೆಗಳನ್ನು ಹೋಗಿಸುವಲ್ಲಿ ಈ ಎರಡೂ ವಸ್ತುಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. 

ಇಂದು ಬಹುತೇಕರು ಕೂಲ್ ಡ್ರಿಂಕ್‌ಗಳನ್ನು ಮನೆಯಲ್ಲಿ ಸ್ಟೋರೇಜ್ ಮಾಡುತ್ತಾರೆ. ಒಮ್ಮೆ ಬಾಟೆಲ್ ತೆರೆದ ಕೆಲವೇ ಗಂಟೆಗಳಲ್ಲಿ ಕೂಲ್ ಡ್ರಿಂಕ್ ಕುಡಿಯಬಹುದು. ಕೆಲವೊಮ್ಮೆ ವೇಸ್ಟ್ ಆಗಿ ಉಳಿದಿರುವ ಕೂಲ್ ಡ್ರಿಂಕ್‌ನ್ನು ಕಲೆ ಇರೋ ಸ್ಥಳದಲ್ಲಿ ಹಾಕಿ ಸ್ಕ್ರಬರ್‌ನಿಂದ ಉಜ್ಜಬೇಕು. ಹೀಗೆ ಉಜ್ಜಿದ್ರೆ ಕಲೆಗಳು ಮಾಯವಾಗಿ ನಿಮ್ಮ ಟಾಯ್ಲೆಟ್‌ ಫಳ ಫಳ ಅಂತ ಹೊಳೆಯುತ್ತದೆ. 

ಪಾತ್ರೆ ತೊಳೆಯುವ ಸಿಂಕ್ ಸೇರಿದಂತೆ ಮನೆಯ ಮೂಲೆಯ ಟೈಲ್ಸ್‌ನಲ್ಲಿ ಹೆಚ್ಚು ಕೆಲಗಳು ಇರುತ್ತವೆ. ಕಲೆಗಳ ಮೇಲೆ ಟೊಮೆಟೋ ಕೆಚಪ್ ಹಾಕಿ ನಿಮ್ಮ ಹಳೆಯ ಟೂತ್‌ಬ್ರಷ್‌ನಿಂದ ಉಜ್ಜಬೇಕು. ನಂತರಮ ಒದ್ದೆ ಬಟ್ಟೆಯಿಂದ ಒರೆಸಿದ್ರೆ ಟೈಲ್ಸ್ ಪ್ರಕಾಶಮಾನವಾಗಿ ಕಾಣುತ್ತದೆ.

ಕ್ಲೀನಿಂಗ್‌ಗಾಗಿ ಮನೆ ಬೀಗ ಒಡೆದ ಮಾಲೀಕನಿಗೆ ಶಾಕ್: ಸೀಲ್ ಮಾಡಿದ ಡ್ರಮ್ ಒಳಗಿತ್ತು ಬಳೆ ತೊಟ್ಟ ಅಸ್ಥಿಪಂಜರ

ಮನೆ ಒರೆಸುವಾಗ ನೀರಿನಲ್ಲಿ ಈ ಮೂರು ಪದಾರ್ಥ ಸೇರಿಸಿ

ಮನೆಯಲ್ಲಿ ಸೊಳ್ಳೆಗಳು ಆಗಿದ್ರೆ ನೆಲ ಒರೆಸುವಾಗ ಮೂರು ವಸ್ತುಗಳನ್ನ ಸೇರಿಸಬೇಕು. ಇದರಿಂದ ಮನೆಯಿಂದ ಸೊಳ್ಳೆಗಳು ಓಡಿ ಹೋಗುತ್ತವೆ. ಈ ಮೂರರಲ್ಲಿ ಯಾವುದಾದರೂ ಒಂದು ಪದಾರ್ಥ ಸೇರಿಸಿದರೂ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಮನೆ ಒರೆಸುವ ನೀರಿನಲ್ಲಿ ಉಪ್ಪು ಸೇರಿಸುತ್ತಿದ್ದರು. ಉಪ್ಪು ನೀರಿನಿಂದ ಮನೆ ಒರೆಸೋದರಿಂದ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗುತ್ತದೆ. 

ಮನೆ ಕ್ಲೀನ್ ಮಾಡೋವಾಗ ಹಳೆ ಚೀಟಿ ಸಿಕ್ರೆ ಎಸೀಬೇಡಿ, ಮಹಿಳೆಗೆ ಸಿಕ್ತು ಕೋಟಿ ಲಾಟರಿ!

ವಿನೇಗರ್, ಲ್ಯಾವೆಂಡರ್ ಎಣ್ಣೆ ಅಥವಾ ಪುದೀನಾ ಎಣ್ಣೆಯಂತಹ ಸಾರಭೂತ ತೈಲ ಅಥವಾ ದಾಲ್ಚಿನಿ, ಲವಂಗ್ ಪುಡಿಯನ್ನು ನೀರಿನಲ್ಲಿ ಸೇರಿಸೋದರಿಂದ ಸೊಳ್ಳೆ ಸೇರಿದಂತೆ ಇತರೆ ಕೀಟಗಳು ಮನೆಯೊಳಗೆ ಬರಲ್ಲ.

Latest Videos
Follow Us:
Download App:
  • android
  • ios