Asianet Suvarna News Asianet Suvarna News

Kitchen Hacks: ಮೈಕ್ರೋವೇವ್ ವಾಸನೆ ಬರ್ತಿದ್ದರೆ ಹೀಗೆ ಕ್ಲೀನ್ ಮಾಡಿ!

ಮೈಕ್ರೋವೇವ್ ಸ್ವಚ್ಛವಾಗಿರುವುದು ಬಹಳ ಮುಖ್ಯ. ಅದ್ರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯಿರುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿ ದಿನ ಬಳಸುವ ಮೈಕ್ರೋವೇವ್ ಸ್ವಚ್ಛತೆಗೂ ಗಮನ ನೀಡಿ.
 

How To Clean Microwave At Home kitchen hacks here
Author
First Published Sep 5, 2022, 2:21 PM IST

ಈಗಿನ ದಿನಗಳಲ್ಲಿ ಬಹುತೇಕ ಎಲ್ಲರು ಕೆಲಸವನ್ನು ಸುಲಭ ಮಾಡಲು ಎಲೆಕ್ಟ್ರಿಕ್ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡ್ತಾರೆ. ಆದ್ರೆ ಈ ವಸ್ತುಗಳ ಬಳಕೆ ಜೊತೆ ಕ್ಲೀನಿಂಗ್ ಕೂಡ ಜನರಿಗೆ ತಿಳಿದಿರಬೇಕು. ಜನರ ಮನೆಗಳಲ್ಲಿ ಮೈಕ್ರೋವೇವ್ ಈಗ ಸ್ಥಾನ ಪಡೆದಿದೆ. ಬಹುತೇಕರು ಮೈಕ್ರೋವೇವ್ ಬಳಕೆ ಮಾಡ್ತಾರೆ. ಇದ್ರಲ್ಲಿ ಆಹಾರವನ್ನು ಸುಲಭವಾಗಿ ಬಿಸಿ ಮಾಡಬಹುದು. ಕೆಲವರು ಮೈಕ್ರೋವೇವ್ ನಲ್ಲಿಯೇ ಆಹಾರವನ್ನು ತಯಾರಿಸ್ತಾರೆ. ಇದ್ರಿಂದ ಮೈಕ್ರೋವೇವ್ ಕೊಳಕಾಗುತ್ತದೆ. ಮೈಕ್ರೋವೇವ್ ನಿಂದ ಕೆಟ್ಟ ವಾಸನೆ ಬರ್ತಿರುತ್ತದೆ. ದೀರ್ಘಕಾಲ ಮೈಕ್ರೋವೇವ್ ಹಾಗೆ ಇಡಬಾರದು. ಅದನ್ನು ಆಗಾಗ ಸ್ವಚ್ಛಗೊಳಿಸಬೇಕು. ಮೈಕ್ರೊವೇವ್ (Microwaves) ಎಲೆಕ್ಟ್ರಿಕ್ ಉಪಕರಣವಾಗಿದೆ. ಹಾಗಾಗಿ ಅದನ್ನು ನೀರಿನಲ್ಲಿ ತೊಳೆಯಲು ಸಾಧ್ಯವಿಲ್ಲ. ಅದ್ರ ಸ್ವಚ್ಛತೆ (Clean ) ಗೆ ಬೇರೆ ವಿಧಾನವಿದೆ. ಆ ವಿಧಾನಗಳನ್ನು ಬಳಸಿ ನೀವು ಮೈಕ್ರೋವೇವ್ ಕ್ಲೀನ್ ಮಾಡ್ಬೇಕು. ಇಂದು ನಾವು ಮೈಕ್ರೋವೇವ್ ಸ್ವಚ್ಛತೆ ಹೇಗೆ ಎಂಬುದನ್ನು ಹೇಳ್ತೇವೆ. 

ಸುಲಭವಾಗಿ ಸ್ವಚ್ಛಗೊಳಿಸಿ ಮೈಕ್ರೋವೇವ್ :  
ಮೈಕ್ರೋವೇವ್ ಕ್ಲೀನ್ ಮಾಡಲು ಪೇಪರ್ ಟವೆಲ್ :
ಪೇಪರ್ ಟವೆಲ್ ನಿಂದ ನೀವು ಸುಲಭವಾಗಿ ಮೈಕ್ರೋವೇವ್ ಸ್ವಚ್ಛಗೊಳಿಸಬಹುದು. ಪೇಪರ್ ಟವೆಲನ್ನು ಮೊದಲು ಮೈಕ್ರೊವೇವ್‌ ಒಳಗೆ ಹಾಕ್ಬೇಕು. ನಂತ್ರ ಮೈಕ್ರೊವೇವ್ ಅನ್ನು 3-5 ನಿಮಿಷಗಳ ಕಾಲ ಚಲಾಯಿಸಬೇಕು. ನಂತ್ರ ಮೈಕ್ರೋವೇವ್ ಸ್ವಿಚ್ ಬಂದ್ ಮಾಡಿ, ಇದೇ ಟವೆಲ್ ಬಳಸಿ ಒಳಭಾಗವನ್ನು ಕ್ಲೀನ್ ಮಾಡಿ. 

ನಿಂಬೆ ರಸ (Lemon Juice) ಮತ್ತು ನೀರಿನ ಬಳಕೆ : ಮೈಕ್ರೋವೇವ್ ಅನ್ನು ಸ್ವಚ್ಛಗೊಳಿಸಲು ಸುಲಭವಾದ  ವಿಧಾನ ಇದು. ನೀವು ನಿಂಬೆ ರಸ ಮತ್ತು ನೀರನ್ನು ಬಳಸಿ ಆರಾಮವಾಗಿ ಇದನ್ನು ಸ್ವಚ್ಛಗೊಳಿಸಬಹುದು.  ಮೈಕ್ರೋವೇವ್ ಸರ್ವಿಸ್ ಮೆನ್ ಗಳಿಗೆ ನೀವು ಹೇಳಿದ್ರೂ ಅವರು ಕೂಡ ಸ್ವಚ್ಛತೆಗೆ ಇದೇ ವಿಧಾನ ಬಳಸ್ತಾರೆ.  ಮೊದಲು ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕ್ಬೇಕು. ಅದಕ್ಕೆ ನಿಂಬೆ ರಸವನ್ನು ಹಿಂಡಬೇಕು.  ಈ ಪಾತ್ರೆಯನ್ನು ಮೈಕ್ರೊವೇವ್ ಒಳಗೆ ಇಟ್ಟು ಆನ್ ಮಾಡ್ಬೇಕು. ಮೈಕ್ರೋವೇವ್ ಟೈಮನ್ನು 3 ನಿಮಿಷ ಸೆಟ್ ಮಾಡಿ ಬಿಡಿ. ಮೂರು ನಿಮಿಷ ಮೈಕ್ರೋವೇವ್ ಚಲಿಸಿದ ಮೇಲೆ 5 ನಿಮಿಷ ಬಾಗಿಲು ತೆಗೆಯದೆ ಹಾಗೆಯೇ ಬಿಡಿ. ನಂತ್ರ ಪಾತ್ರೆಯನ್ನು ತೆಗೆಯಿರಿ. ನಂತ್ರ ಟ್ರೈ ಟವೆಲ್ ತೆಗೆದುಕೊಂಡು ಮೈಕ್ರೋವೇವ್ ಕ್ಲೀನ್ ಮಾಡಿ. ಹೀಗೆ ಮಾಡಿದ್ರೆ ಮೈಕ್ರೋವೇವ್ ಒಳಗೆ ಅಂಟಿಕೊಂಡಿರುವ ಕಲೆಗಳೆಲ್ಲ ಸುಲಭವಾಗಿ ಹೋಗುತ್ತವೆ.

