ಕ್ಲೀನಿಂಗ್‌ಗಾಗಿ ಮನೆ ಬೀಗ ಒಡೆದ ಮಾಲೀಕನಿಗೆ ಶಾಕ್: ಸೀಲ್ ಮಾಡಿದ ಡ್ರಮ್ ಒಳಗಿತ್ತು ಬಳೆ ತೊಟ್ಟ ಅಸ್ಥಿಪಂಜರ
ಮನೆಯೊಳಗೆ ಸಿಮೆಂಟ್‌ನಿಂದ ಸೀಲ್ ಆಗಿದ್ದ ದೊಡ್ಡ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮನುಷ್ಯನ ಅಸ್ಥಿಪಂಜರ ನೋಡಿ ಮನೆಯೊಡೆಯ ಶಾಕ್ ಆಗಿದ್ದು, ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಕೋಲ್ಕತ್ತಾ: ಎರಡು ವರ್ಷಗಳಿಂದ ಬೀಗ ಹಾಕಿದ್ದ ಮನೆಯನ್ನು ಸ್ವಚ್ಛಗೊಳಿಸುವುದಕ್ಕಾಗಿ ಬೀಗ ತೆರೆದ ಮನೆಯೊಡೆಯರೊಬ್ಬರು ಅಲ್ಲಿನ ಆಘಾತಕಾರಿ ಸ್ಥಿತಿ ನೋಡಿ ಶಾಕ್‌ಗೊಳಗಾದ ಘಟನೆ ಕೋಲ್ಕತ್ತಾದ ಬಾಗುಯಾಟಿ ಪ್ರದೇಶದಲ್ಲಿ ನಡೆದಿದೆ.
ಮನೆಯೊಳಗೆ ಸಿಮೆಂಟ್‌ನಿಂದ ಸೀಲ್ ಆಗಿದ್ದ ದೊಡ್ಡ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮನುಷ್ಯನ ಅಸ್ಥಿಪಂಜರ ನೋಡಿ ಮನೆಯೊಡೆಯ ಶಾಕ್ ಆಗಿದ್ದು, ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ನಾಲ್ಕಂತಸ್ತಿನ ಕಟ್ಟಡದ ಕೊನೆಯ ಮಹಡಿಯಲ್ಲಿ ಈ ಮನೆ ಇತ್ತು. ಮನೆ ಮಾಲೀಕರು ಈ ಮನೆಯನ್ನು 2018ರಲ್ಲಿ ನೇಪಾಳಿ ಕುಟುಂಬವೊಂದಕ್ಕೆ (Nepali Family) ಐದು ವರ್ಷಗಳಿಗಾಗಿ ಬಾಡಿಗೆ ನೀಡಿದ್ದರು. ಆದರೆ ಎರಡು ವರ್ಷಗಳ ಹಿಂದೆ ಈ ಮನೆಯನ್ನು ನೇಪಾಳಿ ಜೋಡಿ ಮನೆ ಹೊರಗಿನಿಂದ ಲಾಕ್ ಮಾಡಿ ಹೊರಟು ಹೋಗಿದ್ದರು. ಆದರೆ ಅವರು ಮನೆ ಮಾಲೀಕರಿಗೆ ಬಾಡಿಗೆ ಪಾವತಿ ಮಾಡುತ್ತಿದ್ದರು.
