Rashtrapatni Controversy: ರಾಷ್ಟ್ರಪತಿ.. ರಾಷ್ಟ್ರಪತ್ನಿ..? ಇಲ್ಲಿದೆ ಉತ್ತರ

ರಾಷ್ಟ್ರಪತಿಯಾಗಿ ದ್ರೌಪತಿ ಮುರ್ಮು ಅಧಿಕಾರ ಸ್ವೀಕರಿಸಿದ್ದಾರೆ. ಅವರು ಪ್ರಮಾಣ ವಚನ ಸ್ವೀಕರಿಸಿದ ನಂತ್ರ ವಿವಾದವೊಂದು ಶುರುವಾಗಿದೆ. ಅವರನ್ನು ಕಾಂಗ್ರೆಸ್ ನಾಯಕರೊಬ್ಬರು ರಾಷ್ಟ್ರಪತ್ನಿ ಎಂದು ಕರೆದು ನಂತ್ರ ಕ್ಷಮೆ ಕೇಳಿದ್ದಾರೆ. 
 

How Should The President Be Addressed Know The History Of Naming Of This Post

ಹೆಸರಲ್ಲೇನಿದೆ ಎಂಬುದು ಕೆಲವರ ಪ್ರಶ್ನೆ. ಮತ್ತೆ ಕೆಲವರು ಹೆಸರಿನಲ್ಲಿಯೇ ಎಲ್ಲ ಅಡಗಿದೆ ಎನ್ನುತ್ತಾರೆ. ಸದ್ಯ ರಾಷ್ಟಪತಿ ಹಾಗೂ ರಾಷ್ಟ್ರಪತ್ನಿ ವಿಷ್ಯ ಚರ್ಚೆಯಲ್ಲಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದು ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ. ಇಂದು ರಾಷ್ಟ್ರಪತಿ ಹೆಸರಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವು ನಿಮಗೆ ನೀಡ್ತೇವೆ. ಮೊದಲನೇಯದಾಗಿ ರಾಷ್ಟ್ರಪತಿ ಹುದ್ದೆಯ ಯಾವ ಲಿಂಗ ಎನ್ನುವ ಬಗ್ಗೆ ಚರ್ಚೆಗೆ ಯಾವುದೇ ಸಮರ್ಥನೆ ಇಲ್ಲ. ಏಕೆಂದರೆ ಭಾರತದ ಸಾಂವಿಧಾನಿಕ ಯೋಜನೆಯು ರಾಷ್ಟ್ರಪತಿ ಮತ್ತು ಸ್ಪೀಕರ್‌ನಂತಹ ಪದಗಳನ್ನು ಲಿಂಗ-ತಟಸ್ಥವೆಂದು ಪರಿಗಣಿಸುತ್ತದೆ.

ಪ್ರತಿಭಾ ಪಾಟೀಲ್ (Pratibha Patil) ರಾಷ್ಟ್ರಪತಿ (President) ಯಾಗಿದ್ದಾಗಲೇ ನಡೆದಿತ್ತು ಚರ್ಚೆ : 2007 ರ ರಾಷ್ಟ್ರಪತಿ ಚುನಾವಣೆ (Election) ಯಲ್ಲಿ ರಾಜಸ್ಥಾನದ ಮಾಜಿ ಗವರ್ನರ್ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರನ್ನು ಕಣಕ್ಕಿಳಿಸಲು ಯುಪಿಎ ನಿರ್ಧರಿಸಿತ್ತು. ಆಗ್ಲೇ ಈ ವಿಷ್ಯ ಚರ್ಚೆಗೆ ಬಂದಿತ್ತು, ಭಾರತದ ಮೊದಲ ರಾಷ್ಟ್ರಪತಿಯಾಗಿದ್ದರು ಪ್ರತಿಭಾ ಪಾಟೀಲ್. ಅವರನ್ನು ಹೇಗೆ ಕರೆಯಬೇಕು ಎನ್ನುವ ಬಗ್ಗೆ ಚರ್ಚೆಗಳು ಆಗಿದ್ದವು. ರಾಷ್ಟ್ರಪತಿ ಎಂಬುದು ಪುಲ್ಲಿಂಗವೆಂದು ಅನೇಕರು ಹೇಳಿದ್ದರು. ಹಾಗಾಗಿ ರಾಷ್ಟ್ರಪತ್ನಿ ಎಂದು ನಾಮಕರಣ ಮಾಡುವ ಬಗ್ಗೆ ರಾಷ್ಟ್ರವು ಮಾತುಕತೆ ನಡೆಸಿತ್ತು. ಆದ್ರೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಾಮಾಜಿಕ ಕಾರ್ಯಕರ್ತರು ಮತ್ತು ಸ್ತ್ರೀವಾದಿಗಳು ರಾಷ್ಟ್ರ ಮಾತಾ ದಂತಹ ಅಭಿವ್ಯಕ್ತಿಗಳನ್ನು ವಿರೋಧಿಸಿದರು. ಸಾಂವಿಧಾನಿಕ ಹುದ್ದೆಗೆ ಅಂತಹ ಪದಗಳನ್ನು ಬಳಸುವುದು  ಪಿತೃಪ್ರಭುತ್ವ ಮತ್ತು ಲಿಂಗ ತಾರತಮ್ಯ ವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದರು. 

