Asianet Suvarna News Asianet Suvarna News

ಒಂದು ಪೌರಾಣಿಕ ಕಥೆಗೆ ಲಕ್ಷ ರೂಪಾಯಿ ಚಾರ್ಜ್ ಮಾಡುವ Jaya Kishori ಯಾರು? ಹರಿಕಥೆಗೂ ಇದೆ ಡಿಮ್ಯಾಂಡ್!

ಹರಿಕಥೆಗಳನ್ನು ಹೇಳುವ, ಕೇಳುವ ಜನರ ಸಂಖ್ಯೆ ಈಗ ಕಡಿಮೆಯಾಗಿದೆ. ಆದ್ರೆ ಈ ಯುವತಿ ಬಾಯಿಂದ ಬರುವ ಕಥೆ, ಸ್ಫೂರ್ತಿದಾಯಕ ಮಾತುಗಳನ್ನು ಮತ್ತೆ ಮತ್ತೆ ಕೇಳ್ಬೇಕು ಎನ್ನಿಸುತ್ತದೆ. ಕಥೆ ಮೂಲಕವೇ ಜನರಿಗೆ ಸರಿದಾರಿ ತೋರಿಸುವ ಈ ಯುವತಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.     
 

How Much Charge Jaya Kishori For Katha roo
Author
First Published Sep 15, 2023, 11:50 AM IST

ದೇವರ ಬಗ್ಗೆ ಅಪಾರ ಭಕ್ತಿ ತೋರಿಸಿ, ದೇವರ ಕಥೆಗಳನ್ನು ಜನರಿಗೆ ಹೇಳ್ತಾ, ಜನರಲ್ಲಿ ಜ್ಞಾನ ವೃದ್ಧಿ ಮಾಡುವ ಯುವಜನರ ಸಂಖ್ಯೆ ಬಹಳ ಕಡಿಮೆ ಇದೆ. ಇದೆಲ್ಲ ವಯಸ್ಸಾದ ಜನರಿಗೆ ಮೀಸಲು ಎನ್ನುವವರಿದ್ದಾರೆ. ಆದ್ರೆ ಆ ಜನಗಳ ಮಧ್ಯೆ ಶ್ರೀ ಕೃಷ್ಣನ ಭಕ್ತೆ ಜಯಾ ಕಿಶೋರಿ ಭಿನ್ನವಾಗಿ ನಿಲ್ಲುತ್ತಾರೆ. ಜಯಾ ಕಿಶೋರಿ ಕನ್ನಡದವರಲ್ಲ. ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅವರ ಸುದ್ದಿ, ಅವರ ಪ್ರವಚನಗಳು ಹರಿದಾಡುತ್ತಿರುತ್ತವೆ. ಹಾಗಾಗಿ ಅನೇಕ ಕನ್ನಡಿಗರಿಗೆ ಅವರ ಪರಿಚಯವಿದೆ. ನಾವಿಂದು ಜಯಾ ಕಿಶೋರಿ ಯಾರು ಮತ್ತು ಅವರ ಸಾಧನೆಗಳು ಏನು ಎಂಬುದನ್ನು ನಮಗೆ ಹೇಳ್ತೇವೆ. 