ಈ ದೇಶದಲ್ಲಿ ಮೃತದೇಹದೊಂದಿಗೆ ನೃತ್ಯ ಮಾಡಿ ಸಂಭ್ರಮಾಚರಿಸ್ತಾರೆ ಜನ
ಆದರೆ ಕಳೆದ ಆರು ತಿಂಗಳುಗಳಿಂದ ಈ ಬಾಡಿಗೆದರರು ಬಾಡಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಮನೆ ಮಾಲೀಕ ಗೋಪಾಲ್ ಮುಖರ್ಜಿ (Gopal Mukharji)ಅವರು ಏನಾಗಿರಬಹುದು ಎಂದು ಈ ಮನೆಯತ್ತ ಬಂದಿದ್ದರು. ಹೀಗೆ ಬಂದವರು ಮನೆಯ ಲಾಕ್ ಒಡೆದು ಮನೆ ಸ್ವಚ್ಛ ಮಾಡಿ ಹೊಸ ಬಾಡಿಗೆದಾರರಿಗೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಮನೆ ಸ್ವಚ್ಛಗೊಳಿಸುವ ವೇಳೆ ಅವರಿಗೆ ಈ ಸಿಮೆಂಟ್‌ನಿಂದ ಮುಚ್ಚಿದ ಪ್ಲಾಸ್ಟಿಕ್ ಡ್ರಮ್ (Plastic Drum) ಕಾಣಿಸಿಕೊಂಡಿದ್ದು, ಕುತೂಹಲದಿಂದ ಅದನ್ನು ಒಡೆದು ನೋಡಿದ ಅವರು ತಲೆತಿರುಗಿ ಬೀಳೋದೊಂದು ಬಾಕಿ..!
ಮನೆ ಮಾಲೀಕ ಮುಖರ್ಜಿ ಅವರು ಹೇಳುವ ಪ್ರಕಾರ, ಈ ನೇಪಾಳಿ ಜೋಡಿ ತಮ್ಮ 30ರ ಹರೆಯದಲ್ಲಿದ್ದು, ಕೋವಿಡ್ ಸಮಯದಲ್ಲಿಯೂ ಕೂಡ ಈ ಫ್ಲಾಟ್‌ನಲ್ಲಿದ್ದರು. ಆದರೆ 2021ರಲ್ಲಿ ಅವರು ನೇಪಾಳಕ್ಕೆ ತೆರಳಿದ್ದರು. ಇನ್ನು ಈ ಡ್ರಮ್‌ನಲ್ಲಿರುವ ಅಸ್ಥಿಪಂಜರ ಯಾರದ್ದು ಎಂಬ ಬಗ್ಗೆ ಇನ್ನಷ್ಟೇ ಗುರುತು ಪತ್ತೆ ಮಾಡಬೇಕಿದೆ. ಈ ಆಸ್ತಿಪಂಜರ ಒಂದು ಕೈಯಲ್ಲಿ ಬಳೆ ಇದ್ದು ನೈಟ್ ಡ್ರೆಸ್ ಧರಿಸಿರುವುದು ಕಂಡು ಬಂದಿದೆ. ಈ ಅಸ್ಥಿಪಂಜರವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅಸ್ಥಿಪಂಜರದ ಲಿಂಗ ಸಾವಿನ ಸಮಯ ಹಾಗೂ ಕಾರಣವನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ.
ಗಂಡನ ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಹೆಂಡತಿಗೆ ಬೇರೆ ಮದ್ವೆ: ಪತಿಯಿಂದ ಮದ್ವೆ ಮಾಡಿದವನ ಕೊಲೆ
ಇಲ್ಲಿ ವಾಸವಿದ್ದ ನೇಪಾಳಿ ದಂಪತಿಗಳೊಂದಿಗೆ ಬಾಡಿಗೆ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಮನೆ ಮಾಲೀಕ ಮುಖರ್ಜಿ ಹೇಳಿಕೊಂಡಿದ್ದಾರೆ, ಆದರೆ ಆ ದಂಪತಿಯ ಯಾವುದೇ ಫೋಟೋಗಳಾಗಲಿ ಹೆಸರಾಗಲಿ ಅವರಿಗೆ ನೆನಪಿಲ್ಲ, ಪ್ರಸ್ತುತ ನೇಪಾಳಿ ದಂಪತಿಯ ಸ್ವಿಚ್‌ಆಫ್ ಆದ ಫೋನ್ ನಂಬರ್ ಅನ್ನು ಮನೆ ಮಾಲೀಕರು ಪೊಲೀಸರಿಗೆ ನೀಡಿದ್ದಾರೆ.