ಸಂವಿಧಾನ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾದ ರಾಷ್ಟ್ರಪತಿ ಪದವನ್ನು, ಮಹಿಳಾ ಅಧ್ಯಕ್ಷೆ ಎಂಬ ಕಾರಣಕ್ಕೆ ಬದಲಾಯಿಸಬಾರದು ಎಂದು ಸಾಂವಿಧಾನಿಕ ತಜ್ಞರು ವಾದಿಸಿದ್ದರು. ಈ ಪದಕ್ಕೆ ಯಾವುದೇ ಲಿಂಗ ಅರ್ಥವಿಲ್ಲದ ಕಾರಣ, ಪ್ರೆಸಿಡೆಂಟ್ ಎಂಬ ಇಂಗ್ಲೀಷ್ ಶಬ್ಧವನ್ನು ಹಿಂದಿಗೆ ಅನುವಾದ ಮಾಡಿದರೆ ರಾಷ್ಟ್ರಪತಿ ಎಂದಾಗುತ್ತದೆ ಎಂದಿದ್ದರು.

ಒಂದೇ ಸಿರಿಂಜ್‌ನಲ್ಲಿ 30 ಮಕ್ಕಳಿಗೆ ಲಸಿಕೆ: ಪ್ರಶ್ನಿಸಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿಯ ನಿರ್ಲಕ್ಷ್ಯದ ಉತ್ತರ

ರಾಷ್ಟ್ರಪತಿ ಪಾಟೀಲ್ ಅವರನ್ನು ರಾಷ್ಟ್ರಪತಿ ಮಹೋದಯ್ ಎಂದು  ಕರೆಯಬಹುದು ಎಂದು ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಅವರು ಆಗ ಗಮನ ಸೆಳೆದಿದ್ದರು. ಭಾರತದಲ್ಲಿ ಇಬ್ಬರು ಮಹಿಳೆಯರು ಲೋಕಸಭೆ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮೀರಾ ಕುಮಾರ್ ಮತ್ತು ಸುಮಿತ್ರಾ ಮಹಾಜನ್. ಇವರಿಬ್ಬರನ್ನು ಕೂಡ ಸ್ಪೀಕರ್ ಎಂದೇ ಕರೆಯಲಾಗುತ್ತದೆ. 

ಆ ಸಂದರ್ಭದಲ್ಲಿ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಕೂಡ ಇದ್ರ ಬಗ್ಗೆ ಬರೆದಿದ್ದರು. ಪ್ರತಿಭಾ ಪಾಟೀಲ್ ಅವರ ಹೆಸರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ ಅವರನ್ನು ಹೇಗೆ ಕರೆಯಬೇಕು ಎನ್ನುವ ಬಗ್ಗೆ ಚರ್ಚೆಯಾಗ್ತಿದೆ. ನನ್ನ ಪ್ರಕಾರ ರಾಷ್ಟ್ರಪತ್ನಿ ಎಂದು ಕರೆಯುವ ಅವಶ್ಯಕತೆ ಇಲ್ಲ. ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಾಧ್ಯಕ್ಷ ಎಂದು ಕರೆಯಬೇಕು ಎಂದಿದ್ದರು. ಆದರೆ  ಈ ಚರ್ಚೆ ಬೇಗ ಮುಕ್ತಾಯವಾಗಿತ್ತು. ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಜುಲೈ 2012 ರಲ್ಲಿ ತಮ್ಮ ಅಧಿಕಾರ ಕೊನೆಗೊಳಿಸಿದ್ರು. ಅಲ್ಲಿಯವರೆಗೂ ಅವರನ್ನು ರಾಷ್ಟ್ರಪತಿ ಎಂದು ಉಲ್ಲೇಖಿಸಲಾಯ್ತು. 

ಹದಿ ವಯಸ್ಸಿನ ಗರ್ಭಧಾರಣೆ ಹೆಚ್ಚಳ, ಗರ್ಭಪಾತದ ಬಗ್ಗೆ Indian Law ಹೇಳೋದೇನು ?

ಸಂವಿಧಾನ ಸಭೆಯಲ್ಲಿ ಏನಾಯ್ತು?: ಸಂವಿಧಾನ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ರಾಷ್ಟ್ರಪತಿಯನ್ನು ಹೇಗೆ ಕರೆಯಬೇಕೆಂದು ಚರ್ಚೆಯಾಗಿತ್ತು. 1948ರಲ್ಲಿ ಸಂವಿಧಾನ ಸಭೆಯಲ್ಲಿ  ಎಚ್.ವಿ. ಕಾಮತ್ ಧ್ವನಿ ಎತ್ತಿದ್ದರು.  ಜವಾಹರಲಾಲ್ ನೆಹರು ಅವರು ಜುಲೈ 4, 1947 ರಂದು ಪರಿಚಯಿಸಿದ ಮೂಲ ಕರಡು ತಿದ್ದುಪಡಿಗೆ ಕಾಮತ್ ವಿರೋಧ ವ್ಯಕ್ತಪಡಿಸಿದ್ದರು. ಆರ್ಟಿಕಲ್ 41ರಲ್ಲಿ ಉಲ್ಲೇಖಿಸಲಾಗಿರುವ 'ಅಧ್ಯಕ್ಷರು ಒಕ್ಕೂಟದ ಮುಖ್ಯಸ್ಥರಾಗಿರುತ್ತಾರೆ' ಅನ್ನು 'ಭಾರತದ ಅಧ್ಯಕ್ಷರು ಇರುತ್ತಾರೆ' ಎಂದು ಬದಲಾಯಿಸಬೇಕು ಎಂದಿದ್ದರು. 
 

Latest Videos
Follow Us:
Download App:
  • android
  • ios