ನಿಮ್ಮ ಮನೆಯ ಸಂದಿನಲ್ಲೆಲ್ಲೋ ಹಾವು ಬಂದು ಸೇರಿಕೊಂಡಿರಬಹುದು, ನಿಮ್ಮ ಶೂ ಒಳಗೆ ಸೇರಿಕೊಂಡಿರಬಹುದು ಎಂಬ ಕಲ್ಪನೆ ಮಾಡಿಕೊಳ್ಳಿ. ಈ ಯೋಚನೆಯೇ ಎಷ್ಟು ಭಯ ಮೂಡಿಸುತ್ತದೆ ಅಲ್ಲವೇ? ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲೂ ಹಾವುಗಳು ನುಸುಳಿಕೊಳ್ಳುವುದು ಸಾಮಾನ್ಯ. ಎಲ್ಲ ಗುಡ್ಡ ಬೆಟ್ಟ ಹೊಲ ಗದ್ದೆ ಕೆರೆಗಳೂ ಬಡಾವಣೆಗಳಾಗಿರುವಾಗ ಹಾವುಗಳು ಎಲ್ಲಿಗೆ ಹೋಗಬೇಕು. ಅದಿರಲಿ, ನಿಮ್ಮ ಮನೆಗೆ ಹಾವು ಬರದಂತಿರಲು ಏನು ಮಾಡಬೇಕು?

ದೇಗುಲದಲ್ಲಿ ವಿಭೂತಿಧಾರಿ ಹಾವು ಪ್ರತ್ಯಕ್ಷ

- ನಿಮ್ಮ ಸಾಕುಪ್ರಾಣಿಗಳಿಗೆ ಮನೆಯೊಳಗೇ ಆಹಾರ ನೀಡಿ. ಡಾಗ್‌ ಅಥವಾ ಕ್ಯಾಟ್‌ ಫುಡ್ಡನ್ನು ಇಲಿಗಳು ಇಷ್ಟಪಡುತ್ತವೆ. ಅವು ಒಳಗೆ ಬಂದರೆ ಹಾವುಗಳೂ ಒಳಗೆ ಬಂದ ಹಾಗೆ.
- ಮನೆಯೆದುರು ಗಾರ್ಡನ್‌ ಇದ್ದರೆ, ಅಲ್ಲಿರುವ ಒಳಹುಲ್ಲಿನ ರಾಶಿ, ಎತ್ತರದ ಹುಲ್ಲು ಕತ್ತರಿಸಿ ಮಟ್ಟಸ ಮಾಡಿ. ಎಲೆ ರಾಶಿ ಮತ್ತು ಕೊಳೆತ ಹುಲ್ಲು ಇಲಿಗಳಿಗೆ ಆವಾಸ.
- ಮನೆಯಲ್ಲಿ ಹಕ್ಕಿ ಸಾಕುತ್ತೀರಾ? ಹಕ್ಕಿ ಮೊಟ್ಟೆಗಳಿಗೆ ಹಾವುಗಳು ಆಕರ್ಷಿತವಾಗುತ್ತವೆ. ಹಕ್ಕಿಗಳು ಕೆಳಗೆ ಚೆಲ್ಲುವ ಆಹಾರದತ್ತ ಇಲಿಗಳು, ಅವುಗಳ ಮೂಲಕ ಹಾವುಗಳು ಆಕರ್ಷಿತವಾಗುತ್ತವೆ.
- ಸ್ವಿಮ್ಮಿಂಗ್‌ ಪೂಲ್‌ ಇದ್ದಲ್ಲಿ ಹುಷಾರಾಗಿರಬೇಕು. ಇದರಲ್ಲಿರುವ ನೀರಿಗೂ ತಂಪಿಗೂ ಕಪ್ಪೆ- ಇಲಿ ಆ ಮೂಲಕ ಹಾವುಗಳು ಆಕರ್ಷಿತ ಆಗಬಹುದು.
- ಒಂದು ವೇಳೆ ಹಾವು ಮನೆಯೊಳಗೆ ಬಂದಿದ್ದರೆ, ಅದು ವಿಷಪೂರಿತ ಎಂದು ಗೊತ್ತಾದರೆ ತಕ್ಷ ಣವೇ ಹಾವು ಹಿಡಿಯುವವರಿಗೆ ಕರೆ ಮಾಡಿ. ಅದು ವಿಷಕಾರಿಯಲ್ಲದ ಹಾವು ಎಂದು ನಿಮಗೆ ಖಚಿತವಾಗಿ ತಿಳಿದಿದ್ದರೆ ಮಾತ್ರ ಅದನ್ನು ಹೊರಹಾಕಲು ನೀವೇ ಮುಂದಾಗಬಹುದು. ಒಂದು ಹೋಸ್‌ ಪೈಪ್‌ ತೆಗೆದುಕೊಂಡು ಜೋರಾಗಿ ನೀರು ಚಿಮ್ಮುವ ಮೂಲಕ ಅದನ್ನು ಹೊರ ಹಾಕಬಹುದು.
- ಹಾವುಗಳು ಅಮೋನಿಯ ವಾಸನೆಯನ್ನು ದ್ವೇಷಿಸುತ್ತವೆ. ಅದರ ಹತ್ತಿರ ಬರುವುದಿಲ್ಲ. ಬಟ್ಟೆ ಚಿಂದಿಗಳನ್ನು ಅಮೋನಿಯದಲ್ಲಿ ನೆನೆಸಿ ಮತ್ತು ಅವುಗಳನ್ನು ತೆರೆದ ಪ್ಲಾಸ್ಟಿಕ್‌ ಚೀಲದಲ್ಲಿ ಇಡಿ. ಸಾಮಾನ್ಯವಾಗಿ ಹಾವುಗಳು ಕಂಡುಬರುವ ಜಾಗದಲ್ಲಿಡಿ.
 

ಎಲ್ಲೇ ಹೋದರೂ ಮಲಗ್ಲಿಕ್ಕೆ ಕಾಳಿಂಗ ಮನೆಗೆ ಬರುತ್ತೆ

- ಮನೆಯ ಸಂದುಗಳಲ್ಲಿ ಬಿಳಿ ವಿನೆಗರ್‌ ಸುರಿದರೆ ಹಾವುಗಳು ಅವುಗಳ ಮೇಲೆ ಓಡಾಡುವುದಿಲ್ಲ.
- ಹಾವುಗಳು ಮನುಷ್ಯರನ್ನೂ ಇಷ್ಟಪಡುವುದಿಲ್ಲ. ಮನುಷ್ಯರು ಇದ್ದಾರೆಂದು ಗೊತ್ತಾದಲ್ಲಿ ಅವು ಬರುವುದಿಲ್ಲ. ಹಾಗೆ ಗೊತ್ತಾಗಬೇಕಾದರೆ ನಿಮ್ಮ ಹೇರ್‌ ಬ್ರಷ್‌ನಲ್ಲಿ ಉಳಿದ ಒಂದಿಷ್ಟು ಕೂದಲನ್ನು ಮನೆಯ ಸಂದುಗೊಂದುಗಳಲ್ಲಿ ಹಾಕಬಹುದು. ಕೂದಲಿನ ವಾಸನೆಗೆ ಅವು ದೂರವಿರುತ್ತವೆ.
- ಯಾವುದೇ ಪ್ಲಂಬಿಂಗ್‌ ತೂತುಗಳನ್ನು, ಪೈಪ್‌ ಬಾಯಿಗಳನ್ನು ಹಾಗೇ ಬಿಡಬೇಡಿ, ಅವುಗಳಿಗೆ ಜಾಲಂಧ್ರಗಳನ್ನು ಹಾಕಿ ಮುಚ್ಚಿ.
- ಹಾವುಗಳು ನಯವಾದ ನೆಲವನ್ನು ಇಷ್ಟಪಡುವುದಿಲ್ಲ. ದೊರಗು ದೊರಗಾದ ನೆಲದಲ್ಲಿ ವೇಗವಾಗಿ ಚಲಿಸುತ್ತವೆ. ಮನೆಯ ಹೊರಗಿನಿಂದ ಒಳಗೆ ಬರುವ ವಿಭಾಗವನ್ನು ನಯವಾಗಿ ಫಿನಿಶ್‌ ಮಾಡಿಸಿಟ್ಟುಕೊಳ್ಳಿ.
- ಬೆಕ್ಕು ಸಾಕುವುದು ಉಪಯುಕ್ತ. ಬೆಕ್ಕಿನ ವಾಸನೆಗೆ ಹಾವು ದೂರ ಸರಿಯುತ್ತದೆ.