ಈ ದಂಪತಿಗಳು ಶೀಘ್ರದಲ್ಲೇ ಹಿಂತಿರುಗುವುದಾಗಿ ನನಗೆ ತಿಳಿಸಿದ್ದರು ಮತ್ತು ಬಾಡಿಗೆ ಪಾವತಿಸುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು. ಆರಂಭದಲ್ಲಿ ಕಾಲ ಕಾಲಕ್ಕೆ ಬಾಡಿಗೆ ನೀಡಿದ್ದರೂ ಕಳೆದೊಂದು ವರ್ಷದಿಂದ ಸರಿ ಬಾಡಿಗೆ ನೀಡುತ್ತಿರಲಿಲ್ಲ. ಅದರಲ್ಲೂ ಕಳೆದ ಆರು ಆರ್ಥಿಕ ತೊಂದರೆಗಳ ಕಾರಣ ನೀಡಿ ಬಾಡಿಗೆ ನೀಡಿಯೇ ಇಲ್ಲ
ಹೀಗಾಗಿ ಕಳೆದ ಭಾನುವಾರ ಮನೆ ಮಾಲೀಕ ಮುಖರ್ಜಿ ಫ್ಲಾಟ್ ಅನ್ನು ಸ್ವಚ್ಛಗೊಳಿಸಲು ಮತ್ತು ದುರಸ್ತಿ ಮಾಡಲು ಒಬ್ಬ ಮೇಸ್ತ್ರಿ ಮತ್ತು ಸಹಾಯಕನನ್ನು ಅಲ್ಲಿಗೆ ಕರೆತಂದಿದ್ದರು. ಈ ವೇಳೆ ಈ ಸಿಮೆಂಟ್‌ನಿಂದ ಸೀಲ್ ಆಗಿದ್ದ ಡ್ರಮ್ ಕಾಣಿಸಿದೆ. ಕಾರ್ಮಿಕರು ಡ್ರಮ್‌ನ ಈ ಸಿಮೆಂಟ್ ಸೀಲ್ ಅನ್ನು ಒಡೆದಾಗ ಗಬ್ಬು ವಾಸನೆಯ ಜೊತೆ ಅಸ್ಥಿಪಂಜರ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಂದೋರ್ ಏರ್‌ಪೋರ್ಟ್‌ನ ಚರಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ
ಆಸ್ಥಿಪಂಜರದಲ್ಲಿ ಬಳೆ ಮತ್ತು ಬಟ್ಟೆ ಇದ್ದ ಕಾರಣ ಇದು ಮಹಿಳೆಯದ್ದಾಗಿರುವ ಸಾಧ್ಯತೆ ಇದೆ. ಆದರೆ ಇದನ್ನು ಖಚಿತಪಡಿಸಲು ಮರಣೋತ್ತರ ಪರೀಕ್ಷೆಯ ಅಗತ್ಯವಿದೆ ಎಂದು ಬಿಧಾನನಗರ ಕಮಿಷನರೇಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ಇಳಿದಿರುವ ಪೊಲೀಸರು ಪ್ರಸ್ತುತ ಮುಖರ್ಜಿಯಿಂದ ಬಾಡಿಗೆ ಒಪ್ಪಂದದ ಪ್ರತಿಯನ್ನು ಪಡೆದು ಬಾಡಿಗೆದಾರರ ಗುರುತನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಅವರು ಒದಗಿಸಿದ ಫೋನ್ ಸಂಖ್ಯೆಯನ್ನು ತನಿಖೆ ಮಾಡುತ್ತಿದ್ದಾರೆ ಮತ್ತು ಬಾಡಿಗೆ ಪಾವತಿಗಳಿಗೆ ಸಂಬಂಧಿಸಿದ ಬ್ಯಾಂಕಿಂಗ್ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ.