ಕೆಲವು ಮನಿ ಪ್ಲಾಂಟ್‌ಗಳಲ್ಲಿ ಸಣ್ಣ ಎಲೆಗಳಿದ್ದರೆ, ಇನ್ನು ಕೆಲವಲ್ಲಿ ದೊಡ್ಡದಾದ ಮತ್ತು ದಟ್ಟವಾದ ಎಲೆಗಳು ಇರುವುದು ಏಕೆ?.
life Feb 22 2026
Author: Ashwini HR Image Credits:Getty
Kannada
ಹೀಗಾಗುವುದು ಏಕೆ?
ಮನಿ ಪ್ಲಾಂಟ್‌ನ ಎಲೆಗಳು ಬೇರೆಡೆ ದಟ್ಟವಾದ ಎಲೆಗಳಿಂದ ಕಾಡಿನಂತೆ ಕಾಣಿಸುತ್ತದೆ. ಅಚ್ಚರಿಯ ವಿಷಯವೆಂದರೆ ಗಿಡ ಒಂದೇ ಆಗಿರುತ್ತದೆ, ವ್ಯತ್ಯಾಸವಿರುವುದು ಕೇವಲ ಆರೈಕೆಯಲ್ಲಿ ಅಷ್ಟೆ.
Image credits: Getty
Kannada
ಸರಿಯಾದ ಪೋಷಣೆ ಅತ್ಯಗತ್ಯ
ಮನಿ ಪ್ಲಾಂಟ್‌ಗೆ ಪೂರಕವಾದ ಸಾರಜನಕ ದೊರೆತರೆ, ಅದರ ಎಲೆಗಳು ಬಲವಾಗಿ, ದೊಡ್ಡದಾಗಿ ಬೆಳೆಯುತ್ತವೆ. ವರ್ಮಿ ಕಾಂಪೋಸ್ಟ್ ಅಥವಾ ಸಮತೋಲಿತ ದ್ರವ ಗೊಬ್ಬರ ನೀಡಿದ್ರೆ ಗಿಡದ ಬೆಳವಣಿಗೆ ಉತ್ತಮವಾಗಿರುತ್ತೆ.
Image credits: social media
Kannada
ಪ್ರಕಾಶಮಾನವಾದ ಪರೋಕ್ಷ ಬೆಳಕು
ಮನಿ ಪ್ಲಾಂಟ್ ಪ್ರಕಾಶಮಾನವಾದ ಪರೋಕ್ಷ ಬೆಳಕನ್ನು ಇಷ್ಟಪಡುತ್ತದೆ. ಸರಿಯಾದ ಬೆಳಕು ಸಿಕ್ಕಾಗ ಎಲೆಗಳು ಹೆಚ್ಚು ಹೊಳಪಿನಿಂದ ಮತ್ತು ಉತ್ತಮ ಆಕಾರದಲ್ಲಿ ಬೆಳೆಯುತ್ತವೆ. ಕಡಿಮೆ ಬೆಳಕಿನಲ್ಲಿ ಸಣ್ಣದಾಗಿಯೇ ಉಳಿಯುತ್ತವೆ.
Image credits: social media
Kannada
ತೇವಾಂಶ ಮತ್ತು ಆಸರೆ
ಹವಾಯು ಬೇರುಗಳಿಗೆ (Aerial roots) ತೇವಾಂಶ ಮತ್ತು ಹತ್ತಲು ಆಸರೆ ಸಿಕ್ಕಾಗ ಮೇಲಕ್ಕೆ ಬೆಳೆದು ಪಕ್ವವಾಗಲು ಪ್ರಾರಂಭಿಸುತ್ತದೆ. ಇದೇ ಕಾರಣಕ್ಕೆ ಗೋಡೆ ಮೇಲೆ ಹತ್ತಿದ ಮನಿ ಪ್ಲಾಂಟ್ ಹೆಚ್ಚು ದೊಡ್ಡ ಎಲೆ ನೀಡುತ್ತದೆ.
Image credits: social media
Kannada
ಏನು ಮಾಡಬೇಕು?
ತಿಂಗಳಿಗೊಮ್ಮೆ ಸಾವಯವ ಗೊಬ್ಬರ ನೀಡಿ. ಗಿಡವನ್ನು ಕಿಟಕಿಯ ಹತ್ತಿರ ಇರಿಸಿ, ಆದರೆ ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಮಾಸ್ ಸ್ಟಿಕ್ ಅಥವಾ ಜಾಲರಿಯ ಆಸರೆ ನೀಡಿ. ಸುತ್ತಮುತ್ತ ಹಗುರವಾದ ತೇವಾಂಶವಿರುವಂತೆ ನೋಡಿಕೊಳ್ಳಿ.