ಈಕೆ ಐಎಎಸ್ ಅಧಿಕಾರಿಯ ಪುತ್ರಿ, ಮೈಕ್ರೋಸಾಫ್ಟ್ ಇಂಜಿನಿಯರ್ ವಿವಾಹವಾಗಿರುವ ಇವರು ಇಂದು 6200 ಕೋಟಿ ರೂ. ಒಡತಿ!

ಐಎಎಸ್ ಅಧಿಕಾರಿಯ ಪುತ್ರಿಯಾಗಿರುವ ಈಕೆ ಮೈಕ್ರೋಸಾಫ್ಟ್ ಇಂಜಿನಿಯರ್ ಕೈ ಹಿಡಿಯುತ್ತಾರೆ. ಮುಂದೆ ಈಕೆಯ ಪತಿ ಮೈಕ್ರೋಸಾಫ್ಟ್ ಸಿಇಒ ಹುದ್ದೆಗೇರುತ್ತಾರೆ. ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ಮಗನ ಆರೈಕೆಗಾಗಿ ಈಕೆ ವೃತ್ತಿ ಜೀವನವನ್ನೇ ತ್ಯಾಗ ಮಾಡಿ ಗೃಹಿಣಿಯಾಗಿ ಉಳಿಯುತ್ತಾರೆ. ಇಂದು ಇವರ ಪತಿಯ ನಿವ್ವಳ ಸಂಪತ್ತು 6200 ಕೋಟಿ ರೂ. 

Meet daughter of IAS officer married to Microsoft engineer with Rs 450 crore salary anu

Business Desk:ಅನೇಕ ಜನಪ್ರಿಯ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯ ಮೂಲದವರು ಸಿಇಒ ಹುದ್ದೆ ಅಲಂಕರಿಸಿದ್ದಾರೆ. ಈ ರೀತಿ ಭಾರತೀಯ ಮೂಲದ ಸಿಇಒಗಳನ್ನು ಹೊಂದಿರುವ ಐಟಿ ಕಂಪನಿಗಳಲ್ಲಿ ಮೈಕ್ರೋಸಾಫ್ಟ್ ಕೂಡ ಒಂದು. ಮೈಕ್ರೋಸಾಫ್ಟ್ ಸಿಇಒ ಭಾರತೀಯ ಮೂಲದ ಸತ್ಯ ನಾಡೆಲ್ಲ ಹೈದರಾಬಾದ್ ಮೂಲದವರಾಗಿದ್ದು, ಮಣಿಪಾಲದ ಎಂಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. 2014ರಿಂದ ಇವರು ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1992ರಲ್ಲಿ ಮೈಕ್ರೋಸಾಫ್ಟ್ ಸೇರಿದ ಸತ್ಯ ನಾಡೆಲ್ಲ ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಪ್ರತಿಯೊಂದು ನಿರ್ಧಾರ ಹಾಗೂ ಯಶಸ್ಸಿಗೆ ಬೆಂಗಾವಲಾಗಿ ನಿಂತವರು ಅವರ ಪತ್ನಿ ಅನುಪಮಾ ನಾಡೆಲ್ಲ. ಜಗತ್ತಿನ ಅತ್ಯಂತ ಪ್ರಸಿದ್ಧ ಸಿಇಒ ಪತ್ನಿಯಾಗಿದ್ದರೂ ಅನುಪಮಾ ಮಾತ್ರ ಪ್ರಚಾರದಿಂದ ಸದಾ ದೂರವೇ ಉಳಿದಿದ್ದಾರೆ. ಸತ್ಯ ನಾಡೆಲ್ಲ ಹಾಗೂ ಅನುಪಮಾ ಅವರ ಲವ್ ಸ್ಟೋರಿ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಅನೇಕ ವರದಿಗಳು ಬಿತ್ತರಗೊಂಡಿವೆ. ಆದರೆ, ಆಕೆಯ ಹಿನ್ನೆಲೆ ಹಾಗೂ ವೈಯಕ್ತಿಕ ಮಾಹಿತಿಗಳು ಬಹುತೇಕರಿಗೆ ತಿಳಿದಿಲ್ಲ. ಅನುಪಮಾ ನಾಡೆಲ್ಲ ಅವರ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ.