ಜಯಾ ಕಿಶೋರಿ (Jaya Kishori) ಯಾರು? : ಜಯಾ ಕಿಶೋರಿ ಮೂಲತಃ ರಾಜಸ್ಥಾನ (Rajasthan) ದವರು. ಅವರ ಮೊದಲ ಹೆಸರು ಜಯಾ ಶರ್ಮಾ.  ಜುಲೈ 13, 1995 ರಂದು ರಾಜಸ್ಥಾನದ ಸಣ್ಣ ಹಳ್ಳಿಯಾದ ಸುಜನ್‌ಗಢದಲ್ಲಿ ಜನಿಸಿದ ಜಯಾ ಕಿಶೋರಿ ಸದ್ಯ ಕೊಲ್ಕತ್ತಾ (Kolkata) ದಲ್ಲಿ ನೆಲೆಸಿದ್ದಾರೆ.  ಜಯಾ ಕಿಶೋರಿ  ಬಿ.ಕಾಂ ವ್ಯಾಸಂಗದ ಜೊತೆಗೆ ಆಧ್ಯಾತ್ಮಕ್ಕೂ ಸಮಯ ಮೀಸಲಿಟ್ಟಿದ್ದರು. ಬಾಲ್ಯದಲ್ಲೇ ಭಜನೆ, ಗೀತಾ ವಾಚನವನ್ನೂ ಮಾಡುತ್ತಿದ್ದ ಜಯಾ ಕಿಶೋರಿ, ಆಧ್ಯಾತ್ಮಿಕತೆಗೆ ಹೆಚ್ಚು ಒಲವು ತೋರಿಸುತ್ತಾರೆ. ವೇದ, ಭಗವದ್ಗೀತೆ, ಶಾಸ್ತ್ರಗಳನ್ನೂ ಜಯಾ ಕಿಶೋರಿ ಅಧ್ಯಯನ ಮಾಡಿದ್ದಾರೆ. 

ಈಕೆ ಐಎಎಸ್ ಅಧಿಕಾರಿಯ ಪುತ್ರಿ, ಮೈಕ್ರೋಸಾಫ್ಟ್ ಇಂಜಿನಿಯರ್ ವಿವಾಹವಾಗಿರುವ ಇವರು ಇಂದು 6200 ಕೋಟಿ ರೂ. ಒಡತಿ!

ಜಯಾ ಕಿಶೋರಿ ಅವರ ಆಧ್ಯಾತ್ಮಿಕ ಜೀವನದ (Spiritual Life) ಆರಂಭವಾಗಿದ್ದು ಯಾವಾಗ? :  ಜಯಾ ಕಿಶೋರಿ ಅವರ ಆಧ್ಯಾತ್ಮಿಕ ಪ್ರಯಾಣವು ಕೇವಲ 6-7 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಯಿತು. ಕುಟುಂಬದಲ್ಲಿ ಅವರ ಅಜ್ಜಿ  ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದರು. ಅವರ ಅಜ್ಜಿಯರು ಅವರಿಗೆ ಶ್ರೀಕೃಷ್ಣನ ಕಥೆಗಳನ್ನು ಹೇಳುತ್ತಿದ್ದರು. ಕೇವಲ 9 ನೇ ವಯಸ್ಸಿನಲ್ಲಿ, ಕಿಶೋರಿ ಅವರು ಲಿಂಗಾಷ್ಟಕಂ, ಶಿವ ತಾಂಡವ ಸ್ತೋತ್ರಂ, ಮಧುರಾಷ್ಟಕಾಮ್ರ, ಶಿವಪಂಚಾಕ್ಷರ ಸ್ತೋತ್ರಂ, ದಾರಿದ್ರಯ್ ದಹನ್ ಶಿವ ಸ್ತೋತ್ರಂ ಮುಂತಾದ ಅನೇಕ ಸ್ತೋತ್ರಗಳನ್ನು ಕಂಠಪಾಠ ಮಾಡಿದ್ದರು. ಸಂಗೀತವನ್ನೂ ಹಾಡಲು ಆರಂಭಿಸಿದರು.

ಕೇವಲ 10 ನೇ ವಯಸ್ಸಿನಲ್ಲಿ  ಜಯಾ ಸಂಪೂರ್ಣ ಸುಂದರಕಾಂಡವನ್ನು ಪ್ರದರ್ಶಿಸಿದರು. ಅಲ್ಲಿಂದಲೇ ಅವರ ಆಧ್ಯಾತ್ಮಿಕ ಪಯಣ ಶುರುವಾಯ್ತು.   