ಸೋಡಾ ಜೊತೆ ನೀರು ಬೆರೆಸಿ ಕ್ಲೀನ್ ಮಾಡಿ :  ಸೋಡಾ ಮತ್ತು ನೀರು ಬೆರೆಸಿ ನೀವು ಮೈಕ್ರೋವೇವ್ ಸ್ವಚ್ಛಗೊಳಿಸಬಹುದು. 4 ಸ್ಪೂನ್ ನೀರು ಮತ್ತು 4 ಸ್ಪೂನ್ ಸೋಡಾವನ್ನು ಪೇಸ್ಟ್ ಮಾಡಿ. ನಂತ್ರ ಮೈಕ್ರೊವೇವ್‌ನಲ್ಲಿರುವ ಕಲೆಗಳು ಮತ್ತು ಕೊಳಕುಗಳ ಮೇಲೆ ಹಚ್ಚಿ. ಐದು ನಿಮಿಷ ಹಾಗೆ ಬಿಟ್ಟು ನಂತ್ರ ಸ್ಪಂಜ್ ನಿಂದ ಸ್ವಚ್ಛಗೊಳಿಸಿ. 

Kids Safety: ಮಕ್ಕಳು ಒಬ್ಬರೇ ಮನೆಯಲ್ಲಿ ಇರೋದಾದ್ರೆ ಕಿಚನ್ ಹೀಗಿರಲೇ ಬೇಕು!

ನೀರಿನ ಜೊತೆ ವಿನೆಗರ್ (Vinegar)  ಕೂಡ ಪರಿಣಾಮಕಾರಿ :  ಮೈಕ್ರೋವೇವ್ ಸ್ವಚ್ಛತೆಗೆ ನೀವು ವಿನೆಗರ್ ಬಳಕೆ ಮಾಡ್ಬಹುದು. ಮೊದಲು ವಿನೆಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಅದನ್ನು ಒಂದು ಪಾತ್ರೆಗೆ ಹಾಕಿ, ಮೈಕ್ರೋವೇವ್ ನಲ್ಲಿ ಇಡಬೇಕು. ಐದು ನಿಮಿಷ ಮೈಕ್ರೋವೇವ್ ಆನ್ ಮಾಡಬೇಕು. ನಂತ್ರ ಮೈಕ್ರೋವೇವ್ ಸ್ವಿಚ್ ಬಂದ್ ಮಾಡಿ, ಸ್ವಚ್ಛ ಬಟ್ಟೆಯಿಂದ ಒರೆಸಬೇಕು.  

Breast Feeding, ಕ್ಯಾನ್ಸರ್ ಬಗ್ಗೆ ಇರಲಿ ತುಸು ಎಚ್ಚರ, ಮರೀಬೇಡಿ ಆರೋಗ್ಯದ ಕಾಳಜಿ

ನೀರಿನ ಜೊತೆ ವಿನೆಗರ್ ಮತ್ತು ಬೇಕಿಂಗ್ ಸೋಡಾ ಒಳ್ಳೆಯ ಕಾಂಬಿನೇಷನ್ : ಮೈಕ್ರೋವೇವ್ ಸ್ವಚ್ಛಗೊಳಿಸಲು ನೀರು, ಅಡುಗೆ ಸೋಡಾ ಮತ್ತು ವಿನೆಗರ್ ಬಳಸಬಹುದು. ಈ ಮಿಶ್ರಣವನ್ನು ಬೌಲ್ ನಲ್ಲಿ ಹಾಕಿ 5 ನಿಮಿಷ ಮೈಕ್ರೋವೇವ್ ಚಲಾಯಿಬೇಕು. ಮೈಕ್ರೋವೇವ್ ಬಂದ್ ಆದ ಐದು ನಿಮಿಷ ಬಿಟ್ಟು ಬಾಗಿಲು ತೆಗೆಯಬೇಕು. ನಂತ್ರ ಸ್ವಚ್ಛ ಬಟ್ಟೆಯಿಂದ ಒರೆಸಿದ್ರೆ ಮೈಕ್ರೋವೇವ್ ಕ್ಲೀನ್ ಆಗಿರುತ್ತದೆ.

 

How To Clean Microwave At Home kitchen hacks here


 

Follow Us:
Download App:
  • android
  • ios