ಇಬ್ಬರೂ ಐಎಎಸ್ ಅಧಿಕಾರಿಗಳ ಮಕ್ಕಳು
ಸತ್ಯ ನಾಡೆಲ್ಲ ಅವರ ತಂದೆ ಐಎಎಸ್ ಅಧಿಕಾರಿಯಾಗಿದ್ದರು ಎಂಬುದು ಬಹುತೇಕರಿಗೆ ಗೊತ್ತು. ಅನುಪಮಾ ಅವರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿದ್ದರು. ಸತ್ಯ ನಾಡೆಲ್ಲ ತಂದೆ ಹಾಗೂ  ಅನುಪಮಾ ಅವರ ತಂದೆ ಒಂದೇ ಬ್ಯಾಚ್ ಐಎಎಸ್ ಅಧಿಕಾರಿಗಳು. ಹೀಗಾಗಿ ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಇದೇ ಮುಂದೆ ಸತ್ಯ ನಾಡೆಲ್ಲ ಹಾಗೂ ಅನುಪಮಾ ನಡುವೆ ಸ್ನೇಹ ಬೆಳೆದು ಪ್ರೀತಿ ಹುಟ್ಟಲು ಕಾರಣವಾಯಿತು ಎಂದು ಹೇಳಬಹುದು. 

Microsoft Lays Off: ಮತ್ತೆ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್, ಸಿಇಓ ವಿರುದ್ಧ ಸಿಡಿದೆದ್ದ ಉದ್ಯೋಗಿಗಳು!

ಮಣಿಪಾಲ ವಿವಿ ಹಳೆಯ ವಿದ್ಯಾರ್ಥಿಗಳು
ಸತ್ಯ ನಾಡೆಲ್ಲ ಅವರು ಮಣಿಪಾಲ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಮಣಿಪಾಲ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಹಳೆಯ ವಿದ್ಯಾರ್ಥಿ ಎಂಬುದು ಎಲ್ಲರಿಗೂ ಗೊತ್ತು. ಅನುಪಮಾ ಕೂಡ ಮಣಿಪಾಲ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ವಾಸ್ತುಶಿಲ್ಪದಲ್ಲಿ ಪದವಿ ಪಡೆದಿದ್ದಾರೆ. ನವದೆಹಲಿಯಲ್ಲಿ ಹುಟ್ಟಿದ ಅನುಪಮಾ, ಹೈದರಾಬಾದ್ ನಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದರು. 

ಅನುಪಮಾಗೋಸ್ಕರ ಗ್ರೀನ್ ಕಾರ್ಡ್ ಹಿಂತಿರುಗಿಸಿದ ನಾಡೆಲ್ಲ
ಅನುಪಮಾ ಅವರನ್ನು ವಿವಾಹವಾಗುವ ಸಮಯದಲ್ಲೇ ಸತ್ಯ ನಾಡೆಲ್ಲ ಅಮೆರಿಕದಲ್ಲಿ ನೆಲೆ ನಿಂತಿದ್ದರು. ಅವರು ಗ್ರೀನ್ ಕಾರ್ಡ್ ಕೂಡ ಹೊಂದಿದ್ದರು. ಆದರೂ ಅನುಪಮಾ ಅವರ ವೀಸಾ ಅರ್ಜಿಯನ್ನು ಯುಎಸ್ ಸರ್ಕಾರ ತಿರಸ್ಕರಿಸಿತ್ತು. ಹೀಗಾಗಿ ದಂಪತಿ ಪ್ರವಾಸಿ ವೀಸಾದ ಮೂಲಕ ಕೆಲವೇ ತಿಂಗಳು ಜೊತೆಗಿದ್ದರು. ಅನುಪಮಾ ಅವರಿಗೆ ಅಮೆರಿಕಕ್ಕೆ ಬರಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಸತ್ಯ ನಾಡೆಲ್ಲ ತಮ್ಮ ಗ್ರೀನ್ ಕಾರ್ಡ್ ಹಿಂತಿರುಗಿಸಿ ಎಚ್ -1ಬಿ ವೀಸಾ ಪಡೆದರು. 

ಮಗನ ಆರೈಕೆಗಾಗಿ ವೃತ್ತಿಯನ್ನೇ ತ್ಯಾಗ ಮಾಡಿದರು
1996ರಲ್ಲಿ ಸತ್ಯ ನಾಡೆಲ್ಲ ಹಾಗೂ ಅನುಪಮಾ ಅವರಿಗೆ ಮೊದಲ ಮಗ ಝೈನ್  ಜನನವಾಯಿತು. ಆದರೆ, ಗರ್ಭದಲ್ಲಿರುವಾಗಲೇ ಹೊಕ್ಕಳು ಬಳ್ಳಿ ಮಗುವಿನ ಕೊರಳಿಗೆ ಸುತ್ತು ಹಾಕಿಕೊಂಡು, ಉಸಿರುಗಟ್ಟಿ, ಮೆದುಳಿನ ಸಂಜ್ಞೆಗಳು ದೇಹಕ್ಕೆ ದೊರೆಯದೆ ಸೆರೆಬ್ರಲ್ ಪಾಲ್ಸಿ ಉಂಟಾಗಿತ್ತು.ಹೀಗಾಗಿ ಹುಟ್ಟಿನಿಂದ ಝೈನ್ ಎಲ್ಲ ಕೆಲಸಕ್ಕೂ ಹೆತ್ತವರನ್ನೇ  ಅವಲಂಬಿಸಬೇಕಾಯಿತು. ಆತನಿಗೆ ಹುಟ್ಟಿನಿಂದಲೇ ಕಣ್ಣು ಕಾಣಿಸುತ್ತಿರಲಿಲ್ಲ. ವ್ಹೀಲ್‌ಚೇರ್‌ನಲ್ಲಿ ಇರಬೇಕಾಗಿತ್ತು. ಮಗನ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಅನುಪಮಾ ವಹಿಸಿಕೊಂಡಿದ್ದರು. ಇದಕ್ಕಾಗಿ ಅವರು ವೃತ್ತಿಯನ್ನೇ ತ್ಯಾಗ ಮಾಡಿ ಗೃಹಿಣಿಯಾಗಿ ಉಳಿದರು. ಕಳೆದ ವರ್ಷವಷ್ಟೇ ಝೀನ್ ತಮ್ಮ 26ನೇ ವಯಸ್ಸಿನಲ್ಲಿ ಇಹಲೋಕದ ಪ್ರಯಾಣ ಮುಗಿಸಿದ್ದರು. ನಾಡೆಲ್ಲ ದಂಪತಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ.

ಮಂಗಳೂರಿನಲ್ಲಿ ಓದಿರುವ ಈ ವ್ಯಕ್ತಿ, ಜಗತ್ತಿನ ಅತಿದೊಡ್ಡ ಎರಡನೇ ಕಂಪನಿಗೆ CEO!

ವಿವಿಧ ಉದ್ದೇಶಗಳಿಗೆ ನೆರವಿನ ಹಸ್ತ 
ಅನುಪಮಾ ಆಗಾಗ ವಿವಿಧ ಉದ್ದೇಶಗಳಿಗಾಗಿ ದಾನ ಮಾಡುತ್ತಿರುತ್ತಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕೃಷಿಕರು ಹಾಗೂ ಮಕ್ಕಳ ಜೀವನಾಧಾರಕ್ಕಾಗಿ 2 ಕೋಟಿ ರೂ. ಅನ್ನು ಅನುಪಮಾ ದಾನ ಮಾಡಿದ್ದಾರೆ. ಕೋವಿಡ್ -19 ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ದಾನ ಮಾಡಿದ್ದರು. 

6,200 ಕೋಟಿ ರೂ. ಸಂಪತ್ತು
2021-2022 ಹಣಕಾಸು ಸಾಲಿನಲ್ಲಿ ಮೈಕ್ರೋಸಾಫ್ಟ್ ಸತ್ಯ ನಾಡೆಲ್ಲ ಅವರಿಗೆ  54.9 ಮಿಲಿಯನ್ ಡಾಲರ್ ವೇತನ ನೀಡಿದೆ. ಅದಕ್ಕೂ ಹಿಂದಿನ ಸಾಲಿನಲ್ಲಿ 49 ಮಿಲಿಯನ್ ಡಾಲರ್ ಗಳಿಕೆ ಮಾಡಿದ್ದರು. ಸತ್ಯ ನಾಡೆಲ್ಲ ಅವರ ನಿವ್ವಳ ಸಂಪತ್ತು 6200 ಕೋಟಿ ರೂ. 

Latest Videos
Follow Us:
Download App:
  • android
  • ios