ಸರ್ಕಾರಿ ಕೆಲಸ ಬಿಟ್ಟು ಅಂಗಡಿ ತೆರೆದ ಮಹಿಳೆ… ಮೊದಲ ದಿನವೇ ಬಂಪರ್ ಗಳಿಕೆ

ಅನೇಕರಿಗೆ ಸ್ಫೂರ್ತಿ (Inspiration) ಜಯಾ ಕಿಶೋರಿ : ಜಯಾ ಕಿಶೋರಿ ಹೊಸ ಯುಗದ ಜನಪ್ರಿಯ ಕಥೆಗಾರ್ತಿ. ನಿರೂಪಕಿ ಜಯ ಕಿಶೋರಿ ಸಾರ್ವಜನಿಕರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಜಯಾ ಕಿಶೋರಿ ಶ್ರೀಕೃಷ್ಣನ ಬಗ್ಗೆ ಮತ್ತು ಇತರ ಧಾರ್ಮಿಕ ಕಥೆಗಳನ್ನು ಭಕ್ತರಿಗೆ ಇಷ್ಟವಾಗುವಂತೆ ಹೇಳ್ತಾರೆ. ಅವರ ಕಥೆಗಳು ಅನೇಕರ ಬಾಳಿಗೆ ಸ್ಪೂರ್ತಿ ನೀಡುತ್ತವೆ. ಜಯಾ ಕಿಶೋರಿ ಮಾತು, ಕಥೆಗಳು ಜನರಿಗೆ ಆತ್ಮವಿಶ್ವಾಸ ತುಂಬುತ್ತವೆ, ಹೊಸದನ್ನು ಮಾಡುವ ಉತ್ಸಾಹವನ್ನು ನೀಡುತ್ತವೆ.

ಜಯಾ ಕಿಶೋರಿ ಪಡೆದ ಶುಲ್ಕವನ್ನು ಏನು ಮಾಡ್ತಾರೆ?: ಜಯಾ ಕಿಶೋರಿ ಒಂದು ಕಥೆಗೆ ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಾರೆ. ಆದರೆ ಅವರು ತಮ್ಮ ಗಳಿಕೆಯ ಹೆಚ್ಚಿನ ಭಾಗವನ್ನು ದಾನ (Donation) ಮಾಡುತ್ತಾರೆ. ತಮಗಾಗಿ ಜಯಾ ಕಿಶೋರಿ ಹೆಚ್ಚು ಖರ್ಚು ಮಾಡೋದಿಲ್ಲ. ಕಥೆಗಾರ್ತಿ ಜಯ ಕಿಶೋರಿ ಅವರು ಯಾವುದೇ ಕಥೆಯನ್ನು ಬರೆಯುವ ಮೊದಲು ಮುಂಗಡವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕಥೆಯನ್ನು ಪೂರ್ಣಗೊಳಿಸಿದ ನಂತರ ಅವರು ಪೂರ್ಣ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ಪ್ರೀತಿಪಾತ್ರರಿಗೆ ಮತ್ತು ಬಡವರಿಗೆ ಉಚಿತವಾಗಿ ಕಥೆಗಳನ್ನು ಹೇಳುತ್ತಾರೆ. ಕೋರಿಕೆ ಮೇರೆಗೆ ಕೆಲವರಿಗೆ ಅವರು ಉಚಿತವಾಗಿ ಕಥೆ ಹೇಳ್ತಾರೆ.

ಅವರು ತಮ್ಮ ಆದಾಯದ ಹೆಚ್ಚಿನ ಭಾಗವನ್ನು ನಾರಾಯಣ ಸೇವಾ ಸಂಸ್ಥಾನಕ್ಕೆ ದಾನ ಮಾಡುತ್ತಾರೆ. ಅಷ್ಟೇ ಅಲ್ಲದೆ  iamjayakishori ಹೆಸರಿನ ಡಾಟ್ ಕಾಮ್ ಇದ್ದು, ಅವರು ತಮ್ಮ ಆದಾಯದ ಒಂದು ಭಾಗವನ್ನು ಮರ ನೆಡಲು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡುತ್ತಾರೆ.

Follow Us:
Download App:
  • android
  • ios